ಪ್ರಚಲಿತ

ದೇಶದ ರಕ್ಷಣೆಗಾಗಿ ಗರಿಷ್ಠ ವೆಚ್ಚ ಮಾಡುವ ವಿಶ್ವದ ಪ್ರಮುಖ 5 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೂ ದೊರಕಿತು ಸ್ಥಾನ!! ಭಾರತವೀಗ ವಿಶ್ವ ನಾಯಕರ ಸಮಾನ!!

ನರೇಂದ್ರ ಮೋದಿಯವರ ರಾಜತಾಂತ್ರಿಕ ದೇಶದ ರಕ್ಷಣಾ ಕ್ಷೇತ್ರದಲ್ಲಿ ಬದಲಾಣೆಯ ಶಕೆ ಆರಂಭವಾಗಿದ್ದು, ಶತ್ರುಗಳ ಉಪಟಳದಿಂದ ಭಾರತವನ್ನು ರಕ್ಷಿಸಿ ಶತ್ರುಗಳ ಹೆಡೆಮುರಿ ಕಟ್ಟಲು ಭಾರತದ ರಕ್ಷಣಾ ಕ್ಷೇತ್ರವು ಯಶಸ್ವಿಯಾಗುವುದರೊಂದಿಗೆ ವಿಶ್ವದಲ್ಲೇ ಪ್ರಬಲ ಸೇನೆ ಎನ್ನುವ ಖ್ಯಾತಿಗೆ ಪಾತ್ರವಾತ್ತಿಲ್ಲದೆ ಇದೀಗ ವಿಶ್ವದಲ್ಲೇ ಸೇನೆಗೆ ಅತೀ ಹೆಚ್ಚು ಖರ್ಚು ಮಾಡುವ ಟಾಪ್ 5 ದೇಶಗಳಲ್ಲಿ ಭಾರತವೂ ಒಂದಾಗಿದೆ!! ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಭಾರತೀಯ ಸೇನೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂಬುವುದು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?!!

Image result for modi

ರಕ್ಷಣಾ ವೆಚ್ಚ ಭಾರತ ಟಾಪ್ 5!!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇನೆಯ ಸಮರ್ಪಕವಾಗಿ ಖರ್ಚು ಮಾಡಿದ್ದು, 2017ರಲ್ಲಿ ಸೇನೆ ಬಲಪಡಿಸಲು ಖರ್ಚು ಮಾಡಿದ ವಿಶ್ವದ ಎಲ್ಲ ರಾಷ್ಟ್ರಗಳಲ್ಲೇ ಭಾರತಕ್ಕೆ ಐದನೇ ಸ್ಥಾನ ಲಭಿಸಿದೆ. ಸ್ವೀಡನ್ ನ ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಸಂಸ್ಥೆಯ ವರದಿ ಪ್ರಕಾರ ಭಾರತ ಸೈನ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಟಾಪ್ 5 ದೇಶಗಳಲ್ಲಿ ಸ್ಥಾನ ಪಡೆದಿದೆ ಎಂದು ತಿಳಿದು ಬಂದಿದೆ!!

ರಕ್ಷಣೆಗಾಗಿ ಗರಿಷ್ಠ ವೆಚ್ಚ ಮಾಡುವ ವಿಶ್ವದ ಪ್ರಮುಖ ಐದು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ. ನೆರೆಯ ರಾಷ್ಟ್ರಗಳಿಂದ ಭದ್ರತಾ ಆತಂಕ ಹಾಗೂ ಅತ್ಯಾಧುನಿಕ ಉಪಕರಣಗಳಿಗಾಗಿ ವಿದೇಶಗಳನ್ನು ಅವಲಂಬಿಸಿರುವ ಕಾರಣ ರಕ್ಷಣಾ ವೆಚ್ಚದಲ್ಲಿ ಭಾರಿ ಏರಿಕೆ ಕಂಡುಬಂದಿದೆ. 2017ರಲ್ಲಿ ಭಾರತದ ರಕ್ಷಣಾ ವೆಚ್ಚ ಶೇಕಡ. 5.5 ಏರಿಕೆಯಾಗಿ 4.2 ಲಕ್ಷ ಕೋಟಿಗೆ ತಲುಪಿದೆ. ರಕ್ಷಣಾ ವೆಚ್ಚದಲ್ಲಿ ಫ್ರಾನ್ಸನ್ನು ಹಿಂದಿಕ್ಕಿರುವ ಭಾರತ ಜಾಗತಿಕವಾಗಿ 5ನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಅಮೆರಿಕ, ಚೀನಾ ಸಾಲಿಗೆ ಸೇರ್ಪಡೆಯಾಗಿದೆ ಎಂದು ಸ್ಟಾಕ್‍ಹೋಮ್ ಇಂಟರ್‍ನ್ಯಾಷನಲ್ ಪೀಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಹೇಳಿದೆ.

ಕಳೆದ ವರ್ಷ ಜಾಗತಿಕವಾಗಿ ಸೇನಾ ವೆಚ್ಚ ಶೇಕಡ 2.2 ಏರಿಕೆ ಕಂಡಿದ್ದು, 113.3 ಲಕ್ಷ ಕೋಟಿಗೆ ಏರಿಕೆಯಾಗಿದೆ. ಏಷ್ಯಾ, ಮಧ್ಯಪ್ರಾಚ್ಯ, ದಕ್ಷಿಣ ಫೆಸಿಪಿಕ್ ಸಾಗರ ವಲಯದಲ್ಲಿ ಬರುವ ರಾಷ್ಟ್ರಗಳು ಗಣನೀಯ ಪ್ರಮಾಣದಲ್ಲಿ ಭದ್ರತಾ ವೆಚ್ಚದಲ್ಲಿ ಹೆಚ್ಚಳ ಮಾಡುತ್ತಿವೆ. ಏಷ್ಯಾದಲ್ಲೇ ಚೀನಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ವೆಚ್ಚ ಮಾಡುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಾರತೀಯ ಸೇನೆ ಯಾವ ರಾಷ್ಟ್ರವನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಶಕ್ತಿ ಪಡೆದಿದೆ. ಅದಕ್ಕೆ ಮೇಕ್ ಇನ್ ಇಂಡಿಯಾ ಮೂಲಕ ಶಸ್ತ್ರಾಸ್ತ್ರ ತಯಾರಿ, ವಿದೇಶದಿಂದ ಆಮದು, ಸೇನಾ ಶಸ್ತ್ರಾಸ್ತ್ರಗಳ ಆಧುನೀಕರಣ ಸೇರಿ ಹಲವು ಅಂಶಗಳು ಕಾರಣವಾಗಿವೆ. ಹಾಗಾಗಿಯೇ ನಮ್ಮ ಸೇನೆ ಯಾವಾಗಲೂ ಯುದ್ಧಸನ್ನದ್ಧವಾಗಿರುವ ಜತೆಗೆ, ವೈರಿ ರಾಷ್ಟ್ರದ ಎದೆ ನಡುಗಿಸುವಂತಹ ಶಕ್ತಿ ಪಡೆದಿದೆ.

 

ಅಂದರೆ 2017ರಲ್ಲಿ ಜಾಗತಿಕವಾಗಿ ಎಲ್ಲ ರಾಷ್ಟ್ರಗಳು 1.73 ಲಕ್ಷ ಕೋಟಿ ಡಾಲರ್ ವ್ಯಯಿಸಿದ್ದು, ಇದರಲ್ಲಿ ಭಾರತ ಮತ್ತು ಚೀನಾದ ಪಾಲೇ ಶೇಕಡ 60ರಷ್ಟಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ. 2017ರಲ್ಲಿ ಚೀನಾ ಸೇನೆ ಬಲಪಡಿಸಲು 228 ಬಿಲಿಯನ್ ಅಮೆರಿಕನ್ ಡಾಲರ್ ಹಣ ವ್ಯಯಿಸಿದರೆ, ಭಾರತ 63.9 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಅಂದರೆ ಇದು 2016ರಲ್ಲಿ ಖರ್ಚು ಮಾಡಿದ ಹಣಕ್ಕಿಂತ ಶೇ.5.5ರಷ್ಟು ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ.

ಭಾರತ ಸೇನಾಪಡೆಗೆ ಖರ್ಚು ಮಾಡುವುದರಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ.. ಇನ್ನೂ ಸೇನೆಯನ್ನು ವೃದ್ಧಿ ಪಡಿಸುವ ಮೂಲಕ ಟಾಪ್ 1ಗೆ ತರುವುದೇ ಮೋದಿಜೀಯವರ ಕನಸಾಗಿದೆ!!ಈಗಾಗಲೇ ಶತ್ರು ರಾಷ್ಟ್ರಗಳಿಗೆ ಭಾರತದ ಗಡಿ ಪ್ರವೇಶ ಮಾಡಲು ಹೆದರುವವರು ಮುಂದೊಂದು ದಿನ ಭಾರತ ಎಂದು ಹೆಸರು ಕೇಳಿದರೇನೇ ಗಢಗಢ ನಡುಗುವಂತೆ ಮಾಡುತ್ತಾರೆ ಮೋದೀಜಿ!! ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು!!

  • ಪವಿತ್ರ
Tags

Related Articles

Close