ಪ್ರಚಲಿತ

ಮುತ್ತಾತ ನೆಹರೂರವರ ಬುಡಕಟ್ಟು ಜನಾಂಗದ ಪತ್ನಿ ಮೊಮ್ಮಗ ರಾಹುಲನಲ್ಲಿ ತನಗೊಂದು ಮನೆ ಮತ್ತು ಮಗಳಿಗೊಂದು ಕೆಲಸ ಕೊಡುವಂತೆ ಮೊರೆಯಿಡುತ್ತಿದ್ದಾರೆ!!

ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ಲವೆ? ಆದರೆ ನೆಹರೂರವರ ‘ಬುಡಕಟ್ಟು ಜನಾಂಗದ ಪತ್ನಿ’ ಎನಿಸಿಕೊಂಡು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ ಮಹಿಳೆಯೊಬ್ಬಳ ಕಥೆ ಇದು. ನೆಹರೂರವರು1959 ರ ಡಿಸೆಂಬರ್ 6 ರಂದು ಅಣೆಕಟ್ಟೊಂದನ್ನು ಉದ್ಘಾಟಿಸಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಈ ಅಣೆಕಟ್ಟನ್ನು ಉದ್ಘಾಟಿಸುವ ಕಾರ್ಯವನ್ನು ಅದರ ನಿರ್ಮಾಣದ ಕೆಲಸ ಮಾಡಿದ ಯಾರಾದರೊಬ್ಬರು ಉದ್ಘಾಟಿಸಬೇಕೆಂದು ಅವರು ಬಯಸಿದ್ದರು. ಅವರ ಬಯಕೆಯಂತೆಯೆ ದಾಮೋದರ್ ವ್ಯಾಲಿ ಕಾರ್ಪೊರೇಶನ್ ನವರು 15 ವರ್ಷ ವಯಸ್ಸಿನ, ಬುಧಿನಿ ಮಂಜಿಯನ್ ಎಂಬ ಬುಡಕಟ್ಟು ಹುಡುಗಿಯನ್ನು ಕರೆತರುತ್ತಾರೆ. ನೆಹರೂ ಅವಳ ಕೈಯಲ್ಲಿ ಅಣೆಕಟ್ಟಿನ ಉದ್ಘಾಟನೆ ಮಾಡಿಸುತ್ತಾರೆ, ಮಾತ್ರವಲ್ಲ ತಮ್ಮ ಕೈಲಿದ್ದ ಹೂವಿನ ಹಾರವನ್ನು ಬುಧಿನಿಗೆ ನೀಡುತ್ತಾರೆ. ಅಷ್ಟೆ, ಅಲ್ಲಿಂದ ಶುರುವಾಗುತ್ತೆ ಬುಧಿನಿಯ ಕರುಣ ಕಥನ.

ನೆಹರೂರವರಿಂದ ಸನ್ಮಾನ ಪಡೆದ ಖುಷಿ ಬುಧಿನಿಗೆ ಹೆಚ್ಚು ಸಮಯ ಉಳಿಯಲಿಲ್ಲ. ಅದೆ ದಿನ ರಾತ್ರಿ ಸಂತಾಲಿ ಸಮಾಜ ಪಂಚಾಯತ್ ಕರೆಯುತ್ತದೆ, ಹದಿನೈದು ವರ್ಷ ಪ್ರಾಯದ ಬುಧಿನಿಯನ್ನು ನೆಹರೂರವರನ್ನು “ಮದುವೆ” ಆಗಿದ್ದಕ್ಕಾಗಿ ತಮ್ಮ ಸಮಾಜದಿಂದಲೇ ಬಹಿಷ್ಕಾರ ಹಾಕಿ ಹೊರಗಟ್ಟುತ್ತದೆ. ಸಂತಾಲಿ ಸಮಾಜದ ಆಚರಣೆಗಳ ಪ್ರಕಾರ ನೆಹರೂರವರು ಆಕೆಯ ಜೊತೆ ಹೂ ಮಾಲೆ ವಿನಿಮಯ ಮಾದಿಕೊಂಡಿದ್ದರಿಂದ ಆಕೆ ನೆಹರೂರವರ ಪತ್ನಿ ಆಗುತ್ತಾಳಂತೆ ಮತ್ತು ನೆಹರೂ ಸಂತಾಲಿ ಸಮಾಜದವರಲ್ಲದ್ದರಿಂದ ಆಕೆಗೆ ಸಮಾಜದಲ್ಲಿ ಸ್ಥಾನ ಮಾನ ಇಲ್ಲವಾಗುತ್ತದಂತೆ!! ಪಾಪದ ಹುಡುಗಿ ತಾನು ಮಾಡಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳೆ.

ಸಮಾಜದಿಂದ ಬಹಿಷ್ಕೃತಳಾದರೂ ಹೊಟ್ಟೆ ಪಾಡಿಗಾಗಿ ಅಣೆಕಟ್ಟು ಕಟ್ಟುವ ಕೆಲಸದಲ್ಲಿ ನಿರತಳಾಗಿದ್ದರೂ 1962 ಆಕೆಯನ್ನು ಕೆಲಸದಿಂದ ವಜಾಗೊಳಿಸಿ ತಿನ್ನುವ ಅನ್ನಕ್ಕೂ ಕಲ್ಲು ಹಾಕಲಾಗುತ್ತದೆ. ಹೊಟ್ಟೆ ಹೊರೆಯಲು ತನ್ನೂರು ಬಿಟ್ಟು ಜಾರ್ಖಂಡಿಗೆ ಪಯಣಿಸಿದ ಬುಧಿನಿಗೆ ಅಲ್ಲಿ ಸುಧೀರ್ ದತ್ತಾ ಎನ್ನುವವರ ಪರಿಚವಾಗುತ್ತದೆ. ಅವರು ಮದುವೆಯಾಗಬೇಕೆಂದು ಬಯಸಿದ್ದರೂ, ತಮ್ಮ ಸಮಾಜದಲ್ಲಿ ಅವರು ಎದುರಿಸಬೇಕಾಗಿರುವ ಪರಿಣಾಮಗಳನ್ನು ಯೋಚಿಸಿ ಭಯಪಟ್ಟು ಒಟ್ಟಿಗೆ ಸಹಜೀವನ ನಡೆಸುವ ತೀರ್ಮಾನಕ್ಕೆ ಬರುತ್ತಾರೆ. ಬುಧಿನಿಗೆ ಮೂರು ಮಕ್ಕಳೂ ಕೂಡಾ ಆಗುತ್ತವೆ.

1985 ರಲ್ಲಿ ಬುಧಿನಿಯ ವಿಚಾರ ರಾಜೀವ್ ಗಾಂಧಿಗೆ ತಿಳಿಯುತ್ತದೆ. ಆತ ಆಕೆಯನ್ನು ಹುಡುಕಿ ಆಕೆಯನ್ನು ಭೇಟಿಯಾಗುತ್ತಾರೆ ಮಾತ್ರವಲ್ಲ ಆಕೆ ಕಳೆದುಕೊಂಡ ಕೆಲಸವನ್ನು ಆಕೆಗೆ ಮರಳಿಸಿ ಕೊಟ್ಟು ತನ್ನ ಅಜ್ಜನಿಂದಾದ ತಪ್ಪಿಗೆ ಪ್ರಾಯಶ್ಚಿತ್ತ ಮಾಡುತ್ತಾರೆ. ಬುಧಿನಿಯೊಂದಿಗೆ ಅಣೆಕಟ್ಟು ಉದ್ಘಾಟಿಸಿದ್ದ ಮತ್ತೊಬ್ಬ ವ್ಯಕ್ತಿ ಬಿಬಿಸಿ ಜೊತೆ ಮಾತನಾಡುತ್ತಾ ನೆಹರೂರವರು ನಮಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಅಂಥದ್ದೇನೂ ದೊರಕಲೆ ಇಲ್ಲ ಎಂದು ವಿಷಾದ ವ್ಯಕ್ತ ಪಡಿಸಿದ್ದರು. ಆದರೆ ಬುಧಿನಿಯ ಬಗ್ಗೆ ಕೇಳಿದಾಗ ಆ ವಿಚಾರವನ್ನು ನೆನಪಿಸಲು ಇಷ್ಟವಿಲ್ಲ ಎಂದು ಹೇಳುತ್ತಾರೆ. ನೆಹರೂರವರಿಗೆ ತಮ್ಮ ವಿಕಾಸದಿಂದ ಪುರುಸೊತ್ತಿದ್ದರಲ್ಲವೆ ಇನ್ನೊಬ್ಬರ ಬಗ್ಗೆ ಯೋಚಿಸುವುದು?

ಅಂದಿನಿಂದ ಇಂದಿನವರೆಗೂ ಕಡು ಕಷ್ಟದಲ್ಲೆ ಜೀವನ ನಡೆಸಿದ ಬುಧಿನಿಗೆ 2016 ರಲ್ಲಿ ನೀವೇನು ಬಯಸುತ್ತೀರಿ ಎಂದು ಪ್ರಶ್ನಿಸಿದಾಗ “ನಾವು ನಮ್ಮ ಮುಂದಿನ ದಿನಗಳನ್ನು ಶಾಂತಿಯಿಂದ ಕಳೆಯುವಂತೆ ನಮಗೊಂದು ಮನೆ ಮತ್ತು ಮಗಳಿಗೊಂದು ಕೆಲಸ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡುತ್ತೇನೆ” ಎಂದು ಹೇಳುತ್ತಾರೆ. ಹಾಗಾದರೆ ಈಗ ರಾಹುಲ್, ಬುಧಿನಿಗೆ ಒಂದು ಮನೆ ನಿರ್ಮಿಸಿ ಮತ್ತು ಆಕೆಯ ಮಗಳಿಗೆ ಒಂದು ಕೆಲಸ ತೆಗೆಸಿ ಕೊಡುವರೆ? ತನ್ನ ತಂದೆಯಂತೆ ಸಹೃದಯತೆ ರಾಹುಲನಲ್ಲಿರುವುದೆ? ತನ್ನ ಮುತ್ತಾತನಿಂದ ಒಬ್ಬ ಹೆಣ್ಣು ಮಗಳ ಬಾಳು ಹಾಳಾಯಿತು ಎನ್ನುವ ಪರಿವೆ ರಾಹುಲನಿಗೆ ಇದೆಯೆ? ಮೋದಿ ಹೆಂಡತಿಯನ್ನು ತೊರೆದ್ದಿದ್ದಾರೆ  ಅಯ್ಯೋ ಪಾಪ ಎನ್ನುವ ಕಾಂಗ್ರೆಸಿಗರು ನೆಹರೂರಿಂದ ಅನ್ಯಾಯಕ್ಕೊಳಗಾದ ಬುಧಿನಿಗೆ ನ್ಯಾಯ ದೊರಕಿಸಿ ಕೊಡುವರೆ? ರಾಹುಲನ ಉತ್ತರದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಆತನ ಮುತ್ತಜ್ಜಿ ಬುಧಿನಿ…..

  • ಶಾರ್ವರಿ
Tags

Related Articles

Close