ಪ್ರಚಲಿತ

ಬ್ರೇಕಿಂಗ್! ಸಿಎಂ ಕುಮಾರಸ್ವಾಮಿಗೆ ರಾಜೀನಾಮೆ ಕೇಳಿದ ಪೊಲೀಸ್.! ಮುಖ್ಯಮಂತ್ರಿಗಳ ವಿರುದ್ಧ ಸಿಡಿದೆದ್ದ ಖಾಕಿ..!

ರಾಜ್ಯವೇ ನಮಗೆ ಬೇಡ ಎಂದು ಕಿತ್ತೆಸೆದಿದ್ದ ಜೆಡಿಎಸ್‌ ಪಕ್ಷ ಇಂದು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದೆ ಎಂದರೆ ಇದು ರಾಜ್ಯದ ದುರಾದೃಷ್ಟವೇ ಸರಿ. ಯಾಕೆಂದರೆ ಕಾಂಗ್ರೆಸ್ ಜೊತೆ ಸೇರಿಕೊಂಡ ಕುಮಾರಸ್ವಾಮಿ ಅವರು ಇದೀಗ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೂ ತಮಗೆ ಕಂಟಕ ಮಾತ್ರ ತಪ್ಪಿಲ್ಲ ಎಂಬುದು ಇನ್ನೂ ಪದೇ ಪದೇ ತಿಳಿಯುತ್ತಲೇ ಇದೆ. ಯಾಕೆಂದರೆ ಕುಮಾರಸ್ವಾಮಿ ಅವರು ತಾನು ಅಧಿಕಾರಕ್ಕೆ ಬಂದರೆ ಕೇವಲ ೨೪ ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು. ಕೇವಲ ಅಧಿಕಾರದ ಆಸೆಗೆ ಬಿದ್ದ ಕುಮಾರಣ್ಣ ಕಾಂಗ್ರೆಸ್ ಜೊತೆ ಸೇರಿಕೊಂಡರೇ ವಿನಃ , ರಾಜ್ಯದ ಮೇಲಿರುವ ಕಾಳಜಿಯಿಂದಲ್ಲ. ಆದ್ದರಿಂದಾಗಿ ಅಧಿಕಾರ ತನ್ನ ಕೈಗೆ ಬರುತ್ತಿದ್ದಂತೆ ತಾನು ಈ ಹಿಂದೆ ಹೇಳಿಕೊಂಡ ಮಾತುಗಳನ್ನೆಲ್ಲಾ ಮರೆತಿದ್ದಾರೆ. ಈಗಾಗಲೇ ಸಿಎಂ ಕುಮಾರಸ್ವಾಮಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕರ್ನಾಟಕ ಪೊಲೀಸರು ಕೂಡ ಸಿಡಿದೆದ್ದಿದ್ದಾರೆ..!

ಕುಮಾರಸ್ವಾಮಿ ಅವರು ತಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ರೈತರ ಸಾಲಮನ್ನಾ ಮಾಡದೇ ಇದ್ದರೆ ತನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದರು. ಆದರೆ ಕುಮಾರಣ್ಣ ಈವರೆಗೆ ಹೇಳಿದ ಮಾತು ಯಾವತ್ತೂ ನಡೆದುಕೊಂಡವರಲ್ಲ ಎಂಬುದು ಇಡೀ ರಾಜ್ಯವೇ ಒಪ್ಪಿಕೊಂಡ ವಿಚಾರ. ಆದರೆ ಇದೀಗ ಸಿಎಂ ಕುಮಾರಸ್ವಾಮಿ ವಿರುದ್ಧ ಪೊಲೀಸರೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ನೇರವಾಗಿ ರಾಜೀನಾಮೆ ನೀಡಿ ಎಂದು ತಮ್ಮ ಫೇಸ್‌ಬುಕ್ ನಲ್ಲಿ ಆಗ್ರಹಿಸಿದ್ದಾರೆ.!

ಮುಖ್ಯಮಂತ್ರಿಗಳೇ ಸಾಲಮನ್ನಾ ಮಾಡಿಲ್ಲ, ರಾಜೀನಾಮೆ ಯಾವಾಗ.?

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಧಾನಗೊಂಡ ಪೊಲೀಸ್ ಪೇದೆಯೊಬ್ಬರು ತಮ್ಮ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ , “ಮುಖ್ಯಮಂತ್ರಿಗಳೇ ಸಾಲಮನ್ನಾ ಮಾಡಿಲ್ಲ, ರಾಜೀನಾಮೆ ಯಾವಾಗ ?” ಎಂದು ಪ್ರಶ್ನಿಸಿದ್ದರು. ಯಾಕೆಂದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದಕ್ಕೂ ಮೊದಲೇ ಈ ರೀತಿ ಹೇಳಿಕೊಂಡಿದ್ದು, ತಾನು ಅಧಿಕಾರಕ್ಕೆ ಬಂದ ತಕ್ಷಣ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಈ ವಿಚಾರವಾಗಿ ಉಡಾಫೆ ತೋರುತ್ತಿರುವುದರಿಂದ ಪೊಲೀಸ್ ಪೇದೆಯೊಬ್ಬರು ತಮ್ಮ ಅಸಮಧಾನ ಹೊರಹಾಕಿದ್ದಾರೆ.!

ಕುಮಾರಸ್ವಾಮಿ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ರೈತರ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಲೇ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯದ ಜನತೆ ಭಾರೀ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಪೇದೆ ಅರುಣ್ ಡೊಳ್ಳಿನ್ ಎಂಬವರೂ ಕೂಡ ಹಾಕಿಕೊಂಡಿದ್ದರು.!

ಸಿಎಂ ವಿರುದ್ಧ ಕಿಡಿಕಾರಿದ ಪೊಲೀಸ್ ಪೇದೆ ಅಮಾನತು..!

ಕುಮಾರಸ್ವಾಮಿ ಅವರ ವಿರುದ್ಧ ತಮ್ಮ ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕಾಗಿ ಇದೀಗ ಅರುಣ್ ಡೊಳ್ಳಿನ್ ಅವರನ್ನು ತಮ್ಮ ಹುದ್ದೆಯಿಂದಲೇ ಅಮಾನತು ಮಾಡಿದ್ದಾರೆ. ಸಿಎಂಗೆ ರಾಜೀನಾಮೆ ನೀಡಿ ಎಂದು ಹೇಳಿಕೊಂಡಿದ್ದ ಖಾಕಿ ಅಧಿಕಾರಿಗೆ ಸಸ್ಪೆಂಡ್ ಭಾಗ್ಯ ದೊರಕಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಸರ್ವಾಧಿಕಾರದ ಆಡಳಿತ ಆರಂಭವಾಗಿದೆ. ಯಾಕೆಂದರೆ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತನ್ನ ವಿರುದ್ಧ ಯಾರೇ ಹೇಳಿಕೆ ನೀಡಿದರು ಅಂತವರಿಗೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದರು. ಇದೀಗ ಕುಮಾರಣ್ಣ ಕೂಡ ಸಿದ್ದರಾಮಯ್ಯನವರ ಹಾದಿಯನ್ನೇ ಅನುಸರಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ರಾಜ್ಯಭಾರ ನಡೆಸುವವರಿಗೆ ಮಾತ್ರವೇ ಎಂಬ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸರು ಕೂಡ ಮುಖ್ಯಮಂತ್ರಿಗಳ ವಿರುದ್ಧ ತಿರುಗಿಬಿದ್ದಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಆಡಳಿತ ನಡೆಸುತ್ತಾರೆ ನಮ್ಮ ಮುಖ್ಯಮಂತ್ರಿಗಳು ಎಂಬುದು ಕಾದುನೋಡಬೇಕಾಗಿದೆ..!

–ಅರ್ಜುನ್

Tags

Related Articles

Close