ಪ್ರಚಲಿತ

ಸೆಂಚುರಿ ಬಾರಿಸಿದ ಮೋದಿ ಸ್ಮಾರ್ಟ್ ಸಿಟಿ ಯೋಜನೆ! ಮತ್ತೆ ಮತ್ತೆ ಹೇಳುತ್ತಿದೆ ಮೋದಿ ಮತ್ತೊಮ್ಮೆ ಎಂದು…

ಪ್ರಧಾನಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ “ಸ್ಮಾರ್ಟ್ ಸಿಟಿ” ಯೋಜನೆ ದೇಶದಾದ್ಯಂತ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಒಂದು ದಿಟ್ಟ ಹೆಜ್ಜೆಯಾಗಿದೆ!! “ಸ್ಮಾರ್ಟ್ ಸಿಟಿ”ಗಳಾಗಲಿರುವ ಒಟ್ಟು 100 ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು, ಇವುಗಳಲ್ಲಿ ಕರ್ನಾಟಕದ ಆರು ನಗರಗಳಿದ್ದು, ದೇಶದ ವಿವಿಧ ರಾಜ್ಯಗಳ 24 ರಾಜಧಾನಿ ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿಜೀಯವರ ಸ್ಮಾರ್ಟ್ ಸಿಟಿಗೆ 100 ನೇ ನಗರವಾಗಿ  ಮತ್ತೊಂದು ನಗರ ಸೇರ್ಪಡೆಯಾಗಿದೆ!!

Related image

ಮೇಘಾಲಯದ ಶಿಲ್ಲಾಂಗ್ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಗೊಂಡ 100 ನೇ ನಗರವಾಗಿದೆ!! ಕಳೆದ ಎರಡು ವರ್ಷಗಳ ಹಿಂದೆ ಮೋದಿ ಸರಕಾರ ಸ್ಮಾರ್ಟ್‍ಸಿಟಿ ಯೋಜನೆಯನ್ನು ಜಾರಿಗೆ ತಂದಿತ್ತು!! ಇದಕ್ಕಾಗಿ 99 ನಗರಗಳನ್ನು ಆಯ್ಕೆ ಮಾಡಲಾಗಿತ್ತು!! ಈಗ ಹೊಸದಾಗಿ ಶಿಲ್ಲಾಂಗ್ ಈ ಯೋಜನೆಗೊಳಪಟ್ಟಿದ್ದು ಈ ಮೂಲಕ ಸ್ಮಾರ್ಟ್‍ಸಿಟಿಗೆ ಒಟ್ಟು 100 ನಗರಗಳು ಸೇರ್ಪಡೆಯಾಗಿವೆ!! ಸ್ಮಾರ್ಟ್‍ಸಿಟಿ ಯೋಜನೆಯಡಿ 100 ನಗರಗಳನ್ನು ಅಭಿವೃದ್ಧಿಪಡಿಸಲು ರೂ.2,05,018 ಕೋಟಿಗಳನ್ನು ಘೋಷಿಸಲಾಗಿದೆ!!

Image result for modi smart city

ಇದೊಂದು ಸ್ವಾಗತಾರ್ಹ ಯೋಜನೆಯಾಗಿದ್ದು, ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಉದ್ಯೋಗ ಮತ್ತು ಬದುಕು ಹುಡುಕಿಕೊಂಡು ವಲಸೆ ಹೋಗುವವರ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಸಮೀಕ್ಷೆಯ ಪ್ರಕಾರ, ವಿಶ್ವದಲ್ಲಿ 2050ರೊಳಗೆ ಒಟ್ಟು ಜನಸಂಖ್ಯೆಯ ಶೇಕಡ 70ರಷ್ಟು ಜನ ನಗರಗಳಲ್ಲೇ ವಾಸವಾಗಲಿದ್ದಾರೆ. ಈ ಬೆಳವಣಿಗೆಗೆ ಭಾರತವೂ ಹೊರತಲ್ಲ. ಅಂದರೆ, ಈಗಾಗಲೇ ಕುಡಿಯುವ ನೀರು, ತಲೆಗೊಂದು ಸೂರು, ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದೆ ಪರದಾಡುತ್ತಿರುವ ನಗರಗಳು ಇನ್ನಷ್ಟು ಕೊಳೆಗೇರಿಗಳನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

Image result for modi smart city

ಇನ್ನು ಸ್ಮಾರ್ಟ್ ಸಿಟಿಗಳೆಂದರೆ, ಶುದ್ಧ ನೀರು, ಸ್ವಚ್ಛತೆ, ತ್ಯಾಜ್ಯಗಳ ಪರಿಣಾಮಕಾರಿ ನಿರ್ವಹಣೆ, ಪರಿಸರಸ್ನೇಹಿ ಸಾರಿಗೆ, ಇ-ಆಡಳಿತಕ್ಕೆ ಆದ್ಯತೆ ನೀಡುವ ನಗರಗಳು. ನಗರಗಳು ಎದುರಿಸುತ್ತಿರುವ ಆಡಳಿತದ ಮತ್ತು ಸ್ವಚ್ಛತೆಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡರೆ ಮಾಲಿನ್ಯವೂ ಕಡಿಮೆಯಾಗಿ ಜನರ ಆರೋಗ್ಯ ಸುಧಾರಿಸಲಿದೆ. ಒಟ್ಟಾರೆ, ಸುಸ್ಥಿರ ಮೂಲಸೌಲಭ್ಯಗಳ ವಿಸ್ತರಣೆಗಾಗಿ ಸರಳ ತಂತ್ರಜ್ಞಾನದ ಬಳಕೆ ಸ್ಮಾರ್ಟ್‍ಸಿಟಿಗಳ ಮೂಲ ಕಾರ್ಯತಂತ್ರವಾಗಿದೆ!!

source: news13

  • ಪವಿತ್ರ
Tags

Related Articles

Close