ಪ್ರಚಲಿತ

ಮೋದಿಯ ಮಾಸ್ಟರ್ ಪ್ಲಾನ್‍ಗೆ ಛಿದ್ರವಾಗುತ್ತಾ ಪಾಕ್!! ಶತ್ರುರಾಷ್ಟ್ರವನ್ನು ಹೊಡೆದುರಿಳಿಸಲು ಇಸ್ರೇಲ್‍ನಿಂದ ಕ್ಷಿಪಣಿ ಖರೀದಿ!!

ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಕಾಲ್ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ಈಗಾಗಲೇ ವಿಶ್ವದೆಲ್ಲೆಡೆ ಭಯೋತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ವಿಚಾರ ತಿಳಿದೇ ಇದೆ!! ಭಾರತ ತನ್ನಷ್ಟಕ್ಕೆ ತಾನು ಕುಳಿತಿದ್ದರೂ ಸಹ ಆ ಪಾಪಿ ಪಾಕಿಸ್ತಾನ ಮಾತ್ರ ಭಾರತದ ವಿರುದ್ಧ ಕಾಲ್ಕೆರೆದು ಬರುವುದಕ್ಕೇ ಹೊಂಚುಹಾಕುತ್ತನೇ ಬರುತ್ತಿದೆ!! ಭಯೋತ್ಪಾದನೆ ಎಂಬುವುದು ಯಾವ ರೀತಿಯಲ್ಲಿ ಜಗತ್ತಿಗೆ ಮಾರಕವಾಗಿದೆ ಎಂದರೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಭಯೋತ್ಪಾದಕ ಕೃತ್ಯಗಳಿಗೆ ತುತ್ತಾಗಿವೆ!! ದಿನ ಕಳೆದಂತೆ ಜಗತ್ತಿನಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು ಜಗತ್ತನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ! ಕೆಲವೊಂದು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು ಶತ್ರು ರಾಷ್ಟ್ರಗಳ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗುತ್ತಿದೆ..!

Image result for modi

ಭಾರತದಲ್ಲೂ ಉಗ್ರರ ದಾಳಿ ನಡೆದಿದ್ದು, ಭಾರತವೂ ಉಗ್ರರ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ! ಆದರೆ, ನರೇಂದ್ರ ಮೋದಿಜೀ ಅಧಿಕಾರಕ್ಕೆ ಬರುತ್ತಲೇ ಜಗತ್ತಿಗೆ ಮಾರಕವಾಗಿರುವ ಭಯೋತ್ಪಾದನೆಯ ವಿರುದ್ಧ ಗುಡುಗಿದರು. ಭಯೋತ್ಪಾದನೆಯ ನಿರ್ಮೂಲನೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೈಜೋಡಿಸಬೇಕು ಎಂದು ಸಾರಿದರು! ಉಗ್ರರಿಗೆ ಆಶ್ರಯತಾಣವಾಗಿರುವ ಪಾಕಿಸ್ತಾನ ತನ್ನ ಶತ್ರು ರಾಷ್ಟ್ರಗಳ ವಿರುದ್ಧ ಉಗ್ರರನ್ನು ಕಳುಹಿಸಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಲೇ ಬರುತ್ತಿದೆ!!. ದಿನ ಕಳೆದಂತೆ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಹೆಚ್ಚುತ್ತಿದ್ದು ಇದು ಜಗತ್ತಿಗೆ ಮಾರಕವಾಗಿದೆ!! ಈಗಾಗಲೇ ಉಗ್ರರಿಗೆ ಪೆÇೀಷಣೆ ನೀಡುವ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಸಹಾಯ ಮಾಡಬಾರದು ಎಂದು ನಿರ್ಧರಿಸಿದರೂ ಸಹ ಇನ್ನೂ ಆ ಪಾಪಿ ಪಾಕಿಸ್ತಾನಕ್ಕೆ ಬುದ್ಧೀ ಬಂದಂತೆ ಕಾಣುತ್ತಿಲ್ಲ!! ಇದೀಗ ಶತ್ರು ರಾಷ್ಟ್ರವಾದ ಪಾಕಿಸ್ತಾನಕ್ಕೆ ಸರಿಯಾಗಿಯೇ ಬುದ್ಧಿ ಕಲಿಸಬೇಕೆಂಬ ಉದ್ಧೇಶದಿಂದ ಭಾರತೀಯ ಸೇನೆ ಈಗಾಗಲೇ ಬಂಕರ್‍ಗಳನ್ನು ನಿರ್ಮಿಸಿದ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ!!

Image result for modi with benjamin netanyahu

ಪಾಕಿಸ್ತಾನವನ್ನು ಹೊಡೆದುರಿಳಿಸಲು ಭಾರತೀಯ ಸೇನೆಯಿಂದ ಮಾಸ್ಟರ್ ಪ್ಲಾನ್!!

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಮಾಡುತ್ತಾರೆ ಎಂದು ಜರಿಯುತ್ತಿರುವ ಕೆಲವು ವಿರೋಧಿಗಳು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೋದೀ ಏನಾದರೂ ವಿದೇಶಿ ಪ್ರವಾಸ ಹೋಗಿಲ್ಲವೆಂದರೆ ಅಲ್ಲಿ ಏನಾದರೂ ಇಸ್ರೇಲ್‍ನಂತಹ ರಾಷ್ಟ್ರದೊಂದಿಗೆ ಸಂಬಂಧ ಬೆಳೆಸಿಕೊಳ್ಳದಿದ್ದರೆ ಭಾರತದಲ್ಲಿ ನಾವು ಇಂದು ಸುಖವಾಗಿ ಜೀವನ ನಡೆಸಲು ಸಾಧ್ಯವಿರುತ್ತಿರಲಿಲ್ಲ!! ಭಾರತಕ್ಕೆ ಏನೇ ತೊಂದರೆ ಆದರೂ ಮೊದಲು ಸಹಾಯಕ್ಕೆ ಧಾವಿಸುವುದೇ ಇದೇ ಇಸ್ರೇಲ್ ದೇಶ!! ಹಿಂದೆ ವಿದೇಶಿಯರು ದಾಳಿ ಮಾಡಿ, ಇಸ್ರೇಲಿಗರನ್ನು ಅಲ್ಲಿಂದ ಓಡಿಸಿದಾಗ, ಜಗತ್ತಿನ ಯಾವ ರಾಷ್ಟ್ರಗಳೂ ಇಸ್ರೇಲಿಗರಿಗೆ ಜಾಗ ಕೊಟ್ಟಿರಲಿಲ್ಲ. ಆಗ ಭಾರತವೇ ಇಸ್ರೇಲಿಗರ ನೆರವಿಗೆ ಬಂದು ಭಾರತದಲ್ಲಿರುವಂತೆ ಮಾಡಿತ್ತು. ಹೀಗಾಗಿಯೇ ಇಸ್ರೇಲಿಗರು ಭಾರತವನ್ನು ತಮ್ಮ ಮಾತೃಭೂಮಿ ಮತ್ತು ಇಸ್ರೇಲನ್ನು ಧರ್ಮಭೂಮಿ ಎಂದು ಕರೆಯುತ್ತಾರೆ. ಇದೀಗ ಇಸ್ರೇಲ್‍ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಪಾಕಿಸ್ಥಾನದ ಸೊಕ್ಕು ಮುರಿಯಲು ಭಾರತ ಮುಂದಾಗಿದ್ದು ಇದಕ್ಕೆ ಇದಕ್ಕೆ ಇಸ್ರೇಲ್ ಸಾಥ್ ನೀಡುತ್ತಿದೆ!!

Image result for spike missile

ಈಗಾಗಲೇ ಭಾರತದ ಒಂದೊಂದು ನಡೆಯನ್ನು ಕಂಡೂ ಹೆದರುತ್ತಿರುವ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಬ್ಯಾಕ್ ಟೂ ಬ್ಯಾಕ್ ಶಾಕ್ ನೀಡಲು ಭಾರತೀಯ ಸೇನೆ ಮುಂದಾಗಿದೆ!! ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲು ಭಾರತ ಮಹತ್ತರ ನಿರ್ಧಾರವೊಂದನ್ನು ಕೈಗೊಂಡಿದ್ದು, ಶತ್ರುರಾಷ್ಟ್ರದ ಯುದ್ಧ ಟ್ಯಾಂಕರ್‍ಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಟ್ಯಾಂಕ್ ನಿರೋಧಕ ಸ್ಕೈಪ್ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ.

ಈ ಕುರಿತು ಭಾರತ ಹಾಗೂ ಇಸ್ರೇಲ್ ನಡುವೆ ಮಹತ್ತರ ಮಾತುಕತೆ ಮುಗಿದಿದ್ದು, ಶೀಘ್ರದಲ್ಲೇ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದ ಪ್ರಕಟವಾಗಲಿದೆ. ಈ ಸ್ಪೈಕ್ ಕ್ಷಿಪಣಿಗಳ ತಯಾರಿಕೆಯಲ್ಲಿ ಇಸ್ರೇಲ್ ಮುನ್ನಡೆಯಲ್ಲಿರುವ ಕಾರಣ ಹಾಗೂ ಇಸ್ರೇಲ್ ಜತೆ ಭಾರತದ ಸಂಬಂಧ ಉತ್ತಮವಾಗಿರುವ ಕಾರಣದಿಂದ ಇಸ್ರೇಲ್ ನಿಂದ ಖರೀದಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಟ್ಯಾಂಕ್ ನಿರೋಧಕ ಸ್ಪೈಕ್ ಕ್ಷಿಪಣಿಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಶತ್ರುರಾಷ್ಟ್ರಗಳ ಯುದ್ಧದ ಟ್ಯಾಂಕರ್ ಗಳನ್ನು ಕ್ಷಣಮಾತ್ರದಲ್ಲೇ ಹೊಡೆದುರುಳಿಸುವ ಶಕ್ತಿ ಹೊಂದಿವೆ. ಭಾರತಕ್ಕೆ ಪ್ರಸ್ತುತ ಇಂತಹ 8 ಸಾವಿರ ಕ್ಷಿಪಣಿಗಳ ಅವಶ್ಯವಿದ್ದು, ಮುಂದಿನ ಮೂರು ವರ್ಷದಲ್ಲಿ ಇಸ್ರೇಲ್ ಭಾರತಕ್ಕೆ ಬಹುತೇಕ ಕ್ಷಿಪಣಿ ಪೂರೈಸಲಿದೆ ಎಂದು ಮೂಲಗಳು ತಿಳಿಸಿವೆ!!

Image result for spike missile

 

ಈ ಬಗ್ಗೆ ಈಗಾಗಲೇ ಭಾರತ ಮತ್ತು ಇಸ್ರೇಲ್ ನಡುವಿನ ಒಪ್ಪಂದಗಳಾಗಿವೆ. ಹಾಗೆಯೇ ಖರೀದಿಯ ಕುರಿತು ಅಂತಿಮ ಮಾತುಗಳು ಆಗಿವೆ. ಈ ಕ್ಷಿಪಣಿಗಳನ್ನು ಇಸ್ರೇಲ್ ತಯಾರಿಸಿ ಸೇನೆಗೆ ಮೊದಲು 3 ವರ್ಷಗಳು ಬೇಕಾಗಬಹುದು. ಹೀಗಾಗಿ ಅಲ್ಲಿಯವರೆಗೆ ಸೇನೆಯನ್ನು ಸದೃಢವಾಗಿಸಲು ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬಲು ಇಸ್ರೇಲ್‍ನಿಂದ ಟ್ಯಾಂಕ್ ನಿರೋಧಕ ಕ್ಷಿಪಣಿ ಸ್ರೈಕ್ ಖರೀದಿಸಲಾಗುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿವೆ!! ಈ ಸ್ಪೈಕ್ ಕ್ಷಿಪಣಿ ಖರೀದಿಯಿಂದ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಇಸ್ರೇಲ್ ಕ್ಷಿಪಣಿ ಖರೀದಿಯಿಂದ ಭಾರತವು ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ. ಈಗ ಬರಿ ಟ್ಯಾಂಕ್ ನಿರೋಧಕ ಕ್ಷಿಪಣಿಯಿಂದಲೇ ಪಾಕಿಸ್ತಾನ ಹೆದರಿದರೆ ಮುಂದೆ ಕ್ಷಿಪಣಿ ತಯಾರಾಗಿ ಬಂದರೆ ಪಾಕಿಸ್ತಾನ ಭಾರತದ ಗಡಿಯತ್ತ ಮುಖಮಾಡಿ ನಿಲ್ಲಲೂ ಸಾಧ್ಯವಾಗುತ್ತಿಲ್ಲ!! ಇದಾಗಲೇ ಪಾಕಿಸ್ತಾನಕ್ಕೆ ಭಾರತದ ಒಂದೊಂದು ನಡೆಯೂ ಭಯವನ್ನು ಹುಟ್ಟಿಸಿದ್ದು ಮುಂದೆ ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಸೇನೆಗೆ ಇಂತಹ ಸವಲತ್ತನ್ನು ನೀಡಿದ್ದಲ್ಲಿ ಭಾರತ ಎಂದು ಹೆಸರು ಹೇಳಲು ನಡುಗುವಂತಾಗಬೇಕು!! ಇಸ್ರೇಲ್‍ನ ಜೊತೆ ಈಗಾಗಲೇ ಒಪ್ಪಂದವಾದ ಪ್ರಕಾರ ಮೂರು ವರ್ಷದೊಳಗೆ ಇಸ್ರೇಲ್ ಕ್ಷಿಪಣಿಯನ್ನು ತಯಾರಿಸಿ ಭಾರತೀಯ ಸೇನೆಗೆ ಕೊಡಲಿದ್ದು ಮುಂದೆ ಪಾಪಿ ಪಾಕಿಸ್ತಾನಕ್ಕೆ ನಡುಕವುಂಟುಮಾಡಲಿದೆ ಎನ್ನುವುದು ಅಕ್ಷರಸಃ ನಿಜ!!

  • ಪವಿತ್ರ
Tags

Related Articles

Close