ಪ್ರಚಲಿತ

ಸರ್ಕಾರಿ ಕೆಲಸ ಬೇಕಾ? ಹಾಗಾದರೆ ಸೈನ್ಯದ ಕೆಲಸ ಮಾಡಿ!! ಮೋದಿ ಸರ್ಕಾರದಿಂದ ಮತ್ತೊಂದು ದಿಟ್ಟ ಹೆಜ್ಜೆ!!

ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಭಾರತವು ಆರ್ಥಿಕ ವ್ಯವಸ್ಥೆಯಲ್ಲಿ, ರಕ್ಷಣಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಿರುವ ವಿಚಾರ ತಿಳಿದೆ ಇದೆ!! ಹಾಗಾಗಿ ಇವುಗಳನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ನಾನಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಮೋದಿ ಸರ್ಕಾರವು ಇದೀಗ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ!! ಸರ್ಕಾರಿ ಕೆಲಸ ಸಿಕ್ಕಿದರೆ ಸಾಕು ಎಂದು ಹೇಳುವ ಅದೆಷ್ಟೋ ಮಂದಿ, ಇನ್ನು ಮುಂದೆ ದೇಶದ ರಕ್ಷಣಾ ಕ್ಷೇತ್ರದಲ್ಲಿಯೂ ಕೆಲಸ ಮಾಡಲು ಸಜ್ಜಾಗಬೇಕಾಗಿದೆ!!

ಸರ್ಕಾರಿ ಕೆಲಸಗಳನ್ನು ಅರಸಿಕೊಂಡು ನಾನಾ ಕಸರತ್ತುಗಳನ್ನು ನಡೆಸುತ್ತಿರುವ ಯುವಪೀಳಿಗೆಗೆ ಇದೀಗ ಮತ್ತೊಂದು ಆಫರ್ ಸಿಗಲಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!! ಸರ್ಕಾರಿ ಕೆಲಸ ಬೇಕು ಎಂದು ಕಷ್ಟಪಟ್ಟು ಅದೆಷ್ಟೋ ಮಂದಿ ನ್ಯಾಯದ ಮಾರ್ಗ ಹಿಡಿದರೆ, ಇನ್ನು ಅದೆಷ್ಟೋ ಮಂದಿ ಬಹು ಮೊತ್ತದ ಲಂಚವನ್ನು ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ತಂತ್ರವನ್ನು ಹೂಡುವ ವಿಚಾರ ತಿಳಿದೇ ಇದೆ. ಸರ್ಕಾರಿ ಕೆಲಸ ಎಂದರೆ ದೇವರ ಕೆಲಸವಾದರೂ ಕೂಡ ಅದೆಷ್ಟೋ ಮಂದಿ ಸರ್ಕಾರಿ ಕೆಲಸವನ್ನೇ ದುರುಪಯೋಗ ಪಡಿಸಿಕೊಂಡು ಮುಗ್ಧ ಜನರಲ್ಲಿ ಹಣವನ್ನು ಕೀಳುತ್ತಾ ಮಜಾ ಉಡಾಯಿಸಿ, ಸಮಾಜದಲ್ಲಿ ಆಗಬೇಕಾಗಿದ್ದ ಕೆಲಸಗಳನ್ನೆಲ್ಲಾ ಮೂಲೆಗುಂಪು ಮಾಡುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ!!

ಬಡವರ ಬಗ್ಗೆ ಕಿಂಚಿತ್ತೂ ಕರುಣೆಯೇ ಇಲ್ಲದಂತೆ ನಡೆದುಕೊಳ್ಳುವ ಸರ್ಕಾರಿ ನೌಕರರು ದೇಶ ಸೇವೆಯ ಬಗ್ಗೆ ಮನಸ್ಸೇ ಹರಿಸುವುದಿಲ್ಲ!! ಜನಗಳ ಸೇವೆಯನ್ನು ಮಾಡಲಾಗದವರು ದೇಶ ಸೇವೆ ಮಾಡಿಯಾರೇ?? ಎನ್ನುವ ಪ್ರಶ್ನೆಗಳು ಒಂದಿನ್ನೊಮ್ಮೆ ಕೇಳಿ ಬರುತ್ತಲೇ ಇವೆ!! ಆದರೆ ಸರ್ಕಾರಿ ಕೆಲಸ ಎಂದರೆ ಹಾತೊರೆಯುವ ಅದೆಷ್ಟೋ ಮಂದಿ ದೇಶ ಸೇವೆಯ ಬಗ್ಗೆ ದೇಶ ರಕ್ಷಣೆಯ ಬಗ್ಗೆ ಗಮನ ಹರಿಸಿದ್ದು ನಾ ಎಂದೂ ಕಂಡಿಲ್ಲ!! ಆದರೆ ಇನ್ನು ಮುಂದೆ ಸರ್ಕಾರಿ ಕೆಲಸ ಬೇಕು ಮಿಲಿಟರಿ ಕೆಲಸ ಬೇಡ ಎಂದು ಹೇಳುವ ಸರ್ಕಾರಿ ಉದ್ಯೋಗಿಗಳಿಗೆ ಸೈನ್ಯದ ಕೆಲಸ ಮಾಡಲೇಬೇಕಾಗಿರುವುದು ಅನಿವಾರ್ಯ!!

Image result for modi

ಹೌದು… ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಬಯಸುವ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ಐದು ವರ್ಷಗಳ ಮಿಲಿಟರಿ ಸೇವೆಯನ್ನು ಮಾಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಸಂಸದೀಯ ಸ್ಥಾಯಿ ಸಮಿತಿ ಈಗಾಗಲೇ ಶಿಫಾರಸ್ಸು ಮಾಡಿದೆ. ಇದು ಕೇವಲ ಕೇಂದ್ರ ಸರ್ಕಾರದ ಕೆಲಸಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಇದು ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂದರೂ ಕೂಡ ಸರ್ಕಾರಿ ಉದ್ಯೋಗಿಗಳು ಮಿಲಿಟರಿಯಲ್ಲಿ ಪಳಬೇಕಾಗಿರುವುದು ಇನ್ನು ಮುಂದೆ ಅತೀ ಮುಖ್ಯವಾಗಿದೆ!!

ಅಷ್ಟಕ್ಕೂ ಈ ಸಂಸದೀಯ ಸ್ಥಾಯಿ ಸಮಿತಿ ಅಂದರೆ ಏನು ಗೊತ್ತೇ??

ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ಸಂಸದೀಯ ಸಮಿತಿ ಎನ್ನಲಾಗುತ್ತದೆ. ಇದರಲ್ಲಿ 2 ವಿಧಗಳಿದ್ದು, ಒಂದು ತಾತ್ಕಾಲಿಕ ಸಮಿತಿ ಮತ್ತೊಂದು ಸ್ಥಾಯಿ ಸಮಿತಿ!! ತಾತ್ಕಾಲಿಕ ಸಮಿತಿಯು ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ನೀಡುತ್ತಿದ್ದು, ಆ ಬಳಿಕ ಸಮಿತಿ ತಂತಾನೆ ವಿಸರ್ಜನೆಗೊಳ್ಳುತ್ತದೆ. ಆದರೆ ಸ್ಥಾಯಿ ಸಮಿತಿಯಲ್ಲಿ, ಪ್ರತಿ ಸ್ಥಾಯಿ ಸಮಿತಿಯು ತಲಾ 31 ಸದಸ್ಯರನ್ನು ಹೊಂದಿರುತ್ತದೆ. ಸದನದಲ್ಲಿ ಪಕ್ಷಗಳ ಬಲಾಬಲ ಆಧರಿಸಿ ಸಮಿತಿಯಲ್ಲಿ ಆಯಾ ಪಕ್ಷಗಳಿಗೆ ಸ್ಥಾನ ನಿಗದಿ ಮಾಡಲಾಗಿರುತ್ತದೆ. ಇದರ ಸದಸ್ಯರನ್ನು ಕಾಲಾನುಕಾಲಕ್ಕೆ ನೇಮಿಸಲಾಗುತ್ತದೆ. ಹಾಗಾಗಿ ಈ ಸಂಸತ್ತಿನಲ್ಲಿ ಒಟ್ಟು 24 ಸ್ಥಾಯಿ ಸಮಿತಿಗಳಿವೆ.

ಈ ಪೈಕಿ 8 ರಾಜ್ಯಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಮತ್ತು 16 ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಇರುತ್ತವೆ. ಗೃಹ, ಹಣಕಾಸು, ವಿದೇಶಾಂಗ ವ್ಯವಹಾರಗಳ ಕುರಿತಾದ ಸಮಿತಿಯ ಅಧ್ಯಕ್ಷತೆಯನ್ನು ಸಾಮಾನ್ಯವಾಗಿ ವಿರೋಧ ಪಕ್ಷದ ಹಿರಿಯ ನಾಯಕರಿಗೆ ನೀಡಲಾಗುತ್ತದೆ. ಲೋಕಪಾಲ ಕುರಿತು ಪರಿಶೀಲನೆ ನಡೆಸಲಿರುವ ಸ್ಥಾಯಿ ಸಮಿತಿಯಲ್ಲಿ ಒಟ್ಟು 31 ಸದಸ್ಯರು ಇದ್ದಾರೆ. ಈ ಪೈಕಿ 10 ರಾಜ್ಯಸಭಾ ಮತ್ತು 21 ಲೋಕಸಭಾ ಸದಸ್ಯರು.

ಸಮಿತಿ ಕಾರ್ಯನಿರ್ವಹಣೆಯಲ್ಲಿ ತನ್ನ ಬಳಿಗೆ ಬಂದಿರುವ ಕರಡು ಮಸೂದೆ ಬಗ್ಗೆ ಚರ್ಚಿಸುತ್ತದೆ. ಅಷ್ಟೇ ಅಲ್ಲದೇ ತಜ್ಞರು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗುತ್ತದೆ. ಅಂತಿಮವಾಗಿ ಈ ಕುರಿತ ವರದಿ ಸಿದ್ಧಪಡಿಸುತ್ತದೆ!! ಸಮಿತಿಯ ನಿರ್ಧಾರ ಬಹುತೇಕ ಸಹಮತದ ಮೂಲಕವೇ ಅಂಗೀಕಾರವಾಗಬೇಕು ಎನ್ನುತ್ತದೆ ಕಾನೂನು. ಒಂದು ವೇಳೆ ಸಮಿತಿಯ ಯಾವುದೇ ಸದಸ್ಯ ಮಸೂದೆಗೆ ವಿರೋಧ ವ್ಯಕ್ತಪಡಿಸಿದರೆ ಅದನ್ನೂ ವರದಿಯಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ಈ ವರದಿಯ ಶಿಫಾರಸ್ಸನ್ನು ಒಪ್ಪಲೇಬೇಕೆಂಬ ಕಾನೂನು ಇಲ್ಲ. ಸ್ಥಾಯಿ ಸಮಿತಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಬಹುಮತದ ಆಧಾರದಲ್ಲೇ ಆಗಿರುತ್ತದೆ.

ಹಾಗಾಗಿ ಇದೀಗ ಇದೇ ಸಂಸದೀಯ ಸ್ಥಾಯಿ ಸಮಿತಿ ಬಹುದೊಡ್ಡ ನಿರ್ಧಾರವನ್ನು ಕೈಗೊಂಡಿದ್ದು, ಸರ್ಕಾರಿ ಕೆಲಸಗಳಿಗೆ ಸೇರಿಕೊಳ್ಳುವ ಮಂದಿಗೆ ದೇಶದ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುವ ಭಾಗ್ಯವೂ ಈ ಮೂಲಕ ಒದಗಲಿದೆ!! ದೇಶ ಪ್ರೇಮವನ್ನು ಜಾಗೃತಿಗೊಳಿಸುವುದರೊಂದಿಗೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ಇನ್ನು ಮುಂದೆ ಸರ್ಕಾರಿ ನೌಕರರು ಖಡ್ಡಾಯವಾಗಿ ಮಿಲಿಟರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕಾಗಿದೆ.

Image result for indian soldier

ಹಾಗಾಗಿ ಸರ್ಕಾರದ ಅಂಗವಾಗಿರುವ ವೈಯಕ್ತಿಕ ಮತ್ತು ತರಬೇತಿ ಇಲಾಖೆ ಈ ನಿಟ್ಟಿನಲ್ಲಿ ಪ್ರಸ್ತಾವಣೆಯನ್ನು ಸಿದ್ದಪಡಿಸಿ ಸರ್ಕಾರದೊಂದಿಗೆ ವಿಷಯ ಪ್ರಸ್ತಾಪ ಮಾಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಬಯಸಿದೆ ಎನ್ನಲಾಗಿದೆ!! ಅಷ್ಟೇ ಅಲ್ಲದೇ ಸರ್ಕಾರಿ ಕೆಲಸ ಬಯಸುವವರಿಗೆ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸುವುದರಿಂದ ಶಸ್ತ್ರಾಸ್ತ್ರ ಪಡೆಗಳಲ್ಲಿನ ಸಿಬ್ಬಂದಿ ಕೊರತೆಯನ್ನೂ ಹೋಗಲಾಡಿಸಬಹುದು ಎಂಬ ಅಲೋಚನೆಯೂ ಇದರ ಹಿಂದಿರುವುದೇ ಇನ್ನೂ ವಿಶೇಷ!!

ಅಂತೂ, ಇನ್ನು ಮುಂದೆ ನಿಮಗೆ ಸರ್ಕಾರಿ ಕೆಲಸ ಬೇಕೇ?? ಹಾಗಾದರೆ ಮಿಲಿಟರಿ ಕೆಲಸಕ್ಕೂ ಸಿದ್ದರಾಗಿರಲೇ ಬೇಕಾಗಿರುವುದೇ ಹೆಮ್ಮೆಯ ವಿಚಾರವಾಗಿದೆ!! ಈಗಾಗಲೇ ಮಿಲಿಟರಿ ಕೆಲಸವೆಂದರೆ ಮೈಲುಗಟ್ಟಲೇ ದೂರ ಓಡುವ ಮಂದಿಗೆ…. ಸರ್ಕಾರಿ ಕೆಲಸ ಬೇಕು, ಆದರೆ ಮಿಲಿಟರಿ ಕೆಲಸ ಆಗದು ಎನ್ನುವವರಿಗೆಲ್ಲಾ ಇನ್ನು ಮುಂದೆ ಸರ್ಕಾರಿ ಕೆಲಸ ಬಿಸಿ ತುಪ್ಪದಂತೆ ಪರಿಣಮಿಸಲಿದೆಯೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಾಗಿದೆ!!

– ಅಲೋಖಾ

 

Tags

Related Articles

Close