ಅಂಕಣಇತಿಹಾಸ

ಮದರ್ ತೆರೇಸಾ ಎಂಬ ಭ್ರಮಾ ಲೋಕ! ತೆರೇಸಾ ಸಂಸ್ಥೆಯಿಂದ ಹೊರಬಂದ ಕಾರ್ಯಕರ್ತೆ ಹೇಳಿದ್ದೇನು ಗೊತ್ತಾ?!

“ಜಗತ್ತಿನ ಅದೆಷ್ಟೋ ಮಹಿಳೆಯರು, ಸಹಾಯದ ಅವಶ್ಯಕತೆ ಇರುವ ಬಡ ಬಗ್ಗರಿಗೆ, ನಿಸ್ವಾರ್ಥ ಸೇವೆ ಮಾಡಬಹುದಂಬ ಕಾರಣಕ್ಕೆ, ಮದರ್ ತೆರೇಸಾರ ಜೊತೆ ಕೈ ಜೋಡಿಸಿದರು! ಅದೂ ಸಹ, ತಾವು ಸೇವೆಯ ಮೂಲಕ ದೇವರಿಗೆ ಹತ್ತಿರವಾಗಬಹುದೆಂಬ ಉದ್ದೇಶವನ್ನಿಟ್ಟುಕೊಂಡು ನಿಸ್ವಾರ್ಥ ಮನಸ್ಸಿನಿಂದ ತೆರೇಸಾರ ಸಂಸ್ಥೆಗಳಿಗೆ ಸೇರಿದರು! ನಾನು ಸಂಸ್ಥೆಯನ್ನು ಬಿಟ್ಟು ಹೊರಡುವಾಗ, ಜಗತ್ತಿನಲ್ಲೆಡೆಯಿಂದ ೩೦೦೦ ಹೆಣ್ಣು ಮಕ್ಕಳು, ಬರೋಬ್ಬರಿ ೪೦೦ ಸಂಸ್ಥೆಗಳ ಕಚೇರಿಯಲ್ಲಿ ಕರ್ತವ್ತ ನಿರ್ವಹಿಸುತ್ತಿದ್ದರು! ಆದರೆ, ಮದರ್ ತೆರೇಸಾ ದಾರಿ ತೋರಿಸುತ್ತಾರೆಂದು ನಂಬಿ ಬಂದಿದ್ದವರ ನಂಬಿಕೆ ಒಡೆದು ಅದೆಷ್ಟೋ ಸಮಯಗಳಾಗಿತ್ತು! ಅದೆಷ್ಟೋ ಸಾಂತ್ವನಗಳ ನಂತರ, ಧೈರ್ಯದ ನಂತರ ಅವರೆಲ್ಲರೂ ಸಹ, ತಾವು ಮೋಸ ಹೋಗಿದ್ದಾಗಿ ಒಪ್ಪಿಕೊಂಡಿದ್ದರು! ಅವರಲ್ಲಿದ್ದ ಮುಂಚಿನ ಆತ್ಮವಿಶ್ವಾಸ ಮರೆಯಾಗಿ ಹೋಗಿತ್ತು! ಸಂಸ್ಥೆಗಳಿಗೆ ಬರುವ ಮುನ್ನ ಇದ್ದಂತಹ ಹೆಣ್ಣಿಗೂ, ಬಂದ ಮೇಲಾದ ಪರಿವರ್ತನೆ ಅವರನ್ನು ಗುಲಾಮರನ್ನಾಗಿಸಿ ಬಿಟ್ಟಿತ್ತು! ಯಾವ ಮಟ್ಟಕ್ಕೆಂದರೆ, ಸ್ವತಃ ತಾವು ಯಾರೆಂಬುದನ್ನೇ ಮರೆಯುವಷ್ಟು! ಆದರೆ, ನಾನು ಅದ್ಹೇಗೋ ನನ್ನ ಒಳಗಿನ್ನೂ ಜೀವಂತವಾಗಿದ್ದ ಪ್ರತೀ ಆತ್ಮವಿಶ್ವಾಸವನ್ನೂ ಸಹ ಒಗ್ಗೂಡಿಸಿಕೊಂಡು ಹೊರ ಬಂದ ಮೇಲೆ, ನಾನು ಬದುಕುವುದನ್ನು ಕಲಿತೆ!”

– ಸೂಸನ್ ಶೀಲ್ಡ್ಸ್

ನಿಮಗೆ ಅಚ್ಚರಿಯಾಗಬಹುದೇನೋ! ಅಥವಾ, ಜಗತ್ತು ಹೀಗೂ ಇರಬಹುದಾ ಎಂದೂ ನಿಮಗನ್ನಿಸಬಹುದು! ಅಥವಾ, ಜಗತ್ತಿಗೇ ತಾಯಿ ಎಂದು ಗುರುತಿಸಿಕೊಂಡ ತೆರೇಸಾ ರ ಕೆಲವು ಕಹಿ ಸತ್ಯಗಳ ಬಗ್ಗೆ ನಿಮಗೆ ನಂಬಿಕೆಯೂ ಬರದೇ ಇರಬಹುದು!! ಆದರೆ, ಸ್ವತಃ ಅಲ್ಲಿರ್ತಕ್ಕಂತಹ ಕ್ರೈಸ್ತ ನನ್ ಗಳ ಬದುಕನ್ನು ಅಕ್ಷರಷಃ ನರಕವನ್ನಾಗಿಸಿದ ಮದರ್ ತೆರೇಸಾರ ಬಗ್ಗೆ ಅದೆಷ್ಟು ಜನರಿಗೆ ಸಂಪೂರ್ಣವಾಗಿ ಅರಿವಿದೆಯೋ ಗೊತ್ತಿಲ್ಲ! ಆದರೆ, ಒಂದಷ್ಟು ಕಹಿ ಸತ್ಯಗಳು ಮಾತ್ರ ಅಚ್ಚರಿಯಾಗೇ ಉಳಿದುಬಿಡುತ್ತದೆ! ಮದರ್ ತೆರೇಸಾರ ಜೊತೆ ಕೈ ಜೋಡಿಸಿದ್ದ ಅದೆಷ್ಟೋ ಹೆಣ್ಣು ಮಕ್ಕಳು ಕೊನೆಗೆ ಹೇಳ ಹೆಸರಿಲ್ಲದಂತಾಗಿ ಹೋಗಿದ್ದಾರೆ! ನಿಸ್ವಾರ್ಥ ಸೇವೆ ಸಲ್ಲಿಸಬೇಕು ಎನ್ನುವ ಮನಸ್ಥಿತಿಯವರನ್ನು ಸೇವೆ ಮಾಡುತ್ತೀಯಾದರೆ ಕ್ರೈಸ್ತ ಮತಕ್ಕೆ ಮತಾಂತರವಾಗು! ದೇವರು ಹತ್ತಿರವಾಗುತ್ತಾನೆ ಎಂಬ ಭ್ರಮೆ ಹುಟ್ಟಿಸುತ್ತಿದ್ದ ಸತ್ಯಗಳು ಇವತ್ತು ಅದೆಷ್ಟು ಜನಕ್ಕೆ ತಿಳಿದಿರಬಹುದು?! ಕೇವಲ, ಹೊರಗಡೆಯಿಂದ ಮಾತ್ರವೇ ತಾಯಿಯಾಗಿ ಕಂಡ ತೆರೇಸಾ, ತನ್ನ ವ್ಯಾಟಿಕನ್ ನಗರದ ಅಪ್ಪಟ ಕಾರ್ಯಕರ್ತೆಯಾಗಿದ್ದಳು ಎನ್ನುವ ಸತ್ಯವನ್ನು ಅದೆಷ್ಟು ಜನ ಒಪ್ಪುತ್ತಾರೆ?! ಆಕೆಯೊಬ್ಬಳು ಮತಾಂತರಿ ಎನ್ನುವುದು ನಮಗೆ ನಗಣ್ಯವಾಗಿ ಹೋದಾಗ, ಒಬ್ಬ ಹಿಂದೂವಾದವನು ಮದರ್ ತೆರೇಸಾರ ಬಗ್ಗೆ ಋಣಾತ್ಮಕವಾಗಿ ಮಾತನಾಡಿದರೆ ಕೇವಲ ಹಿಂದೂ ಅಭಿಪ್ರಾಯ ಪಟ್ಟ ಎನ್ನುವ ಕಾರಣಕ್ಕೆ ಸತ್ಯವನ್ನು ಸುಳ್ಳೆಂದೆನ್ನುವ ಭಾರತೀಯರಿಗೆ ಮುಂಚೆಯಿಂದಲೂ ರುಚಿಸಿದ್ದೇ ಇಲ್ಲ ಅಲ್ಲವೇ?! ಅದೇ, ವಿದೇಶಿಗನಾರ್ಯಾದರೂ ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ನಾವು ಹೌದು ಹೌದೆಂದು ಬಿಡುತ್ತೇವೆ! ಅದೇ ರೀತಿ ಇದೂ ಸಹ! ಸ್ವತಃ ಅದೆಷ್ಟೋ ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂಬ ಅದಮ್ಯ ಆಸೆ ಹೊತ್ತು ಮದರ್ ತೆರೇಸಾಳ ಸಂಸ್ಥೆ ಸೇರಿದಂತಹ ಸೂಸನ್ ಶೀಲ್ಡ್ ತೆರೇಸಾ ಎಂಬುವಂತಹ ಭ್ರಮಾಲೋಕದ ಬಗ್ಗೆ ಹೇಳಿದ್ದೇನೆಂದು ಒಮ್ಮೆ ಓದಿ!

ಒಂದಷ್ಟು ವರ್ಷಗಳ ನಂತರ, ನಾನು ಕ್ಯಾಥೋಲಿಕ್ ಆಗಿ ಪರಿವರ್ತನೆಯಾದೆ! ಮದರ್ ತೆರೇಸಾರ ಮಿಷನರಿಗಳ ಸಂಸ್ಥೆಗೆ ಸೇರಿದೆ! ಮದರ್ ತೆರೇಸಾರ ಸಿಸ್ಟರ್ ಗಳ ಪೈಕಿ ಒಬ್ಬಳಾಗಿ ಒಂಭತ್ತೂವರೆ ವರ್ಷಗಳ ಕಾಲ ಸಂಸ್ಥೆಯಲ್ಲಿದ್ದ, ಒಟ್ಟಾರೆ ವರ್ಷಗಳಲ್ಲಿ ಬ್ರೋನ್ಕ್ಸ್ , ರೋಮ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ವಾಸ್ತವ್ಯವಾಗಿದ್ದೆನಾದರೂ ಸಹ, ತದನಂತರ ನನಗೆ ಭ್ರಮೆ ಸರಿದಿತ್ತು!! ೧೯೮೯ ರ ಮೇ ತಿಂಗಳಿನಲ್ಲಿ ಮದರ್ ತೆರೇಸಾ ಎಂಬ ಭ್ರಮೆಯಿಂದ ಹೊರಬಂದಾಗ ನಾನು ನಿಜವಾಗಿಯೂ ಜೀವಿಸಲು ಪ್ರಾರಂಭಿಸಿದ್ದೆ! ಸಿಕ್ಕು ಸಿಕ್ಕಾದ ಬದುಕಿನಲ್ಲಿಯೇ ಇದ್ದ ನಾನು ಇಷ್ಟು ವರ್ಷ ಅಲ್ಲಿ ಹೇಗೆ ಬದುಕಿದೆ ಎಂಬ ಗೊಂದಲಕ್ಕೊಳಗಾಗುವಷ್ಟು ಅಚ್ಚರಿ ನನ್ನೊಳಗೆ ಪ್ರಾರಂಭವಾಗಿತ್ತು!

ತಮ್ಮ ಸಂಸ್ಥೆಯ ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದ ಮದರ್ ತೆರೇಸಾ ತಮ್ಮ ಜೊತೆಗಿನ ಸಿಸ್ಟರ್ ಗಳಿಗೆ ಹೇಳಿಕೊಡುತ್ತಿದ್ದ ಮೂರು ಮೂಲಭೂತ ನಂಬಿಕೆಗಳು ಅತಿ ಭಯಂಕರವಾಗಿತ್ತಷ್ಟೇ! ಮತ್ತು, ಅದಷ್ಟೇ ಅಪಾಯಕಾರಿಯೂ ಸಹ!! ಯಾಕೆಂದರೆ, ಮದರ್ ತೆರೇಸಾರ ಮಾತುಗಳನ್ನು ಪ್ರಶ್ನಾತೀತವಾಗಿದ್ದಲ್ಲದೇ, ನಂಬಿ ಅನುಸರಿಸಬೇಕಿದ್ದುದು ಮತ್ತು, ಅಷ್ಟೇ ವಿಧೇಯವಾಗಿ ಉಳಿದ ಸಿಸ್ಟರ್ ಗಳೂ ಸಹ ಅನುಸರಿಸುತ್ತಿದ್ದುದು!

ಮೂಲಭೂತ ಪಾಠಗಳಲ್ಲಿ, ಅತಿ ಮುಖ್ಯವಾದದ್ದೇನೆಂದರೆ, ಎಲ್ಲಿಯ ತನಕ ಒಬ್ಬ ಸಿಸ್ಟರ್ ವಿಧೇಯತೆಯಿಂದ ನಡೆದುಕೊಳ್ಳುತ್ತಾಳೋ, ಎಲ್ಲಿಯವರೆಗೆ ಆಕೆ ಸವಾಲುಗಳನ್ನು ಹಾಕದೇ ಮೇಲಿರುವವರು ಹೇಳಿದ ಯಾವುದನ್ನೇ ಆದರೂ ಆಕೆ ಪಾಲಿಸಿದರೆ ಆಕೆ ದೇವರಿಗೆ ಹತ್ತಿರವಾಗುತ್ತಾಳೆ ಎನ್ನುವ ಬಲವಾದ ನಂಬಿಕೆ! ಎರಡನೆಯದು, ಕಷ್ಟವನ್ನು ಅನುಭವಿಸುವುದರ ಮೂಲಕ ದೇವರ ಮೇಲೆ ಹತೋಟಿ ಹೊಂದಿರುವವರು ಎನ್ನುವ ನಂಬಿಕೆ! ಅವರ ಕಷ್ಟಗಳನ್ನು ಅನುಭವಿಸಿದರೆ, ದೇವನು ಸಂತೃಪ್ತನಾಗುತ್ತಾನೆಂಬ ಭಾವ! ಆಗ, ಮಾನವರನ್ನು ಮತ್ತಷ್ಟು ಹರಸುತ್ತಾನೆ ಎಂಬ ನಂಬಿಕೆ! ಮೂರನೆಯದೇನೆಂದರೆ, ಯಾವ ಮಾನವನ ಜೊತೆಗೂ ಯಾವುದೇ ರೀತಿಯ ವ್ಯಾಮೋಹವನ್ನು ಹೊಂದಿರಬಾರದೆಂಬ ನಂಬಿಕೆ! ಯಾಕೆಂದರೆ, ಯಾರದೇ ಜೊತೆಗೆ
ಮೋಹವನ್ನಿಟ್ಟರೂ ಸಹ “ಭಗವಂತನಿಗೆ ಮತ್ತು ತಮ್ಮ” ನಡುವಿನ ಬಾಂಧವ್ಯಕ್ಕೆ ಮಾಡಿದ ಮೋಸವೆಂದು ಪರಿಗಣಿಸಲಾಗಿತ್ತು! ಅದಕ್ಕೇ, ಪ್ರತೀ ಸಿಸ್ಟರ್ ಗಳೂ ಸಹ ತಮ್ಮ ಕುಟುಂಬದಿಂದ ಮೋಹವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರ ಪರಿಣಾಮ, ಅವರ ಬದುಕು ಗೊಂದಲಮಯಗಳಿಂದ ತುಂಬಿರುತ್ತಿದ್ದಲ್ಲದೇ, ಅಶಾಂತಿ ಹೊಗೆಯಾಡುತ್ತಿತ್ತು! ಮೋಹವೆಂಬುವುದು ಮದರ್ ತೆರೇಸಾರ ಸಭೆಯಲ್ಲಿ ನಿಷಿದ್ಧ ಎನ್ನುವುದು ಬಹಳಷ್ಟು ಸಿಸ್ಟರ್ ಗಳು ಅನಿವಾರ್ಯವಾಗಿ ನಿರ್ಲಿಪ್ತವಾಗಿರ ಬೇಕಾಗಿರುತ್ತಿತ್ತು! ಈ ನಂಬಿಕೆಗಳನ್ನು ಸೃಷ್ಟಿಸಿದ್ದು ಮದರ್ ತೆರೇಸಾ ಅಲ್ಲದಿದ್ದರೂ ಸಹ ಆಕೆ ಈ ನಂಬಿಕೆಗಳನ್ನು ಉಳಿದವರ ಮೇಲೆ ಹೇರಲು ಪ್ರಯತ್ನಿಸುತ್ತಿದ್ಧರಲ್ಲದೇ, ವ್ಯಾಟಿಕನ್-|| ರ ತಮ್ಮ ಅಧಿಕಾರದಲ್ಲಿ ಈ ಸಿದ್ಧಾಂತಗಳನ್ನು ಬಹಳವಾಗಿ ಹೇರಿದ್ದರು!

ಒಮ್ಮೆ, ಒಬ್ಬ ಸಿಸ್ಟರ್ ಈ ಪ್ರತೀ ಪರಾಕಾಷ್ಟೆಗಳನ್ನು ತಲುಪಿದಳೆಂದರೆ, ಆಕೆ ಬಹುತೇಕ ಎಲ್ಲದಕ್ಕೂ ಸಿದ್ಧವಾಗಿ ಬಿಡುತ್ತಾಳೆ! ಅವಳು ತನ್ನ ಆರೋಗ್ಯವಬ್ನು ಹದಗೆಡಿಸಿಕೊಳ್ಳ ಬಹುದು! ಸೇವೆ ಮಾಡುವ ಪ್ರತಿಜ್ಞೆ ಮಾಡಿದವರನ್ನು ನಿರ್ಲಕ್ಷಿಸಿ, ಅವಳ ಭಾವನೆಗಳನ್ನು ಅಥವಾ ನಿರ್ಧಾರವನ್ನು ಬದಲಾಯಿಸಬಹುದು! ಅವಳು ಒಳಗೊಳಗೆ ನರಳಿದರೂ ಸಹ ಅದನ್ನಾಕೆ ಪರೀಕ್ಷೆ ಎಂದುಕೊಂಡು ನಿರ್ಲಕ್ಷಿಸಬಹುದು! ಸುಲಭವಾಗಿ, ಸುಳ್ಳು ಹೇಳುತ್ತಾ, ಸಾರ್ವಜನಿಕವಾದ ಕಾನೂನು ಮತ್ತು ನಿಯಮಗಳನ್ನು ನಿರ್ಲಕ್ಷಿಸಬಲ್ಲಳು!!

ಜಗತ್ತಿನ ಅದೆಷ್ಟೋ ಮಹಿಳೆಯರು, ಸಹಾಯದ ಅವಶ್ಯಕತೆ ಇರುವ ಬಡ ಬಗ್ಗರಿಗೆ, ನಿಸ್ವಾರ್ಥ ಸೇವೆ ಮಾಡಬಹುದಂಬ ಕಾರಣಕ್ಕೆ, ಮದರ್ ತೆರೇಸಾರ ಜೊತೆ ಕೈ ಜೋಡಿಸಿದರು! ಅದೂ ಸಹ, ತಾವು ಸೇವೆಯ ಮೂಲಕ ದೇವರಿಗೆ ಹತ್ತಿರವಾಗಬಹುದೆಂಬ ಉದ್ದೇಶವನ್ನಿಟ್ಟುಕೊಂಡು ನಿಸ್ವಾರ್ಥ ಮನಸ್ಸಿನಿಂದ ತೆರೇಸಾರ ಸಂಸ್ಥೆಗಳಿಗೆ ಸೇರಿದರು! ನಾನು ಸಂಸ್ಥೆಯನ್ನು ಬಿಟ್ಟು ಹೊರಡುವಾಗ, ಜಗತ್ತಿನಲ್ಲೆಡೆಯಿಂದ ೩೦೦೦ ಹೆಣ್ಣು ಮಕ್ಕಳು, ಬರೋಬ್ಬರಿ ೪೦೦ ಸಂಸ್ಥೆಗಳ ಕಚೇರಿಯಲ್ಲಿ ಕರ್ತವ್ತ ನಿರ್ವಹಿಸುತ್ತಿದ್ದರು! ಆದರೆ, ಮದರ್ ತೆರೇಸಾ ದಾರಿ ತೋರಿಸುತ್ತಾರೆಂದು ನಂಬಿ ಬಂದಿದ್ದವರ ನಂಬಿಕೆ ಒಡೆದು ಅದೆಷ್ಟೋ ಸಮಯಗಳಾಗಿತ್ತು! ಅದೆಷ್ಟೋ ಸಾಂತ್ವನಗಳ ನಂತರ, ಧೈರ್ಯದ ನಂತರ ಅವರೆಲ್ಲರೂ ಸಹ, ತಾವು ಮೋಸ ಹೋಗಿದ್ದಾಗಿ ಒಪ್ಪಿಕೊಂಡಿದ್ದರು! ಅವರಲ್ಲಿದ್ದ ಮುಂಚಿನ ಆತ್ಮವಿಶ್ವಾಸ ಮರೆಯಾಗಿ ಹೋಗಿತ್ತು! ಸಂಸ್ಥೆಗಳಿಗೆ ಬರುವ ಮುನ್ನ ಇದ್ದಂತಹ ಹೆಣ್ಣಿಗೂ, ಬಂದ ಮೇಲಾದ ಪರಿವರ್ತನೆ ಅವರನ್ನು ಗುಲಾಮರನ್ನಾಗಿಸಿ ಬಿಟ್ಟಿತ್ತು! ಯಾವ ಮಟ್ಟಕ್ಕೆಂದರೆ, ಸ್ವತಃ ತಾವು ಯಾರೆಂಬುದನ್ನೇ ಮರೆಯುವಷ್ಟು! ಆದರೆ, ನಾನು ಅದ್ಹೇಗೋ ನನ್ನ ಒಳಗಿನ್ನೂ ಜೀವಂತವಾಗಿದ್ದ ಪ್ರತೀ ಆತ್ಮವಿಶ್ವಾಸವನ್ನೂ ಸಹ ಒಗ್ಗೂಡಿಸಿಕೊಂಡು ಹೊರ ಬಂದ ಮೇಲೆ, ನಾನು ಬದುಕುವುದನ್ನು ಕಲಿತೆ!

Women from many nations joined Mother Teresa in the expectation that they would help the poor and come closer to God themselves. When I left, there were more than 3,000 sisters in approximately 400 houses scattered throughout the world. Many of these sisters who trusted Mother Teresa to guide them have become broken people. In the face of overwhelming evidence, some of them have finally admitted that their trust has been betrayed, that God could not possibly be giving the orders they hear. It is difficult for them to decide to leave—their self- confidence has been destroyed, and they have no education beyond what they brought with
them when they joined. I was one of the lucky ones who mustered enough courage to walk away.” — Susan Shields

ಗೊತ್ತಿದೆ!! ಅದೆಷ್ಟೋ ಜನ ಮದರ್ ತೆರೇಸಾರ ಸಂಘ ಸಂಸ್ಥೆಗಳು ಮಾಡುತ್ತಿರುವುದು ದೇವರ ಕೆಲಸವೆಂದು ಬಹುವಾಗಿ ನಂಬಿದ್ದಲ್ಲದೇ, ಮದರ್ ತೆರೇಸಾ ಎಂದರೆ ದೇವರೆಂಬುವಷ್ಟು ಭಾವನೆ ಇತ್ತು!! ಒಂದಷ್ಟು ಜನ ಮದರ್ ತೆರೇಸಾರ ಸಂಘವನ್ನು ಸೇರುವುದಾಗಿ ಬಯಸಿ ಸೇರುತ್ತಿದ್ದರೆ, ಸಾಧ್ಯವಾಗದವರು ಈ ಹಣದಿಂದ ಬೇರೆಯವರಿಗೆ ಸಹಾಯ ಮಾಡಿ ಎಂದು ದೊಡ್ಡ ಮೊತ್ತದ ಹಣವನ್ನೂ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದರು! ಆದರೆ, ಅವರಿಗ್ಯಾರಿಗೂ ಬಹುಷಃ ಗೊತ್ತಿರಲಿಕ್ಕಿಲ್ಲ! ಅದೆಷ್ಟೋ ಮೊತ್ತದ ಹಣ ಬ್ಯಾಂಕಿನ ಖಾತೆಗಳಲ್ಲಿ ಬಳಸದೇ ಹಾಗೆಯೇ ಉಳಿದಿತ್ತೆಂಬ ವಾಸ್ತವ!!

ನನಗಿನ್ನೂ ನೆನಪಿದೆ! ನಾನು ಮಿಷನರಿ ಚಾರಿಟಿಯಲ್ಲಿ ಲೆಕ್ಕ ಪತ್ರ ನೋಡಿಕೊಳ್ಳುತ್ತ, ದಾನಿಗಳ ದೇಣಿಗೆ ಹಣವನ್ನು ಲೆಕ್ಕದಲ್ಲಿ ಬರೆದಿಡುತ್ತಾ, ಜೊತೆಗೆ ಕೃತಜ್ಞತಾ ಪತ್ರಗಳನ್ನು ಕಳುಹಿಸುವ ಜವಾಬ್ದಾರಿಯೂ ನನ್ನ ಮೇಲಿತ್ತು! ಅದೆಷ್ಟೋ ಮೊತ್ತದ ಹಣಗಳು ಪ್ರತಿದಿನ ಸಂಸ್ಥೆಗಳಿಗೆ ಬರುತ್ತಿತ್ತು! ನಾವು, ಪ್ರತಿದಿನವೂ ಸಹ ೫೦,೦೦೦ ಡಾಲರ್ ರೂಗಳ ಚೆಕ್ ನ ರಶೀದಿಯನ್ನು ನಿಯಮಿತವಾಗಿ ಬರೆಯುತ್ತಿದ್ದೆವು! ಕೆಲವೊಮ್ಮೆ, ದಾನಿಗಳು ಕರೆ ಮಾಡಿ ನಮ್ಮ ದೇಣಿಗೆ ಸಿಕ್ಕಿದೆಯಾ ನಮ್ಮ ನೆನಪಿದೆಯಾ ಎಂದು ಕೇಳುತ್ತಿದ್ದರು! ಅವರು ಕೊಟ್ಟದ್ದಕ್ಕಿಂದ ದೊಡ್ಡ ಮೊತ್ತೆ ಹಣಗಳು ಅದೆಷ್ಟೋ ಜನ ಕೊಡುತ್ತಿದ್ದರಿಂದ ನಮಗೆ ಕೆಲವೊಮ್ಮೆ ಏನು ಹೇಳಲೂ ಆಗುತ್ತಿರಲಿಲ್ಲ! ಕೆಲವೊಮ್ಮೆ, ದಾನಿಗಳು ಹೃದಯಸ್ಪರ್ಶಿಯಾದ ಪತ್ರಗಳನ್ನೂ ಬರೆಯುತ್ತಿದ್ದರು!

ಮದರ್ ತೆರೇಸಾ ಕೆಲವೊಮ್ಮೆ ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತ್ತಿದ್ದರು! ಆದರೆ, ನೇರವಾಗಿ ಧನದ ಸಹಾಯ ಮಾಡಿ ಎನ್ನುತ್ತಿರಲಿಲ್ಲ! ಬದಲಾಗಿ, ತ್ಯಾಗದಿಂದ ದೇವನು ಹತ್ತಿರವಾಗುತ್ತಾನೆ!! ನಿಮ್ಮ ಸಹಾಯ ಬಡವರನ್ನು ತಟ್ಟುವವರೆಗೂ ಸಹಾಯ ಮಾಡಿ ಎಂದು ಪರೋಕ್ಷವಾಗಿ ಹೇಳುತ್ತಿದ್ದರು!! ಅದೆ ರೀತಿ, ಅದೆಷ್ಟೋ ಜನರು ಮದರ್ ತೆರೇಸಾರನ್ನು ನಂಬಿ ನಿರಂತರ ಸಹಾಯ ಮಾಡುತ್ತಿದ್ದರು! ಕೆಲವೊಮ್ಮೆ, ಅವರೇ ಬಡವರಾಗಿದ್ದರೂ ಸಹ , ತಮ್ಮ ಅತ್ಯಲ್ಪ ಸಹಾಯವನ್ನು ಮಾಡುತ್ತಿದ್ದರು! ತಮ್ಮ ಚಿಲ್ಲರೆಗಳನ್ನು ದಾನ ಮಾಡಿ, ಆಫ್ರಿಕಾದಲ್ಲಿರುವ ಹಸಿದ ಜನರಿಗೆ, ಬಾಂಗ್ಲಾದ ಪ್ರವಾಹ ಪೀಡಿತರಿಗೆ, ಭಾರತದ ಬಡ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದರು! ಆದರೆ, ಮದರ್ ತೆರೇಸಾರ ಖಾತೆಗಳಲ್ಲಿ, ಅದೆಷ್ಟೋ ದೊಡ್ಡ ಮೊತ್ತದ ಹಣ ಸದುಪಯೋಗವಾಗದೇ, ಕೊಳೆಯುತ್ತ ಬಿದ್ದಿದ್ದು ಯಾರಿಗೂ ಗೊತ್ತಾಗುತ್ತಿರಲಿಲ್ಲ!

ಅದರಲ್ಲೂ, ನಮ್ಮ ಸಂಸ್ಥೆಯಿಂದ ಪ್ರವಾಹ ಪೀಡಿತರಿಗೋಸ್ಕರವೇನಾದರೂ ಹಣ ಸಂಗ್ರಹಿಸುತ್ತಿದ್ದೇವೆ ಎಂದರಂತೂ, ರಾಶಿಗಟ್ಟಲೇ ಸಹಾಯ ಗಳು ಬರುತ್ತಿದ್ದವು!! ಆಗೆಲ್ಕ, ವಾರದ ಸಭೆಯಲ್ಲಿ ಮದರ್ ತೆರೇಸಾ ದೇವರಿಗೆ ಹತ್ತಿರವಾಗಿದ್ದಾರೆ! ಅದಕ್ಕೇ, ಇಷ್ಟು ಉಡುಗೊರೆಗಳು, ಸಹಾಯಗಳು ಹರಿದು ಬರುತ್ತವೆ ಎನ್ನಲಾಗುತ್ತಿತ್ತು! ಆಗ, ಮತ್ತೆ ನಾವು ಭ್ರಮೆಗೆ ಬೀಳುತ್ತಿದ್ದೆವು!! ಅದು ಕೇವಲ ಮದರ್ ತೆರೇಸಾ ಅಲ್ಲ, ಅವರ ಜಾಗದಲ್ಲಿ ಇನ್ಯಾರೇ ಇದ್ದರೂ, ಸಹಾಯ ಮಾಡುತ್ತಿದ್ದರಲ್ಲವೇ?!

The donations rolled in and were deposited in the bank, but they had no effect on our ascetic lives and very little effect on the lives of the poor we were trying to help. We lived a simple life, bare of all superfluities. We had three sets of clothes, which we mended until the material was too rotten to patch anymore. We washed our own clothes by hand. The never-ending piles of sheets and towels from our night shelter for the homeless we washed by hand, too. Our bathing was accomplished with only one bucket of water. Dental and medical checkups were seen as an unnecessary luxury.

ಬ್ಯಾಂಕ್ ಖಾತೆಗಳಿಗೆ ಅದೆಷ್ಟೇ ಹಣ ಬಂದು ಬಿದ್ದರೂ ಸಹ, ನಮ್ಮ ಸಂನ್ಯಾಸಿಯ ಬದುಕಿಗೆ ಅದಾವುದೂ ಸಹ ಪರಿಣಾಮ ಬೀರಲಿಲ್ಲ! ಅದಲ್ಲದೇ, ಸೇವೆ ಮಾಡಬೇಕೆಂದು ಕೊಂಡಿದ್ದ ಬಡ ಜನರಿಗೂ ಸಹ ಆ ಹಣಗಳೆಲ್ಲ ಬಳಕೆಯಾಗಿದ್ದು ಸ್ವಲ್ಪ ಮಾತ್ರವಷ್ಟೇ! ಮಾಡಬೇಕೆಂದರೂ, ನಮ್ಮಲ್ಲಿ ಅಷ್ಟು ಅಧಿಕಾರವೂ ಇರಲಿಲ್ಲ! ನಾವು ತೀರಾ ಎನ್ನುವಷ್ಟು ಸರಳವಾಗಿ ಬದುಕಿದೆವು! ಪ್ರತೀ ವೈಭೋಗಗಳನ್ನೂ ತ್ಯಜಿಸಿದ್ದೆವು! ನಾವು ಬಳಸುತ್ತಿತ್ತದ್ದು ಕೇವಲ ಮೂರು ಜೊತೆ ಬಟ್ಟೆಗಳನ್ನಷ್ಟೇ! ಅದಿನ್ನು ಬಳಸಲು ಬರುವುದೂ ಇಲ್ಲ, ಮತ್ತು ತೇಪೆ ಹಾಕಲು ಸಾಧ್ಯವಿಲ್ಲ ಎಂದಾದಾಗ ಮಾತ್ರ, ಪ್ರತಿಯಾಗಿ ಇನ್ನೊಂದು ಜೊತೆಯ ವಸ್ತ್ರಗಳನ್ನು ಕೊಂಡುಕೊಳ್ಳ ಬಹುದಿತ್ತು! ನಮ್ಮ ವಸ್ತ್ರಗಳನ್ನು ನಾವು ಕೈಯಾರೆ ತೊಳೆದುಕೊಳ್ಳುತ್ತಿದ್ದೆವು! ನಾವು ರಾತ್ರಿ ಎಲ್ಲಿಯಾದರೂ ಉಳಿದುಕೊಳ್ಳುವುದಿದ್ದರೆ ಮಾತ್ರ, ನಮಗೆ ಒಂದು ಹಳೆಯ ಚಾದರ ಅಥವಾ ಒಂದು ಟವೆಲ್ ಸಿಗುತ್ತಿತ್ತಷ್ಟೇ!! ನಮ್ಮ ಸ್ನಾನ ಮುಗಿಯುತ್ತಿದ್ದದ್ದು ಕೇವಲ ಒಂದು ಬಕೇಟು ನೀರಿನಿಂದ ಮುಗಿಯುತ್ತಿತ್ತು!! ವೈದ್ಯಕೀಯ ತಪಾಸಣೆ ಮತ್ತು, ದಂತ ತಪಾಸಣೆ ಮಾಡುವುದೆಲ್ಲ ಅನಾವಶ್ಯಕವಾದ ವೈಭೋಗ ಎನ್ನಲಾಗುತ್ತಿತ್ತಷ್ಟೇ!!

ಮದರ್ ತೆರೇಸಾ ಯಾವಾಗಲೂ ಹೇಳುವುದೇನೆಂದರೆ, ದಾರಿದ್ರ್ಯದ ಆತ್ಮವನ್ನು ನಾವು ಸಿಸ್ಟರ್ ಗಳು ಕಾಪಾಡಿಕೊಳ್ಳಬೇಕು ಎಂಬುದು! ಸರಳ ವಿಧಾನಗಳನ್ನು ಮಾತ್ರ ಬಳಸಿಕೊಂಡು ಸೇವೆಯನ್ನು ಮಾಡಬೇಕೆಂದು ಹೇಳುತ್ತಿದ್ದರು ತೆರೇಸಾ! ನಮ್ಮ ಪಾವಿತ್ರ್ಯತೆಯನ್ನು ತನ್ಮೂಲಕ ಹೆಚ್ಚಿಸಿಕೊಳ್ಳಬೇಕೆಂದು ಹೇಳುತ್ತಿದ್ದ ತೆರೇಸಾ, ಖರ್ಚು ಮಾಡುವುದರಿಂದ ದಾರಿದ್ರ್ಯದ ಆತ್ಮ ನಾಶವಾಗುತ್ತದೆಯಾದ್ದರಿಂದ ಅದನ್ನು ಸದಾ ಕಾಲ ಕಾಪಾಡಬೇಕು ಎಂದು ನಂಬಿದ್ದರು! ಒಮ್ಮೆ ಹೈತಿಯಲ್ಲಿ, ಸಿಸ್ಟರ್ ಗಳು ಚುಚ್ಚು ಮದ್ದುಗಳನ್ನು ಬಳಸುತ್ತಿದ್ದರು! ಅದೂ ಸಹ, ಬಳಸಿ ಬಳಸಿ ಮೊಂಡಾದರೂ ಸಹ, ಅದನ್ನೇ ಬಳಸುತ್ತಿದ್ದರು ಹೊರತು ಹೊಸ ಚುಚ್ಚು ಮದ್ದುಗಳನ್ನು ಕೊಂಡುಕೊಳ್ಳುತ್ತಿರಲಿಲ್ಲ! ಒಮ್ಮೊಮ್ಮೆ, ಸಿಸ್ಟರ್ ಗಳು ಚುಚ್ಚು ಮದ್ದು ತೆಗೆದುಕೊಳ್ಳುವಾಗಿನ ಅನುಭವಿಸುವ ನೋವನ್ನು ನೋಡಲಾರದೇ ಉಳಿದವರು ಅವರಿಗೆ ಹೊಸ ಚುಚ್ಚು ಮದ್ದು ತೆಗೆದುಕೊಟ್ಟರೂ ಅವರದನ್ನು ನಿರಾಕರಿಸಿದ್ದರು!

ಒಮ್ಮೊಮ್ಮೆ, ನಮ್ಮ ಹತ್ತಿರ ಆಹಾರಗಳು ಏನೂ ಇಲ್ಲದಾದಾಗ, ನಾವು ಬೇಡಿದ್ದೆವು! ಹಸಿವಾದಾಗ ತಿನ್ನಲೇನಾದರೂ ಬೇಕು ಎನ್ನುವ ಹಾಗಿರಲಿಲ್ಲ! ಜೊತೆಗೆ, ಹೊರಗಡೆಯೂ ಸಹ ವ್ಯಾಪಾರಿಗಳಾದರೂ ಎಷ್ಟೆಂದು ಸಹಾಯ ಮಾಡಿಯಾರು?! ಕೊನೆಗೆ, ನಮ್ಮ ವಿನಂತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿದಾಗ, ಸೂಪು ತಯಾರಿಸಬಹುದು ಎಂದರು! ಆದರೆ, ಬ್ರೆಡ್ ಗಳನ್ನು ತಿನ್ನುವ ಹಾಗಿರಲಿಲ್ಲ! ನಮಗೆ, ಕೇವಲ ವ್ಯಾಪಾರಿಗಳು ಮಾತ್ರವಲ್ಲ! ಬದಲಾಗಿ, ವಿಮಾನ ಪ್ರಯಾಣವೂ ನಮಗೆ ಉಚಿತವಾಗಿ ದಕ್ಕುತ್ತಿತ್ತು! ಆಸ್ಪತ್ರೆಗಳಲ್ಲಿ ವೈದ್ಯರು ಹಣ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು! ಕಾರ್ಮಿಕರು ಸಂಬಳವಿಲ್ಲದೇ ಸೇವೆಯಂತೆ ಮಾಡಿ ಎಂದು ಪ್ರೋತ್ಸಾಹಿಸಲಾಗುತ್ತಿತ್ತು! ನಮ್ಮ ದಿನದ ಸೂಪ್, ಬ್ರೆಡ್ ಮತ್ತು ವಸತಿಗಳು ಇದೇ ಕಾರ್ಮಿಕರ ಮೇಲೆ ಅವಲಂಬಿತವಾಗಿತ್ತು! ಒಮ್ಮೆ, ಒಬ್ಬ ಕಾರ್ಮಿಕ ನಮ್ಮ ಹತ್ತಿರ ಕೇಳಿದ್ದನು! “ನಾನು ಬರದೇ ಹೋದರೆ, ನೀವೇನು ಆಹಾರ ತಿನ್ನುವಿರಿ?! ” ಎಂದು! ನಮ್ಮ ಹತ್ತಿರ ಉತ್ತರವಿರಲಿಲ್ಲ!

Our Constitution forbade us to beg for more than we needed, but, when it came to begging, the millions of dollars accumulating in the bank were treated as if they did not exist.

ನಮ್ಮ ವ್ಯವಸ್ಥೆ ಬೇಕಾದಷ್ಟನ್ನೇ ಬೇಡು ಎನ್ನುತ್ತಿತ್ತು! ನಾವು, ಅಗತ್ಯಕ್ಕಿಂತ ಹೆಚ್ಚಾಗಿ ಏನನ್ನೂ ಕೇಳುವ ಹಾಗಿರಲಿಲ್ಲ! ಒಮ್ಮೊಮ್ಮೆ ನಮ್ಮ ಅಗತ್ಯವಿದ್ಧರೂ ಸಹ ನಾವು ಕೇಳುವ ಹಾಗಿರಲಿಲ್ಲ! ಆದರೆ, ಯಾವಾಗ ದೇಣಿಗೆಗಳನ್ನು ನೀಡುತ್ತಿದ್ದರೋ, ಅದನ್ನೆಲ್ಲ ಅಗತ್ಯಕ್ಕಿಂತ ಜಾಸ್ತಿ ಕೇಳುತ್ತಿದ್ದರು! ಅದಲ್ಲದೇ, ಸಿಸ್ಟರ್ರುಗಳಿಗೆ ಯಾವುದಾದರೂ ಅವಶ್ಯಕತೆ ಇದ್ದರೂ ಸಹ, ಬ್ಯಾಂಕಿನಲ್ಲಿ ಹಣವೇ ಇಲ್ಲವೆಂಬಂತೆ ವರ್ತಿಸುತ್ತಿದ್ದರು!”

– ಸೂಸನ್ ಶೀಲ್ಡ್!!

ಹಾಗಾದರೆ, ಅಷ್ಟು ಮಿಲಿಯನ್ನುಗಟ್ಟಲೇ ಹಣ ಎಲ್ಲಿಗೆ ಹೋಯಿತು?! ಮದರ್ ತೆರೇಸಾ ಎಂಬ ಬಡವರ ತಾಯಿಯ ಜೊತೆ ಉಳಿಯುತ್ತಿದ್ದ ಪ್ರತಿ ಹೆಣ್ಣು ಮಗಳ ಆರೋಗ್ಯವನ್ನೂ ಲೆಕ್ಕಿಸದೇ ಸೇವೆ ಮಾಡಿಸುತ್ತಿದ್ದದ್ದು ಅದ್ಯಾವ ರೀತಿಯ ಮಾನವೀಯತೆಯ ಅರ್ಥವನ್ನು ಹೊಂದಿತ್ತು?! ಅದಷ್ಟೂ ಹಣ ಸದುಪಯೋಗವಾಗದೇ ಇದ್ದರೂ ಸಹ, ಮತ್ತೆ ಮತ್ತೆ ಕೇಳುತ್ತಿದ್ಧ ಮದರ್ ತೆರೇಸಾಳ ಹಿಂದೆ ಯಾವ ತಂತ್ರ ಕಾಯುತ್ತ ಕುಳಿತಿತ್ತು?!

ಮದರ್ ತೆರೇಸಾ ಬಡವರ ತಾಯಿ ಎಂಬ ಬಿರುದು ಹೊಂದಿದ್ದರೂ ಸಹ, ಆಕೆ ವ್ಯಾಟಿಕನ್ನಿನ ತಂತ್ರಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದರ ಬಗ್ಗೆ ಇವತ್ತು ಅದೆಷ್ಟು ಜನಕ್ಕೆ ಗೊತ್ತಿದೆ?! ಸೇವೆಯ ಹೆಸರಿನಲ್ಲಿ ಮತಾಂತರಕ್ಕೂ ಇಳಿದಿದ್ದ ಮದರ್ ತೆರೇಸಾ ಎಂಬ ಬಡವರ ತಾಯಿ, ನಿಜಕ್ಕೂ ತಾಯಿಯ ಸ್ಥಾನದಲ್ಲಿ ನಿಲ್ಲುವಷ್ಟು ಅರ್ಹಳಿದ್ದಳೇ?! ಸೂಸನ್ ಶೀಲ್ಡ್ ನ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳು ಅರಿಕೆ ಮಾಡಬಲ್ಲಲು ಅದೆಷ್ಟು ಶಕ್ತವಾಗಿದೆಯೋ ಅಥವಾ ಇಲ್ಲವೋ, ಆದರೆ, ಆಕೆಯ ಕೆಲ ಅಧಿಕಾರಾವಧಿಯಲ್ಲಿ ನಡೆದಂತಹ ಸಿದ್ಧಾಂತಗಳ ಹೇರಿಕೆ, ವ್ಯಾಟಿಕನ್ನಿನ ಸಂದೇಶವನ್ನನುಸರಿಸಿ ಆಡುವ ಬೆಣ್ಣೆಯ ಮಾತುಗಳು! ಉಫ್! ಸೇವೆ ಎಂಬುವುದಕ್ಕೇ ಕಪ್ಪು ಮಸಿ ಬಳಿದಿದ್ದು ಸುಳ್ಳಲ್ಲ!

Source :Susan Shield

– ತಪಸ್ವಿ

Tags

Related Articles

Close