ಪ್ರಚಲಿತ

ಎಕ್ಸಿಟ್ ಪೋಲ್ ನೋಡಿ ಎಕ್ಸೈಟ್ ಆದ ವಿಪಕ್ಷಗಳು.! ಸಮೀಕ್ಷೆ ನಂತರ ಕಾಂಗ್ರೆಸ್ಸಿನಲ್ಲಿ ತಳಮಳ-ಮಧ್ಯಪ್ರದೇಶ ಹಾಗೂ ಕರ್ನಾಟಕದ ಸರ್ಕಾರದ ಭವಿಷ್ಯ ಏನಾಗುತ್ತೆ?

ಭಾರತೀಯ ಜನತಾ ಪಕ್ಷದ ಅಬ್ಬರ ನೋಡಿ ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ಪತರುಗುಟ್ಟಿ ಹೋಗಿದ್ದವು. ಇದೀಗ ಚುನಾವಣೋತ್ತರ ಸಮೀಕ್ಷೆಗಳನ್ನು ಕಂಡು ಇಡೀ ರಾಜಕಾರಣವೇ ತಲ್ಲಣವಾಗಿದೆ. ವಿರೋಧ ಪಕ್ಷಗಳಲ್ಲಿ ತಳಮಳವುಂಟಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕಂತೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇನ್ನಾವ ಅಸ್ತ್ರವನ್ನು ಪ್ರಯೋಗಿಸುವುದು ಎಂಬ ಚಿಂತೆ ಶುರುವಾಗಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯಲಿದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗೋದು ಖಚಿತ ಎಂಬ ಫಲಿತಾಂಶ ಬಂದಿದ್ದೇ ಬಂದಿದ್ದು ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿದರೆ ಇತ್ತ ವಿರೋಧ ಪಕ್ಷಗಳೀಗೆ ನಡುಕೆ ಉಂಟಾಗಿದೆ. ಇದು ಕೇವಲ ಲೋಕಸಭೆಗೆ ಮಾತ್ರವೇ ಸೀಮಿತವಾಗದೆ ಎರಡು ರಾಜ್ಯಗಳ ಸರ್ಕಾರಗಳ ಬುಡಕ್ಕೂ ಕೊಡಲಿಯೇಟು ಬೀಳುವ ಲಕ್ಷಣಗಳು ಗೋಚರಿಸುತ್ತಿದೆ.

ಕಳೆದೊಂದು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಕರ್ನಾಟಕ ಸರ್ಕಾರ ಈ ಬಾರಿ ಪತನವಾಗುವ ಎಲ್ಲಾ ಸಾಧ್ಯತೆಗಳೂ ನಿಶ್ಚಳವಾಗಿದೆ. ಈ ಬಾರಿ ಕರ್ನಾಟಕ ಸರ್ಕಾರ ಪತನಗೊಂಡು ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುತ್ತೆ ಎಂದು ಹೇಳಲಾಗಿದ್ದು ಇದಕ್ಕೆ ಪೂರಕ ವಾತಾವರಣವನ್ನು ಬಿಜೆಪಿ ನಿರ್ಮಿಸಿದೆ ಎಂದು ಸ್ವತಃ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. 20ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದು ಕರ್ನಾಟಕದ ಕಥೆಯಾದರೆ ಇನ್ನು ಮಧ್ಯಪ್ರದೇಶದ ಕಥೆಯೂ ಅಚ್ಚರಿಯ ಬೆಳವಣಿಗೆಯನ್ನು ಕಂಡಿದೆ. ಮಧ್ಯಪ್ರದೇಶದಲ್ಲಿ ಬಹುಮತಕ್ಕೆ ಕೆಲವೇ ಸ್ಥಾನಗಳಿಂದ ವಂಚಿತವಾಗಿದ್ದ ಬಿಜೆಪಿ ಈ ಬಾರಿ ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಪಾಲರನ್ನು ಭೇಟಿಯಾಗಲು ನಿರ್ಧರಿಸಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಸರ್ಕಾರಕ್ಕೆ ಬಹುಮತ ಇಲ್ಲ, ಹೀಗಾಗಿ ಬಹುಮತ ಸಾಭೀತುಗೊಳಿಸಬೇಕು ಎಂದು ರಾಜ್ಯಪಾಲರಿಗೆ ಬಿಜೆಪಿ ವಿನಂತಿಸಲು ಮುಂದಾಗಿದೆ. ಚುನಾವಣೋತ್ತರ ಸಮೀಕ್ಷೆಯಿಂದ ಕಂಗಾಲಾಗಿರುವ ಬಿ.ಎಸ್.ಪಿ. ಕಮಲ್ ನಾಥ್‍ಗೆ ನೀಡಿರುವ ಬೆಂಬಲವನ್ನು ವಾಪಾಸ್ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

23ಕ್ಕೆ ಫಲಿತಾಂಶ ಹೊರಬೀಳಲಿದ್ದು ಅಂದು ಲೋಕಸಭೆಯೊಂದಿಗೆ ಎರಡು ರಾಜ್ಯಗಳ ವಿಧಾನಸಭೆಯ ಲೆಕ್ಕವೂ ಹೊರಬೀಳುವ ಲಕ್ಷಣಗಳೂ ಗೋಚರಿಸುತ್ತಿದೆ. ಹೀಗಾಗಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಗಾದಿಗೆ ಸಖತ್ತಾಗಿಯೇ ಸರ್ಕಸ್ ನಡೆಸುತ್ತಿದ್ದಾರೆ.

-ಏಕಲವ್ಯ

Tags

Related Articles

FOR DAILY ALERTS
Close