ಪ್ರಚಲಿತ

NGO ಗಳ ಮೇಲೆ ಮೋದಿ ಸರಕಾರದ ಹದ್ದಿನ ಕಣ್ಣು!! ವಿದೇಶದಿಂದ ಬರುವ ಹಣದ ಮೇಲ್ವಿಚಾರಣೆಗಾಗಿ ಆನ್ ಲೈನ್ ಪರಿಕರ ಪ್ರಾರಂಬಿಸಿ ಗುಳ್ಳೆ ನರಿಗಳು ಉಸಿರಾಡದಂತೆ ಮಾಡುತ್ತಿರುವ ಗೃಹ ಸಚಿವಾಲಯ!!

ಯೂಪಿಎ ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿದ್ದ, ವಿದೇಶದಿಂದ ಮೂಟೆಗಟ್ಟಲೆ ಹಣ ತೆಗೆದುಕೊಂಡು ದೇಶ ವಿರೋಧೀ ಚಟುವಟಿಕೆ ಮತ್ತು ಮತಾಂತರದ ದಂಧೆಗಳಲ್ಲಿ ಉಪಯೋಗವಾಗುತ್ತಿದ್ದ ಹಣದ ಮೂಲಗಳಾದ ಸರಕಾರೇತರ ಸಂಸ್ಥೆಗಳ ಬೆನ್ನು ಮೂಳೆ ಮುರಿದಿದೆ ಮೋದಿ ಸರಕಾರ. ಅಕ್ರಮವಾಗಿ ವಿದೇಶದಿಂದ ಹಣ ತೆಗೆದುಕೊಳ್ಳುತ್ತಿದ್ದ ಈ ಸರಕಾರೇತರ ಸಂಸ್ಥೆಗಳು ಮುಖ್ಯವಾಗಿ ಮಿಶನರಿಗಳ ಮತ್ತು ಜಿಹಾದಿಗಳ ಕೈಯಲ್ಲಿದ್ದವು. ಗೋವಿನ ರೂಪಿನ ಗುಳ್ಳೆನರಿಗಳು ಈ NGOಗಳನ್ನು ಚಲಾಯಿಸುತ್ತಿದ್ದವು ಎಂದು ತಿಳಿದ ಕೂಡಲೆ ಅಂತಹ ಸಂಸ್ಥೆಗಳ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ಕೈಗೊಂಡರು ಮೋದಿ. ‘ಚರ್ಚು ಪಾದ್ರಿಗಳು’ ಮತ್ತು ‘ಮದರಸಾ ಮೌಲ್ವಿಗಳು’ ಮೋದಿಯನ್ನು ಸೋಲಿಸಿ ಎನ್ನುವುದರ ಹಿಂದೆ ತಮ್ಮ ಮತಾಂತರ ಮತ್ತು ಜಿಹಾದ್ ದಂಧೆಗೆ ಮೋದಿ ಅಡ್ಡಗಾಲು ಹಾಕಿದ್ದಾರೆ ಎನ್ನುವ ಸಿಟ್ಟೆ ಕಾರಣ.

NGOಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಮೋದಿ ಸರಕಾರ, ಪೈಸೆ ಪೈಸೆಯ ಲೆಕ್ಕವಿಡಲಿದೆ. ಈ ನಿಟ್ಟಿನಲ್ಲಿ ಗೃಹ ಸಚಿವಾಲಯವು ಆನ್ಲೈನ್ ​​ಪರಿಕರವೊಂದನ್ನು ಪ್ರಾರಂಭಿಸಿದೆ. FCRA ಕಾಯ್ದೆ ಮೂಲಕ ಪಡೆದ ನಿಧಿಗಳನ್ನು ಮೇಲ್ವಿಚಾರಣೆ ಮಾಡಲು ಈ ಪರಿಕರವು ಶಾಸಕರು ಮತ್ತು ಅಧಿಕಾರಿಗಳನ್ನು ಸಕ್ರಿಯಗೊಳಿಸುತ್ತದೆ ಮತ್ತುನಿಧಿಗಳನ್ನು ಹೇಗೆ ಬಳಸಲಾಗುತ್ತಿದೆ ಎನ್ನುವುದರ ಮೇಲೆ ನಿಗಾ ಇಡುತ್ತದೆ. ಅಲ್ಲಿಗೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಸಂಸ್ಥೆಗಳ ಖೇಲ್ ಖತಮ್!! ಗುಳ್ಳೆನರಿಗಳು ಉಸಿರಾಡದಂತೆ ಮಾಡಿ ಬಿಟ್ಟಿದೆ ಮೋದಿ ಸರಕಾರ.

ದೇಶದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹಣವನ್ನು ಪಡೆಯಲು ಅನುಮತಿ ಹೊಂದಿರುವ 25,000 ಸಂಸ್ಥೆಗಳಿವೆ. ಈಗ ಪ್ರಾರಂಭಿಸಿರುವ ಆನ್ ಲೈನ್ ಪರಿಕರದ ಮೂಲಕ ಈ ಸಂಸ್ಥೆಗಳಿಗೆ ಹಣ ಎಲ್ಲಿಂದ ಬರುತ್ತದೆ ಮತ್ತು ಭಾರತದಲ್ಲಿ ಅದನ್ನು ಹೇಗೆ ಬಳಕೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಸರಕಾರಕ್ಕೆ ಮಾಹಿತಿ ದೊರೆಯುತ್ತದೆ. ಈ ವೆಬ್ ಸೈಟಿನ ಡ್ಯಾಶ್ ಬೋರ್ಡ್ ಅನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿದೆ. FCRA- ನೋಂದಾಯಿತ ಘಟಕಗಳ ಬ್ಯಾಂಕ್ ಖಾತೆಗಳೊಂದಿಗೆ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಮೂಲಕ ನೈಜ ಸಮಯದ ಆಧಾರದ ಮೇಲೆ ವಹಿವಾಟು ದತ್ತಾಂಶವನ್ನು ನವೀಕರಿಸಲು ಈ ಪರಿಕರ ಸಹಾಯ ಮಾಡುತ್ತದೆ. ಹಣದ ವಹಿವಾಟಿನಲ್ಲಿ ಒಂದು ರುಪಾಯಿಯ ವ್ಯತ್ಯಾಸವಾದರೂ ಕೂಡಲೆ ಸರಕಾರಕ್ಕೆ ತಿಳಿದು ಬಿಡುತ್ತದೆ!!

2015 ರಲ್ಲಿ, FCRA, 2010 ರ ಅಡಿಯಲ್ಲಿ ತಮ್ಮ ವಾರ್ಷಿಕ ಖಾತೆಗಳನ್ನು ಸಲ್ಲಿಸಲು ವಿಫಲವಾದ 10,300 ಸಂಸ್ಥೆಗಳಿಗೆ ಮೋದಿ ಸರ್ಕಾರವು ನೋಟಿಸ್ ಜಾರಿಗೊಳಿಸಿದೆ. ಹಣದ ದುರುಪಯೋಗದಲ್ಲಿ ತೊಡಗಿಸಿಕೊಳ್ಳುವ NGOಗಳ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಕಾನೂನನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಸರಕಾರ ಈಗಾಗಲೆ ಈ ನಿಟ್ಟಿನಲ್ಲಿ ಕಾರ್ಯ ತತ್ಪರವಾಗಿದೆ. ಮೋದಿ ಅವರ ಕಠಿಣ ನಿರ್ಧಾರದಿಂದಾಗಿ 2016-17 ಆರ್ಥಿಕ ವರ್ಷದಲ್ಲಿ ವಿದೇಶಿ ಬಂಡವಾಳವು 66% ನಷ್ಟು ಇಳಿದಿದೆ!! ತಮ್ಮ ಆದಾಯಕ್ಕೆ ಕೊಕ್ ಹಾಕಿದ ಮೋದಿಯನ್ನು ಬಾಯಿಗೆ ಬಂದಂತೆ ಬಯ್ಯದಿರುತ್ತವೆಯೆ ಗುಳ್ಳೆ ನರಿಗಳು?

JNU ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಹರಿದು ಬರುತ್ತಿದ್ದ ಹಣವನ್ನು ತಡೆಹಿಡಿಯಲಾಗಿದೆ. ಮೇಡಮ್ ಜಿ ಅವರ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಮ್ನೆಸ್ಟಿ ಇಂಡಿಯಾ ಸಂಸ್ಥೆಗೆ ಹರಿದು ಬರುತ್ತಿದ್ದ ಹಣ ಕೂಡಾ ನಿಂತು ಹೋಗಿದೆ. ಇನ್ನು ಗುಜರಾತ್ ದಂಗೆಯಲ್ಲಿ ಹಿಂದೂಗಳ ಹತ್ಯೆ ನಡೆದದ್ದನ್ನು ಮುಚ್ಚಿಟ್ಟು ಕೇವಲ ಮುಸ್ಲಿಮರ ಮಾರಣ ಹೋಮ ನಡೆದಿದೆ ಎಂದು ಸತ್ಯವನ್ನು ತಿರುಚಿ ಜಗತ್ತಿನೆದುರು ಭಾರತದ ಮರ್ಯಾದೆ ಕಳೆದ ತೀಸ್ತಾ ಸೆತಲ್ವಾಡ್ ನ ಸಬರಂಗ್ ಟ್ರಸ್ಟ್ ಮೇಲೆ ಪ್ರತಿಬಂಧ ಹೇರಲಾಗಿದೆ. ಕಳೆದ ಐದು ವರ್ಷಗಳ ಹಣಕಾಸು ದಾಖಲೆಯನ್ನು ತೋರಿಸಲು ವಿಫಲರಾದ ಎಲ್ಲಾ ಸಂಸ್ಥೆಗಳ ಮೇಲೆ ಪ್ರತಿಬಂಧ ಹೇರಲಾಗಿದೆ. ತಮ್ಮ ಬಟ್ಟಲಿಗೆ ಕಲ್ಲು ಹಾಕಿದ ಮೋದಿ ಮೇಲೆ ಗುಳ್ಳೆ ನರಿಗಳು ಕೆಂಡ ಕಾರದಿರುತ್ತವೆಯೆ?

ಮೋದಿ ಅವರ ಪ್ರತಿಯೊಂದು ನಿರ್ಧಾರವೂ ದೇಶದ ಹಿತಕ್ಕಾಗಿ ಮತ್ತು ದೇಶದ್ರೋಹಿಗಳ ಬಲಿಗಾಲಿ ಇರುತ್ತದೆ ಎನ್ನುವುದನ್ನು ಮರೆಯದಿರಿ. ಮೋದಿಗೆ ನೀಡುವ ಒಂದೊಂದು ಮತವೂ ದೇಶದ್ರೋಹಿಗಳನ್ನು ಜೈಲಿನೆಡೆಗೆ ತಳ್ಳುವ ಒಂದೊಂದು ಹೆಜ್ಜೆಯಾಗಿ ಪರಿಣಮಿಸುತ್ತದೆ ಎನ್ನುವುದನ್ನು ನೆನಪಿಡಿ. ಜನರು ಮೋದಿಯನ್ನು ಪ್ರೀತಿಸುತ್ತಾರೋ ಬಿಡುತ್ತಾರೋ ಅದು ಅವರವರ ವೈಯಕ್ತಿಕ ವಿಚಾರ ಆದರೆ ಧರ್ಮ ಮತ್ತು ದೇಶವನ್ನು ಪ್ರೀತಿಸುವ ಯಾವೊಬ್ಬ ವ್ಯಕ್ತಿಯೂ ದೇಶದ್ರೋಹಿಗಳಿಗೆ ಮತ ನೀಡಲಾರ. ಮೋದಿ ಅಂತಹ ದೇಶಭಕ್ತ ಬೇರೊಬ್ಬರಿಲ್ಲ. 2019 ಪ್ರಚಂಡ ಬಹುಮತದಿಂದ ದೇಶಭಕ್ತನನ್ನು ಗೆಲ್ಲಿಸಿ….

-ಶಾರ್ವರಿ

Tags

Related Articles

Close