ಪ್ರಚಲಿತ

ಸಿಎಎ ಬಗ್ಗೆ ವಿರೋಧಿಗಳು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ: ರಾಜನಾಥ್ ಸಿಂಗ್

ಈ ಲೋಕಸಭಾ ಚುನಾವಣೆಯಲ್ಲಿ ಜನರ ಹಾದಿ ತಪ್ಪಿಸುವ ಪ್ರಯತ್ನಕ್ಕೆ ಬಿಜೆಪಿ ವಿರೋಧಿ ಪಕ್ಷಗಳಿಗೆ ಸಿಕ್ಕಿರುವ ಅಸ್ತ್ರ ಸಿಎಎ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆ.

ಬಿಜೆಪಿ ತನ್ನ ಹಿಂದಿನ ಲೋಕಸಭಾ ಚುನಾವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಸಿಎಎ ಜಾರಿ ಯನ್ನು ಈ ಬಾರಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ಮತ್ತೊಂದು ಮಹತ್ವದ ಗುರಿ ತಲುಪಿದೆ. ಇದು ವಿರೋಧ ಪಕ್ಷಗಳು, ಪ್ರಧಾನಿ ಮೋದಿ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಾವು ನೀಡಿದ ಪುಟ್ಟ ಪುಟ್ಟ ಭರವಸೆಗಳನ್ನೇ ಈಡೇರಿಸಲು ಹೆಣಗಾಡುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಾತ್ರ ನೀರು ಕುಡಿದ ಹಾಗೆ ಸರಳವಾಗಿ ಇಂತಹ ಮಹತ್ವದ ನಿಲುವುಗಳನ್ನು ಸಾಧಿಸಿ ತೋರಿಸುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚುನಾವಣೆಯಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಯಾವುದೇ ಸಾಧನೆ ಮಾಡದ ಬಿಜೆಪಿ ವಿರೋಧಿ ಪಕ್ಷಗಳು, ಬಿಜೆಪಿಯನ್ನು ದೂರುವುದನ್ನೇ ತಮ್ಮ ಮುಖ್ಯ ಅಜೆಂಡಾವಾಗಿ ತೆಗೆದುಕೊಂಡಿವೆ. ಸಿಎಎ ಕುರಿತಾಗಿ ಅಪಪ್ರಚಾರ ಎಬ್ಬಿಸಿ, ಜನರ ದಾರಿ ತಪ್ಪಿಸುವ ಮೂಲಕವಾದರೂ ಬಿಜೆಪಿಗೆ ಮತದಾರರು ಒಲಿಯದ ಹಾಗೆ ಮಾಡಬೇಕು ಎನ್ನುವ ದೃಷ್ಟಿಯಿಂದ ಸುಳ್ಳು ಬಿತ್ತುವ ಕೆಲಸಗಳನ್ನೂ ಮಾಡುತ್ತಿರುವುದು ಹಾಸ್ಯಾಸ್ಪದ‌.

ಹೀಗೆ ಸಿಎಎ ವಿರುದ್ಧ ಜನರಲ್ಲಿ ಗೊಂದಲ ಸೃಷ್ಟಿಸಿ, ಬಿಜೆಪಿಯನ್ನು ಕೆಟ್ಟದಾಗಿ ಬಿಂಬಿಸಲು ಹೊರಟ ವಿಪಕ್ಷಗಳಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ತಿರುಗೇಟು ನೀಡಿದ್ದಾರೆ.

ಸಿಎಎ ತಿದ್ದುಪಡಿ ಕಾಯ್ದೆಯಿಂದಾಗಿ ಯಾವೊಬ್ಬ ಭಾರತೀಯನೂ ಸಹ ಭಾರತದ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೆಯೇ ಬಿಜೆಪಿಯು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಭವ್ಯ ಮಂದಿರ ನಿರ್ಮಾಣ ಕಾರ್ಯ ಸೇರಿದಂತೆ ಹಲವಾರು ಮಹತ್ವದ ಭರವಸೆಗಳನ್ನು ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲ ಎಂಬ ಹಾಗೆ ಈಡೇರಿಸಿದೆ. ಆ ಮೂಲಕ ನುಡಿದಂತೆ ನಡೆದ ಪಕ್ಷ ಎನ್ನುವ ಹಿರಿಮೆಗೆ ಪಾತ್ರವಾಗಿದೆ ಎಂದಿದ್ದಾರೆ.

ನಾವು ಹಿಂದಿನ ಲೋಕಸಭಾ ಚುನಾವಣಾ ಸಮಯದಲ್ಲಿ ದೇಶದಲ್ಲಿ ಸಿಎಎ ಜಾರಿಗೆ ತರುವ ಭರವಸೆ ನೀಡಿದ್ದೆವು. ಇದನ್ನು ಸದ್ಯ ಜಾರಿಗೂ ತಂದಿದ್ದೇವೆ. ಈ ದೇಶದ ಯಾವುದೇ ಹೆಣ್ಣು ಮಗಳಾದರೂ, ಆಕೆ ನಮ್ಮ ಮನೆಯ ಹೆಣ್ಣು ಮಗಳಿದ್ದ ಹಾಗೆ‌. ಅವಳ ನೋವು ನಮಗೂ ನೋವು ನೀಡುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ನೋವು ನೀಡುತ್ತಿದ್ದ ತ್ರಿವಳಿ ತಲಾಖ್ ಅನ್ನು ನಾವು ರದ್ದು ಮಾಡಿ, ಆ ಮೂಲಕ ಅವರಿಗೆ ನ್ಯಾಯ ಒದಗಿಸಿ ಕೊಟ್ಟೆವು ಎಂದು ತಿಳಿಸಿದ್ದಾರೆ.

ಈಗ ಸಿಎಎ ಗೆ ಸಂಬಂಧಿಸಿದ ಹಾಗೆ ಕಾಂಗ್ರೆಸ್ ಮತ್ತು ಡಿ ಎಂ ಕೆ ಸಮಾಜದಲ್ಲಿ ಗೊಂದಲ ಹುಟ್ಟಿಸುವ ಕೆಲಸ ಮಾಡುತ್ತಿವೆ. ಸಿಎಎ ಬಗ್ಗೆ ಭಯ ಬೇಡ. ಈ ದೇಶದ ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಇನ್ಯಾವುದೇ ಧರ್ಮವಾಗಿರಲಿ, ಅವರು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಭಾರತವನ್ನು ದುರ್ಬಲ ದೇಶ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಭಾರತ ದುರ್ಬಲ ದೇಶವಲ್ಲ. ದೇಶದ ಭೂ ಪಡೆ, ವಾಯು ಪಡೆ ಮತ್ತು ನೌಕಾ ಪಡೆಗಳ ಮೇಲೆ ನಮ್ಮೆಲ್ಲರಿಗೂ ಅಚಲ ವಿಶ್ವಾಸ ಇದೆ. ಯಾರಾದರೂ ಕಣ್ಣ ರೆಪ್ಪೆ ಅಲ್ಲಾಡಿಸಿದರೆ ಸಾಕು, ಅವರಿಗೆ ಪ್ರತ್ಯುತ್ತರ ನೀಡುವಷ್ಟು ನಾವು ಬಲಿಷ್ಟರು ಎಂದು ಅವರು ನಮ್ಮ ಸೇನಾ ವ್ಯವಸ್ಥೆಯ ಶಕ್ತಿಯನ್ನು ಕೊಂಡಾಡಿದ್ದಾರೆ.

Tags

Related Articles

Close