ಪ್ರಚಲಿತ

2019ರಲ್ಲಿ ಪ್ರಧಾನ ಸೇವಕ ನರೇಂದ್ರ ಮೋದಿಯನ್ನು ಯಾಕೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಆರಿಸುತ್ತೇನೆ ಗೊತ್ತೇ?

ಸುಮಾರು 70 ವರ್ಷಗಳ ಕಾಲ ಕಾಂಗ್ರೆಸ್ಸಿಗರು ಭಾರತವನ್ನಾಳಿದರೂ ಯಾವ ಒಬ್ಬ ಭಾರತೀಯನೂ ನರೇಂದ್ರ ಮೋದೀಜೀಯ ಆಳ್ವಿಕೆಯನ್ನು ಹೊಗಳಿದಷ್ಟು ಯಾವ ಪ್ರಧಾನಿಯನ್ನೂ ಹೊಗಳಲು ಸಾಧ್ಯವೇ ಇಲ್ಲ!! ಯಾಕೆಂದರೆ ಮೊದೀಜೀಯ ಕಾರ್ಯ ಕ್ಷಮತೆ ಅಂತಹದ್ದು!! ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುವುದಂತೂ ಖಂಡಿತ!! ನರೇಂದ್ರ ಮೋದಿ ಕೇವಲ ರಾಜಕಾರಣಿ ಯಷ್ಟೇ ಅಲ್ಲ. ಅವರೊಬ್ಬ ಗುರು, ಮಾರ್ಗದರ್ಶಕ. ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಆಶಾಕಿರಣ. ಅದೆಷ್ಟೋ ಜನರು ಅವರನ್ನೇ ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿ ಆರಾಧಿಸುತ್ತಾರೆ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ದಾಮೋದರ ದಾಸ್ ಮೋದಿ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಯಾಗಿ ಬೆಳೆದು ನಿಂತಿರುವುದು ಸಾಮಾನ್ಯ ಸಂಗತಿಯಲ್ಲ.!! ಪ್ರತೀಯೊಂದು ವಿಚಾರದಲ್ಲೂ ವಿನೂತನ ವೈಶಿಷ್ಟತೆಗಳನ್ನು ಹೊಂದಿರುವ ಜಗತ್ತಿನ ಸರ್ವ ಶ್ರೇಷ್ಟ ನಾಯಕ. ಈ ವ್ಯಕ್ತಿ ಮಾತನಾಡಲು ನಿಂತರೆ ಇಡೀ ಜಗತ್ತೇ ಕಿವಿನಿವಿರಿಕೊಂಡು ಕುಂತಿರುತ್ತದೆ.

Related image

ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ ಸಮಯದಿಂದಲೂ ತನ್ನ ದೇಶವು ಸದೃಢತೆ ಹಾಗೂ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಅದೆಷ್ಟೋ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ. ಅಲ್ಲದೇ ತಾನು ದೇಶಕ್ಕೋಸ್ಕರ, ದೇಶದ ಜನತೆಗೋಸ್ಕರ ಮಾಡಿದ ಕೆಲಸಗಳ ಬಗ್ಗೆ ಯಾವತ್ತೂ, ಎಲ್ಲಿಯೂ ಕೂಡ ಹೇಳಿಕೊಳ್ಳದೆ ಇರುವ ವ್ಯಕ್ತಿ!! ಇನ್ನು ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಯಾವುದೇ ಕೆಲಸವನ್ನು ಮಾಡಿಲ್ಲ ಅಷ್ಟೇ ಅಲ್ಲದೇ ತಾವು ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಎಲ್ಲಿಯೂ ಕೂಡ ಹೇಳಿದ್ದೇ ಇಲ್ಲ!! ಎಲ್ಲರೂ ಒಂದೇ ಎನ್ನುತ್ತಾ ಯಾವ ಜಾತಿ ಧರ್ಮ ಎಂದು ಎಂದಿಗೂ ಭೇದ ಭಾವ ಮಾಡದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಪ್ರಧಾನ ಸೇವಕ ಮೋದೀಜೀ!! ಅದಕ್ಕಾಗಿಯೂ ಅನೇಕ ಜನ ಮುಸ್ಲಿಂರೂ ಕೂಡಾ ಮೋದೀಜೀಯೇ ಮುಂದಿನ ಬಾರಿಯೂ ಪ್ರಧಾನಿಯಾಗಬೇಕು ಎಂದು ಹಾರೈಸುತ್ತಿದ್ದಾರೆ!! ಭಾರತದ ಹೆಸರು ಅಜಾರಾಮರವಾಗಿರಬೇಕು ಎಂದು ಪಣತೊಟ್ಟು ನಿಂತ ಏಕೈಕ ಪ್ರಧಾನಿ ನಮ್ಮ ಮೋದೀಜೀ!! ಇಡೀ ವಿಶ್ವವನ್ನೇ ತಿರುಗಿ ಶತ್ರು ರಾಷ್ಟ್ರವನ್ನು ಕೂಡಾ ಮಿತ್ರ ರಾಷ್ಟ್ರವನ್ನಾಗಿ ಮಾಡಿದ ಮಹಾನ್ ನಾಯಕ ಈ ಮೋದೀಜೀ!!

Image result for modi

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮರ್ಥ್ಯವುಳ್ಳ ಧೀಮಂತ. ಭಾರತದ ಔನ್ನತ್ಯದ ಬಗ್ಗೆ ಮೋದಿ ಕಂಡಿರುವ ಕನಸುಗಳಲ್ಲಿ ಕೃಷಿ ಸಂಶೋಧನೆ, ಪರಿಸರದ ರಕ್ಷಣೆ, ಉದ್ಯಮಕ್ಕೆ ಪೂರಕ ಮೂಲಸೌಕರ್ಯ ಮತ್ತು ಜಾಗತಿಕ ಹಣ ಹೂಡಿಕೆ ಪ್ರಮುಖವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಜೀವನದಲ್ಲಿ ಅನಂತ ಆನಂದವನ್ನು ಹೊಂದಿರುವ ಸಂಪದ್ಭರಿತ ಸಮಾಜದ ಕನಸು ಹೊತ್ತಿದ್ದಾರೆ!!! ಅತ್ಯಂತ ಶಿಸ್ತಿನ ಸಿಪಾಯಿ ಆಗಿರುವ ನರೇಂದ್ರ ಮೋದಿ ಅವರು ಅದ್ಭುತ ಶಕ್ತಿ ಮತ್ತು ಕಾರುಣ್ಯದ ಪ್ರತೀಕವೂ ಆಗಿದ್ದಾರೆ. ಇದೇ ಮೋದೀಜೀ ಮುಂದಿನ ಬಾರಿ 2019ರಲ್ಲಿ ನಡೆಯುವ ಚುನಾವಣೆಯಲ್ಲಿ ಕೂಡಾ ಅವರೇ ಅಧಿಕಾರವನ್ನು ಸ್ವೀಕರಿಸಬೇಕು ಎನ್ನುವುದು ನನ್ನ ಆಸೆ!! ಯಾಕೆಂದರೆ ಅವರು ಪ್ರತೀಯೊಂದು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ!!

Related image

ಭಾರತವನ್ನು ಶಾಂತಿಯ ದೇಶವನ್ನಾಗಿ ಮಾಡಬೇಕು ಎನ್ನುವುದೇ ಮೋದಿಜಿಯ ಕನಸು!! ಅವರು ಸೈನ್ಯಕ್ಕೆ ನೀಡುತ್ತಿರುವ ಸವಲತ್ತು ಹಾಗೂ ಶತ್ರುರಾಷ್ಟ್ರವನ್ನು ಭಾರತದಿಂದ ರಕ್ಷಿಸಬೇಕು ಎಂದು ಅವರ ಪ್ರಯತ್ನಕ್ಕೆ ಒಂದು ಸೆಲ್ಯೂಟ್ ಹೊಡೆಯಲೇಬೇಕು!! ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಆಡಳಿತದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಇಡೀ ದೇಶವೇ ಬದಲಾವಣೆಯ ಗಾಳಿ ಬೀಸಿದೆ ಅಂತಾನೇ ಹೇಳಬಹುದು!! ಅದೊಂದು ಕಾಲವಿತ್ತು ದಿನಬೆಳಗಾದರೆ ಸಾಕು ಉಗ್ರರ ದಾಳಿಗೆ ಯೋಧರ ಸಾವು!! ಎನ್ನುವ ಶೀರ್ಷಿಕೆಯೊಂದಿಗೆ ಯೋಧರ ಸಾವಿನ ಸುದ್ದಿ ಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬಂದಿತೋ, ಅಂದಿನಿಂದ ಸೇನೆಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ರಾಜಾರೋಷವಾಗಿ ಹೇಳಬಹುದು. ಅಷ್ಟೇ ಅಲ್ಲದೇ, ನರೇಂದ್ರ ಮೋದಿ ಸರ್ಕಾರದಿಂದ ಉಗ್ರರ ವಿರುದ್ಧದ ದಾಳಿಗೆ ಪೆ     ಪ್ರೋತ್ಸಾಹಿಸಿತೋ, ಸರ್ಜಿಕಲ್ ದಾಳಿಗೆ ಅನುಮತಿ ನೀಡಿತೋ, ಅಂದಿನಿಂದ ಕಾಶ್ಮೀರದ ಪರಿಸ್ಥಿತಿಯೇ ಬದಲಾಗತೊಡಗಿತು!! ಮೋದಿ ಅಧಿಕಾರವಹಿಸಿದಾಗಿನಿಂದ ಕೇವಲ ನಾಲ್ಕು ವರ್ಷದಲ್ಲಿ 619 ಉಗ್ರರನ್ನು ಹತ್ಯೆ ಮಾಡಲಾಗಿದೆ!! ಅದಲ್ಲದೆ ಶತ್ರು ರಾಷ್ಟ್ರಗಳನ್ನು ಮಣಿಸಲು ಇಸ್ರೇಲ್, ಅಮೇರಿಕಾದಂತಹ ಬಲಿಷ್ಠ ರಾಷ್ಟ್ರದೊಂದಿಗೆ ಸೇನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಸಿದ್ಧವಾಗುತ್ತಿದಂತೆ ಅತ್ತ ಪಾಕ್ ನಡುಗುತ್ತಿದೆ!! ಇದಕ್ಕೆಲ್ಲಾ ಕಾರಣ ನಮ್ಮ ಮೋದೀಜೀ!! ಇಂತಹ ಬದಲಾವಣೆಯನ್ನು ನೋಡುತ್ತಿದ್ದಂತೆ ನನಗೆ ಈ ಮೋದೀಜೀಯೇ ಮುಂದಿನ ಬಾರಿಯೂ ಪ್ರಧಾನಿಯಾಗಬೇಕು ಎಂಬುದೇ ನನ್ನ ಅಭಿಪ್ರಾಯ!! ಅದಲ್ಲದೆ ಮೋದೀಜೀ ನಮ್ಮ ದೇಶವನ್ನು ರಕ್ಷಣೆ ಮಾಡುವ ಪ್ರತೀ ಸೈನಿಕನಿಗೂ ಮಾನಸಿಕ ಸ್ಥೈರ್ಯವನ್ನೂ ನೀಡುತ್ತದೆ!!

Related image

ನರೇಂದ್ರ ಮೋದಿ ಸರಕಾರವು ಜನರ ಕಲ್ಯಾಣಕ್ಕೋಸ್ಕರ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೇ, ನಾನಾ ರೀತಿಯ ಸವಲತ್ತುಗಳನ್ನು ಕೂಡ ನೀಡುತ್ತಾ ಬರುತ್ತಿದ್ದಾರೆ. ಇನ್ನು ಹಗಲಿರುಳು ಎನ್ನದೇ ದೇಶ ಕಾಯುವ ಸೈನಿಕರಿಗೆ ಸಮಾನ ರೀತಿಯ ಪಿಂಚಣಿಯನ್ನು ಒದಗಿಸುವ ನಿಟ್ಟಿನಲ್ಲಿ ಮೋದಿ ಸರಕಾರವು ಮಹಾತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿ ತಂದಿದೆ!! ಅದುವೇ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ (ಒನ್ ರ್ಯಾಂಕ್ ಒನ್ ಪೆನ್ಶನ್).

ನಿವೃತ್ತ ಯೋಧರು ದಶಕಗಳಿಂದ ಒತ್ತಾಯಿಸುತ್ತಿದ್ದ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ನರೇಂದ್ರ ಮೋದಿ ಸರಕಾರವು ಘೋಷಿಸಿದ್ದು, ಮೂಲಗಳ ಪ್ರಕಾರ ನಿವೃತ್ತ ಯೋಧರ ಬೇಡಿಕೆಯಂತೆ ಸರಕಾರ ಈ ಯೋಜನೆಯನ್ನು ಜುಲೈ 1, 2014ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲು ಒಪ್ಪಿದೆ. ಇನ್ನು ಈ ಯೋಜನೆಯನ್ನು ಜಾರಿಗೆ ತಂದರೆ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ರೂ.8,000 ಕೋಟಿಯಿಂದ ರೂ.10,000 ಕೋಟಿಯಷ್ಟು ಹೆಚ್ಚಿನ ಹೊರೆ ಬೀಳಲಿದ್ದು ಅದಕ್ಕೆ ಬೇಕಾದ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆಒಂದೇ ಶ್ರೇಣಿ ಹುದ್ದೆಯಲ್ಲಿ ನಿವೃತ್ತರಾದವರಿಗೆ ಸಮಾನ ಮೊತ್ತದ ಪಿಂಚಣಿ ಸಿಗಬೇಕೆಂಬುದು ಈ ಯೋಜನೆಯ ಆಶಯ. ಉದಾಹರಣೆಗೆ, 1964ರಲ್ಲಿ ಕರ್ನಲ್ ಆಗಿ ನಿವೃತ್ತರಾದವರಿಗೆ ಪಿಂಚಣಿ ಮೊತ್ತ 5 ಸಾವಿರ ರೂಪಾಯಿ ಇರಬಹುದು. 1984ರಲ್ಲಿ ಕರ್ನಲ್ ಆಗಿ ನಿವೃತ್ತರಾದವರಿಗೆ 8 ಸಾವಿರ ರೂ ಇರಬಹುದು. 2004ರಲ್ಲಿ ಕರ್ನಲ್ ಆಗಿ ನಿವೃತ್ತರಾದವರಿಗೆ 12 ಸಾವಿರ ಇರಬಹುದು. ಈ ಓಆರ್ ಓಪಿ ಯೋಜನೆ ಬಂದರೆ, ಯಾವುದೇ ವರ್ಷದಲ್ಲಿ ಕರ್ನಲ್ ಆಗಿ ನಿವೃತ್ತರಾದರೂ ಎಲ್ಲರಿಗೂ ಒಂದೇ ಮೊತ್ತದ ಪಿಂಚಣಿ ಕೊಡಲಾಗುತ್ತದೆ. ಅಂದರೆ, 1964 ರಲ್ಲಾಗಲೀ, 1984 ರಲ್ಲಾಗಲೀ, 2004 ರಲ್ಲಾಗಲೀ ಕರ್ನಲ್ ಆಗಿ ನಿವೃತ್ತರಾದವರಿಗೆ ತೀರ ಇತ್ತೀಚಿನ ಪಿಂಚಣಿ ಮೊತ್ತ ಅನ್ವಯವಾಗುವಂತೆ ಮಾಡಿ ದೇಶದ ಗಡಿ ಕಾಯುವ ಯೋಧರಿಗೆ ಇಂತಹ ಸೌಲಭ್ಯವನ್ನು ನೀಡುವ ಮೋದಿಜೀ ಸಕಾರವೇ ಮುಂದಿನ ಬಾರಿಯೂ ಅಧಿಕಾರವನ್ನು ವಹಿಸಬೇಕು!!

Image result for modi soldiers

ಶುದ್ಧ ಕುಡಿಯುವ ನೀರು, ನಿರಂತರ ವಿದ್ಯುತ್ ಸರಬರಾಜು, ಉತ್ತಮ ರಸ್ತೆಗಳು ಮತ್ತು ಶಾಲೆಗಳು ನಮ್ಮ ದೇಶದಲ್ಲಿ ಪ್ರತಿ ಗ್ರಾಮವನ್ನು ತಲುಪುವ ಮೂಲಭೂತ ಸೌಲಭ್ಯಗಳನ್ನು ನೀಡಿರುವುದು ಇದೇ ಮೋದೀಜೀ. ಮೋದಿ ಸರಕಾರವು ಮಾಡಿದ ಪ್ರಯತ್ನಕ್ಕೆ ಧನ್ಯವಾದಗಳು, ಇಂದು ಸೌರ ವಿದ್ಯುತ್ ಉತ್ಪಾದನೆಯ ಪ್ರಮುಖ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ.

ಅದಲ್ಲದೆ ಮೊದಿ ಸರಕಾರದ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಭಾರತದ ಕೋಟ್ಯಾಂತರ ಜನರಿಗೆ ಉದ್ಯೋಗ ದೊರಕಿಸಿಕೊಟ್ಟದ್ದು ಇದೇ ಮೋದೀಜೀ ಸರಕಾರ!! ಅದಲ್ಲದೆ ಪ್ರಧಾನಿ ನರೇಂದ್ರ ಮೊದೀಜಿಯವರು ಜಾರಿಗೆ ತಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಹರ್ ಘರ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ನಿಜವಾಗಿಯೂ ಇಡೀ ದೇಶದ ಜನತೆ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ!! ಮೋದಿ ಅಧಿಕಾರ ವಹಿಸಿದ ಬಳಿಕ ಖಂಡಿತವಾಗಿಯೂ ಇಡೀ ದೇಶ ಬದಲಾವಣೆಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆಯಾಗಬೇಕಾ?

Related image

ಆರೋಗ್ಯ ಸಮಸ್ಯೆ ಬಂದಾಗ ಹಣವಿಲ್ಲ ಎಂದು ಆರೋಗ್ಯ ಸಮಸ್ಯೆಯಿಂದ ಅಂದಿನಿಂದ ಇಂದಿನವರೆಗೆ ಅದೆಷ್ಟೋ ಜನ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ!! ಆದರೆ ಇದನ್ನೆಲ್ಲಾ ಕಂಡ ಮೋದೀಜೀ ಅದಕ್ಕೆಲ್ಲಾ ಬ್ರೇಕ್ ಹಾಕಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಇದುವರೆಗೆ ಯಾರೂ ಘೋಷಿಸಿದ ಪ್ರಪಂಚದಲ್ಲೇ ಮೊದಲ ಬಾರಿಗೆ ಆಯುಷ್ಮಾನ್ ಭಾರತ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದು ಬಡ ಜನತೆಗೆ ದೊಡ್ಡ ಮಟ್ಟದ ಮಾನಸಿಕ ಸ್ಥೈರ್ಯವನ್ನು ನೀಡಿದ್ದಾರೆ!! ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದು, ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. 10 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭಾರತದ ಯಾವುದೇ ಕುಟುಂಬವೂ ಆರೋಗ್ಯದ ತೊಂದರೆಯಿಂದ ಹಣದ ಸಮಸ್ಯೆಯನ್ನು ಎದುರಿಸಬಾರದು ಎಂಬ ಆಶೋತ್ತರವನ್ನು ಮೋದಿ ಸರ್ಕಾರ ಈಡೇರಿಸಿದೆ ಎಂದು ಹೇಳಬಹುದು!!

Related image

ಅದಲ್ಲದೆ ಪ್ರಧಾನಿ ಮೋದಿಯವರ ಜನಪ್ರಿಯ ಯೋಜನೆಯಾದ ಪ್ರಧಾನ ಮಂತ್ರಿ ಜನ-ಧನ ಯೋಜನೆ (ಪಿ.ಎಮ್.ಜೆ.ಡಿ.ವೈ)ಯು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ನಿರ್ವಹಿಸಿದೆ!! ದೇಶದ ಬಡ ಮತ್ತು ಅತಿ ಬಡ ವರ್ಗದವರಿಗೆ ಜನಧನ ಯೋಜನೆ
ಮುಖಾಂತರ ಬ್ಯಾಂಕ್ ಖಾತೆ ಹೊಂದಲು ಅವಕಾಶವನ್ನು ಕಲ್ಪಿಸಿದ್ದು, ಸ್ವಾವಲಂಬನಾ ಹೆಸರಿನಲ್ಲಿ ನಿವೃತ್ತಿಯಾದವರಿಗೆ ಸೌಲಭ್ಯ ಮತ್ತು ವಿಮೆ ಸೌಲಭ್ಯ ಕಲ್ಪಿಸಿ ಕೊಡಲಾಗಿರುವ ಜನಪ್ರಿಯ ಯೋಜನೆ ಇದಾಗಿದೆ!! 2014ರ ಆಗಸ್ಟ್ 28ರಂದು ಆರಂಭವಾದ ಈ ಯೋಜನೆಯ ಧ್ಯೇಯವಾಕ್ಯ “ಮೇರಾ ಖಾತಾ-ಭಾಗ್ಯ ವಿಧಾತಾ” ಎಂಬುದಾಗಿದೆ. ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಜನಧನ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಹಾಗಾಗಿ ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಮುಖ್ಯ ಗುರಿಯನ್ನು ಹೊಂದಿದೆ.

Image result for modi

ಕಾಂಗ್ರೆಸ್‍ನ ಭ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡಬೇಕೆಂದು ದೇವರೇ ನರೇಂದ್ರ ಮೋದಿಜೀಯವರನ್ನು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿದರೋ ಏನೋ… ಅಷ್ಟು ವರ್ಷಗಳ ಕಾಲ ಇಡೀ ಭಾರತವನ್ನು ಹಗರಣವನ್ನು ಮಾಡುವುದರ ಮೂಲಕ ಭಾರತದ ಆಸ್ತಿಯೆಲ್ಲಾ ನುಂಗಿ ನೀರು ಕುಡಿದಿದ್ದು ಈ ಕಾಂಗ್ರೆಸ್ ಸರಕಾರ!! ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿದ ಬಳಿಕ ದೇಶದ ಜಿಡಿಪಿ ಏರಿಕೆಯಾಗುತ್ತಿದೆ. ನೋಟು ನಿಷೇಧದ ಮೂಲಕ ಕಪ್ಪು ಹಣ ತಹಬಂದಿಗೆ ತರಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮೂಲಕ ದೇಶದ ತೆರಿಗೆ ವ್ಯವಸ್ಥೆ ಸುಧಾರಣೆಯಾಗಿದೆ. ಭಾರತದ ಘನತೆ ವಿಶ್ವಮಟ್ಟದಲ್ಲಿ ಬಾನೆತ್ತರಕ್ಕೆ ಹಾರಿದೆ. ಪಾಕಿಸ್ತಾನ, ಚೀನಾ ಬಾಲ ಮುದುರಿಕೊಂಡು ಕೂತಿವೆ. ಭ್ರಷ್ಟಾಚಾರ ಕಾಣೆಯಾಗಿವೆ ಇದಕ್ಕೆಲ್ಲಾ ಕಾರಣ ಯಾರೆಂದು ಕೇಳಿದರೆ ಹೆಮ್ಮೆಯಿಂದ ಹೇಳಲು ಖುಷಿಯಾಗುತ್ತದೆ ನಮ್ಮ ಮೋದೀಜೀ ಎಂದು!! ಹೀಗಾಗಿ ಇಂತಹ ಮೋದೀಜೀ ದೇವರು ನಮಗೆ ಕೊಟ್ಟ ಗಿಫ್ಟ್ ಅಂತಾನೇ ಹೇಳಬಹುದು!! ಇಡೀ ಭಾರತವನ್ನೇ ಬದಲಾಯಿಸಿದ ಈ ಮಹಾ ವೀರ ಮೋದಿಜೀ ಮುಂದಿನ 2019 ಚುನಾವಣೆಯಲ್ಲಿ ಗೆದ್ದು ಬರಲೇ ಬೇಕು!! ಇದು ನನ್ನ ಅಭಿಪ್ರಾಯ ಮಾತ್ರವಲ್ಲ ಬದಲಾಗಿ ಇಡೀ ಭಾರತೀಯರ ಅಭಿಪ್ರಾಯ ಅಂತಾನೇ ಹೇಳಬಹುದು!! ಜೀ ಮೋದೀಜೀ…

  • ಪವಿತ್ರ
Tags

Related Articles

Close