ಅಂಕಣ

ಮುಖ್ಯಧಾರೆಯ ಭಾರತೀಯ ಮಾಧ್ಯಮಗಳ ಹಿಂದೆ ನಿಂತು ತೆರೆಮರೆಯಲ್ಲಿ ಕಾರ್ಯ ನಡೆಸುತ್ತಿರುವ ಕೈಗಳು ಯಾವುವು ಎನ್ನುವುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೆ ಬೇಕು

ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರೆ “ಮಾಧ್ಯಮ” ಎನ್ನುವ ಕಾಲವೊಂದಿತ್ತು. ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದೆ ಪರಿಗಣಿಸಲಾಗುವ ವೃತ್ತಿ ಪತ್ರಿಕೋದ್ಯಮ. ಹಿಂದೆಲ್ಲ ಪತ್ರಿಕಾ ಧರ್ಮ ಎಷ್ಟು ಗಟ್ಟಿಯಾಗಿತ್ತೆಂದರೆ ಒಂದು ವರದಿಯಿಂದಾಗಿ ಸರಕಾರಗಳೆ ಉರುಳುತ್ತಿದ್ದವು. ವಸ್ತುನಿಷ್ಠ ಮತ್ತು ದೇಶಪ್ರೇಮಿ ಪತ್ರಕರ್ತರಿದ್ದ ಆ ಕಾಲದಲ್ಲಿ ದೇಶದ ಪ್ರಧಾನಮಂತ್ರಿಗಳೆ ಮಾಧ್ಯವೆಂದರೆ ಗಡಗಡ ನಡುಗುತ್ತಿದ್ದರು!! ಆದರೆ ಈಗ ಮಾಧ್ಯಮವೆಂಬುದು ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡು ಜನರ ಕೈಯಲ್ಲಿ “ಪ್ರೆಸ್ಟಿಟ್ಯೂಟ್” ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ನೀಚತನದ ಪರಮಾವಧಿಯನ್ನು ಮುಟ್ಟಿದೆ. “ಪೈಡ್ ನ್ಯೂಸ್” ನ ಈ ಕಾಲದಲ್ಲಿ ಹಣಕೊಟ್ಟವರ ಪರ ವರದಿ ಮಾಡುವ ಕೆಟ್ಟ ಚಾಳಿ ಬೆಳೆಸಿಕೊಂಡ ಮುಖ್ಯ ಧಾರೆಯ ಮಾಧ್ಯಮಗಳು ಆತ್ಮಸಾಕ್ಷಿಯನ್ನೇ ಮಾರಿಕೊಂಡಿವೆ. ಭಾರತವನ್ನು ಕೆಟ್ಟದಾಗಿ ಬಿಂಬಿಸುತ್ತಾ, ಸೇನೆಯ ಮೇಲೆ ಆರೋಪ ಹೊರಿಸುತ್ತಾ, ಹಿಂದೂಗಳ ವಿರುದ್ದ ಕತ್ತಿ ಮಸೆಯುವ ಈ ಮಾಧ್ಯಮಗಳ ಹಿಂದೆ “ಮಿಶನರಿ ಮಾಫಿಯಾ” ದ “ಕೈ”ಗಳು ಕೆಲಸ ಮಾಡುತ್ತಿವೆ ಎನ್ನುವುದು ಬಹುಜನರ ಆರೋಪ.

ಭಾರತದ ಮುಖ್ಯ ಧಾರೆಯ ಮಾಧ್ಯಮಗಳು ಮತ್ತು ಅದರ ಮಾಲೀಕರು:

ಎನ್.ಡಿ.ಟಿ.ವಿ: ಕಮ್ಯುನಿಸಂ ಅನ್ನು ಬೆಂಬಲಿಸುವ ಈ ಸಂಸ್ಥೆಯ ಮುಖ್ಯಸ್ಥ ಪ್ರಣವ್ ರಾಯ್. ಈತ ದೂರದರ್ಶನದ ನಿರ್ದೇಶಕನಾಗಿರುವಾಗ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದ. ಭಾರತದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಸಹೋದರ ಪ್ರಣವ್ ರಾಯ್. ಅವರ ಹೆಂಡತಿ ಮತ್ತು ಬ್ರಿಂಡಾ ಕಾರಟ್ ಸಹೋದರಿಯರು.

ಸಿಎನ್ಎನ್-ನ್ಯೂಸ್ 18: ಪಕ್ಕಾ ಕಮ್ಯೂನಿಷ್ಟರಾದ ರಾಜ್ ದೀಪ್ ಸರ್ದೇಸಾಯಿ ಮತ್ತು ಅವರ ಪತ್ನಿ ಸಾಗರಿಕಾ ಘೋಷ್ ಸಾರಥ್ಯದಲ್ಲಿ ನಡೆಸಲಾಗುವ ಈ ಸಂಸ್ಥೆಯ ಮುಖ್ಯಸ್ಥರು ಅಮೇರಿಕಾದಲ್ಲಿರುವ ಸದರ್ನ್ ಬ್ಯಾಪ್ಟಿಸ್ಟ್ ಚರ್ಚ್, ಹಾಗೂ ಚರ್ಚ್ ವಾರ್ಷಿಕವಾಗಿ ತನ್ನ ಚಾನಲಿನ ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣ ನಿಗದಿಪಡಿಸುತ್ತದೆ ಎನ್ನಲಾಗಿದೆ.

ಬಿಬಿಸಿ ನ್ಯೂಸ್: ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ನ್ಯೂಸ್ ಅಪ್ಪಟ ಬ್ರಿಟಷ್ ಪಬ್ಲಿಕ್ ಸಂಸ್ಥೆಯಿಂದ ನಡೆಸಲಾಗುವ ಚಾನೆಲ್. ವಿಶ್ವದಾದ್ಯಂತ ಪ್ರಸಾರವಾಗುವ ಈ ಚಾನಲ್ ಭಾರತದಲ್ಲಿ ಆಗುವ ಪುಟ್ಟ ಘಟನೆಗಳನ್ನೂ ದೊಡ್ಡದೆಂಬತೆ ಬಿಂಬಿಸಿ ಮಸಿ ಬಳಿಯುವ ಕೆಲಸ ಮಾಡುತ್ತಿರುತ್ತದೆ.

ಟೈಮ್ಸ್ ಗ್ರೂಪ್: ಟೈಮ್ಸ್ ಆಫ್ ಇಂಡಿಯಾ, ಮಿಡ್-ಡೇ, ನವ್-ಭಾರತ್ ಟೈಮ್ಸ್, ಹಿಂದುಸ್ತಾನ್ ಟೈಮ್ಸ್, ಫೆಮಿನಾ, ಫಿಲ್ಮ್ಫೇರ್, ವಿಜಯ ಕರ್ನಾಟಕ, ಟೈಮ್ಸ್ ನೌ ಇವೆಲ್ಲವನ್ನೂ ನಡೆಸುತ್ತಿರುವುದು ಬೆನೆಟ್ & ಕೋಲ್ಮನ್ ಸಂಸ್ಥೆ. ವಿದೇಶೀ ಸಂಸ್ಥೆಯ ಭಾರತೀಯ ಎಮ್.ಡಿ ಆಗಿ ದೆಹಲಿಯ ವಿನೀತ್ ಜೈನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ಟಾರ್ ಟಿವಿ: ರುಪರ್ಟ್ ಮರಡೋಕ್ ಸ್ಥಾಪಿಸಿದ ಸ್ಟಾರ್ ನೆಟವರ್ಕ್ ಸಂಸ್ಥೆಯಡಿಯಲ್ಲಿ ಕೆಲಸ ಮಾಡುವ ಎಲ್ಲಾ ಚಾನೆಲಗಳಿಗೆ ಹಣ ಒದಗಿಸುತ್ತಿರುವುದು ಆಸ್ಟ್ರೇಲಿಯಾದ ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಚರ್ಚ್ ಎನ್ನಲಾಗಿದೆ.

ದಿ ಹಿಂದು:  ಈ ಪತ್ರಿಕೆಯ ಪ್ರಕಾಶಕ ಎನ್.ರಾಮ್ ಅವರ ಹೆಂಡತಿ ಸ್ವಿಸ್ ನಾಗರಿಕಳು ಎನ್ನುತ್ತಾರೆ. ಜೋಶುವಾ ಸೊಸೈಟಿ, ಬರ್ನೆ, ಸ್ವಿಟ್ಜರ್ಲೆಂಡ್ ಮೂಲಕ ಹಣ ಸಂದಾಯವಾಗುವಾಗುತ್ತಿದೆ ಎನ್ನುವ ಅನುಮಾನಗಳಿವೆ.

ಪಬ್ಲಿಕ್ ಟಿವಿ: ರಂಗನಾಥ್ ಹೆಚ್.ಆರ್ ಸಾರಥ್ಯದಲ್ಲಿ ನಡೆಯುವ ಈ ಟಿವಿ ನ್ಯೂಸ್ ಚಾನೆಲ್ ನ ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎನ್ನುವ ಸರ್ಕಾರೇತರ ಕಂಪನಿಯಿಂದ ನಡೆಸಲಾಗುತ್ತಿದೆ. ಅಧಿಕೃತ ಬಂಡವಾಳ 10000000 ರುಪಾಯಿಗಳು ಮತ್ತು ಪಾವತಿಸಿದ ಬಂಡವಾಳ 4727370 ರೂಪಾಯಿಗಳು. “ಎನ್.ಜಿ.ಓ” ಗಳ ಮೇಲೆ ಗಧಾ ಪ್ರಹಾರ ಮತ್ತು ನೋಟ್ ಬ್ಯಾನ್ ಆದ ಬಳಿಕ ವ್ಯವಸ್ಥಾಪಕರ “ತಲೆ ತಿರುಗಿದಂತಾಗಿರುವ” ಎಲ್ಲಾ ಲಕ್ಷಣಗಳು ಮೇಲುನೋಟಕ್ಕೆ ಕಂಡು ಬರುತ್ತಿದೆ.

ಕಸ್ತೂರಿ ನ್ಯೂಜ್ 24×7: ಎಚ್.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸಾರಥ್ಯದಲ್ಲಿ ನಡೆಯುವ ಚಾನೆಲ್ ಜಾತ್ಯಾತೀತ ಜನತಾದಳದ ಮುಖವಾಣಿ.

ಇತ್ತೀಚಿನ ಹಲವಾರು ವರ್ಷಗಳಲ್ಲಿ ಬಹುತೇಕ ಹೆಚ್ಚಿನ ಮಾಧ್ಯಮಗಳು ಒಂದು ಪಕ್ಷದ ಮುಖವಾಣಿಯಂತೆ ವರ್ತಿಸುತ್ತಿರುವುದು ಮತ್ತು ಪಕ್ಷಪಾತ ಮಾಡುತ್ತಿರುವುದು ಈಗಾಗಲೇ ಎಲ್ಲರ ಗಮನಕ್ಕೆ ಬಂದಿರುವ ವಿಚಾರ. ಹೆಚ್ಚಿನೆಲ್ಲಾ ಮಾಧ್ಯಮಗಳಲ್ಲಿ ವಿವಿಧ ಪಕ್ಷಗಳ ಮುಖಂಡರ ಅಥವಾ ಉದ್ಯಮಿಗಳ ಹಣವಿರುತ್ತದೆ. ಇವರು ತೆರೆಯ ಮರೆಯ ಹಿಂದಿನಿಂದ ಕೆಲಸ ಮಾಡುತ್ತಿರುತ್ತಾರೆ. ವಿದೇಶದಿಂದ ಎನ್.ಜಿ.ಓ ಗಳ ಮೂಲಕವೂ ಭಾರತಕ್ಕೆ ಕೋಟ್ಯಂತರ ರುಪಾಯಿಗಳು ಹರಿದು ಬರುತ್ತವೆ. ಈ ಹಣವನ್ನು ಭಾರತ ವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳಲಾಗುವುದನ್ನು ಮನಗಂಡ ಮೋದಿ ಸರಕಾರ ಅಂತಹ ಎನ್.ಜಿ.ಒ ಗಳ ಬೆನ್ನು ಮೂಳೆ ಮುರಿದದ್ದು ಈ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದೆ. ಅದೇ ಕಾರಣಕ್ಕೆ ಈ ಮಾಧ್ಯಮಗಳು ಮೋದಿ ವಿರೋಧಿ ಕೆಲಸ ಮಾಡುತ್ತಾ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ.

ಭಾರತದ ಮುಖ್ಯಧಾರೆಯ ಮಾಧ್ಯಮಗಳು ಹಣಕ್ಕಾಗಿ ದೇಶಭಕ್ತಿಯನ್ನೆ ಮಾರಿಕೊಂಡದ್ದು ಗೊತ್ತಾಗಿ ಯಾವಾಗ ಜನರು ಸಾಮಾಜಿಕ ಜಾಲತಾಣಗಳತ್ತ ತಿರುಗಿದರೋ ಮುಖ್ಯಧಾರೆಯ ಮಾಧ್ಯಮಗಳ ಜಂಘಾಬಲವೆ ಉಡುಗಿ ಹೋಯಿತು. ತಮ್ಮ ಸುಳ್ಸುದ್ದಿ ಪ್ರಸಾರ ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾದಾಗ ಜಾಲತಾಣಗಳಲ್ಲಿ ಸುದ್ದಿ ತಿರುಚುವ ಕೆಲಸ ಮಾಡಲು ಶುರುವಿಟ್ಟುಕೊಂಡರು. ಮುಖ್ಯಧಾರೆಯ ಮಾಧ್ಯಮಗಳ ಜಾಲತಾಣ ಆವೃತ್ತಿಯ ಜೊತೆ ಜೊತೆಗೆ ದಿ ವಾಯರ್, ದಿ ಪ್ರಿಂಟ್, ದಿ ಕ್ವಿಂಟ್ ಎನ್ನುವ ಹೊಸ ವೆಬ್ ಸೈಟ್ ಗಳನ್ನು ಬಿಡುಗಡೆ ಮಾಡಿ ಸತ್ಯವನ್ನು ಒಂದೋ ಮರೆಮಾಚಿ ಇಲ್ಲವೆ ತಿರುಚಿ ಜನರ ಅಭಿಪ್ರಾಯಗಳನ್ನು ಬದಲಾಯಿಸುವ ಕಾರ್ಯ ವ್ಯವಸ್ತಿತವಾಗಿ ನಡೆಯುತ್ತಿದೆ.

ಭಾರತದ 3/4 ಮಾಧ್ಯಮಗಳು ಎಡಪಂಥೀಯ ವಿಚಾರಧಾರೆಯುಳ್ಳವುಗಳು ಆದ್ದರಿದಲೆ ಇವು ಬದ್ದ ಹಿಂದೂ ದ್ವೇಷಿ ಮನಸ್ಥಿತಿಯನ್ನು ಹೊಂದಿವೆ. ಮುಖ್ಯಧಾರೆಯ ಚಾನಲ್ ಗಳಲ್ಲಿ ಹಿಂದೂ ಸಂಸ್ಕೃತಿಯನ್ನು ಕೀಳಾಗಿ ತೋರಿಸುವ, ಮೂಢ ನಂಬಿಕೆಗಳಿಂದ ತುಂಬಿದ, ಇತಿಹಾಸವನ್ನು ತಿರುಚಿದ ಮತ್ತು ವಾಸ್ತವಕ್ಕೆ ದೂರವಾದ ಧಾರಾವಾಹಿಗಳು, ಕಾರ್ಯಕ್ರಮಗಳು ಪ್ರಸಾರವಾಗುವುದರ ಹಿಂದೆ ಈ ಮಾಫಿಯಾಗಳು ಕೆಲಸ ಮಾಡುತ್ತವೆ. ಜನರ ಮನಸ್ಸನ್ನು ಸಾಮೂಹಿಕವಾಗಿ ಏಕಕಾಲಕ್ಕೆ ತಲುಪಲಾಗುವುದು ಮಾಧ್ಯಮಗಳಿಂದ. ಜನರ ಅನಿಸಿಕೆ ಅಭಿಪ್ರಾಯಗಳನ್ನು ಅತಿ ವೇಗವಾಗಿ ಮತ್ತು ಸಾಮೂಹಿಕವಾಗಿ ಪರಿವರ್ತಿಸಲು ಈ ಮಾಧ್ಯಮಗಳು ಅಡ್ಡ ದಾರಿ ಹಿಡಿದಿರುವುದು ಪತ್ರಿಕೋದ್ಯಮದ ದುರ್ದೈವ.

-ಶಾರ್ವರಿ

Tags

Related Articles

Close