ಪ್ರಚಲಿತ

ಜಗತ್ತಿನಲ್ಲಿ ಮುಸಲ್ಮಾನರಿಗೆ ಭಾರತವಷ್ಟೇ ಸೇಫ್: ಸಮೀಕ್ಷೆಯಿಂದ ಹೊರಬಿತ್ತು ಫಲಿತಾಂಶ!

ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಉಸಿರಾಡುವುದಕ್ಕೂ ಸಾಧ್ಯವಿಲ್ಲ. ಭಾರತ ಅಲ್ಪಸಂಖ್ಯಾತ ರಿಗೆ ಸೇಫ್ ಅಲ್ಲ ಎಂದು ನಾಲಿಗೆ ಎಳೆಯುವ ಕೆಲ ಬುದ್ಧಿಜೀವಿಗಳಿಗೆ ಒಂದು ಕಹಿ ಮತ್ತು ಕಟು ಸತ್ಯವನ್ನು ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್ (ಸಿ ಪಿ ಎ) ಎಂಬ ಸಂಸ್ಥೆ ಹೇಳಿದೆ.

ಅಲ್ಪಸಂಖ್ಯಾತರಿಗೆ ಭಾರತದಲ್ಲಿರುವಷ್ಟು ಭದ್ರತೆ ವಿಶ್ವದ ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ. ಅಲ್ಪಸಂಖ್ಯಾತರನ್ನು ಭಾರತದಲ್ಲಿ ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತಿದೆ ಎನ್ನುವ ವಾದ ಸತ್ಯಕ್ಕೆ ದೂರವಾದದ್ದು ಎಂದು ಜಗತ್ತಿನ ಅಲ್ಪಸಂಖ್ಯಾತರ ಬಗ್ಗೆ ಮಾಹಿತಿ ಕಲೆ ಹಾಕಿದ ಈ ಸಂಸ್ಥೆ ಕಂಡುಕೊಂಡಿದ್ದು, ಈ ಬಗ್ಗೆ ವರದಿಯನ್ನು ಸಹ ನೀಡಿದೆ.

ಭಾರತದಲ್ಲಿ ಅಲ್ಪಸಂಖ್ಯಾತರನ್ನು ತುಳಿಯಲಾಗುತ್ತಿದೆ. ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವಿಲ್ಲ ಎಂದೆಲ್ಲಾ ಭಾರತದ ಕೆಲ ಬುದ್ಧಿಜೀವಿಗಳು ಮತ್ತು ಪಾಕಿಸ್ತಾನ ಬೊಬ್ಬಿಡುತ್ತಲೇ ಇದೆ. ಪಾಕಿಸ್ತಾನವಂತೂ ಕಾಶ್ಮೀರದ ವಿಷಯದಲ್ಲಿಯೂ ಭಾರತದ ವಿರುದ್ಧ ಬೇಕಾಬಿಟ್ಟಿ ಮಾತನಾಡುತ್ತಲೇ ಇರುತ್ತದೆ. ಆ ಮೂಲಕ ಭಾರತದಲ್ಲಿ ಅಲ್ಪಸಂಖ್ಯಾತರ ಜೀವನದ ಬಗ್ಗೆ ವಿನಾಕಾರಣ ಗೊಂದಲ ಎಬ್ಬಿಸುವ ಕೆಲಸ ನಡೆಸುವ ಮೂಲಕ ಜಗತ್ತಿಗೆ ತಪ್ಪು ಸಂದೇಶ ಹರಡಲಾಗುತ್ತಿದೆ. ಇಂತಹ ಸುದ್ದಿಗಳು ಹುರುಳಿಲ್ಲದ್ದು ಎನ್ನುವ ವಿಚಾರವನ್ನು ಸಿ ಪಿ ಎ ತನ್ನ ವರದಿಯಲ್ಲಿ ತಿಳಿಸಿದೆ‌.

ಭಾರತದ ಪಾಟ್ನಾ ದಲ್ಲಿ ಈ ಸಂಸ್ಥೆಯ ಕಚೇರಿ ಇದ್ದು, ೧೧೦ ರಾಷ್ಟ್ರಗಳಲ್ಲಿ ಭಾರತವು ಧಾರ್ಮಿಕ ಅಲ್ಪಸಂಖ್ಯಾತರಿಗೆ ಅತ್ಯುತ್ತಮ ದೇಶವಾಗಿದೆ. ಭಾರತದ ಅಲ್ಪಸಂಖ್ಯಾತ ನೀತಿಯು ವಿವಿಧತೆಗೆ ಒತ್ತು ನೀಡುತ್ತದೆ. ಭಾರತದ ಸಂವಿಧಾನ ಅಲ್ಪಸಂಖ್ಯಾತರ ಪ್ರಗತಿ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತದೆ. ಇತರ ದೇಶಗಳ ಹಾಗೆ ಭಾರತವು ಅಲ್ಪಸಂಖ್ಯಾತರ ಮೇಲೆ ಯಾವುದೇ ನಿಬಂಧನೆಗಳನ್ನು ಹಾಕಿಲ್ಲ. ಭಾರತದ ಅಲ್ಪಸಂಖ್ಯಾತ ನೀತಿಯನ್ನು ಇತರ ದೇಶಗಳಿಗೆ ಮಾದರಿಯಾಗಿ ಬಳಕೆ ಮಾಡಬಹುದು ಎಂದು ಸಹ ಇದು ವರದಿಯಲ್ಲಿ ಉಲ್ಲೇಖಿಸಿದೆ.

ಒಟ್ಟಿನಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಚಳಿಗಾಲ ಇಲ್ಲ ಎಂದು ಬೊಬ್ಬಿಡುವವರಿಗೆ, ಅಲ್ಪಸಂಖ್ಯಾತರಿಗೆ ಭಾರತ ನೀಡಿರುವಷ್ಟು ಸ್ವಾತಂತ್ರ್ಯ ಬೇರ್ಯಾವ ರಾಷ್ಟ್ರದಲ್ಲೂ ಇಲ್ಲ ಎನ್ನುವ ಸಿಪಿಎ ವರದಿ ಉರಿವಲ್ಲಿಗೆ ಉಪ್ಪಿಟ್ಟಂತಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close