ಪ್ರಚಲಿತ

ಮೋದಿಯನ್ನು ಹೊಗಳಿದ ಮಹಿಳೆಗೆ ಉಗ್ರರಿಂದ ಬೆದರಿಕೆ!! ಉಗ್ರರನ್ನು ಮಟ್ಟ ಹಾಕಲು ಮೋದಿ ಮಾಡಿದ್ದಾದರೂ ಏನು ಗೊತ್ತೇ??

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸು ಇಂದು ದೇಶವನ್ನು ಅಭಿವೃದ್ಧಿಶೀಲ ಭಾರತವನ್ನಾಗಿ ಮಾಡುವುದರ ಜೊತೆಗೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡ ಹೊರಟಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ. ಆದರೆ ಇದನ್ನು ಸಹಿಸಲಾಗದ ಬುದ್ದಿಜೀವಿಗಳು ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರುತ್ತಲೇ ಇದ್ದು, ಇದೀಗ ಮೋದಿಯನ್ನು ಹೊಗಳಿದ್ದ ಕಾಶ್ಮೀರದ ಮಹಿಳೆಗೆ ಉಗ್ರರು ಬೆದರಿಕೆ ಒಡ್ಡುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ದೊಡ್ಡ ವಿಪರ್ಯಾಸವೇ ಸರಿ!!

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಮಹಿಳೆಯರಿಗೆ “ಉಜ್ವಲ” ಯೋಜನೆಯನ್ನು ಜಾರಿಗೊಳಿಸಿದ್ದು, 2019 ರೊಳಗೆ 5 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದುಕೊಳ್ಳಲಿವೆ ಎಂದು ತಿಳಿಸಿದ್ದರು. ಬಡತನ ರೇಖೆಗಿಂತ ಕೆಳಗೆ ಇರುವವರನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆಯನ್ನು ಅನುಷ್ಠಾನ ಮಾಡಲಾಗಿದ್ದು, ಈ ಯೋಜನೆ ಕುಟುಂಬದ ವೆಚ್ಚವನ್ನು ಕಡಿಮೆ ಮಾಡುವುದು ಅಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಣೆ ಮಾಡಲಿದೆ ಎನ್ನುವುದೇ ಇದರ ಉದ್ದೇಶ. ಅಷ್ಟು ಮಾತ್ರವಲ್ಲದೇ, ಭಾರತವನ್ನು ಹೊಗೆ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸಿರುತ್ತಿರುವುದಂತೂ ಅಕ್ಷರಶಃ ನಿಜ.

ಈ ಕುರಿತಂತೆ ಇತ್ತೀಚೆಗಷ್ಟೇ, ನಮೋ ಆ್ಯಪ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಜತೆ ಸಂವಾದ ನಡೆಸಿದ್ದ ಉಜ್ವಲ ಯೋಜನೆ ಫಲಾನುಭವಿಯೊಬ್ಬರು ನರೇಂದ್ರ ಮೋದಿಯವರನ್ನು ಹೊಗಳಿದ್ದಕ್ಕೆ ಉಗ್ರರು ಬೆದರಿಕೆಯೊಡ್ಡಿದ್ದಾರೆ!! ಹೌದು… ನಮೋ ಆ್ಯಪ್ ಮೂಲಕ ಕಾಶ್ಮೀರದ ಅನಂತನಾಗ್ ಜಿಲ್ಲೆಯವರಾದ ಅರ್ಜುಮಾನ ಅವರು ನರೇಂದ್ರ ಮೋದಿ ಜತೆ ಸಂವಾದ ನಡೆಸಿದ್ದಕ್ಕಾಗಿ ಅರ್ಜುಮಾನರಿಗೆ ಉಗ್ರರ ಬೆದರಿಕೆಯಿರುವ ವಿಚಾರ ತಿಳಿದು ಬಂದಿದೆ!! ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ನಿರ್ದೇಶನದಂತೆ ಅರ್ಜುಮಾನರಿಗೆ ರಕ್ಷಣೆ ಒದಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ!!

ಕಾಶ್ಮೀರದ ಅನಂತನಾಗ್ ಜಿಲ್ಲೆಯವರಾದ ಅರ್ಜುಮಾನ ಅವರು ಮೇ 28ರಂದು ನಮೋ ಆ್ಯಪ್ ಮೂಲಕ ಉಜ್ವಲ ಯೋಜನೆಯ ಫಲಾನುಭವಿ ಕುರಿತು ಪ್ರಧಾನಿ ಜತೆ ಸಂವಾದ ನಡೆಸಿದ್ದರು. ಅಷ್ಟೇ ಅಲ್ಲದೆ, ಈ ಯೋಜನೆ ಬಗ್ಗೆ ತಮ್ಮ ಅನುಭವವನ್ನು ಪ್ರಧಾನಿ ಬಳಿಯೇ ಹಂಚಿಕೊಂಡು, ಅವರನ್ನು ಕೊಂಡಾಡಿದ್ದರು. ರಂಜಾನ್ ವಿಶೇಷ ಸಂದರ್ಭದಲ್ಲಿ ಅರ್ಜುಮಾನ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥನೆ ಕೂಡ ಸಲ್ಲಿಸಿದ್ದರು. ಇದರಿಂದ ಆಕೆಗೆ ಬೆದರಿಕೆ ಕರೆಗಳು ಬರಲು ಶುರುವಾಗಿತ್ತು!!

ಆದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿದ್ದು, ಸ್ವತಃ ನರೇಂದ್ರ ಮೋದಿ ಅವರೇ ಇತ್ತೀಚೆಗೆ ನಡೆದ ಮಂತ್ರಿಗಳ ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ!! ಅಷ್ಟೇ ಅಲ್ಲದೆ, ಅರ್ಜುಮಾನ ಮಾತುಗಳನ್ನು ನೆನಪಿಸಿ, ಸಂತೋಷವನ್ನು ವ್ಯಕ್ತಪಡಿಸಿದ್ದರು. ಜತೆಗೆ ಆಕೆಗೆ ಇರುವ ಬೆದರಿಕೆ ಬಗ್ಗೆ ವಿಷಾದ ಹೊರಹಾಕಿ ಅವರಿಗೆ ರಕ್ಷಣೆ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ನಿರ್ದೇಶನ ನೀಡಿದ್ದಾರೆ!!

ಕೇವಲ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಕ್ಕಾಗಿ ಕಾಶ್ಮೀರದ ಅನಂತನಾಗ್ ಜಿಲ್ಲೆಯವರಾದ ಅರ್ಜುಮಾನರವನ್ನು ಉಗ್ರರು ಬೆದರಿಕೆಯ ಕರೆಗಳನ್ನು ಮಾಡಿ ಆಕೆಯನ್ನು ಹೆದರಿಸುತ್ತಿದ್ದಾರೆ ಎಂದರೆ ಅದೂ ನಿಜಕ್ಕೂ ಕೂಡ ಬೇಸರದ ವಿಚಾರವೇ ಆಗಿದೆ!! ಯಾಕೆಂದರೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇದೆ!! ಅದರಲ್ಲೂ ಉಗ್ರರ ಅಡಗುತಾಣವಾಗಿರುವ ಕಾಶ್ಮೀರದಂತಹ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಕೂಡ ವಾಕ್ ಸ್ವಾತಂತ್ರ್ಯದ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇದೆ!!

Image result for modis angry

 

ಹಾಗಾಗಿ ತನ್ನ ದೇಶದ ಪ್ರಧಾನಿ ತಮಗೋಸ್ಕರ ಯೋಜನೆಗಳನ್ನು ತರುತ್ತಿದ್ದರೆ, ಅದನ್ನು ಸದುಪಯೋಗ ಪಡಿಸಿಕೊಂಡ ನಾವುಗಳು, ಆ ಯೋಜನೆಯ ಬಗ್ಗೆ, ಯೋಜನೆಗಳನ್ನು ಹೊರತಂದಿರುವ ಪ್ರಧಾನಿಯವರ ಬಗ್ಗೆ ನಾವು ಮೆಚ್ಚುಗೆ ಸೂಚಿಸುವುದರಲ್ಲಿ ತಪ್ಪೇನಿದೆಯೋ ನಾ ಕಾಣೆ!! ಆದರೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ತುಂಬಿ ತುಳುಕಾಡುತ್ತಿರುವ ಕಾಶ್ಮೀರದಲ್ಲಿ ಉಗ್ರ ಉಪಟಳ ದಿನೇ ದಿನೇ ಹೆಚ್ಚುತ್ತಿದೆಯಲ್ಲದೇ, ಇದೀಗ ಮೋದಿಯ ಅಭಿಮಾನಿಗಳಿಗೂ ಉಗ್ರರು ಕಾಡುತ್ತಿದ್ದಾರೆ ಎಂದರೆ ಉಗ್ರರಿಗೆ ಮೋದಿ ಭಯ ಶುರುವಾಗಿರುವುದಂತೂ ಅಕ್ಷರಶಃ ನಿಜ ಎಂದೆನಿಸುತ್ತಿದೆ.

ಮೂಲ:
https://www.patrika.com/

– ಅಲೋಖಾ

Tags

Related Articles

Close