ಪ್ರಚಲಿತ

ಮೋದಿ ಸರಕಾರದಿಂದ ಸಿಹಿಸುದ್ಧಿ!! ಮಹಿಳೆಯರ ಆರೋಗ್ಯಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳ ಮಾರಾಟಕ್ಕೆ ಚಾಲನೆ!!

ನರೇಂದ್ರ ಮೊದಿಯವರು ಅಧಿಕಾರ ಸ್ವೀಕರಿಸಿದಾಗಿನಿಂದ ಪ್ರತೀಯೊಂದು ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆಯನ್ನು ತಂದಿದ್ದಾರೆ!! ದೇಶದಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನವನ್ನು ಕಲ್ಪಿಸುತ್ತಿರುವ ನರೇಂದ್ರ ಮೋದಿ ಸರ್ಕಾರವು ಈಗಾಗಲೇ ನಾನಾ ರೀತಿಯ ಯೋಜನೆಗಳನ್ನು ಜಾರಿ ತಂದಿದ್ದು, ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಮಹಿಳೆಯರಿಗಾಗಿ ಜಾರಿಗೊಳಿಸಿದ್ದು ಇಡೀ ದೇಶದ ಪ್ರತೀಯೊಬ್ಬ ಮಹಿಳೆಯರೂ ಇದರ ಪ್ರಯೋಜನವನ್ನು ಪಡೆಯಬಹುದು!!

ಈಗಾಗಲೇ ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ನಾನಾ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿ ಸರ್ಕಾರವು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಹಿಳೆಯರ ಆರೋಗ್ಯಕ್ಕೆ ಸಹಾಯವಾಗುವ “ಸುವಿಧಾ ಯೋಜನೆ”ಯನ್ನು ಜಾರಿಗೆ ತಂದಿತ್ತು!! ಈ ಹಿಂದೆ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಅಧಿಕ ಜಿ.ಎಸ್.ಟಿ ವಿಧಿಸಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಕೇವಲ ಒಂದರ ಬೆಲೆ 2.50 ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸುವುದರ ಮೂಲಕ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹತ್ತರವಾದ ಕೊಡುಗೆಯನ್ನು ನೀಡಿದ್ದರು!! ಮಹಿಳೆಯರ ಆರೋಗ್ಯಕ್ಕೆ ಅನುಕೂಲವಾಗುವ “ಸುವಿಧಾ” ಯೋಜನೆಗೆ ಕೇಂದ್ರ ಸಚಿವ ಅನಂತಕುಮಾರ್ ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಚಾಲನೆ ನೀಡಿದ್ದು ಈ ಯೋಜನೆಯಡಿ ಜೈವಿಕವಾಗಿ ವಿಘಟನೆ ಹೊಂದುವ ಸ್ಯಾನಿಟರಿ ನ್ಯಾಪ್‍ಕಿನ್ ಅನ್ನು ಕೇವಲ 2.50ಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು!! ಅದೇ ರೀತಿ ಮಹಿಳಾ ಅಂತರಾಷ್ಟ್ರೀಯ ದಿನಾಚರಣೆಯಂದು ಜಾರಿಗೆ ತಂದ ಸುವಿಧ ಯೋಜನೆಯ ಅಡಿಯಲ್ಲಿ ಅಗ್ಗದ ದರದಲ್ಲಿ ಸ್ಯಾನಿಟರಿ ಪ್ಯಾಡ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ!!

Image result for modis suvidha

ಮಹಿಳೆಯರಿಗೆ ಮೋದಿ ಸರಕಾರದಿಂದ ಸಿಹಿಸುದ್ಧಿ!!

ಈ ಪ್ಯಾಡ್‍ಗಳು ಇದೀಗ ಮಾರುಕಟ್ಟೆಗೆ ಲಭ್ಯವಾಗಿದ್ದು ಮಹಿಳೆಯರಿಗೆ ಅಗ್ಗದ ದರದಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ಒದಗಿಸುವ ಯೋಜನೆಗೆ ಚಾಲನೆ ಸಿಕ್ಕಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸರಕಾರವು ನ್ಯಾಪ್‍ಕಿನ್‍ಗಳನ್ನು ಬಿಡುಗಡೆ ಮಾಡಿದ್ದು, ಒಂದರ ಬೆಲೆ ರೂ.2.50. ನಾಲ್ಕು ಪ್ಯಾಡ್‍ಗಳನ್ನು ಹೊಂದಿರುವ ಪ್ಯಾಕೆಟ್ ದರ ರೂ. 10 ಮಾತ್ರ.!! ಮಾರುಕಟ್ಟೆ ಇದೀಗ ಮಹಿಳೆಯರಿಗೆ ಕೈಗೆಟುಕದ ರೀತಿಯಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಬೆಲೆಯಿಂದ ಮಹಿಳೆಯರಿಗೆ ನ್ಯಾಪ್‍ಕಿನ್ ಖರೀದಿ ಮಾಡಲು ತುಂಬ ಕಷ್ಟಕರವಾಗಿತ್ತು!! ಇದನ್ನು ಮನಗಂಡ ಮೋದಿ ಸರಕಾರವು ಮಹಿಳೆಯರಿಗಾಗಿ ರೂ 2.50 ಗೆ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲು ಮುಂದಾಗಿದೆ!! ಇದಲ್ಲದೆ ಕೇಂದ್ರ ಸರಕಾರದಿಂದ ಬಿಡುಗಡೆಯಾದ ಈ ಸ್ಯಾನಿಟರಿ ನ್ಯಾಪ್‍ಕಿನ್ ಆರೋಗ್ಯಕರ ದೃಷ್ಠಿಯಲ್ಲಿ ಮಹಿಳೆಯರಿಗೆ ಉತ್ತಮವಾಗಿದೆ!!

Related image

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ(ಪಿಎಂಬಿಜೆಪಿ) ಅಡಿಯಲ್ಲಿ ಇದು ಜಾರಿಗೆ ಬಂದಿದೆ. 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನ ಔಷಧ ಮಳಿಗೆಗಳಲ್ಲಿ ಸುವಿಧಾ ಸ್ಯಾನಿಟರಿ ನ್ಯಾಪ್‍ಕಿನ್‍ಗಳು ಮಾರಾಟವಾಗಲಿವೆ. ”ಮಾರುಕಟ್ಟೆಯಲ್ಲಿನ ಇತರೆ ಬ್ರ್ಯಾಂಡ್‍ಗಳಿಗೆ ಹೋಲಿಸಿದರೆ, ಸರಕಾರದ ನ್ಯಾಪ್‍ಕಿನ್‍ಗಳ ದರ ಅತೀ ಕಡಿಮೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯುಂಟಾಗಿ ಖಾಸಗಿ ಕಂಪನಿಗಳೂ ದರ ತಗ್ಗಿಸುವ ಸಾಧ್ಯತೆ ಇದೆ,” ಎಂದು ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನುಸುಖ್ ಎಲ್ ಮಾಂಡವಿಯಾ ಹೇಳಿದ್ದಾರೆ.

ಮಣ್ಣಿನಲ್ಲಿ ಕರಗುವ ಸಂಪೂರ್ಣ ಸಾವಯವ ಸುವಿಧಾ ನ್ಯಾಪ್ಕಿನ್‍ಗಳನ್ನು ದೇಶಾದ್ಯಂತ ಸದ್ಯ ಇರುವ ಎಲ್ಲಾ 3200 ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಜನೌಷಧಿ ಕೇಂದ್ರಗಳು ದೇಶದ ಮೂಲೆ ಮೂಲೆಯಲ್ಲಿಯೂ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ಯೋಜನೆ ತಲುಪಲಿದೆ. ಈ ಹಿಂದೆ ನ್ಯಾಪ್ಕಿನ್‍ಗೆ ಜಿಎಸ್‍ಟಿ ವಿಧಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನಿಟ್ಟುಕೊಂಡು ನರೇಂದ್ರ ಮೋದಿಯವರ ಸರ್ಕಾರವನ್ನು ಹಲವರು ಟೀಕಿಸಿದ್ದರು. ಆದರೆ ಈಗ ಕೇಂದ್ರ ಸರ್ಕಾರ, ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಕಡಿಮೆ ದರದಲ್ಲಿ ನ್ಯಾಪ್ಕಿನ್ ಒದಗಿಸುವ ಮೂಲಕ ಪ್ರತ್ಯುತ್ತರ ನೀಡಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಒಂದು ನ್ಯಾಪ್ಕಿನ್ ದರ 8 ರೂಪಾಯಿ ಇದೆ. ಆದರೆ ಈಗ ಮೋದಿ ಸರ್ಕಾರ ಕೇವಲ ಎರಡೂವರೆ ರೂಪಾಯಿಗೆ ನ್ಯಾಪ್ಕಿನ್ ಗಳನ್ನು ಒದಗಿಸಿದ್ದು ಇದು ಮಹಿಳೆಯರಿಗೆ ಬಲು ಉಪಯುಕ್ತವಾಗಲಿದೆ!!

ಒಟ್ಟಿನಲ್ಲಿ ಬಡ, ಗ್ರಾಮೀಣ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ “ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ” ಕಾರ್ಯಕ್ರಮದಡಿ, ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿಯೇ ಎರಡೂವರೆ ರೂಪಾಯಿಗೆ ಒಂದರಂತೆ ಈ ನ್ಯಾಪ್ ಕಿನ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರೆ ಅದಕ್ಕಿಂತಲೂ ಸಂತಸದ ವಿಚಾರ ಮತ್ತೊಂದಿಲ್ಲ!!

ಪವಿತ್ರ

Tags

Related Articles

Close