ಪ್ರಚಲಿತ

ಕೇವಲ ಎರಡೆ ವರ್ಷಗಳಲ್ಲಿ ಪ್ರಧಾನ ಮಂತ್ರಿ ಉಚಿತ ಡಯಾಲಿಸಿಸ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆದವರ ಸಂಖ್ಯೆ ಬರೋಬ್ಬರಿ 2 ಲಕ್ಷ!! ಇದಲ್ಲವೇ ಅಚ್ಚೆ ದಿನ್?

ಸದಾ ಬಡವರ ಬಗ್ಗೆ ಚಿಂತೆ ಮಾಡುವ ಪ್ರಧಾನ ಸೇವಕ ಮೋದಿ ಅವರು 2016 ರಲ್ಲಿ ಪ್ರಧಾನ್ ಮಂತ್ರಿ ನ್ಯಾಷನಲ್ ಡಯಾಲಿಸಿಸ್ ಪ್ರೋಗ್ರಾಂ (PMNDP) ಎನ್ನುವ ಯೋಜನೆಯನ್ನು ಹೊರ ತಂದರು. ಬೇರೆಯವರು ಯೋಚಿಸಲೂ ಸಾಧ್ಯವಾಗದನ್ನು ಮೋದಿ ಕಾರ್ಯದಲ್ಲಿ ಮಾಡಿ ತೋರಿಸುತ್ತಾರೆಂದರೆ ಅವರ ಇಛ್ಚಾಶಕ್ತಿಯ ಪರಿ ಇನ್ನೆಂಥದ್ದಿರಬೇಕು?! ಮೋದಿಯವರ ಈ ಯೋಜನೆಯು ಬಡವರ ಪಾಲಿನ ಆಶಾ ಕಿರಣವಾಗಿ ಪರಿಣಮಿಸಿದೆ. ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೂ ಕೇವಲ ಎರಡೇ ವರ್ಷಗಳ ಅವಧಿಯಲ್ಲಿ ಬರೋಬ್ಬರಿ 2 ಲಕ್ಷ ಜನರು ಉಚಿತ ಡಯಾಲಿಸಿಸ್ ಸೇವೆಯ ಲಾಭ ಪಡೆದಿದ್ದಾರೆ!! ಇದಲ್ಲವೆ ಅಚ್ಚೆ ದಿನ್? ಮೋದಿ ಎಷ್ಟು ಜನರ ಪ್ರಾಣ ಉಳಿಸಿದರು, ಎಷ್ಟು ಜನರ ಬಾಳಿಗೆ ಬೆಳಕಾದರು, ಎಷ್ಟು ಜನರ ಪಾಲಿಗೆ ಆಶ್ರಯದಾತರಾದರು ಇದನ್ನು ಲೆಕ್ಕವಿಟ್ಟವರಾರು?

ಕಳೆದ ಎರಡು ವರ್ಷಗಳಿಂದ ಮೋದಿ ಸರಕಾರ ಪಿಪಿಪಿ ಮೋಡ್ ಮೂಲಕ ಖಾಸಗಿ ಪಾಲುದಾರರ ಸಹಯೋಗದೊಂದಿಗೆ ಜಿಲ್ಲೆಯ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಯನ್ನು ಒದಗಿಸುತ್ತಲಿದೆ. ಪ್ರಸ್ತುತ, ದೇಶಾದ್ಯಂತ ಈ ಸೌಲಭ್ಯವು 500 ಜಿಲ್ಲೆಯ ಆಸ್ಪತ್ರೆಗಳಲ್ಲಿ ಲಭ್ಯವಿದೆ. ರಾಜ್ಯ ಸರ್ಕಾರಗಳ ವರದಿಗಳ ಪ್ರಕಾರ, ಈ ವರ್ಷ ಮಾರ್ಚ್ ವರೆಗೆ 22 ಲಕ್ಷ ಡಯಾಲಿಸಿಸ್ ಸೆಶನ್ ಗಳ ಮೂಲಕ ಒಟ್ಟು 2.3 ಲಕ್ಷ ರೋಗಿಗಳು ಉಚಿತ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಇದುವರೆಗೂ ಒಟ್ಟು 300 ಕೋಟಿ ರುಪಾಯಿ ಈ ಯೊಜನೆಗಾಗಿ ಬಿಡುಗಡೆ ಆಗಿದೆ. ಮಹಾಜನಗಳೆ, ತೆರಿಗೆದಾತರ ಹಣ ಎಲ್ಲಿ ಹೋಯಿತು? ಬಡವರ ಉದ್ಧಾರಕ್ಕಾಗಿ ಉಪಯೋಗವಾಯಿತು. ಮೊದಲು ತೆರಿಗೆದಾತರ ಹಣ ಎಲ್ಲಿ ಹೋಗುತ್ತಿತ್ತು? ಕಾಂಗ್ರೆಸಿನ ಕೈ ಕಮಾಂಡಿನ ಉದ್ದಾರಕ್ಕಾಗಿ ವ್ಯರ್ಥವಾಗುತ್ತಿತ್ತು. ಈಗ ಹೇಳಿ ಬಡವರ ಉದ್ದಾರ ಮಾಡುವ ಮೋದಿ ಬೇಕೆ? ಇಲ್ಲ, ಬಡವರ ಹೊಟ್ಟೆಗೆ ಹೊಡೆದು ತನ್ನನ್ನು ತಾನು ಉದ್ದಾರ ಮಾಡಿಕೊಳ್ಳುವ ಅಮ್ಮ-ಮಗ ಬೇಕೆ?

ನಿಬಂಧನೆಗಳ ಪ್ರಕಾರ, ವೈದ್ಯಕೀಯ ಮಾನವ ಸಂಪನ್ಮೂಲ, ‘ರಿವರ್ಸ್ ಆಸ್ಮೋಸಿಸ್’ (RO)ಡಯಾಲಿಸಿಸ್ ಯಂತ್ರ, ಜಲ ಸ್ಥಾವರ ಮೂಲಸೌಕರ್ಯ, ಡಯಾಲೈಜರ್ ಇವುಗಳನ್ನು ಖಾಸಗಿ ಸಹಯೋಗಿ ಸಂಸ್ಥೆಗಳು ಒದಗಿಸಿದರೆ, ಜಿಲ್ಲೆಯ ಆಸ್ಪತ್ರೆಗಳಲ್ಲಿನ ಸ್ಥಳ, ವಿದ್ಯುತ್ ಮತ್ತು ನೀರಿನ ಪೂರೈಕೆಗಳನ್ನು ರಾಜ್ಯ ಸರ್ಕಾರ ಒದಗಿಸುತ್ತದೆ. ಕೇಂದ್ರ ಸರಕಾರದ ಸುಪರ್ದಿಯಲ್ಲಿ ನಡೆಯುವ ಯೋಜನೆಗೆ ಕೇಂದ್ರದಿಂದ ಅನುದಾನ ಕೊಡಲಾಗುತ್ತದೆ. ಈ ಯೋಜನೆಯನ್ನು ಪಡೆದುಕೊಂಡ ರೋಗಿಗಳು:

ಪಶ್ಚಿಮ ಬಂಗಾಳದಿಂದ 42,000 ಕ್ಕಿಂತ ಹೆಚ್ಚು ರೋಗಿಗಳು ಲಾಭ ಪಡೆದಿದ್ದಾರೆ.
ಗುಜರಾತ್ ನಲ್ಲಿ 35,000 ಕ್ಕಿಂತ ಹೆಚ್ಚಿನ ರೋಗಿಗಳು ಪ್ರಯೋಜನ ಹೊಂದಿದ್ದಾರೆ
ಸಣ್ಣ ರಾಜ್ಯದ ಹೊರತಾಗಿಯೂ ಪುದುಚೇರಿ 10,500 ಫಲಾನುಭವಿಗಳನ್ನು ಹೊಂದಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಬರುವ ಯೋಜನೆ ಸಾವಿರಾರು ಬಡವರ ಜೀವ ಉಳಿಸಿದೆ. ಒಂದು ಡಯಾಲಿಸಿಸ್ ಸೆಶನ್ ಗೆ ಸುಮಾರು 2,000 ರೂ. ವೆಚ್ಚವಾಗುತ್ತದೆ ಮತ್ತು 3 ಲಕ್ಷಕ್ಕೂ ಹೆಚ್ಚಿನ ವಾರ್ಷಿಕ ಖರ್ಚು ಡಯಾಲಿಸಿಸ್ ಗೆ ತಗಲುತ್ತದೆ. ಉಳ್ಳವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ ಆದರೆ ಬಡವರು ಪಾಪ ಏನು ಮಾಡುವುದು? ಡಯಾಲಿಸಿಸ್ ಮಾಡಲು ಹಣವಿಲ್ಲದೆ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹವರಿಗೆ ಮೋದಿ ಅವರ ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ವರದಿಗಳ ಪ್ರಕಾರ ಪ್ರತಿವರ್ಷ ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆಯ 2.2 ಲಕ್ಷ ಹೊಸ ರೋಗಿಗಳು ಸೇರ್ಪಡೆಯಾಗುತ್ತಾರೆ. ಪರಿಣಾಮವಾಗಿ 3.4 ಕೋಟಿ ಡಯಾಲಿಸಿಸ್ ಸೆಶನ್ ಗಳ ಹೆಚ್ಚುವರಿ ಬೇಡಿಕೆ ಇದೆ. ದೇಶದಲ್ಲಿ ಒಟ್ಟು 4,950 ಡಯಾಲಿಸಿಸ್ ಕೇಂದ್ರಗಳಿವೆ ಆದರೆ ನಗರ ಪ್ರದೇಶಗಳಲ್ಲಿರುವ ದುಬಾರಿ ಕೇಂದ್ರಗಳಿಗೆ ತೆರಳಲು ಜನರ ಬಳಿ ಆರ್ಥಿಕ ಶಕ್ತಿ ಇರುವುದಿಲ್ಲ. ಜಿಲ್ಲಾ ಮಟ್ಟದ ಕೇಂದ್ರಗಳಲ್ಲಿ ಈ ಯೋಜನೆಯ ಲಾಭ ಪಡೆಯಬಹುದು.

ಜನರ ತೆರಿಗೆಯ ಒಂದು ರುಪಾಯಿಯೂ ಮೋದಿ ವ್ಯರ್ಥವಾಗಲು ಬಿಡಲ್ಲ. ಜನರ ಹಣ ಜನರ ಉಪಯೋಗಕ್ಕೆ ಖರ್ಚಾಗುತ್ತಿದೆ. ಮೋದಿ ಅವರ ನೋಟ್ ಬ್ಯಾನ್ ನಿರ್ಧಾರ, ಪೆಟ್ರೋಲ್ ಬೆಲೆ ಇಳಿಸದ ಕಾರಣ, ಜಿ.ಎಸ್.ಟಿ ಅನುಷ್ಠಾನಗಳಿಂದ ದೊರೆತ ಹಣವನ್ನು ಸಮಾಜ ಕಲ್ಯಾಣದ ಕೆಲಸಗಳಿಗೆ ಉಪಯೋಗಿಸಲಾಗುತ್ತಿದೆ. ಮೋದಿ ನಾಯಕತ್ವದ ಮೇಲೆ ನಂಬಿಕೆ ಇಡಿ. ಇಂತಹ ನಾಯಕ ಹಿಂದೆ ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಕೈಲಿರುವ ವಜ್ರವನ್ನು ಬೀದಿಗೆ ಬಿಸಾಕಿ ಚಮಕುವ ಖೋಟಾ ಕಲ್ಲಿನ ಹಿಂದೆ ಓಡಿ ದೇಶದ ಭವಿಷ್ಯ ಹಾಳುಗೆಡವಬೇಡಿ. ನಿರಂತರ ಜನರ ಸೇವೆ ಮಾಡಲು 2019 ರಲ್ಲಿ ಪ್ರಚಂಡ ಬಹುಮತದಿಂದ ಮೋದಿ ಅವರನ್ನು ಗೆಲ್ಲಿಸಿ..

-ಶಾರ್ವರಿ

Tags

Related Articles

Close