ಪ್ರಚಲಿತ

ಕಾಶ್ಮೀರಿ ಹಿಂದೂಗಳ ದುರಂತ ಅಧ್ಯಾಯ ೮ – ಇಸ್ಲಾಮ್ ಆಡಳಿತಗಾರರ ಹಿಂಸೆಯನ್ನು ತಡೆಯಲಾರದೆ ಭಾರತಕ್ಕೆ ಓಡಿಬಂದ ಸಯ್ಯದ್‍ಗಳಿಗೆ ಆಶ್ರಯವನ್ನು ನೀಡಿದ್ದ ಹಿಂದೂಗಳು ಮತಾಂತರದ ಬಲೆಗೆ ಸಿಲುಕಿ ಹಿಂಸೆಗೊಳಗಾದ ಘೋರ ಕಥೆ ನಿಮಗೆ ತಿಳಿದಿದೆಯೇ..!?

ಸುಲ್ತಾನ್ ಹೈದರ್ ಷಾ (೧೪೭೦-೭೨)

ಸಹಬಾಳ್ವೆಯ ಕನಸನ್ನು ಹಿಂದೂಗಳ ಮನಸ್ಸಲ್ಲಿ ಮೂಡಿಸಿದ್ದ ಸುಲ್ತಾನ್ ಝನ್ನ್ ಉಲ್ ಆಬಿದೀನ್ ಮೂಡಿಸಿದ್ದರೂ..ಆತನ ಅಂತ್ಯದೊಂದಿಗೆ ಶಾಂತಿಯಿಂದ ಜೀವಿಸುವ ಹಿಂದೂಗಳ ಕನಸುಗಳು ಕಮರಿ ಹೋಯಿತು.ಸಾಧ್ಭಾವನೆ ಮತ್ತು ಸಹಬಾಳ್ವೆಯ ಮುಖವಾಡದೊಂದಿಗೆ ಸಯ್ಯದ್ ಗಳು ಕಾಶ್ಮೀರದ ಆಡಳಿತಾಧಿಕಾರಿಗಳು ಮತ್ತು ರಾಜವಂಶದೊಂದಿಗೆ ನಡೆಸಿದ ವೈವಾಹಿಕ ಸಂಬಂಧಗಳು ಕಾಶ್ಮೀರವನ್ನು ಮೋಸದಿಂದ ವಶಪಡಿಸಿಕೊಳ್ಳುವ ಕುತಂತ್ರದ ಭಾಗವಾಗಿತ್ತು.ಈ ರೀತಿಯ ವಿವಾಹಗಳಿಂದ ನಿಧಾನವಾಗಿ ಆಡಳಿತ ಯಂತ್ರವನ್ನು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡ ಸಯ್ಯದ್ಗಳು ನಿಧಾನವಾಗಿ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿದರು..ಮತ್ತು ಇದೆ ರೀತಿಯಾಗಿ ಮುಂದುವರೆದ ಈ ಕುತಂತ್ರವು ಕೊನೆಗೆ ಹಿಂದೂಗಳಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿತ್ತು.ಸುಲ್ತಾನ್ ಆಬಿದೀನ್ ಮರಣಹೊಂದಿದ ಬಳಿಕವಂತೂ ಕಾಶ್ಮೀರವೊಂದು ಗೊಂದಲದ ಗೂಡಾಗಿ ಪರಿವರ್ತನೆ ಹೊಂದಿತ್ತು.

ಕಾಶ್ಮೀರಿ ಹಿಂದೂಗಳ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಅಂತ್ಯಗೊಳಿಸುವುದನ್ನೇ ತಮ್ಮ ಧ್ಯೇಯವಾಗಿರಿಸಿಕೊಂಡಿದ್ದ ಸಯ್ಯದ್ ಗಳು ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಆಸೀನರಾದರು.ಆದರೆ ಭಟ್ ಷಾ ಎಂದೇ ಕರೆಯಲ್ಪಡುತ್ತಿದ್ದ ಆಬಿದೀನ್ ರ ಆಡಳಿತಾವಧಿಯಲ್ಲಿ ಸಂಪೂರ್ಣ ಆಡಳಿತ ಮತ್ತು ಅಧಿಕಾರ ಸುಲ್ತಾನರ ಕಯ್ಯಲ್ಲಿಯೇ ಇದ್ದ ಕಾರಣ ಹಿಂಸೆ ಮತ್ತು ಅನಾಚಾರಗಳನ್ನು ನಡೆಸುತ್ತಿದ್ದ ಸಯ್ಯದ್ ಗಳಿಗೆ ಕೈ ಕಟ್ಟಿದ್ದ ಅನುಭವವಾಗುತ್ತಿತ್ತು,ಆದರೆ ಅವರ ಮರಣದ ಬಳಿಕ ಸಿಂಹಾಸನವೇರಿದ ಅರಸರೆಲ್ಲರೂ ಹಿತ್ತಾಳೆ ಕಿವಿಯನ್ನು ಹೊಂದಿದ್ದರು ಮತ್ತು ದುರ್ಬಲರಾಗಿದ್ದರು.ಸಾಮಾನ್ಯವಾಗಿ ನಿರ್ಲಜ್ಜ ಸಚಿವ ಸಂಪುಟ ಮತ್ತು ಹಿಂಬಾಲಕರನ್ನು ಹೊಂದಿದ್ದ ಆಡಳಿತಗಾರರು ಕಾಶ್ಮೀರದ ಸಿಂಹಾಸನವನ್ನೇರಿದ್ದರು.ಸುಲ್ತಾನ ಹೈದರ್ ಷಾ ಕೂಡಾ ಅಂತಹುದೇ ಆಡಳಿತಗಾರರಲ್ಲಿ ಒಬ್ಬನಾಗಿದ್ದ.

ಮದ್ಯಪಾನ ಮತ್ತು ನಿದ್ರೆಗಳಲ್ಲಿಯೇ ಕಳೆದುಹೋಗುತ್ತಿದ್ದ ಸುಲ್ತಾನನು ಉಳಿದ ಸಮಯವನ್ನು ಸುಂದರ ಸ್ತ್ರೀಯರೊಂದಿಗೆ ಶಯ್ಯಾಗ್ರಹದಲ್ಲಿ ಕಳೆಯುತ್ತಿದ್ದನು.ಆತನಿಗೆ ಆಡಳಿತದಲ್ಲಾಗಲಿ ಹಿಂದೂಗಳ ನೋವಿನ ಕುರಿತಾಗಲಿ ಲವಲೇಶದ ಚಿಂತೆಯೂ ಇರಲಿಲ್ಲ..ಆತನು ಎಷ್ಟು ಮೂರ್ಖನಾಗಿದ್ದನೆಂದರೆ,ಕೇವಲ ತನ್ನ ಕ್ಷೌರಿಕನ ಮಾತನ್ನು ಕೇಳಿ ಸಾವಿರಾರು ಹಿಂದೂಗಳನ್ನು ಕೊಲ್ಲುವ ಆಜ್ಞೆಯನ್ನು ನೀಡಿದ್ದನು.ಈತನ ದುರಾಡಳಿತವನ್ನು ಸಹಿಸಲಾರದೆ ಹೋದಾಗ ನೂರಾರು ಹಿಂದೂಗಳು ಕೋಪಗೊಂಡರು ಮಾತ್ರವಲ್ಲದೆ ಅವರೆಲ್ಲರೂ ಒಟ್ಟಾಗಿ,ದೇವಾಲಯಗಳನ್ನು ಕೆಡವಿ ಆ ಸ್ಥಳದಲ್ಲಿ ನಿರ್ಮಿಸಿದ ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಅದರಿಂದ ಪಡೆದ ವಸ್ತುಗಳಿಂದ ನಿರ್ಮಿಸಲ್ಪಟ್ಟ ಮಸೀದಿಗಳಿಗೆ ಬೆಂಕಿ ಹಚ್ಚಿದರು.ಕಾಳಿಶ್ರೀ ದೇವಾಲಯವನ್ನು ನಾಶಪಡಿಸಿ ಅದರ ಮೇಲೆ ನಿರ್ಮಿಸಿದ್ದ ಮೀರ್ ಹಮದಾನಿ ಮಸೀದಿಗೂ ಬೆಂಕಿಯನ್ನು ಹಚ್ಚಿ ಹಿಂದೂಗಳು ನಾಶಪಡಿಸಿದಾಗ ಸುರಾಪಾನದಲ್ಲೇ ಮುಳುಗಿದ್ದ ಸುಲ್ತಾನನ ಅಹಂಕಾರಕ್ಕೆ ಪೆಟ್ಟು ಬಿದ್ದಂತಾಗಿ ಅವನು ಅತೀವ ಕೋಪಗೊಂಡನು, ಮಾತ್ರವಲ್ಲದೆ ಕಾಶ್ಮೀರದಲ್ಲಿ ಅಳಿದುಳಿದಿರುವ ಎಲ್ಲಾ ಹಿಂದೂಗಳ ಕಿವಿ ಮತ್ತು ಮೂಗನ್ನು ಕತ್ತರಿಸುವಂತೆ ಆಜ್ಞೆ ನೀಡಿದನು..

ಮೊದಲೇ ಕ್ರೂರಿಗಳಾಗಿದ್ದ ಸೈನಿಕರು ಅಬಾಲಾದಿ ವೃದ್ಧರನ್ನೂ ಮಹಿಳೆಯರನ್ನೂ ಪರಿಗಣಿಸದಿರುವಂತೆಯೂ ಆಜ್ಞಾಪಿಸಿದ್ದನು.ಇದರ ಪರಿಣಾಮವಾಗಿ ಕಾಶ್ಮೀರದುದ್ದಕ್ಕೂ ನೆಲೆಸಿದ್ದ ಹಿಂದೂಗಳನ್ನು ಬಲವಂತವಾಗಿ ಸೆರೆಹಿಡಿದು ಅವರ ಕಿವಿ ಮೂಗುಗಳನ್ನು ಕತ್ತರಿಸಲಾಯಿತು.ಸುಲ್ತಾನ ಹೈದರನ ಆಸ್ಥಾನದಲ್ಲಿದ್ದ ಕೆಲಸಗಾರರನ್ನೂ ಬಿಡದೆ ಹಿಂಸಿಸಲಾಯಿತು.ಸಾವಿರಾರು ಹಿಂದೂಗಳು ಧೈರ್ಯದಿಂದ ಈ ಕ್ರೌರ್ಯವನ್ನು ಸಹಿಸಿಕೊಂಡರೆ ಅನೇಕರು ಭಯದಿಂದ ತಾವು ಹಿಂದೂಗಳು ಎಂಬುದನ್ನೇ ನಿರಾಕರಿಸಿದರು.ಶ್ರೀವರನು ತನ್ನ ಕೃತಿಯಲ್ಲಿ ಹೀಗೆ ಹೇಳುತ್ತಾನೆ ‘ ನೋನ ದೇವಾ,ಜಯ ಮತ್ತು ಭೀಮ ಮುಂತಾದವರು ಮುಸಲ್ಮಾನರ ಕ್ರೌರ್ಯವನ್ನು ವಿರೋಧಿಸುತ್ತಾ ನರಳಿದರು,ಆದರೆ ಕೊನೆಗೆ ವಿತಸ್ತಾ ನದಿಗೆ ಹಾರಿ ಪ್ರಾಣತ್ಯಾಗ ಮಾಡಿದರು.ಹೈಡೋಗಳನ್ನು ಮನಬಂದಂತೆ ಹಿಂಸಿಸಲಾಗಿತ್ತು,ರಾಜನ ಆಸ್ಥಾನದಲ್ಲಿದ್ದ ಕೆಸಗಾರರನ್ನು ಮಾತ್ರವಲ್ಲದೆ ಸುಲ್ತಾನನ ಸೇವಕರಾಗಿದ್ದ ಹಿಂದೂಗಳನ್ನೂ ನಿರ್ದಯವಾಗಿ ಹಿಂಸಿಸಲಾಯಿತು.’

ಇತ್ತ ಕುತಂತ್ರದಿಂದ ಅಂತರ್ಜಾತೀಯ ವಿವಾಹವಾಗಿ ಮತ್ತಿತರ ತಂತ್ರಗಳಿಂದ ಆಯಕಟ್ಟಿನ ಅಧಿಕಾರವನ್ನು ವಹಿಸಿಕೊಂಡಿದ್ದ ಸಯ್ಯದ್ಗಳು,ಲೂಟಿ ದಂಗೆ ಇತ್ಯಾದಿಗಳಿಂದ ಕಾಶ್ಮೀರವನ್ನು ಅಕ್ಷರಶಃ ದಿವಾಳಿ ಸ್ಥಿತಿಗೆ ತಂದುಬಿಟ್ಟಿದ್ದರು.ತಮ್ಮನ್ನು ಬ್ರಾಹ್ಮಣ ಪುತ್ರರೆಂದು ಕರೆದುಕೊಳ್ಳುತ್ತಾ ಅವರು ಮಾಡಬಾರದ ಅನಾಚಾರಗಳನ್ನೆಲ್ಲಾ ನಡೆಸುತ್ತಿದ್ದರು. ಭ್ರಷ್ಟಾಚಾರವು ಅತ್ಯಂತ ಸಾಮಾನ್ಯಸಂಗತಿಯಾಗಿತ್ತು,ಮೋಸ,ಸುಳ್ಳು ವಂಚನೆ ಮತ್ತು ಲಂಚ ಮಾಡಿರೆ ಸಹಿತ ವ್ಯಭಿಚಾರವನ್ನೂ ಮಾಡುತ್ತಿದ್ದರು.ಮುಸ್ಲಿಂ ಆಡಳಿತಗಾರರಿಂದ ಹೆಚ್ಚಿನ ಗೌರವವನ್ನು ಪಡೆಯುತ್ತಿದ್ದ ಸಯ್ಯದ್ಗಳು ಆಯಕಟ್ಟಿನ ಅಧಿಕಾರಿಗಳಾಗಿ ತಮ್ಮ ಕುಟುಂಬಸ್ಥರನ್ನೇ ನಿಯೋಜಿಸಲು ಪ್ರಾರಂಭಿಸಿದರು.ಹಿಂದೂಗಳಿಗೆ ಅಮಾನುಷ ಕ್ರೌರ್ಯವನ್ನು ತೋರುತ್ತಾ ತಮ್ಮನ್ನು ಬ್ರಾಹ್ಮಣ ಪುತ್ರರೆಂದು ಕರೆಸಿಕೊಳ್ಳುತ್ತಾ ಹಿಂದೂಗಳ ಗಾಯದ ಮೇಲೆ ಉಪ್ಪು ಸವರಿದರು.ಆದರೆ ಈ ರೀತಿಯ ವರ್ತನೆಗಳಿಗಾಗಿ ಸಯ್ಯದ್ ಗಳು ಮುಸ್ಲಿಂ ವರಿಷ್ಠರಿಂದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗಿ ಬಂತು. ಆದರೆ ಪರಿಣಾಮವಾಗಿ ದಂಗೆಗಳು ಪ್ರಾರಂಭವಾಗಿ ರಾಜ್ಯದಲ್ಲಿ ಅರಾಜಕತೆಯು ತಾಂಡವವಾಡಲೂ ಪ್ರಾರಂಭವಾಯಿತು.ಆದರೆ ದಂಗೆಯನ್ನು ವ್ಯವಸ್ಥಿತವಾಗಿ ನಿರ್ವಹಿದ ಸುಲ್ತಾನರ ಸಯ್ಯದ್ ಪ್ರಧಾನಿ ತಮ್ಮ ಮಗಳ ೮ ವರ್ಷದ ಮಗನನ್ನು ಸಿಂಹಾಸನದಲ್ಲಿ ಕೂರಿಸಿದರು.ಸಯ್ಯದ್ಗಳು ತಮ್ಮ ನಡವಳಿಕೆಯಲ್ಲಿ ಕ್ರೂರಿಗಳೂ,ಅಹಂಕಾರಿಗಳೂ ಮತ್ತು ನಿರ್ಭಿಡೆ ಸ್ವಭಾವದವರೂ ಆಗಿ ಹಿಂದೂಗಳ ಪಾಲಿಗೆ ಅಕ್ಷರಶಃ ಸಾವಿನ ವ್ಯಾಪಾರಿಗಳಂತೆ ದಬ್ಬಾಳಿಕೆಯನ್ನು ನಡೆಸುತ್ತಿದ್ದರು.

ಹಿಂದೂಗಳಿಗೂ ಉಸಿರಾಡುವ ಅವಕಾಶವನ್ನು ನೀಡಿದ್ದ ಭಟ್ ಷಾ ಅವರ ಶಾಂತಿ ಮತ್ತು ಸಮಾಧಾನಗಳ ನೀತಿಗೆ ವಿ ಸಯ್ಯದ್ ಗಳು ತೀವ್ರ ಆಕ್ಷೇಪಣೆಯನ್ನು ಹೊಂದಿದ್ದರು.ಕಾಶ್ಮೀರಿ ಹಿಂದೂಗಳ ಬಗ್ಗೆ ತೀವ್ರವಾದ ಪಕ್ಷಪಾತದ ಭಾವನೆಯನ್ನು ಹೊಂದಿದ್ದ ಅವರು ಹಾಸನ್ ಷಾ ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಲೂಟಿ ಮಾಡಿಸಿದರು..ಆ ಸಮಯದಲ್ಲಿ ಹಿಂದೂಗಳು ಸಾಮಾನ್ಯ ಮಾನವ ಹಕ್ಕುಗಳಿಂದಲೂ ವಂಚಿತರಾಗಿದ್ದರು..ಪ್ರತಿಯೊಬ್ಬ ಮುಸಲ್ಮಾನನೂ ಕಾನೂನನ್ನು ಕಯ್ಯಲ್ಲಿ ತೆಗೆದುಕೊಂಡು ಹಿಂದೂಗಳನ್ನು ಹಿಂಸಿಸುತ್ತಿದ್ದ.ಹಿಂದೂಗಳು ಆಶ್ರಯಕ್ಕಾಗಿ ಪರ್ವತಗಳು ಮತ್ತು ದುರ್ಗಮ ಕಾಡುಗಳಿಗೆ ವಲಸೆಹೋಗುವಂತೆ ಮಾಡಲಾಯಿತು.ಕಾಶ್ಮೀರದಲ್ಲಿ ಸ್ಥಳೀಯ ಹಿಂದೂಗಳನ್ನು ಆಡಳಿತ ಯಂತ್ರದಿಂದ ಸಂಪೂರ್ಣವಾಗಿ ಹೊರದಬ್ಬಿದ ಸಯ್ಯದ್ಗಳು ರಾಜಕೀಯವಾಗಿ ಅತಂತ್ರರಾಗುವಂತೆ ಮಾಡಿದರು.ಇದರಿಂದಾಗಿ ತಮ್ಮ ಮೇಲೆ ನಡೆಯುತ್ತಿದ್ದ ಅನಾಚಾರಗಳ ಕುರಿತಾಗಿ ದೂರು ಸಲ್ಲಿಸಲೂ ಸಾಧ್ಯವಾಗದಂತೆ ನಿರ್ಬಲರಾದರು.ತನ್ನ ಜಮೀನನ್ನು ವಶಪಡಿಸಿಕೊಳ್ಳಲು ಬಯಸಿದ ಮುಸಲೀಮನ ವಿರುದ್ಧ ಶಾಂತವಾಗಿ ದೂರನ್ನು ಸಲ್ಲಿಸಿದ ಹಿಂದೂ ಒಬ್ಬನಿಗೆ ನ್ಯಾಯ ನೀಡುವ ಬದಲಾಗಿ ಅಧಿಕಾರಿಯು ಹಿಂದೂಗಳ ಸಂಪೂರ್ಣ ಗ್ರಾಮವನ್ನೇ ನಾಶಪಡಿಸಿ ದೌರ್ಜನ್ಯವೆಸಗಿದನು.ಒಂದು ಸಮಯದಲ್ಲಿಇಸ್ಲಾಮ್ ಆಡಳಿತಗಾರರ ಹಿಂಸೆಯನ್ನು ತಡೆಯಲಾರದೆ ಓಡಿಬಂದ ಸಯ್ಯದ್ ಗಳಿಗೆ ತಮ್ಮ ಧರ್ಮವನ್ನು ಹೇರದೆ ಆಶ್ರಯವನ್ನು ನೀಡಿದ್ದ ಹಿಂದೂಗಳು ಇಂದು ,ಅದೇ ಸಯ್ಯದ್ ಗಳಮತಾಂತರ ಮತ್ತು ಹಿಂಸೆಗಳಿಗೆ ಬಲಿಯಾಗಿ ತಮ್ಮ ಮಾತೃಭೂಮಿಯನ್ನು ತ್ಯಜಿಸಿ ಪಲಾಯನ ಮಾಡುವಂತಾಗಿತ್ತು.

Chapter 1:

ಭೂಲೋಕದ ಸ್ವರ್ಗ ಕಾಶ್ಮೀರ ಶಾರದಾ ಮಾತೆಯ ತವರೂರು! ಭರತ ಭೂಮಿ ಎಂಬುದು ದೇವರುಗಳ ಭೂಮಿ ಎಂಬುದನ್ನು ನಾವು ಮರೆತಿದ್ದೇವಾ?

Chapter2:

ಭಾರತದ ಕಿರೀಟ ಕಾಶ್ಮೀರ ಶಾರದೆಯ ಕಿರೀಟವಾಗಿದ್ದು ಹೇಗೆ? ಕಾಶ್ಮೀರಪುರವಾಸಿನಿಯ ಐತಿಹಾಸಿಕ ಕಥೆ…

Chapter 3:

ಕಾಶ್ಮೀರದಲ್ಲಿ ಹಿಂದೂಗಳ ಇತಿಹಾಸ ಎಂತದ್ದು.? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳ ಪರಿಸ್ಥಿತಿ ಹೇಗಾಗಿತ್ತು??

Chapter 4:

ಅಧ್ಯಾಯ ೪: ಪಂಡಿತರ ಬೀಡಾಗಿದ್ದ ಕಾಶ್ಮೀರದಲ್ಲಿ ಹಿಂದೂಗಳಿಗೆ ವಿಧಿಸಿದ್ದ ಷರತ್ತುಗಳು ಎಂತದ್ದು ಗೊತ್ತಾ.? ಆ ಷರತ್ತು ಪಾಲಿಸದಿದ್ದರೆ ಏನಾಗುತ್ತೆ.?

Chapter 5:

ಅಧ್ಯಾಯ ೫:ಕಡೆಗೂ‌ ಹಿಂದೂಗಳ ಘೋರ ಅವನತಿಗೆ ಮೂಕ ಸಾಕ್ಷಿಯಾಯಿತು ಭಾರತದ ಮುಕುಟ.! ಹೆಜ್ಜೆ ಹೆಜ್ಜೆಗೂ ನೆಲೆವೂರಿತ್ತು ಇಸ್ಲಾಂ ಛಾಯೆ!

Chapter 6:

ಅಧ್ಯಾಯ ೬: ಕಾಶ್ಮೀರದಲ್ಲಿ ಯಾವುದು ಆಗಬಾರದಿತ್ತೋ ಅದು ಆಗಿಯೇ ಹೋಗಿತ್ತು.! ಅಲ್ಲಿ ಧರೆಗುರುಳಿದ ದೇವಾಲಯಗಳಿಗೆ ಲೆಕ್ಕವೇ ಇಲ್ಲ…

Chapter 7:

ಕಾಶ್ಮೀರಿ ಹಿಂದೂಗಳ ಕರಾಳ ಜೀವನ ಅಧ್ಯಾಯ -೭ : ಕ್ರೌರ್ಯ ಮತ್ತು ದಬ್ಬಾಳಿಕೆಯು ಹಿಂದೂಗಳ ಜೀವನ ಸಂಸ್ಕೃತಿಯನ್ನೇ ಕಾಶ್ಮೀರದಿಂದ ಹೊರಗೋಡಿಸಿತ್ತು

-Deepashree M

Tags

Related Articles

FOR DAILY ALERTS
Close