ಪ್ರಚಲಿತ

ಬಜೆಟ್‌ನಲ್ಲಿ ಹೆಸರೆತ್ತಿರುವುದು ಕೇವಲ ಎರಡೇ ರಾಜ್ಯಗಳ ಹೆಸರು: ರಾಜ್ಯದ ಪರ ನಿಂತ ಮೋದಿಜೀ ಸರಕಾರ!

ನಿನ್ನೆಯಷ್ಟೇ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಸಾಮಾನ್ಯ ಜನರ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಜನಸ್ನೇಹಿ ಬಜೆಟ್ ಮಂಡಿಸಿದೆ. ಯಾರಿಗೂ ಬಿಟ್ಟಿ ಭಾಗ್ಯಗಳನ್ನು ನೀಡದಿದ್ದರೂ, ಜನರಿಗೆ ಅನುಕೂಲವಾಗುವಂತಹ ಬಜೆಟ್ ಮಂಡಿಸುವ ಮೂಲಕ ಹೀಗೂ ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದೆ.

ಆದರೆ ಇಂತಹ ಉತ್ತಮ ಬಜೆಟ್‌ನಲ್ಲಿಯೂ ತಪ್ಪು ಹುಡುಕುವ ಕೆಲಸವನ್ನು ಪ್ರತಿ ಪಕ್ಷಗಳು ‘ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು’ ಎಂಬಂತೆ ಮಾಡಿವೆ. ಕೇಂದ್ರದ ಬಜೆಟ್ ಬಗ್ಗೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು, ಕೇಂದ್ರ ಬಜೆಟ್ ಜಾತ್ರೆಯಲ್ಲಿ ಬಾಂಬೆ, ಕಲ್ಕತ್ತಾ ತೋರಿಸಿದ ಹಾಗಾಗಿದೆ. ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಯ ಮಾಡಲಾಗಿದ್ದು, ಈ ಬಜೆಟ್ ಕನ್ನಡಿ ಕೆಳಗಿನ ಗಂಟಿನಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಅವರು ಕೊಂಕು ನುಡಿದಿದ್ದಾರೆ.

ಹಾಗೆಯೇ ಈ ಬಜೆಟ್ ಅನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷ ಸೀಡ್ ಲೆಸ್ ಕಡಲೆಕಾಯಿ ಎಂದಿದೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕರ್ನಾಟಕ ಕಾಂಗ್ರೆಸ್ ಜನರ ಸಂಕಷ್ಟ ಕಡಿಮೆಯಾಗಬಹುದು ಎನ್ನುವ ಭರವಸೆಯನ್ನು ಈ ಬಜೆಟ್ ಹುಸಿಯಾಗಿಸಿದೆ ಎಂದು ಹೇಳಿದೆ‌. ಕರ್ನಾಟಕದೆಡೆಗೆ ಕೇಂದ್ರ ಸರ್ಕಾರ ತಾತ್ಸಾರ ಮನೋಭಾವ ತಾಳಿದೆ ಎಂದು ಹೇಳಿದೆ.

ಆದರೆ ಈ ಬಜೆಟ್‌ನಲ್ಲಿ ‌ಕೇಂದ್ರ ಸರ್ಕಾರ ಬೇರೆ ಯಾವ ರಾಜ್ಯವನ್ನು ಸಹ ಪ್ರತ್ಯೇಕವಾಗಿ ಉಲ್ಲೇಖಿಸದೆ, ಕರ್ನಾಟಕಕ್ಕೆ ಮಾತ್ರ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಬಂಪರ್ ಗಿಫ್ಟ್ ನೀಡಿದೆ. ಜನ ಸಾಮಾನ್ಯರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಮಂಡಿಸಿದೆ. ಆದರೂ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಕುಮಾರಸ್ವಾಮಿ ಮಾತ್ರ ತಮ್ಮದೂ ಒಂದಿರಲಿ ಎಂಬಂತೆ, ಕೇಂದ್ರದ ಬಜೆಟ್ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ಮೋದಿ ಸರ್ಕಾರ ಜನರಿಗೆ ಉಪಯೋಗವಾಗುವಂತಹ ಏನನ್ನೇ ಮಾಡಲಿ, ವಿಪಕ್ಷಗಳಿಂದ ಕೊಂಕು ಸಾಮಾನ್ಯ ಎಂಬಂತೆ, ಈ ಬಜೆಟ್‌ಗೂ ತಗಾದೆ ತೆಗೆಯುವ ಕೆಲಸವನ್ನು ವಿ ಪಕ್ಷಗಳು ಮಾಡಿವೆ. ತಾವೂ ಅಭಿವೃದ್ಧಿ ಮಾಡಲ್ಲ. ಅಭಿವೃದ್ಧಿ ಮಾಡುವವರಿಗೂ ಬಿಡಲ್ಲ ಎಂಬಂತೆ ಒಳ್ಳೆ ವಿಷಯಕ್ಕೂ ಅಡ್ಡಗಾಲು ಹಾಕುತ್ತಾ ಬರುವ ವಿಪಕ್ಷಗಳಿಗೆ ಚುನಾವಣೆಯಲ್ಲಿ ಮತದಾರರೇ ಬುದ್ದಿ ಕಲಿಸಬೇಕಾಗಿದೆ.

Tags

Related Articles

Close