ಪ್ರಚಲಿತ

ದೇಶ ವಿಭಜಿಸುವವರ ಬೆನ್ನಿಗೆ ನಿಂತವರಿಗೆ ಸದ್ದಿಲ್ಲದೇ ಪಾಠ ಕಲಿಸುವಷ್ಟು ಜನರೀಗ ಎಚ್ಚೆತ್ತುಕೊಂಡಿದ್ದಾರೆ.. ತಾನಾಜಿ ಸಿಂಹವಾಗಿ ಮೆರೆದರು, ದೀಪಿಕಾ ಇದ್ದಿದ್ದೂ ಕಳಕೊಂಡು ಸೋತಳು!

ದೀಪಿಕಾ ಪಡುಕೋಣೆ ಎಂಬ ಅಂತರರಾಷ್ಟ್ರೀಯ ಖ್ಯಾತಿಯ ನಟಿಯೊಬ್ಬಳು ಇತ್ತೀಚಿಗೆ ಬಹಳಷ್ಟು ಚರ್ಚೆಯಲ್ಲಿದ್ದಾರೆ.. ಮೊದಲಿಂದಾಗೂ  ಬಹಳಷ್ಟು ಅಭಿಮಾನಗಳನ್ನು ಹೊಂದುರುವ ಈಕೆ ಕನ್ನಡಿಗಳು ಎಂಬ ಹೆಮ್ಮೆ,ಗೊರವವನ್ನೂ ಹೊಂದಿದ್ದದ್ದು ಸುಳ್ಳಲ್ಲ.. ಅಷ್ಟೆಲ್ಲಾ ವರ್ಷಗಳ ಪರಿಶ್ರಮದ ಫಲವನ್ನು ಈಕೆ ಚಿಟಿಕೆ ಹೊಡೆಯುವಷ್ಟರಲ್ಲಿ ಕಳೆದುಕೊಂಡಿದ್ದಾಳೆ.. ಹಾಗಂತ ಈಕೆಯ ಸುತ್ತ ವಿವಾದ ಇರುವುದೇನೂ ಹೊಸದಲ್ಲಿ ಬಿಡಿ..ಆಕೆಯ ಬಾಜೀರಾವ್ ಮಸ್ತಾನಿ ಎಂಬ ಸಿನೆಮಾ ೨೦೧೫ ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿತ್ತು. ಮರಾಠಾ ಸಾಮ್ರಾಜ್ಯದ ವೀರ ಯೋಧನಾದ ಪೇಶ್ವಾ ಬಾಜೀರಾವ್ ಬಲ್ಲಾಳನ ಕುರಿತಾಗಿ ಬಂದ ಈ ಸಿನೆಮಾದ ಬಗ್ಗೆ ಜನರು ಬಹಳಷ್ಟು ನಿರೀಕ್ಷೆಯನ್ನು ಹೊಂದಿದ್ದರು.೧೭ ನೇ ಶತಮಾನ ಕಂಡ ಅಪ್ರತಿಮ ಯೋಧ,ನಾಲ್ಕನೇ ಛತ್ರಪತಿಯಾದ ಶಾಹು ಮಹಾರಾಜರ ಎರಡನೇ ಪೇಶ್ವೆಯಾಗಿದ್ದ ಬಾಜೀರಾವ್ ತನ್ನ ೩೯ ನೇ ವಯಸ್ಸಿನಲ್ಲೇ ತೀರಿಕೊಂಡಿದ್ದರು.ತನ್ನ ಜೀವಿತಾವಧಿಯಲ್ಲಿ ನಡೆದ ಒಂದೇ ಒಂದು ಯುದ್ಧದಲ್ಲೂ ಸೋಲನ್ನನುಭವಿಸದೆ,ಸೋಲರಿಯದ ಸರದಾರನಾಗಿದ್ದ ವೀರನಾದ ಬಾಜೀರಾವ್ ನನ್ನ ಪತ್ನಿಯನ್ನು ಹೊಂದಿದ್ದೂ ಪರಮಹಿಳೆಯನ್ನು ವಿವಾಹವಾಗಿ ಆಕೆಯ ಪ್ರೇಮದಲ್ಲಿ ಅಂಧನಾದ ಪ್ರಿಯತಮನಂತೆ ಚಿತ್ರಿಸಿ,ಮರಾಠರ ಶೌರ್ಯಕ್ಕೆ ಅಪಮಾನ ಎಸಗಿದ್ದು ಸಂಜಯ್ ಲೀಲಾ ಬನ್ಸಾಲಿ.ಈ ಕುರಿತಾಗಿ ಅನೇಕರು ಬೇಸರ ವ್ಯಕ್ತಪಡಿಸಿದ್ದರೂ ಬಾಜೀರಾವ್ ನ ಕುರಿತಾದ ಸಿನೆಮಾ ಎಂದು ಸಿನೆಮಾವನ್ನು ಗೆಲ್ಲಿಸಿದ್ದರು.

ನಂತರ ಬಂದದ್ದು ಪದ್ಮಾವತ್ ಎಂಬ ಸಿನೆಮಾ.ಇದರ ಮೂಲ ಹೆಸರು ಪದ್ಮಾವತಿ ಎಂಬುದಾಗಿತ್ತು.ಜನರ ಪ್ರತಿಭಟನೆಗೆ ಮಣಿದು ಹೆಸರನ್ನು ಬದಲಾಯಿಸಲಾಯಿತು..ಈ ಬಾರಿ ರಾಜಪೂತ ಅರಸ ಮಹಾರಾವಲ್ ರತನ್ ಸಿಂಗ್ ಮತ್ತು ಅವನ ಸುಂದರ ಪತ್ನಿ ಪದ್ಮಾವತಿಯ ಕಥಾ ಹಂದರವುಳ್ಳ ಸಿನೆಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸಿದರು.ಈ ಬಾರಿ ರಜಪೂತರು ಸುಮ್ಮನಿರಲಿಲ್ಲ,ಹಲವಾರು ಪ್ರತಿಭಟನೆಗಳ ಬಳಿಕ ಆಕ್ಷೇಪಾರ್ಹ ತುಣುಕುಗಳನ್ನು ತೆಗೆದುಹಾಕಿ ಸಿನೆಮಾವನ್ನು ಬಿಡುಗಡೆಗೊಳಿಸಲಾಯಿತು..ಈ ಬಾರಿಯೂ ಅನೇಕ ಹಿಂದೂಗಳು ಸಿನೆಮಾದ ಪರವಾಗಿ ನಿಂತರು,ಪಾಪ ಬಹಳಷ್ಟು ಶ್ರಮವಹಿಸಿ ಸಿನೆಮಾ ನಿರ್ಮಿಸಿದ್ದಾರೆ,ನಮ್ಮದೇ ಅರಸನ ಸಾಹಸವನ್ನು ಹೇಳುವ ಚಿತ್ರವಿದು ಎಂದು ಚಿತ್ರದ ಬೆನ್ನಿಗೆ ನಿಂತರು.ಆದರೆ ಚಿತ್ರದಲ್ಲಿ ಪದ್ಮಾವತಿಯ ಸೌಂದರ್ಯ ಮತ್ತು ಖಿಲ್ಜಿಯ ಕ್ರೌರ್ಯ ಮತ್ತು ಸಾಹಸಗಳನ್ನೇ ವೈಭವೀಕರಿಸಲಾಗಿತ್ತೆ ಹೊರತಾಗಿ ರತನ್ ಸಿಂಗ್ ಎಂಬ ಸಿಂಹವನ್ನು ಸಿಂಹವನ್ನಾಗಿ ಚಿತ್ರಿಸಲೇ ಇಲ್ಲ..ಆದರೂ ಹಿಂದೂಗಳು ಚಿತ್ರವನ್ನು ದಾಖಲೆಯೊಂದಿಗೆ ಗೆಲ್ಲಿಸಿದರು.ದೀಪಿಕಾಳ ಪಿ ಆರ್ ತಂಡಕ್ಕೆ ಗಲಭೆ ಎಬ್ಬಿಸುವುದರಿಂದ ಲಾಭವಿದೆ ಅನ್ನಿಸಿತೋ,ಅಥವಾ ದೀಪಿಕಾಳಿಗೆ ಹಿಂದೂಗಳು ಮೂರ್ಖರು ಅನ್ನಿಸಿತೋ,ಹಿಂದೂಗಳ ಸಹನಶೀಲತೆಯನ್ನು ಆಕೆ ದೌರ್ಬಲ್ಯವೆಂದುಕೊಂಡಳೋ ಗೊತ್ತಿಲ್ಲ..ಈ ಬಾರಿ ಆಕೆಯೂ ಸಹ ನಿರ್ಮಾಪಕಿಯಾಗಿ ಚಪಾಕ್ ಎನ್ನುವ ಚಿತ್ರವೊಂದನ್ನು ನಿರ್ಮಿಸಿದಳು,ಅದರಲ್ಲಿ ಪ್ರಮುಖ ನಟಿಯೂ ಆಕೆಯೇ.ಆಸಿಡ್ ದಾಳಿಗೊಳಗಾಗಿಯೂ ಹೋರಾಟ ನಡೆಸುತ್ತಾ ವಿಜಯ ಪಡೆಯುವ ಮತ್ತು ಆತ್ಮಸ್ಥೈರ್ಯ ಮತ್ತು ಮನೋಬಲಕ್ಕೆ ಉತ್ತಮ ಉದಾಹರಣೆಯಾಗಿರುವ ಲಕ್ಷ್ಮೀ ಅಗರವಾಲ್ ಎಂಬ ಹೆಣ್ಣು ಮಗಳೊಬ್ಬಳ ಜೀವನಾಧಾರಿತ ಕಥೆಯ ಚಲನಚಿತ್ರವದು.

ಛಪಾಕ್ ಉತ್ತಮ ಕಥಾಹಂದರವನ್ನು ಹೊಂದಿರುವ ನೀತಿಯುಕ್ತ ಚಿತ್ರ..ಸಮಾಜದಲ್ಲಿ ಇಂತಹಾ ಚಿತ್ರಗಳ ಅವಶ್ಯಕತೆಯೂ ಇದೆ..ಸುಮ್ಮನೆ ಪ್ರಚಾರ ಮಾಡಿಕೊಂಡಿದ್ದಾರೆ ಸಿನೆಮಾ ಗೆಲ್ಲುತ್ತಿತ್ತೇನೋ,ಮೇಘನಾ ಗುಲ್ಜಾರ್ ಎಂಬ ಪ್ರತ್ಭಾನ್ವಿತ ನಿರ್ದೇಶಕಿಯ ಚಿತ್ರ, ನೈಜ ಕಥೆಯ ಚಿತ್ರ,ಮದುವೆಯಾದ ಬಳಿಕ ಮೊದಲ ಮತ್ತು ಎರಡು ವರ್ಷಗಳ ನಂತರ ಬರುತ್ತಿರುವ ದೀಪಿಕಾಳ ಚಿತ್ರ..ಸಿನೆಮಾ ಗೆಲ್ಲಲು ಇಷ್ಟು ಸಾಕಿತ್ತು..ಆದರೆ ಪಿ ಆರ್ ತಂಡದವರ ಮಾತು ಕೇಳಿಯೋ ಅಥವಾ ತನ್ನ ಸ್ವತಂತ್ರ ಆಲೋಚನೆಯಿಂದಲೋ ಅಂತೂ ಸಿನೆಮಾ ಬಿಡುಗಡೆಯ ೩ ದಿನ ಮೊದಲು ಆಕೆ JNU ವಿದ್ಯಾರ್ಥಿಗಳೊಂದಿಗೆ ಹೋಗಿ ನಿಂತುಬಿಟ್ಟಳು..ಕಾಲೇಜಿನಲ್ಲಿ ನಡೆದ ಗಲಭೆಯ ಕುರಿತಾಗಿ ಟುಕುಡೆ ಟುಕುಡೆ ತಂಡವು ನಡೆಸುತ್ತಿದ್ದ ಪ್ರತಿಭಟನಾ ಸಭೆಗೆ ಹೋಗಿ ಕನ್ಹಯ್ಯ ಕುಮಾರ್ ಎಂಬ ನಟನ ಪಕ್ಕ ನಿಂತುಬಿಟ್ಟಳು,ಮಾತ್ರವಲ್ಲದೆ JNU ದಲ್ಲಿ ನಡೆಯುವ ಪುಂಡಾಟಿಕೆಗಳ ನಾಯಕಿ ಘೋಷ್ ಳ ಬಳಿ ಕಷ್ಟಸುಖವನ್ನೂ ವಿಚಾರಿಸಿ ಬಿಟ್ಟಳು..ಮೊದಲಿನಿಂದಲೂ ಹಿಂದೂ ವಿರೋಧಿ ಕಾರ್ಯಗಳನ್ನು ಗಮನಿಸಿಯೂ ಗಮನಿಸದಂತಿರುತ್ತಿದ್ದ ಜನರೀಗ ಕೋಪಗೊಂಡರು, ಏಕೆಂದರೆ ಈ ಬಾರಿ ವಿಚಾರ ರಾಷ್ಟ್ರಕ್ಕೆ ಸಂಬಂಧಿಸಿತ್ತು.ಜನರು ಚಪಾಕ್ ಸಿನೆಮಾವನ್ನು ಬಹಿಷ್ಕರಿಸಲು ಪ್ರಾರಂಭಿಸಿದರು.ಪರಿಣಾಮವಾಗಿ ಮೊದಲ ವಾರಾಂತ್ಯದಲ್ಲಿ ಆಕೆಯ ಸಿನೆಮಾ ೯ ವರ್ಷಗಳಲ್ಲೇ ಕನಿಷ್ಠ ಆರಂಭವನ್ನು ಕಂಡಿತು..ಅದೇ ಸಮಯದಲ್ಲಿ ಅಜಯ್ ದೇವ್ಗನ್ ರ ತಾನಾಜಿ ಸಿನೆಮಾ ಕೂಡ ತೆರೆಕಂಡಿತ್ತು.ತಾನಾಜಿ ಸಿನೆಮಾವು ಮರಾಠರ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಸೇನಾಧಿಪತಿ ತಾನಾಜಿ ಮಾಲುಸರೆಯ ಜೀವನಾಧಾರಿತ ಚಿತ್ರವಾಗಿತ್ತು.ಪ್ರಖರ ಹಿಂದುತ್ವ ಮತ್ತು ಗಟ್ಟಿ ಕಥೆಯ ರಾಷ್ಟ್ರೀಯವಾದಿ ಸಿನೆಮಾವೊಂದು ಸ್ಪರ್ಧೆಯಲ್ಲಿರುವಾಗಲೂ ತಾನು ಪ್ರಚಾರಕ್ಕಾಗಿ ಟುಕುಡೆ ಗ್ಯಾಂಗ್ ಬಳಿ ಹೋದದ್ದು ಮೂರ್ಖತನದ ಪರಮಾವಧಿಯೇ ಸರಿ.

ಈ ಬಾರಿ ಜನಸಾಮಾನ್ಯರೂ ಎಚ್ಚೆತ್ತುಕೊಂಡು ತಾನಾಜಿ ಸಿನೆಮಾವನ್ನು ಗೆಲ್ಲಿಸಿ,ಚಪಾಕ್ ಸಿನೆಮಾವನ್ನು ಸೋಲಿಸುವುದರ ಮೂಲಕ ತಮ್ಮನ್ನು ತಾವು ಸೆಲೆಬ್ರಿಟಿಗಳು ಎಂದುಕೊಂಡು ಮೆರೆಯುವವರಿಗೆ ಎಚ್ಚರಿಕೆಯ ಪಾಠವನ್ನು ನೀಡಿದ್ದಾರೆ..ಎಷ್ಟೇ ದೊಡ್ಡ ತಾರೆಯಾದರೂ,ದೇಶದ ಮುಂದೆ,ದೇಶಕ್ಕಾಗಿ ಮಡಿದ ವೀರರ ಕಥೆಯಾ ಮುಂದೆ ಮಿಕ್ಕಲ್ಲವೂ ಗೌಣ ಎಂಬುದೇ ಈ ಸಂದೇಶ..ಔರಂಗಜೇಬ ವಶಪಡಿಸಿಕೊಂಡಿದ್ದ ಕೊಂಡಾಣ ಕೋಟೆಯನ್ನು ಮಾರುವಶಪಡಿಸಿಕೊಳ್ಳಲು ತನ್ನ ಜೀವವನ್ನೇ ಅರ್ಪಿಸಿದ ತಾನಾಜಿ ಮಾಲುಸರೆಯಂತಹಾ ವೀರರ ಬಲಿದಾನದ ಫಲವನ್ನು ನಾವೀಗ ಉಣ್ಣುತ್ತಿದ್ದೇವೆಂಬುದು ಜನರು ಅರಿಯುತ್ತಿದ್ದಾರೆಂಬುದೇ ಸಂತಸದ ವಿಷಯ..ಮುಂದೆ ತಾನಾಜಿಯ ಬಲಿದಾನದ ನೆನಪಿಗಾಗಿ ಶಿವಾಜಿ ಈ ಕೋಟೆಯನ್ನು ಸಿಂಹಘಡವೆಂದು ಕರೆದರು..ಛಪಾಕ್ ಚಿತ್ರವೂ ಗಳಿಕೆಯಲ್ಲಿ ಹಿಂದೆ ಬೀಳಲು ಪ್ರಾರಂಭವಾದಾಗ ಚಿತ್ರದ ನಿರ್ದೇಶಕಿ,ಆ ಘಟನೆ ದೀಪಿಕಾಳ ವಯ್ಯಕ್ತಿಕ ಅಭಿಪ್ರಾಯ,ನಾವು ವ್ಯಕ್ತಿಗತ ಅಭಿಪ್ರಾಯ ಮತ್ತು ವೃತ್ತಿಯನ್ನು ಪ್ರತ್ಯೇಕಿಸುವ ಪ್ರಭುದ್ದತೆಯನ್ನು ಹೊಂದಬೇಕೆಂದು ಹೇಳಿಕೆ ನೀಡಿದರು..

ಅಂತಹ ಮಾತುಗಳನ್ನಾಡುವ ಮೊದಲು,ಪ್ರಧಾನಿಯ ವಯ್ಯಕ್ತಿಕ ಜೀವನದ ಬಗ್ಗೆ ಅವರ ಪತ್ನಿಯ ಬಗ್ಗೆ ಯಾವ ಯಾವ ಪ್ರಬುದ್ದರು ಯಾವ ಯಾವ ಮಾತನ್ನಾಡಿದ್ದರೆಂದು ನೆನಪಿಸಿಕೊಂಡು ಬಳಿಕ ಹೇಳಿಕೆ ನೀಡಿ..ಅಷ್ಟಕ್ಕೂ ಆಕೆಯ ವಯ್ಯಕ್ತಿಕ ಅಭಿಪ್ರಾಯ ಎನ್ನುವಾಗ ಆಕೆಯೂ ಅಭಿಪ್ರಾಯ ವ್ಯಕ್ತಪಡಿಸುವಾಗ ತನ್ನ ಗೌರವಾನ್ವಿತ ಸ್ಥಾನ ಮತ್ತು ಜವಾಬ್ದಾರಿಗಳ ಬಗ್ಗೆಯೂ ಪ್ರಬುದ್ಧವಾಗಿ ಚಿಂತಿಸಬೇಕಿತ್ತೆಂದು ನಿಮಗನಿಸುವುದಿಲ್ಲವೇ? ವೈಯ್ಯಕ್ತಿಕವಾಗಿ ದೀಪಿಕಾ ಯಾರ ಮನೆಯ ಮುಂಜಿಗೋ ಮದುವೆಗೋ ಬರುವುದಿಲ್ಲವಷ್ಟೆ??ಹಾಗಿದ್ದಲ್ಲಿ ಆಕೆಯನ್ನು ಆಹ್ವಾನಿಸದೇ ಇರಬಹುದಾಗಿತ್ತು..ಜನರೂ ಸಹಾ ತಮ್ಮ ವಯ್ಯಕ್ತಿಕ ಅಭಿಪ್ರಾಯದಂತೆ ಚಿತ್ರವನ್ನು ತಿರಸ್ಕರಿಸಿದ್ದಾರೆ ನೀವೂ ಜನರ ವಯ್ಯಕ್ತಿಕ ಅಭಿಪ್ರಾಯವನ್ನು ಪ್ರಬುದ್ಧವಾಗಿ ಸ್ವೀಕರಿಸಿ.. ಈ ಘಟನೆಯ ನಂತರವಾದರೂ ಬಾಲಿವುಡ್ ಪಾಠಕಲಿತರೇ ಒಳಿತು..ಇಲ್ಲದಿದ್ದರೆ ಬಹಳಷ್ಟು ಚಿತ್ರಗಳು ಇದೇ ರೀತಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು….

-Deepashree M

Tags

Related Articles

FOR DAILY ALERTS
Close