ಪ್ರಚಲಿತ

ಅಪ್ರಾಪ್ತ ಬಾಲಕಿಯರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಸಾಧ್ಯತೆ!! ನರೇಂದ್ರ ಮೋದಿ ನೀಡಿದ ಸುಳಿವೇನು?

ಕಾಂಗ್ರೆಸ್ ನ ಆಡಳಿತಾವಧಿಯಲ್ಲಿ ಮಾಡಿರುವ ಅನ್ಯಾಯ, ಅನಾಚಾರಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ಅದಕ್ಕೆ ಲೆಕ್ಕವೇ ಇಲ್ಲ ಎನ್ನುವಂತಾಗಿದೆ!! 10 ವರ್ಷಗಳ ಕಾಲ ಮೌನದಿಂದಲೇ ಅಧಿಕಾರವನ್ನು ನಡೆಸಿ ಇಂದು ಯಾವುದೇ ರಾಜ್ಯಗಳಲ್ಲಿ ಯಾವುದೇ ಅನಾಹುತಗಳು ಸಂಭವಿಸಿದರೂ ಕೂಡ ಬುದ್ದಿಜೀವಿಗಳು ಅದಕ್ಕೆ ಮೋದಿಯವರನ್ನೇ ಹೊಣೆಯನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ!! ಆದರೆ ಇದೀಗ ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳವ ಮೂಲಕ ಇದೀಗ ಮತ್ತೆ ಮೋದಿ, ಯೋಗಿ ಸುದ್ದಿಯಲ್ಲಿದ್ದಾರೆ!!
ಈ ದೇಶದ ಪ್ರಧಾನಿಯೊಬ್ಬರು 10 ವರ್ಷ ಮಾತೇ ಆಡದೆ ಆಳ್ವಿಕೆ ನಡೆಸಿದರೂ, ದೇಶದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹಗರಣಗಳು ನಡೆದರೂ, ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ನಡೆದರೂ ಪ್ರಧಾನಿಯೊಬ್ಬರು ಬಾಯಿಗೆ ಫೆವಿಕಾಲ್ ಹಾಕಿಕೊಂಡಂತೆ ಕೂತಿದ್ದರು!! ಆದರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಕಾಂಗ್ರೆಸ್ಸಿಗರು ಇದೀಗ ದೇಶದ ಯಾವ ರಾಜ್ಯದಲ್ಲಿ ಅನಾಹುತ ನಡೆದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬೊಬ್ಬೆ ಹೊಡೆಯುತ್ತಾರೆ.
ಆದರೆ ನವದೆಹಲಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕವನ್ನು ಶುಕ್ರವಾರ ಉದ್ಘಾಟಿಸಿ ಮಾತಾನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣವನ್ನು ಕಟುಶಬ್ದಗಳಿಂದ ಖಂಡಿಸಿದ್ದಾರೆ. ಅಷ್ಟೇ ಅಲ್ಲದೇ ಎರಡೂ ಪ್ರಕರಣಗಳ ಹೀನ ಕೃತ್ಯಗಳು ಮತ್ತು ಈ ಘಟನೆಗಳು ನಾಗರಿಕ ಸಮಾಜದ ಭಾಗವೇ ಅಲ್ಲ ಎಂದು ಹೇಳಿರುವ ಇವರು ಸಮಾಜದ ಮತ್ತು ದೇಶದ ದೃಷ್ಟಿಯಿಂದ ಎರಡೂ ಘಟನೆಗಳು ತಲೆ ತಗ್ಗಿಸುವಂಥವುಗಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, “ಎರಡೂ ಪ್ರಕರಣಗಳಲ್ಲಿ ಯಾರೇ ಭಾಗಿಗಳಾಗಲಿ, ಅವರ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ.
Related image
ಅಷ್ಟಕ್ಕೂ ಯೋಗಿ ಆದಿತ್ಯನಾಥರು ಈ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ?
ಬಿಜೆಪಿ ಆಡಳಿತದ ಯಾವುದೇ ರಾಜ್ಯದಲ್ಲಿ ಯಾವುದೇ ಅಚಾತುರ್ಯ, ಅನಾಹುತವಾದರೂ ಕಾಂಗ್ರೆಸ್ಸಿಗರು ದೇಶವೇ ಕೇಳುವ ಹಾಗೆ ಬೊಬ್ಬೆ ಹಾಕುತ್ತಾರೆ. ಇದು ಪ್ರಧಾನಿ ಮೋದಿ ಅವರ ವೈಫಲ್ಯ ಎಂದು ದೇಶದೆಲ್ಲೆಡೆ ಸಾರಿ ಸಾರಿ ಹೇಳುತ್ತಾರೆ. ಆದರೆ ಬಿಜೆಪಿ ಮಾತ್ರ, ಯಾವುದೇ ಅನಾಹುತ ನಡೆದರೂ ನ್ಯಾಯಸಮ್ಮತವಾಗಿ ಆಡಳಿತ ನಡೆಸುತ್ತಿದೆ. ಇದಕ್ಕೆ ಪ್ರತಿರೂಪವಾಗಿ ಉನ್ನಾವೋದಲ್ಲಿ 16 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಹೆಸರು ಕೇಳಿಬಂದಿದ್ದು, ಈ ಕುರಿತು ಯೋಗಿ ಆದಿತ್ಯನಾಥ ಖಡಕ್ ಆಗಿ ಮಾತನಾಡಿದ್ದಾರೆ.
ಹೌದು……. ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ಕುರಿತು ಮಾತನಾಡಿದ ಯೋಗಿ ಆದಿತ್ಯನಾಥರು, ಅಪರಾಧ ಎಸಗುವ ಯಾರೇ ಆದರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿ ಎಷ್ಟೇ ಪ್ರಭಾವಿಯಾಗಿದ್ದರೂ ಅವರಿಗೆ ಶಿಕ್ಷೆ ವಿಧಿಸದೆ ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಖಡಕ್ ಮಾತುಗಳನ್ನಾಡಿದ್ದಾರೆ. ಅತ್ಯಾಚಾರದ ಪ್ರಕರಣದ ಕುರಿತು ಸುದ್ದಿಯಾಗುತ್ತಲೇ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಈಗಾಗಲೇ ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಪೆÇಲೀಸರನ್ನು ಅಮಾನತು ಮಾಡಲಾಗಿದೆ ಎಂದು ಯೋಗಿ ತಿಳಿಸಿದ್ದಾರೆ.
Related image
ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಎಂಬುವವರನ್ನು ಬಂಧಿಸಲಾಗಿದೆ. ಇಷ್ಟಾದರೂ ಸುಮ್ಮನಿರದ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದು, ಇದಕ್ಕೆ ಯೋಗಿ ಆದಿತ್ಯನಾಥರು ಸರಿಯಾಗಿಯೇ ಪ್ರತ್ಯುತ್ತರ ನೀಡಿದ್ದಾರೆ. ಇನ್ನು ಈ ಕುರಿತು ನವದೆಹಲಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕವನ್ನು ಉದ್ಘಾಟಿಸಿ ಮಾತಾನಾಡಿದ ಪ್ರಧಾನಿ ನಮ್ಮ ಕುಟುಂಬ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಇದರ ಜತೆಗೆ ಸಾಮಾಜಿಕ ಮೌಲ್ಯ, ಕಾನೂನು ಸುವ್ಯವಸ್ಥೆಯನ್ನೂ ಅದಕ್ಕೆ ಜತೆಗೂಡಿಸಿ ಶಕ್ತಿ ವರ್ಧಿಸಬೇಕು ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳು ವಿಳಂಬವಾಗಿ ಮನೆಗೆ ಬಂದಾಗ ವಿಚಾರಣೆ ನಡೆಸುವ ಹೆತ್ತವರು ಮಗ ತಡವಾಗಿ ಬಂದಾಗಲೂ ತಡವೇಕೆ ಎಂದು ಪ್ರಶ್ನೆ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ಉನ್ನಾವೋ ಮತ್ತು ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥರು ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಖಂಡಿತವಾಗಿಯೂ ನ್ಯಾಯ ದೊರಕಿಸಿಕೊಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದಂತೂ ಅಕ್ಷರಶಃ ನಿಜ.
– ಅಲೋಖಾ
Tags

Related Articles

Close