ಪ್ರಚಲಿತ

ಹೊಸ ವರ್ಷ ಆರಂಭವಾಗಿ ಕೇವಲ 48 ದಿನಗಳಾದರೂ ಕೂಡ ನಮ್ಮ ಭಾರತೀಯ ಸೇನೆ ಮಾಡಿರುವ ಸಾಧನೆ ಮಾತ್ರ ಅಗಾಧವಾದದ್ದು!! ಅದು ಹೇಗೆ ಗೊತ್ತಾ?

ಭಾರತವು ಪಾಕಿಸ್ತಾನದ ಜತೆ ಶಾಂತಿಯುತ ಸಂಬಂಧ ಬಯಸುತ್ತದೆ. ಆದರೆ, ಪಾಕ್‍ನಿಂದ ಒಂದೇ ಒಂದು ಬುಲೆಟ್ ದೇಶದ ಗಡಿ ಪ್ರವೇಶಿಸಿದರೂ, ಅಸಂಖ್ಯಾತ ಬುಲೆಟ್‍ನಿಂದ ಉತ್ತರ ನೀಡಿ” ಎಂದು ಸೇನೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆದೇಶಿಸಿದಂತೆಯೇ, ಹೊಸ ವರ್ಷ ಆರಂಭವಾಗಿ ಕೇವಲ 45 ದಿನಗಳಲ್ಲಿ ಭಾರತೀಯ ಸೈನಿಕರು ಮತ್ತೊಂದು ಸಾಧನೆ ಮೆರೆದಿದ್ದು, ಪಾಕಿಸ್ತಾನದ ಪ್ರತಿ ಕುತಂತ್ರಕ್ಕೂ ಭಾರತವು ಪ್ರತಿತಂತ್ರವನ್ನು ಹೂಡಿ ಉಗ್ರರರನ್ನು ಮಟ್ಟಹಾಕುತ್ತಿರುವುದೇ ಹೆಮ್ಮೆಯ ವಿಚಾರ.

ಹೌದು… ಭಾರತ ಪಾಕ್ ಜತೆ ಶಾಂತಿಮಂತ್ರ ಪಠಿಸುತ್ತಿರುವ ಹೊತ್ತಲೇ ಜಮ್ಮು ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಶಾಂತಿ ಕದಡುವ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಸುಂಜ್ವಾನ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದು, ಉಗ್ರರ ಗುಂಡಿನ ದಾಳಿಯಿಂದ ಏಳುಮಂದಿ ಗಾಯಗೊಂಡಿದ್ದರೆ, 3 ಯೋಧರು ಹುತಾತ್ಮರಾಗಿದ್ದರು.

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು ಮಾತ್ರವಲ್ಲದೇ ಉಗ್ರರು ಕೂಡ ನಮ್ಮ ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿರಬೇಕಾದರೆ ಪ್ರತಿ ಭಾರತೀಯನ ರಕ್ತವೂ ಕುದಿಯುತ್ತದೆ. ಶಾಂತಿ ಭಯಸುತ್ತಿರುವ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನವು ತನ್ನ ಕುತಂತ್ರ ಬುದ್ದಿಯಿಂದಾಗಿ ಉಗ್ರರನ್ನು ಛೂ ಬಿಟ್ಟರೂ ಕೂಡ ನಮ್ಮ ಸೈನಿಕರು ಎದೆ ಉಬ್ಬಿಸಿಕೊಂಡೇ ಶತ್ರುಗಳ ಎದುರು ಹೋರಾಡುತ್ತಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ.

ಇಂತಹ ಹೆಮ್ಮೆಯ ಭಾರತೀಯ ಸೈನಿಕರು ಮತ್ತೊಂದು ಸಾಧನೆ ಮೆರೆದಿದ್ದು, 2018ರ ಈ 48 ದಿನಗಳಲ್ಲಿ ಜಮ್ಮು-ಕಾಶ್ಮಿರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಬರೋಬ್ಬರಿ 20 ಸೈನಿಕರನ್ನು ಹೊಡೆದುರುಳಿಸಿದೆ. ಅಷ್ಟೇ ಅಲ್ಲದೇ, ಪಾಕಿಸ್ತಾನದ ಪ್ರತಿ ಕುತಂತ್ರಕ್ಕೂ ಭಾರತ ಪ್ರತಿತಂತ್ರವನ್ನು ರೂಪಿಸುತ್ತಿದ್ದು, ಪಾಕಿಸ್ತಾನಿ ಸೈನಿಕರಿಗಿಂತ ದುಪ್ಪಟ್ಟು ಆಕ್ರೋಶದಿಂದ ನಮ್ಮ ಸೈನಿಕರು ಹೋರಾಡುತ್ತಿದ್ದಾರೆ. ಅದಕ್ಕಾಗಿಯೇ 20 ಸೈನಿಕರನ್ನು ಹತ್ಯೆ ಮಾಡುವ ಜತೆಗೆ ಶತ್ರುರಾಷ್ಟ್ರದ ಏಳು ಸೈನಿಕರು ಜೀವನ್ಮರಣದ ನಡುವೆ ಹೋರಾಡುವ ರೀತಿಯಲ್ಲಿ ಗಾಯಗೊಳಿಸಿದ್ದಾರೆ.

ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನಾಪಡೆ ನಡೆಸಿದ ಪ್ರತೀಕಾರದ ದಾಳಿಗೆ ಏಳು ಪಾಕಿಸ್ತಾನಿ ಜಿಹಾದಿ ಸೈನಿಕರನ್ನು ಹೊಡೆದುರುಳಿಸಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿದ್ದವು. ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಈ ದಾಳಿ ನಡೆಸಿತ್ತು!!

ಆ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಆರ್ಮಿಡೇಯನ್ನು ಉದ್ದೇಶಿಸಿ ಮಾತನಾಡುತ್ತಾ, ಪಾಕಿಸ್ತಾನದ ಸೇನಾಪಡೆಯು ನಿರಂತರವಾಗಿ ನಿಯಂತ್ರಣ ರೇಖೆಯ ಮೂಲಕ ಭಯೋತ್ಪಾದಕರನ್ನು ಭಾರತಕ್ಕೆ ನುಸುಳಿಸಲು ಪ್ರಯತ್ತಿಸುತ್ತಿದ್ದಾರೆ. ನಾವು ಅವರಿಗೆ ತಕ್ಕ ಪಾಠವನ್ನು ಕಲಿಸಲು ನಮ್ಮ ಶಕ್ತಿಯನ್ನು ಬಳಸುತ್ತಿದ್ದೇವೆ, ನಾವು ಪಾಕಿಸ್ತಾನದ ಯಾವುದೇ ಪ್ರಚೋದನಕಾರಿ ಕ್ರಮಕ್ಕೆ ಪರಿಣಾಮಕಾರಿಯಾಗಿ ಪ್ರತೀಕಾರ ನಡೆಸುತ್ತೇವೆ” ಎಂದು ಅವರು ಹೇಳಿದ್ದರು.

ಅದರಂತೆಯೇ ಭಾರತೀಯ ಸೇನೆಯು 2018ರ ಈ 48 ದಿನಗಳಲ್ಲಿ ಜಮ್ಮು-ಕಾಶ್ಮಿರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಬರೋಬ್ಬರಿ 20 ಸೈನಿಕರನ್ನು ಹೊಡೆದುರುಳಿಸಿದೆ. ಅಷ್ಟೇ ಅಲ್ಲದೇ, ಪಾಕಿಸ್ತಾನದ ಪ್ರತಿ ಕುತಂತ್ರಕ್ಕೂ ಭಾರತ ಪ್ರತಿತಂತ್ರವನ್ನು ರೂಪಿಸುತ್ತಿದ್ದು, ಪಾಕಿಸ್ತಾನಿ ಸೈನಿಕರಿಗಿಂತ ದುಪ್ಪಟ್ಟು ಆಕ್ರೋಶದಿಂದ ಹೋರಾಡುತ್ತಿದ್ದಾರೆ. ಇನ್ನು, ಭಾರತೀಯ ಸೈನ್ಯದ ಪ್ರತಿ ಸೇನಾ ನೆಲೆಗಳು ತುಂಬಾ ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆಯಲ್ಲದೇ ಪಾಕಿಸ್ತಾನದ ಪ್ರತಿಯೊಂದು ಚಲನವಲನ ಗಮನಿಸುತ್ತಿದ್ದು, ಸಣ್ಣ ಸುಳಿವು ಸಿಕ್ಕರೂ ಸೈನಿಕರು ದಾಳಿ ಮಾಡುತ್ತಿದ್ದಾರೆ. ಅಲ್ಲದೆ ಶತ್ರುವಿನ ಎದೆಗೆ ಗುಂಡಿಡಲು ಪ್ರತಿ ಸೈನಿಕರು ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 2 ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾದ ಪಾಕಿಸ್ತಾನಿ ಉಗ್ರರ ಸಂಖ್ಯೆ ಎಷ್ಟು ಗೊತ್ತೇ?

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 2016ರ ವೇಳೆ ಬರೋಬ್ಬರಿ 170 ಭಯೋತ್ಪಾದಕರನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದರು. ಇನ್ನು ಕಣಿವೆ ರಾಜ್ಯದಲ್ಲಿ ಉಗ್ರ ಸಂಘಟನೆಗಳಿಗೆ ಯುವಕರು ಹೆಚ್ಚಾಗಿ ಸೇರಿಕೊಳ್ಳುತ್ತಿದ್ದು, ಇದರಲ್ಲಿ ದಕ್ಷಿಣ ಕಾಶ್ಮೀರದ ಯುವಕರೇ ಹೆಚ್ಚಾಗಿದ್ದು 90 ಯುವಕರು ಹಿಜ್ಬುಲ್ ಮುಜಾಯಿದ್ದೀನ್, ಲಷ್ಕರ್ ಇ ತೊಯ್ಬಾ ಮತ್ತು ಜೈಶ್ ಇ-ಮೊಹಮ್ಮದ್ ಸಂಘಟನೆಗಳಿಗೆ ಸೇರಿಕೊಂಡಿದ್ದಾರೆ ಎಂದು ಪೆÇಲೀಸರು ಮಾಹಿತಿ ನೀಡಿದ್ದರು.

ಆದರೆ 2017ರ ಮೊದಲ 2 ತಿಂಗಳೊಳಗೇ 22 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇದೇ ವೇಳೆ 26 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇನ್ನು, 2010ರ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅತೀ ಹೆಚ್ಚು ಉಗ್ರರನ್ನು 2017ರಲ್ಲಿ ಕೊಲ್ಲಲಾಗಿದ್ದು, ಕೇವಲ 2 ತಿಂಗಳ ಅವಧಿಯಲ್ಲಿ 22 ಮಂದಿ ಉಗ್ರರನ್ನು ಕೊಂದು ಹಾಕಿರುವುದು ಇದೇ ಮೊದಲು ಎಂದು ತಿಳಿಸಿದ್ದರು.

ಬುರ್ಹಾನ್ ವನಿ ಹತ್ಯೆಯಾದ ಬಳಿಕ ಕಾಶ್ಮೀರದಲ್ಲಿ ಉಂಟಾದ ಗಲಭೆ ಹಾಗೂ ಉಗ್ರರ ಉಪಟಳ ತಡೆಯಲು ಸನ್ನದ್ಧವಾದ ಸೇನೆ, 2017ರ ಮೊದಲ 4 ನಾಲ್ಕು ತಿಂಗಳಲ್ಲೇ 42 ಉಗ್ರರನ್ನು ಹೊಡೆದುರುಳಿಸಿದ್ದರು. ಮೇ ತಿಂಗಳಿನಲ್ಲಿ 17 ಉಗ್ರರನ್ನು ಹೊಡೆದುರುಳಿಸಿದರೆ, ಜೂನ್ ನಲ್ಲೇ ಬರೋಬ್ಬರಿ 30 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಒಟ್ಟಿನಲ್ಲಿ ಮೊದಲ ಏಳು ತಿಂಗಳು, ಅಂದರೆ ಜುಲೈ ವೇಳೆಗೆ 100 ಉಗ್ರರನ್ನು ಹತ್ಯೆಗೈದು, ಭಾರತೀಯ ಸೇನೆ ಉಗ್ರರಿಗೆ ತಕ್ಕಪಾಠ ಕಲಿಸಿತ್ತು!!

ಯಾವಾಗ, ಕಳೆದ ಮೇ ತಿಂಗಳಲ್ಲಿ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿತೋ, ಅಲ್ಲಿಂದ ಉಗ್ರರು ಪತರಗುಟ್ಟಿದ್ದರು. ಅದರ ಪ್ರತಿಫಲವಾಗಿಯೇ ಜುಲೈನಿಂದ ನವೆಂಬರ್ ಅಂತ್ಯದ ವೇಳೆಗೆ, ಅಂದರೆ 4 ತಿಂಗಳಲ್ಲೇ ಸೇನೆ ಮತ್ತೆ 100 ಉಗ್ರರನ್ನು ಹತ್ಯೆ ಮಾಡಿದ್ದು, 11 ತಿಂಗಳಲ್ಲೇ 213 ಉಗ್ರರನ್ನು ಕೊಂದು ಹಾಕಿದೆ. ಇದು ಕಳೆದ ಏಳು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ವರ್ಷವೊಂದಲ್ಲೇ 213 ಉಗ್ರರನ್ನು ಹೊಡೆದುರುಳಿಸಿರುವುದು ದಾಖಲೆಯೇ ಸರಿ.

ಆದರೆ ಈ ವರ್ಷದ ಮೊದಲ 48 ದಿನಗಳಲ್ಲಿಯೇ ಭಾರತೀಯ ಸೇನೆ ವಿಶೇಷ ಸಾಧನೆಯನ್ನೇ ಮಾಡಿದ್ದು, ಪಾಕಿಸ್ತಾನದ ಪ್ರತಿಯೊಂದು ಚಲನವಲನ ಗಮನಿಸುತ್ತಿದ್ದಾರಲ್ಲದೇ, ಸಣ್ಣ ಸುಳಿವು ಸಿಕ್ಕರೂ ಭಾರತೀಯ ಸೈನಿಕರು ದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬಾಲ ಸುಟ್ಟ ಬೆಕ್ಕಿನಂತಾಗಿರುವ ಪಾಕಿಸ್ತಾನ ಹಲವು ತಂತ್ರ ಮಾಡುತ್ತಿದೆಯಲ್ಲದೇ ಸುಮಾರು 35 ನೆಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆದರೂ ಭಾರತದ ಯೋಧರು ಅದಕ್ಕೆ ಪ್ರತಿತಂತ್ರ ರೂಪಿಸುತ್ತಲೇ ಬರುತ್ತಿರುವುದು ಮಾತ್ರ ಹೆಮ್ಮೆಯ ವಿಚಾರ!!

– ಅಲೋಖಾ

Tags

Related Articles

Close