ಅಂಕಣ

ಆ ದೇವಾಲಯದ ಮೆಟ್ಟಿಲನ್ನು ತಟ್ಟಿದರೆ ಸಾಕು ಸಪ್ತಸ್ವರಗಳು ಝೇಂಕರಿಸುತ್ತೆ!! ಶಿಲ್ಪಿಗಳ ಕೈಚಳಕದಲಿ ಮೂಡಿದ ಆ ಇತಿಹಾಸ ಪ್ರಸಿದ್ಧವಾದ ಸ್ಥಳ!!

ಸಂಗೀತಾದ ತಂತಿಗಳನ್ನು ಮೀಟಿದರೆ ಸಾಕು ಸಪ್ತಸ್ವರಗಳು ಮೂಡುವುದನ್ನು ನಾವು ಕೇಳಿದ್ದೇವೆ!! ಹರಿಯುವ ನೀರಿನಲ್ಲಿ ಬೀಸುವ ಗಾಳಿಯಲ್ಲಿ ಸಂಗೀತಾದ ಸ್ವರಗಳೂ ಅಡಕವಾಗಿದೆ ಎನ್ನುವ ಮಾತುಗಳನ್ನೂ ನಾವು ಕೇಳಿದ್ದೇವೆ. ಆದರೆ ಕಲ್ಲಿನಲ್ಲಿ ಸಂಗೀತಾ ಮೂಡುವುದೆಂದರೆ ಅದು ಪರಾಮಶ್ಚರ್ಯವೇ ಸರಿ!! ಯಾಕೆಂದರೆ ಕಲ್ಲು ಒಂದು ತಟಸ್ಥ ವಸ್ತು. ಹಾಗಾಗಿ ಅದರಿಂದ ಸಂಗೀತಾ ಕೇಳಿ ಬರುತ್ತೇ ಎಂದರೆ ಅದೂ ನಿಜಕ್ಕೂ ಕೂಡ ಅಚ್ಚರಿಯ ವಿಚಾರ!! ಆದರೆ ಇಂತಹ ವಾಸ್ತುಶಿಲ್ಪಗಳೆಲ್ಲವೂ ಮೂಡಿಬರುವುದು ಮಾತ್ರ ರಾಜರ ಕಾಲದಲ್ಲಿ ಎನ್ನುವುದನ್ನು ಅರ್ಥ ಮಾಡಿ ಕೊಳ್ಳಬೇಕಾಗಿರುವುದು ಅತೀ ಮುಖ್ಯ.

ಇತಿಹಾಸಗಳ ಪುಟಗಳನ್ನು ತೆರೆಯುತ್ತಾ ಹೋದರೆ ಭಾರತದಲ್ಲಿ ಅದೆಷ್ಟೋ ರಾಜವಂಶಸ್ಥರು ನೀಡಿರುವ ಕೊಡುಗೆಗಳೇ ಅದಕ್ಕೆ ಸಾಕ್ಷಿಯಾಗಿ ನಿಂತಿದೆ. ಹಾಗಾಗಿ ಅಂತಹ ಅದೆಷ್ಟೋ ವಾಸ್ತುಶಿಲ್ಪಗಳು ಮೊಘಲರ ದಾಳಿಗೆ ತುತ್ತಾಗಿ ಹಾನಿಯಾಗಿದ್ದರೆ ಇನ್ನು ಅದೆಷ್ಟೋ ವಾಸ್ತುಶಿಲ್ಪಗಳು ಇಂದಿಗೂ ಕೂಡ ವೀರಾಜಮಾನವಾಗಿ ತಲೆ ಎತ್ತಿ ನಿಂತಿದೆ!! ಅದಕ್ಕೆ ಸಾಕ್ಷಿಯಾಗಿ ನಿಂತಿರುವುದೇ ಕಲ್ಲಿನ ಮೆಟ್ಟಿಲಿಗಳನ್ನು ತಟ್ಟಿದರೆ ಸಾಕು ಸಂಗೀತಾದ ಸ್ವರಗಳನ್ನು ನೀಡುವಂತಹ ವಾಸ್ತುಶಿಲ್ಪ!! ಅಷ್ಟಕ್ಕೂ ಅಂತಹ ದೇಗುಲ ಇರುವುದಾದರೂ ಎಲ್ಲಿ?? ಅದನ್ನು ಕಟ್ಟಿಸಿರುವ ಆ ರಾಜನಾದರೂ ಯಾರು ಗೊತ್ತೇ??

ತುಂಗಭದ್ರಾದ ಇಡೀ ದಕ್ಷಿಣ ಭಾಗವನ್ನು ಒಂದಾಗಿಸಿ ಒಂದು ರಾಜ್ಯವನ್ನಾಗಿ ಮಾಡಿ ಸುಮಾರು ಎರಡು ಶತಮಾನಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದವರೇ ಚೋಳರು!! ತಮ್ಮ ಅಧಿಕಾರದ ಬಹುಪಾಲು ಭಾಗವನ್ನು ಪ್ರಮುಖವಾಗಿ 9ನೇ ಶತಮಾನದ ಅರ್ಧದಿಂದ 13ನೆ ಶತಮಾನದ ಪ್ರಾರಂಭದವರೆಗೂ ಆಳಿದ ಚೋಳರ ಹೃದಯ ಭಾಗವು ಕಾವೇರಿ ನದಿಯ, ಫಲವತ್ತಾದ ಕಣಿವೆಯಾಗಿತ್ತು. ಚೋಳರು, ತಮಿಳು ಸಾಹಿತ್ಯದಲ್ಲಿ ಅವರಿಗಿದ್ದ ಆಸಕ್ತಿ ಮತ್ತು ದೇವಾಲಯಗಳನ್ನು ಕಟ್ಟುವುದರಲ್ಲಿ ಅವರಲ್ಲಿದ್ದ ಕೌತುಕ ತಮಿಳು ಸಾಹಿತ್ಯ ಮತ್ತು ಶಿಲ್ಪಕಲೆಗೆ ಅವರು ಕೊಟ್ಟ ಅಪಾರ ಕೊಡುಗೆಗಳಿಗೆ ಕಾರಣವಾದವು.

ಚೋಳ ಅರಸರು ಕಟ್ಟಡಗಳನ್ನು ಕಟ್ಟುವುದರಲ್ಲಿ ಅತ್ಯಾಸಕ್ತಿಯನ್ನು ಹೊಂದಿದ್ದರು ಮತ್ತು ತಮ್ಮ ದೇವಸ್ಥಾನಗಳನ್ನು ಪೂಜಾ ಕೇಂದ್ರಗಳನ್ನಾಗಿ ಮಾಡಿದ್ದಲ್ಲದೇ ಆರ್ಥಿಕ ಚಟುವಟಿಕೆಯ ಕೇಂದ್ರಗಳನ್ನಾಗಿಯೂ ಮಾಡಿದ್ದರು. ಅಷ್ಟೇ ಅಲ್ಲದೇ ಕೇಂದ್ರಾಡಳಿತ ಮಾದರಿಯ ಸರ್ಕಾರ ಅಧಿಕಾರ ಶಾಹಿಯನ್ನು ಸ್ಥಾಪಿಸಿದ ಮೊದಲಿಗರು ಎನ್ನುವ ಕೀರ್ತಿಗೂ ಪಾತ್ರರಾದವರು. ಕಟ್ಟಡಗಳ ನಿರ್ಮಾಣ, ದೇವಾಸ್ಥಾನಗಳ ನಿರ್ಮಾಣದಲ್ಲಿ ಹೆಸರುವಾಸಿಯಾಗಿದ್ದ ಚೋಳರ ಕೈಚಳಕದಲ್ಲಿ ಮೂಡಿರುವುದೇ ಈ ಸಪ್ತ ಸ್ವರಗಳನ್ನು ನೀಡುವ ಕಲ್ಲಿನ ಮೆಟ್ಟಿಲು!! ಇದು ಇರುವುದು ಬೇರೆಲ್ಲೂ ಅಲ್ಲ….. ತಮಿಳುನಾಡಿನಲ್ಲಿನ ಕುಂಭಕೋಣಂನಲ್ಲಿರುವ ಐರಾವತೇಶ್ವರ ಸ್ವಾಮಿಯ ಆಲಯದಲ್ಲಿ!!

ಹೌದು… ಅಷ್ಟಕ್ಕೂ ಈ ಕುಂಭಕೋಣಂ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ!! ಕಾವೇರಿ ನದಿಯ ತೀರದಲ್ಲಿ ನೆಲೆಸಿರುವ “ಕುಂಭಕೋಣಂ” ನಗರವನ್ನು “ದೇವಾಲಯಗಳ ನಗರ” ಎಂದು ಕರೆಯುತ್ತಾರಲ್ಲದೇ ಬಹು ಪುರಾತನವಾದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಪ್ರಳಯ ಕಾಲದಲ್ಲಿ, ಸೃಷ್ಟಿಕರ್ತನಾದ ಬ್ರಹ್ಮದೇವನು ಸೃಷ್ಟಿಯ ಸಕಲ ಶಕ್ತಿಗಳನ್ನೂ ಕಾಪಾಡಿದ ಮತ್ತು ಅಮೃತವನ್ನು ಒಂದು ಮಡಕೆಯಲ್ಲಿ ಶೇಖರಿಸಿ ಅದನ್ನು ಹಿಮಾಲಯದ ತುದಿಯಲ್ಲಿಟ್ಟನಂತೆ.

ಆದರೆ ಸಮುದ್ರದ ಅಲೆಗಳು ಹಿಮಾಲಯದ ಎತ್ತರಕ್ಕೆ ಬೆಳೆದು ಆ ಅಮೃತಕುಂಭವನ್ನು ಕೊಚ್ಚಿಕೊಂಡು ಹೋಗಿ ಈ ದೇಶದ ದಕ್ಷಿಣ ಭಾಗಕ್ಕೆ ಕೊಂಡು ಹೋದಾಗ ಕಡಲ ಅಲೆಗಳ ತೀವ್ರತೆ ಕಡಿಮೆಯಾಯಿತಲ್ಲದೇ, ಅಲೆಗಳು ಶಾಂತವಾಗಿ ಆ ಮಡಕೆಯನ್ನು ಭೂಮಿಯ ಮೇಲೆ ಬಿಟ್ಟವಂತೆ. ಆಗ ಪರಮ ಶಿವನು ವ್ಯಾಧನ ವೇಷ ಧರಿಸಿ ಆ ಮಡಕೆಯ ಮೇಲೆ ಒಂದು ಬಾಣ ಪ್ರಯೋಗ ಮಾಡಿದ ಎಂದು ಹೇಳಲಾಗುತ್ತದೆ.

ಆ ಪ್ರಕಾರ, ಆ ಮಡಕೆ ಒಡೆದು ಅದರಿಂದ ಹೊರಬಿದ್ದ ಎಲ್ಲ ಶಕ್ತಿಯನ್ನೂ ಪರಶಿವನು ತನ್ನೊಳಕ್ಕೆ ಲೀನವಾಗಿಸಿಕೊಂಡನಂತೆ ಮತ್ತು ಅದರೊಳಗಿದ್ದ “ಅಮೃತ” ವು ನೆಲದ ಮೇಲಿನ ಮಣ್ಣೊಳಕ್ಕೆ ಸೇರಿ ಒಂದು ಲಿಂಗಾಕೃತಿಯನ್ನು ಪಡೆಯಿತು. ಆ ಶಿವ ಲಿಂಗವೇ ಇಂದು “ಆದಿ ಕುಂಬೇಶ್ವರರ್” ಎಂದು ಪ್ರಸಿದ್ಧವಾಗಿದೆ. ಅಷ್ಟೇ ಅಲ್ಲದೇ, ಯಾವ ಸ್ಥಳದಲ್ಲಿ ಪರಶಿವನು ಲಿಂಗಾಕೃತಿಯನ್ನು ಪಡೆದುಕೊಂಡನೋ ಆ ಸ್ಥಳವು “ಕುಂಭಕೋಣಂ” ಎಂದು ಕರೆಯಲ್ಪಟ್ಟಿತು. ಅಷ್ಟೇ ಅಲ್ಲದೇ, ಈ ದೇವಾಲಯದ ಪುಷ್ಕರಣಿಯಲ್ಲಿ 12 ವರ್ಷಗಳಿಗೊಮ್ಮೆ “ಮಹಾಮಹಂ” ಎಂಬ ಉತ್ಸವವು ನಡೆಯುತ್ತದೆ. ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಗೋದಾವರಿ, ಸರಯೂ ಮುಂತಾದ ಭಾರತದ ಪವಿತ್ರ ನದಿಗಳು, ಆ ಉತ್ಸವದ ಸಮಯಕ್ಕೆ ಸ್ತ್ರೀ ರೂಪ ಧರಿಸಿ ಈ ಪುಷ್ಕರಣಿಯಲ್ಲಿ ಮಿಂದು ಪವಿತ್ರರಾಗುತ್ತಾರೆಂದು ನಂಬಿಕೆಯೂ ಇದೆ!!

ಆದರೆ ಸಂಗೀತಾ ಸ್ವರಗಳನ್ನು ಮಾರ್ದನಿಸುವ ಮೆಟ್ಟಿಲುಗಳಿರುವ ದೇವಾಲಯ ಇರುವುದು ಕುಂಭಕೋಣಂನಲ್ಲಿ ಅಲ್ಲ!! ಬದಲಾಗಿ… ತಮಿಳುನಾಡಿನಲ್ಲಿನ
ಕುಂಭಕೋಣಂ ಪ್ರದೇಶದಿಂದ 3 ಕಿಲೋ ಮೀಟರ್ ದೂರಲ್ಲಿರುವ ನೆಲೆಸಿರುವ ಐರಾವತೇಶ್ವರ ಸ್ವಾಮಿಯ ಆಲಯದಲ್ಲಿ!! ಈ ದೇವಾಲಯವನ್ನು 12ನೇ ಶತಮಾನದಲ್ಲಿ 2ನೇ ರಾಜ ರಾಜ ಚೋಳ ನಿರ್ಮಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ. ಹಾಗಾಗಿ ಈ ಪುರಾಣಗಳ ಪ್ರಕಾರ, ಇಂದ್ರನ ಬಳಿ ಇರುವ ಐರಾವತ (ಬಿಳಿಯಾನೆ) ಈ ಆಲಯದಲ್ಲಿ ಶಿವನನ್ನು ಪೂಜಿಸಿತಂತೆ. ಹಾಗಾಗಿಯೇ ಐರಾವತ ಹೆಸರಿನಲ್ಲಿ ಈ ಆಲಯದಲ್ಲಿನ ಶಿವನಿಗೆ “ಐರಾವತೇಶ್ವರ ಸ್ವಾಮಿ” ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಆದರೆ ಈ ಐರಾವತೇಶ್ವರ ಸ್ವಾಮಿ ಆಲಯದಲ್ಲಿರುವ ವಿಶೇಷತೆ ಎಂಥವರನ್ನೂ ಕೂಡ ಒಂದು ಕ್ಷಣ ದಂಗಾಗುವಂತೆ ಮಾಡುತ್ತೇ!! ಅದೇನೆಂದರೆ.. ಆಲಯ
ಪ್ರಾಂಗಣದಲ್ಲಿ ಒಂದು ಚಿಕ್ಕ ಮಂಟಪಕ್ಕೆ ತಾಗಿಕೊಂಡು ಇರುವ ಮೆಟ್ಟಿಲಿನ ಮೇಲೆ ಯಾರಾದರೂ ಕೈಯಿಂದ ತಟ್ಟಿದರೆ ಸಪ್ತಸ್ವರಗಳು ಕೇಳಿಸುತ್ತವೆ. ಒಂದೊಂದು ಮೆಟ್ಟಿಲಿನ ಮೇಲೆ ತಟ್ಟುತ್ತಾ ಹೋದರೆ ಒಂದೊಂದು ಸ್ವರ ನಮಗೆ ಕೇಳಿಸುವುದೇ ಇಲ್ಲಿನ ವಿಶೇಷ!!

ವಿಪರ್ಯಾಸವೆಂದರೆ, ಈ ಮೆಟ್ಟಿಲುಗಳಿಗೆ ಇರುವ ಐತಿಹಾಸಿಕ ಹಿನ್ನೆಲೆಯಲ್ಲಿ ಇವು ಶೀಘ್ರವಾಗಿ ಹಾಳಾಗುವ ಅವಕಾಶ ಇದೆ ಎಂದು ಗುರುತಿಸಲಾಗಿದೆ. ಆ ನಿಟ್ಟಿನಲ್ಲಿ ಆಲಯ ಸಿಬ್ಬಂದಿ ಅದನ್ನು ಯಾರೂ ತಾಕದಂತೆ ಸುತ್ತಲೂ ಮೆಟಲ್ ಗ್ರಿಲ್ ಹಾಕಿಸಿದ್ದಾರೆ. ಇನ್ನು ಆಲಯದ ಗೋಡೆಗಳ ಮೇಲೆ ಅದ್ಭುತವಾದ ಶಿಲಾ ಕೆತ್ತನೆಗಳು ಇದ್ದು, ಶಿಲ್ಪಿಗಳ ಕೈಚಳಕವೂ ನೋಡುಗರನ್ನು ಮನಸೊರೆಗೊಳ್ಳುವಂತೆ ಮಾಡುವುದಂತೂ ಅಕ್ಷರಶಃ ನಿಜ!!

ಕಲ್ಲಿನಲ್ಲಿಯೂ ಸಂಗೀತಾ ನುಡಿಸುವಂತೆ ಮಾಡಿರುವ ಚೋಳರ ಕೈಚಳಕವೂ, ಚೋಳರು ನೀಡಿದ ಅದ್ಬುತ ಕೊಡುಗೆಗಳಲ್ಲಿ ಒಂದಾಗಿರುವುದೆ. ಅಷ್ಟೇ ಅಲ್ಲದೇ, ಮೆಟ್ಟಿಲನ್ನು ತಟ್ಟಿದರೆ ಸಂಗೀತಾದ ಸ್ವರಗಳನ್ನು ಹೊರಹೊಮ್ಮಿಸುವ ಐರಾವತೇಶ್ವರ ದೇವಸ್ಥಾನವು “ಪ್ರಪಂಚದ ಪಾರಂಪರಿಕ ಕ್ಷೇತ್ರ”ವೆಂದು ನಿರ್ಧರಿಸಲ್ಪಟ್ಟಿದ್ದು, ಅದನ್ನು ಗ್ರೇಟ್ ಲಿವಿಂಗ್ ಚೋಳ ದೇವಸ್ಥಾನಗಳೆಂದು ಉದಾಹರಿಸಲಾಗಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!

– ಅಲೋಖಾ

Tags

Related Articles

Close