ಅಂಕಣ

884 ವರ್ಷಗಳಿಂದ ರಾಮಾನುಜಾಚಾರ್ಯರ ಮೂಲ ಶರೀರವನ್ನು ಯಾವುದೇ ರಾಸಾಯನಿಕಗಳ ಪ್ರಯೋಗವಿಲ್ಲದೆ ಸಂರಕ್ಷಿಸಿ ಇಡಲಾಗಿದೆಯೆಂದರೆ ರಂಗನಾಥನ ಮಹಿಮೆ ಎಷ್ಟಿರಬೇಕು!!

ನಂಬಲೇಬೇಕಾದ ಆದರೆ ನಂಬಲು ಸಾಧ್ಯವೇ ಇಲ್ಲದ ಸತ್ಯವಿದು. ವೈಷ್ಣವ ಪರಂಪರೆಯ ದಾರ್ಶನಿಕರಲ್ಲಿ ಒಬ್ಬರಾದ ವಿಶಿಷ್ಟಾದ್ವೈತ ಪ್ರತಿಪಾದಕ, ಸನಾತನ ಧರ್ಮ ರಕ್ಷಕ ಭಗವಾನ್ ರಾಮಾನುಜಾಚಾರ್ಯರ ಮೂಲ ಶರೀರವನ್ನು ಕಳೆದ 884 ವರ್ಷಗಳಿಂದ ಜೋಪಾನವಾಗಿಡಲಾಗಿದೆ!! ತಮ್ಮ ಆರಾಧ್ಯ ರಾಮಾನುಜಾಚಾರ್ಯರ ಶರೀರವನ್ನು ಇನ್ನೂ ಸುಸ್ಥಿತಿಯಲ್ಲೇ ಇಡಲಾಗಿದೆ ಎನ್ನುವ ವಿಚಾರವೇ ಹೆಚ್ಚಿನ ವೈಷ್ಣವರಿಗೆ ಗೊತ್ತಿಲ್ಲ. ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂಲ ಶರೀರವನ್ನು ಇಡಲಾಗಿದೆ.

ವೈಯಕ್ತೀಕರಣ ತತ್ತ್ವಶಾಸ್ತ್ರದ ದೃಢವಾದ ಪ್ರತಿಪಾದಕರಾದ ಆಚಾರ್ಯರು ಭಗವಂತ ಮತ್ತು ವೈಯಕ್ತಿಕ ಆತ್ಮಗಳು ಗುಣಾತ್ಮಕವಾಗಿ ಒಂದೇ ಆದರೂ, ಅವುಗಳ ನಡುವೆ ವ್ಯತ್ಯಾಸವಿದೆ, ಏಕೆಂದರೆ ಭಗವಂತ ಅನಂತ ಮತ್ತು ಜೀವಂತ ಘಟಕಗಳು ಅನಂತ ಸೂಕ್ಷ್ಮ ಎನ್ನುವುದನ್ನು ತಮ್ಮ ಅಪಾರ ಬುದ್ದಿ ಮತ್ತೆಯ ಮೂಲಕ ಜಗತ್ತಿಗೆ ಸಾರಿದರು. ಭಾರತದ ಉದ್ದಗಲಕ್ಕೂ ವ್ಯಾಪಕವಾಗಿ ಪ್ರಯಾಣ ಬೆಳೆಸಿ ಆಚಾರ್ಯರು ವ್ಯಕ್ತಿಗತವಾದವನ್ನು ಬೋಧಿಸಿ, ಏಕತಾವಾದ ತತ್ತ್ವಶಾಸ್ತ್ರದ ಬಗ್ಗೆ ಚರ್ಚೆಗಳನ್ನೂ ಕೈಗೊಂಡಿದ್ದರು. ವೇದಾಂತ-ಸೂತ್ರದ ಕುರಿತಾದ ಅವನ ವ್ಯಾಖ್ಯಾನವನ್ನು ಶ್ರೀ-ಭಾಸ್ಯ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ವೈಶ್ಣವ ಪರಂಪರೆಯ ಎಪ್ಪತ್ತನಾಲ್ಕು ಕೇಂದ್ರಗಳನ್ನು ಸ್ಥಾಪಿಸಿ ಏಳು ನೂರು ಸನ್ಯಾಸಿಗಳು, ಹನ್ನೆರಡು ಸಾವಿರ ಬ್ರಹ್ಮಚಾರಿಗಳು, ಸಾವಿರಾರು ರಾಜ ಮನೆತನ ಮತ್ತು ಶ್ರೀಮಂತ ಭೂಮಾಲೀಕರು ಸೇರಿದಂತೆ ಮೂರು ನೂರು ಕೆಟ್ಟಿ- ಅಮ್ಮನಿ ಮಹಿಳೆಯರಿಗೆ ಸಂನ್ಯಾಸ ದೀಕ್ಷೆ ನೀಡಿ ಧರ್ಮ ರಕ್ಷಣೆಯ ಕಾರ್ಯ ಕೈಂಗೊಡರು ಆಚಾರ್ಯ ರಾಮನುಜರು.

ತಮ್ಮ120 ವರ್ಷಗಳ ಜೀವಿತಾವಧಿಯಲ್ಲಿ 80 ವರ್ಷಗಳನ್ನು ಆಚಾರ್ಯರು ಶ್ರೀರಂಗಮ್ ನಲ್ಲೇ ಕಳೆದಿರುತ್ತಾರೆ. ಶ್ರೀರಂಗಮ್ ನ ರಂಗನಾಥ ಸ್ವಾಮಿ ಸನ್ನಿಧಾನದಲ್ಲಿ 1137 ರಲ್ಲಿ ರಾಮಾನುಜರು ದೈವಾಧೀನರಾಗುತ್ತಾರೆ. ಸಮಾಧಿಯ ಬಳಿಕ ಇವರ ಶರೀರವನ್ನು ಪಚ್ಚೆ ಕರ್ಪೂರ, ಚಂದನ ಮತ್ತು ಕುಂಕುಮದ ವಿಶೇಷ ಲೇಪನ ಬಳಸಿ ಸಂರಕ್ಷಿಸಲಾಗಿದೆ ಎಂದರೆ ಆಶ್ಚರ್ಯವಾಗುತ್ತದೆ! ಶರೀರಕ್ಕೆ ಯಾವುದೇ ತೆರನಾದ ರಾಸಯನಿಕ ಲೇಪನಗಳನ್ನು ಬಳಸಲಾಗಿಲ್ಲ. ಬಲ್ಲವರ ಪ್ರಕಾರ ಕಳೆದ 884 ವರ್ಷಗಳಿಂದ ವರ್ಷಕ್ಕೆ ಎರಡು ಬಾರಿ ಈ ಲೇಪವನ್ನು ಶರೀರಕ್ಕೆ ಲೇಪಿಸಲಾಗುತ್ತದೆ. ಈ ಲೇಪದ ಕಾರಣ ಆಚಾರ್ಯರ ಶರೀರ ಸಂಪೂರ್ಣ ಕೇಸರಿ ವರ್ಣಕ್ಕೆ ಪರಿವರ್ತಿತವಾಗುತ್ತದೆ.

ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂರ್ತಿಯ ಹಿಂದುಗಡೆ ಅವರ ಮೂಲ ಶರೀರವನ್ನು ಇಡಲಾಗಿದೆ. ಸರ್ವ ಸಮಯದಲ್ಲೂ ಭಕ್ತಾದಿಗಳು ದರ್ಶನ ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಸ್ವಯಂ ರಂಗನಾಥ ಸ್ವಾಮಿಯ ಆಜ್ಞಾನುಸಾರ ಶರೀರವನ್ನು ದಕ್ಷಿಣ-ಪಶ್ಚಿಮಾಭಿಮುಖವಾಗಿ ಇಡಲಾಗಿದೆ ಎಂದು ಹೇಳಲಾಗುತ್ತದೆ. ಈಜಿಪ್ಟಿನ ಮಮ್ಮಿ ಮತ್ತು ಗೋವಾದ ಕ್ಸೇವಿಯರ್ ನ ಶರೀರಗಳನ್ನು ಸಂರಕ್ಷಿಸಲು ರಾಸಾಯನಿಕಗಳನ್ನು ಬಳಸಲಾಗಿದೆ. ಆದರೆ ರಾಮಾನುಜಾಚಾರ್ಯರ ಶರೀರವನ್ನು ಕೇವಲ ಕರ್ಪೂರ, ಚಂದನ ಮತ್ತು ಕುಂಕುಮ ಮಿಶ್ರಣದ ಲೇಪದಿಂದ ಸಂರಕ್ಷಿಸಿರುವುದು ಬಿಡಸಲಾಗದ ಕಗ್ಗಂಟಾಗಿ ವಿಜ್ಞಾನಿಗಳಿಗೂ ತಲೆನೋವಾಗಿದೆ.

ಭಗವಂತನ ಲೀಲೆ ಭಗವಂತನೇ ಬಲ್ಲ, ಹುಲು ಮಾನವರಿಗೆ ಆತನ ಮಹಿಮೆ ತಿಳಿಯುವುದೇ? ಈ ಶರೀರದ ಇನ್ನೂ ಒಂದು ವಿಶಿಷ್ಟತೆ ಎಂದರೆ ಇದು ಪದ್ಮಾಸನ ಸ್ಥಿತಿಯಲ್ಲಿದ್ದು ಉಪದೇಶ ಮುದ್ರಾ ಭಂಗಿಯಲ್ಲಿದೆ. ಪ್ರಪಂಚದಾದ್ಯಂತ ಇರುವ ಮಮ್ಮಿಗಳು ನಿದ್ರಾ ಭಂಗಿಯಲ್ಲಿರುತ್ತವೆ. ಆದರೆ ರಾಮಾನುಜಾಚಾರ್ಯರ ಶರೀರ ಉಪದೇಶ ಮುದ್ರಾ ಭಂಗಿಯಲ್ಲಿದೆ. ಕೈಗಳ ಉಗುರುಗಳ ಮೂಲಕ ಇದು ಮೂಲ ಶರೀರ ಹೌದೋ ಅಲ್ಲವೋ ಎಂದು ಪರೀಕ್ಷಿಸಬಹುದೆನ್ನುತ್ತಾರೆ ಭಕ್ತರು. ಒಬ್ಬ ವ್ಯಕ್ತಿಯ ಮೂಲ ಶರೀರವನ್ನು ಸಂರಕ್ಷಿಸಿ ದೇವಸ್ಥಾನದೊಳಗೆ ಇಡಲಾಗಿರುವ ಜಗತ್ತಿನ ಏಕೈಕ ಉದಾಹರಣೆ ಇದು ಎಂದರೆ ತಪ್ಪಾಗಲಾರದು.

ಭಾರತೀಯ ಸನಾತನ ಪರಂಪರೆಯ ಮೂಲ ಸ್ಥಂಭಗಳಲ್ಲಿ ಒಬ್ಬರಾದ ರಾಮಾನುಜರ ಮೂಲ ಶರೀರ ರಂಗನಾಥ ಮಂದಿರಲ್ಲಿರುವ ವಿಚಾರ ಪ್ರಚಾರದ ಕೊರತೆಯಿಂದ ಪ್ರಪಂಚಕ್ಕೆ ತಿಳಿದೇ ಇಲ್ಲ. ವಿಜ್ಞಾನಕ್ಕೂ ಸವಾಲಾಗುವ ಇಂತಹ ಅಭೇಧ್ಯ ವಿಚಾರಗಳಿರುವುದರಿಂದಲೇ ಸನಾತನದ ಬಗ್ಗೆ ಇನ್ನಷ್ಟು ಮತ್ತಷ್ಟು ಹೆಮ್ಮೆ ಮೂಡುತ್ತದೆ. ಪರಮ ಪೂಜ್ಯ ಮಹಾ ಮಹಿಮರು ಹುಟ್ಟಿದಂತಹ ಸನಾತನ ಧರ್ಮದಲ್ಲಿ ನಾವು ಹುಟ್ಟಿರುವುದೇ ನಮ್ಮ ಸೌಭಾಗ್ಯ.

-ಅದ್ವೈತ

Source
holydham
Tags

Related Articles

FOR DAILY ALERTS
Close