ಅಂಕಣ

ಮುಸ್ಲಿಂ ಹೆಸರು ಹೊಂದಿರುವ ಅನಾಥ ಹುಡುಗಿಯರನ್ನು ಹಿಂದೂ ಹುಡುಗರಿಗೆ ಮದುವೆ ಮಾಡುವುದು ಹಿಂದೂ-ಮುಸ್ಲಿಂ ಭಾವೆಕ್ಯತೆಗೆ ಧಕ್ಕೆ ಎಂದ ಮುಸ್ಲಿಂ ಧಾರ್ಮಿಕ ಮುಖಂಡರು!! ಎಲ್ಲಿದ್ದೀರಾ ಜಾತ್ಯಾತೀತ ಬ್ರಿಗೇಡ್ ಕಾರ್ಯಕರ್ತರೆ?

ಉತ್ತರ ಪ್ರದೇಶದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹಿಂದೂ ಹುಡುಗರನ್ನು ಮದುವೆಯಾದ ‘ಮುಸ್ಲಿಂ ಹೆಸರುಗಳ’ 4 ಅನಾಥ ಹುಡುಗಿಯರ ವಿವಾಹದ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಮುಸ್ಲಿಂ ಗುರುಗಳು ತಾಕೀತು ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಉತ್ತರ ಪ್ರದೇಶ ಸರಕಾರದ ಸಾಮೂಹಿಕ ವಿವಾಹದ ಯೋಜನೆಯಡಿಯಲ್ಲಿ ಮಹಾನಗರ್ ಕಲ್ಯಾಣ್ ಮಂಡಪ ಜಿಲ್ಲಾಡಳಿತ ಈ ಸಮಾರಂಭವನ್ನು ಆಯೋಜಿಸಿತ್ತು.

31 ಜೋಡಿಗಳು ವಿಶೇಷ ಮದುವೆ ಕಾಯಿದೆಯ ಪ್ರಕಾರ ಬುಧವಾರದಂದು ಸಪ್ತ ಪದಿ ತುಳಿಯುವ ಮೂಲಕ ಅಗ್ನಿಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಿವಾಹಿತ ಮಹಿಳೆಯರಲ್ಲಿ ‘ಮುಸ್ಲಿಂ ಹೆಸರುಗಳ’ ಹುಡುಗಿಯರನ್ನು 6-10 ವರ್ಷ ವಯಸ್ಸಿನಲ್ಲೇ ಮೋತಿನಗರದಲ್ಲಿರುವ ಸರ್ಕಾರಿ ಆಶ್ರಯ ಮನೆಗೆ ಸೇರಿಸಲಾಗಿತ್ತು. ಮುಖ್ಯ ಅಭಿವೃದ್ಧಿ ಅಧಿಕಾರಿ ಮನೀಶ್ ಬನ್ಸಾಲ್ ಪ್ರಕಾರ ಅವರಿಗೆ ಮುಸ್ಲಿಂ ಹೆಸರುಗಳಿವೆ ಆದರೆ ಅವರು ಆಶ್ರಯ ಮನೆಯ ತಮ್ಮ ವಾಸ್ತವ್ಯದ ಸಮಯದಲ್ಲಿ ಯಾವುದೇ ನಂಬಿಕೆಯನ್ನು ಅನುಸರಿಸಲಿಲ್ಲ ಮತ್ತು ಮದುವೆಯ ಬಳಿಕ ತಮ್ಮ ಗಂಡನ ಮನೆಯ ಸಂಪ್ರದಾಯವನ್ನು ಅನುಸರಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ ಈಗ ಇಮಾಮ್ ಈದ್ಗಾ ಮೌಲಾನಾ ಖಾಲಿದ್ ರಶೀದ್ ಫರಾಂಗಿ ಮಹಾಲಿ ಈ ವಿಷಯದಲ್ಲಿ ನ್ಯಾಯಾಂಗ ತನಿಖೆಯನ್ನು ಒತ್ತಾಯಿಸಿದ್ದಾರೆ. ಮದುವೆಗೂ ಮುನ್ನ ಮುಸ್ಲಿಂ ಧರ್ಮ ಗುರುಗಳನ್ನು ವಿಶ್ವಾಸಕ್ಕೆ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ ಮತ್ತು ಈ ಬಗ್ಗೆ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ. ಶಿಯಾ ಗುರು ಮೌಲಾನಾ ಸೈಫ್ ಅಬ್ಬಾಸ್ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಮದುವೆಗಾಗಿ ಹಿಂದೂ ಆಚರಣೆಗಳ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಅವರು ನ್ಯಾಯಾಂಗ ತನಿಖೆಯನ್ನು ಒತ್ತಾಯಿಸಿ, ಇಂತಹ ಕ್ರಮಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸೌಹಾರ್ದ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಜಾತ್ಯಾತೀತ ಅಂದರೆ ಇದು ಕಣ್ರಿ! ಸರಕಾರ ಯಾವುದೋ ಅನಾಥ ಮಕ್ಕಳನ್ನು ಸಾಕಿ ಸಲಹಿ ಮುಂದೆ ನಿಂತು ಮದುವೆ ಮಾಡಿಕೊಟ್ಟರೆ ಅದನ್ನು ಮುಸ್ಲಿಂಮರು ಪ್ರಶ್ನಿಸುತ್ತಾರೆ ಮತ್ತು ಕಾನೂನು ಕ್ರಮ ಕೈಗೊಳ್ಳುವ ಧಮಕಿ ನೀಡುತ್ತಾರೆ. ಆದರೆ ಇವರದ್ದೇ ಮತದ ರೆಹನಾ ಫಾತಿಮಾ ಶಬರಿಮಲೆಗೆ ನುಗ್ಗುತ್ತಿದ್ದರೆ ಕೈ ಕಟ್ಟಿ ಕುಳಿತು ಚಂದ ನೋಡುತ್ತಾರೆ. ಮುಸ್ಲಿಂ” ಹೆಸರಿನ” ಹುಡುಗಿಯರನ್ನು ಹಿಂದೂ ಹುಡುಗರಿಗೆ ಹಿಂದೂ ಪದ್ದತಿಯಂತೆ ವಿವಾಹ ಮಾಡಿಕೊಟ್ಟರೆ ಅದು ಭಾವೈಕ್ಯತೆಗೆ ಧಕ್ಕೆ. ಆದರೆ ರೆಹನಾ ಫಾತಿಮಾ ಶಬರಿಮಲೆಗೆ ನುಗ್ಗಿದರೆ ಅದು ಜಾತ್ಯಾತೀತತೆಯ ಪರಮಾವಧಿ. ಭೇಷ್ ಸೋಗಲಾಡಿಗಳ ಭೇಷ್.. ಇಬ್ಬಗೆ ನೀತಿ ತೋರುವ ನಿಮ್ಮ ನೀಚ ಬುದ್ದಿಗೆ ಒಂದು ಹಿಡಿ ಮಣ್ಣು.

ಇದೆ ಹೇಳಿಕೆಯನ್ನು ಹಿಂದೂ ಸಂಘಟನೆಯೋ ಇಲ್ಲ ಹಿಂದೂ ಧಾರ್ಮಿಕ ಗುರುಗಳೋ ಕೊಟ್ಟಿದ್ದರೆ ಇಷ್ಟು ಹೊತ್ತಿಗೆ ಜಾತ್ಯಾತೀತ ಬ್ರಿಗೇಡ್ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಆಗಿರುತ್ತಿತ್ತು. ಗಲ್ಲಿ ಗಲ್ಲಿಗಳಲ್ಲಿ ಜಾತ್ಯಾತೀತತೆಗೆ ಧಕ್ಕೆ ಎಂದು ಬ್ಯಾನರ್ ನೇತಾಡುತ್ತಿತ್ತು. ತಥಾಕಥಿತ ಪ್ರಗತಿಪರ-ಬುದ್ದಿಜೀವಿಗಳೆಲ್ಲ ಕತ್ತಿಗೆ ಬೋರ್ಡ್ ನೇತಾಕಿಕೊಂಡು ಎಗರಾಡಿ ಮೋದಿ ರಾಜೀನಾಮೆಗೆ ಆಗ್ರಹಿಸಿ ಆಗುತ್ತಿತ್ತು. ಆದರೆ ಇದು ಮುಸ್ಲಿಂ ಧರ್ಮ ಗುರುಗಳ ಹೇಳಿಕೆ ಅಲ್ಲವೆ? ಹಾಗಾಗಿ ಎಲ್ಲರ ಬಾಯಲ್ಲೂ ಸುಕುನುಂಡೆ, ಗಂಟಲಲ್ಲಿ ಜಾತ್ಯಾತೀತ ಲದ್ದಿ.

–ಶಾರ್ವರಿ

swarajyamag

featured image for representation purpose only

Tags

Related Articles

FOR DAILY ALERTS
Close