ಪ್ರಚಲಿತ

ಭಾರತೀಯ ಸೈನಿಕರನ್ನು ಮುಟ್ಟಲು ಬಂದ ಪಾಕ್‌ನ ೧೦ ಬಂಕರ್‌ಗಳು ಛಿದ್ರ..! ಮತ್ತೊಂದು ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧವಾಗುತ್ತಿದೆಯಾ ಭಾರತ..?

ಯಾವಾಗ ಮೋದಿ‌ ಸರಕಾರ ಆಡಳಿತ ನಡೆಸಲು ಪ್ರಾರಂಭಿಸಿತೋ, ಅಲ್ಲಿಂದ‌ ಶುರುವಾಯಿತು ನಿಜವಾದ ಭಾರತ-ಪಾಕಿಸ್ತಾನದ ಕಾಳಗ.‌ ಯಾಕೆಂದರೆ ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಹುತಾತ್ಮರಾದ ಯೋಧರೆಷ್ಟೋ, ನಡೆದ ಅವಘಡಗಳೆಷ್ಟೋ?. ಆದರೆ ಕಾಲ ಬದಲಾಗಿದೆ, ಆಡಳಿತ ನಡೆಸುತ್ತಿರುವುದು ಮೋದೀಜೀ. ಭಾರತದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ದಿಟ್ಟ ನಿರ್ಧಾರ ಕೈಗೊಳ್ಳುವ ನಮ್ಮ ಪ್ರಧಾನಿಯನ್ನು ಕಂಡರೆ ವಿರೋಧಿಗಳು ಬೆಚ್ಚಿಬೀಳುತ್ತಾರೆ. ಪಾಕಿಸ್ತಾನ ಉಗ್ರರನ್ನು ಬಳಸಿಕೊಂಡು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸತತ ಪ್ರಯತ್ನ ಮಾಡುತ್ತಲೇ ಇದ್ದರೂ, ನಮ್ಮ ಸೈನಿಕರು ಅವರನ್ನು ಕಾಶ್ಮೀರ ದಾಟಿ ದೇಶದೊಳಗೆ ಬರಲು ಬಿಡದೆ, ಗಡಿಯಲ್ಲೇ ಹೊಸುಕಿ ಹಾಕುತ್ತಿದ್ದಾರೆ. ಆದರೂ ತನ್ನ ನರಿ ಬುದ್ಧಿ ಬಿಡದ ಪಾಕಿಸ್ತಾನ ಮತ್ತೆ ಮತ್ತೆ ಗಡಿ ಪ್ರದೇಶದಲ್ಲಿ ಉಪಟಳ ನಡೆಸುತ್ತಿದ್ದು, ಭಾರತ ನೀಡಿದ ದಿಟ್ಟ ಉತ್ತರಕ್ಕೆ ಇಡೀ ಪಾಕಿಸ್ತಾನವೇ ಕಂಗಾಲಾಗಿದೆ..!

ಒಂದೇ ಏಟಿಗೆ ಪಾಕ್‌ನ ಹತ್ತು ಬಂಕರ್‌ಗಳು ಧ್ವಂಸ..!

ಭಾರತೀಯ ಸೇನೆ ಯಾವುದೇ ದೇಶಕ್ಕೆ ತೊಂದರೆ ಕೊಟ್ಟಿಲ್ಲ, ಆದರೆ ಭಾರತದ ವಿಚಾರವಾಗಿ ಯಾವುದೇ ತೊಂದರೆಗಳಾದರೂ ಸುಮ್ಮನೆ ಕೂತ ಉದಾಹರಣೆಯೇ ಇಲ್ಲ. ಅದೇ ರೀತಿ ನಿನ್ನೆ (ಶನಿವಾರ) ರಾತ್ರಿ ಕೂಡ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೈನಿಕರು ಏಕಾಏಕಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ.‌‌ ಪಾಕಿಸ್ತಾನಿ ಸೈನಿಕರು ನಡೆಸಿದ ದಾಳಿಗೆ ಗಡಿ ಕಾಯುತ್ತಿದ್ದ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಈ‌ ಭಾಗದ ೬ ಮಂದಿ ನಾಗರಿಕರಿಗೂ ಗಂಭೀರ ಗಾಯಗಳಾಗಿವೆ. ಪಾಕಿಸ್ತಾನದ ಕಡೆಯಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿದ್ದು, ಭಾರತೀಯ ಸೇನೆ ಈ ಹಿಂದೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಅಕ್ಷರಶಃ ಪಾಕಿಸ್ತಾನ ನಡುಗಿಹೋಗಿತ್ತು. ಆದರೆ ಇದೀಗ ಮತ್ತೆ ತನ್ನ ಕಪಟ ಬುದ್ದಿ ಮುಂದುವರೆಸಿದ್ದು, ಇಬ್ಬರು ಭಾರತೀಯ ಸೈನಿಕರನ್ನು ಬಲಿ ಪಡೆದುಕೊಂಡಿದ್ದಾರೆ.

Related image

ಪಾಕಿಸ್ತಾನದ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ, ದಾಳಿಗೆ ಬಳಸಿದ್ದ ಒಟ್ಟು ಹತ್ತು ಪಾಕಿಸ್ತಾನಿ ಬಂಕರ್‌ಗಳನ್ನು ಉಡೀಸ್ ಮಾಡಿದೆ. ಈ ಬಗ್ಗೆ ವರದಿ ಮಾಡಿದ್ದು, ಪಾಕಿಸ್ತಾನಿ ಸೈನಿಕರು ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯೂ ದಿಟ್ಟ ಉತ್ತರ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

ಗ್ರೇನೆಡ್ ದಾಳಿ ಬೆನ್ನಲ್ಲೇ ಗುಂಡಿನ ದಾಳಿ..!

ರಾತ್ರಿ ವೇಳೆಯಲ್ಲಿ ನರಿ ಬುದ್ದಿ ಪ್ರದರ್ಶಿಸಿದ ಪಾಕಿಸ್ತಾನ ಸೇನೆ ಸಿಆರ್‌ಪಿಎಫ್ ಪಡೆಗಳನ್ನು ಗುರಿಯಾಗಿಸಿ ಗ್ರೇನೆಡ್ ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಕಡೆಯಿಂದ ಗ್ರೇನೆಡ್ ದಾಳಿ ಆಗುತ್ತಿದ್ದಂತೆ ಕೂಡಲೆ ಭಾರತೀಯ ಸೈನಿಕರೂ ಪ್ರತಿ ದಾಳಿ ನಡೆಸಿದ್ದು, ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿಯೂ ನಡೆಸಿದ್ದರು. ಆದ್ದರಿಂದಲೇ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಭಾರತೀಯ ಸೈನಿಕರ ಕಡೆಯಿಂದ ಪಾಕಿಸ್ತಾನ ಯಾವ ರೀತಿ ಉತ್ತರ ಪಡೆಯಲಿದೆ ಎಂಬುದು ಕಾದುನೋಡಬೇಕಾಗಿದೆ..!

ಕಾಶ್ಮೀರದ ಚಿಂಕ್ರಾಲ್ ಮಿಹಲ್ಲಾ ಪ್ರದೇಶ ಸೇರಿದಂತೆ ಮೂರು ಕಡೆಗಳಲ್ಲಿ ದಾಳಿ ನಡೆಸಿದ ಪಾಕಿಸ್ತಾನ ಸೈನಿಕರಿಗೆ ಭಾರತದ ಕಡೆಯಿಂದಲೂ ದಿಟ್ಟ ಉತ್ತರ ರವಾಣೆಯಾಗಿದೆ ಎಂಬುದು ಸ್ಪಷ್ಟ..!!

–ಅರ್ಜುನ್

Tags

Related Articles

Close