ಪ್ರಚಲಿತ

ನೂತನ ಪಾರ್ಲಿಮೆಂಟ್ ನಾಳೆ ಲೋಕಾರ್ಪಣೆ

ದೇಶದ ರಾಜಧಾನಿ ನವದೆಹಲಿಯಲ್ಲಿ ಸೆಂಟ್ರಲ್ ವಿಸ್ತಾ ಯೋಜನೆಯಡಿ ನಿರ್ಮಾಣವಾಗಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಆ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಪುಟಗಳಿಗೆ ಮತ್ತೊಂದು ದಾಖಲೆಯನ್ನು ಸೇರಿಸಲಿದ್ದಾರೆ. ಈ ಸಂಬಂಧ ಕಳೆದ ಶುಕ್ರವಾರವೇ ಪ್ರಧಾನಿ ಮೋದಿ ಅವರು ವಿಡಿಯೋ ತುಣುಕೊಂದನ್ನು ಸಹ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಈ ನೂತನ ಸಂಸತ್ ಭವನವು ದೇಶದ ಪ್ರತಿಯೋರ್ವ ನಾಗರಿಕನಿಗೂ ಹಿರಿಮೆ ತರುವ ವಿಚಾರವಾಗಿದೆ ಎಂದು ಪಿ ಎಂ ಮೋದಿ ತಿಳಿಸಿದ್ದಾರೆ. ಜೊತೆಗೆ ಈ ನೂತನ ಸಂಸತ್ ಭವನದ ವಿಡಿಯೋ ತುಣುಕನ್ನು ಸಹ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಈ ವಿಚಾರವನ್ನು ಹಂಚಿಕೊಂಡ ಕೂಡಲೇ ‘ಮೈ ಪಾರ್ಲಿಮೆಂಟ್, ಮೈ ಪ್ರೈಡ್’ ಎಂಬ ಹ್ಯಾಷ್‌ಟ್ಯಾಗ್ ಅಡಿ ಟ್ರೆಂಡ್ ಸಹ ಆರಂಭವಾಗಿದೆ. ಹಲವಾರು ಗಣ್ಯರು ಸೇರಿದಂತೆ, ಜನಸಾಮಾನ್ಯರು ಸಹ ಪ್ರಧಾನಿ ಮೋದಿ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.

ಇನ್ನು ಈ ಲೋಕಾರ್ಪಣೆ ಹಿನ್ನೆಲೆಯಲ್ಲಿ ನೂತನ ಸಂಸತ್ ಭವನದಲ್ಲಿ ಬೆಳಗ್ಗೆ ಹೋಮ, ಹವನ, ಪೂಜೆ ಪುರಸ್ಕಾರ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Tags

Related Articles

Close