ಪ್ರಚಲಿತ

ಭಾರತೀಯ ಯೋಧರ ಪ್ರತ್ಯುತ್ತರಕ್ಕೆ ಬೆದರಿದ ಪಾಕ್!! ಶಾಂತಿ ಮಾತುಕತೆಗೆ ಒಪ್ಪಿಕೊಂಡು ಸೌಹಾರ್ಧತೆ ಕಾಪಾಡುತ್ತೇವೆಂದ ಪಾಕಿಸ್ತಾನ!!

ಆ ಪಾಪಿ ಪಾಕಿಸ್ತಾನ ತನ್ನ ಕಪಟ ಬುದ್ಧಿಯನ್ನು ಮತ್ತೆ ಮುಂದುವರಿಸುತ್ತನೇ ಬಂದಿದೆ!! ಎಲ್ಲ ರಾಷ್ಟ್ರಗಳು ಪಾಕಿಸ್ತಾನವನ್ನು ದೂರವಿಟ್ಟರೂ ಇನ್ನು ಇದಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ!! ಮೊದಲು ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ನಮ್ಮ ಸೈನಿಕರೇ ಹುತಾತ್ಮರಾಗುತ್ತಿದವರು ಅದೆಷ್ಟೋ … ಆದರೆ ನರೇಂದ್ರ ಮೋದಿ ಯಾವಾಗ ಅಧಿಕಾರಕ್ಕೆ ಬಂದರೋ ಅಂದಿನಿಂದ ಭಾರತ ಮತ್ತು ಪಾಕ್‍ಗೆ ನಿಜವಾದ ಕಾಳಗ ಶುರುವಾಯಿತು!! ಭಾರತದ ವಿಚಾರದಲ್ಲಿ ಯಾವುದೇ ವಿಚಾರದಲ್ಲೂ ರಾಜಿಮಾಡಿಕೊಳ್ಳದ ಮೋದೀಜೀ ಪಾಕಿಗಳನ್ನು ಗಡಿ ದಾಟದಂತೆ ತಕ್ಕ ಮದ್ದನ್ನೇ ಅರೆಯುತ್ತಿದ್ದಾರೆ!! ಭಾರತದ ಜೊತೆ ಪದೇ ಪದೇ ಉಪಟಳವನ್ನು ಮಾಡುವ ಪಾಕಿಸ್ತಾನಕ್ಕೆ ಭಾರತದ ನಿರ್ಧಾರದಿಂದ ಬೆವತು ಹೋದಂತೆ ಕಂಡಿದ್ದು ಶಾಂತಿ ಮಾತುಕತೆಗೆ ಒಪ್ಪಿಕೊಂಡು ಬಿಳಿ ದ್ವಜ ಪ್ರದರ್ಶಿಸಿದೆ!!

ಪಾಕಿಸ್ಥಾನದ ಸೈನಿಕರು ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸುವುದನ್ನು ಮುಂದುವರಿಸಿ ಕಳೆದ  ಶನಿವಾರ ರಾತ್ರಿ ಅಖ್‍ನೂರ್ ಸೆಕ್ಟರ್‍ನಲ್ಲಿ ನಡೆಸಿದ ಭಾರೀ ದಾಳಿಗೆ ಗಡಿ ಕಾಯುತ್ತಿದ್ದ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದರು!! ಅದಲ್ಲದೆ ಗಡಿಯಂಚಿನ ಮನೆಗಳಲ್ಲಿದ್ದ 6 ಮಂದಿ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದರು!! ಅದರ ಪ್ರತಿಯಾಗಿ ದಾಳಿಗೆ ಬಿಎಸ್‍ಎಫ್ ಯೋಧರು ಗಡಿಯುದ್ದಕ್ಕೂ ದಿಟ್ಟ ತಿರುಗೇಟು ನೀಡಿದ್ದು , ಭಾರೀ ದಾಳಿ ನಡೆಸಿ ಪಾಕ್ ನ 10 ಬಂಕರ್‍ಗಳನ್ನು ನಾಶ ಮಾಡಿ ತಮ್ಮ ಯೋಧರು ಹುತಾತ್ಮರಾದದ್ದಕ್ಕೆ ಪ್ರತೀಕಾರ ತೀರಿಸಿಯೇ ಬಿಟ್ಟಿದ್ದರು!!

Image result for indian army

ಗಡಿನಿಯಂತ್ರಣರೇಖೆಯಲ್ಲಿರುವ  ನಾಗರಿಕರಿಗೆ ಕಷ್ಟಗಳನ್ನು ತಪ್ಪಿಸಲು ಮತ್ತು  ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ಸುಧಾರಿಸಲು ನೈಜ ಕ್ರಮಗಳನ್ನು ಕೈಗೊಳ್ಳಲು ಪಾಕಿಸ್ಥಾನ ಪರಸ್ಪರ ಒಪ್ಪಿಗೆ ನೀಡಿದ ಬೆನ್ನಲ್ಲೇ ಪಾಕ್ ಸೈನಿಕರು ನರಿ ಬುದ್ದಿ ತೋರಿದೆ!!  ಕಾಶ್ಮೀರದ ಚಿಂಕ್ರಾಲ್ ಮೊಹಲ್ಲಾ ಪ್ರದೇಶ ಸೇರಿದಂತೆ ಮೂರು ಕಡೆಗಳಲ್ಲಿ ಸಿಆರ್‍ಪಿಎಫ್ ಪಡೆಗಳನ್ನು ಗುರಿಯಾಗಿರಿಸಿ ಗ್ರೆನೇಡ್‍ಗಳ ದಾಳಿ ನಡೆಸಿದ ಬೆನ್ನಲ್ಲೇ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದರು!! ಗ್ರೆನೇಡ್ ದಾಳಿಯಲ್ಲಿ ನಾಲ್ವರು ಯೋಧರು ಮತ್ತು ಇಬ್ಬರು ನಾಗರೀಕರು ಗಾಯಗೊಂಡಿದ್ದರು!!

ಪಾಕಿಸ್ತಾನ ಸೇನೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸೇನಾ ಪಡೆಗಳು ಆಕ್ರಮಣಕಾರಿ ಧೋರಣೆಯನ್ನು ತಾಳಿದ್ದು ಜಮ್ಮುವಿನ ಅಖ್ನೂರ್ ಸೆಕ್ಟರ್‍ನಲ್ಲಿ ಅವರ ಔಟ್ ಪೋಸ್ಟ್‍ಗಳನ್ನು  ಧೂಳಿಪಟ ಮಾಡಿವೆ.. ಇದರಿಂದ ಕುಪಿತಗೊಂಡಿರುವ ಪಾಕ್ ಇದೀಗ ಯುದ್ಧ ವಿಶ್ರಾಂತಿಯ ಮಾತುಕತೆಗೆ ಒಲವು ವ್ಯಕ್ತಪಡಿಸಿದೆ. ಶನಿವಾರ ಮತ್ತು ಭಾನುವಾರ ಪಾಕಿಗಳು ಅಖ್ನೋರ್ ಭಾಗದಲ್ಲಿ ಅಪ್ರಚೋದಿತ ದಾಳಿ ನಡೆಸಿದ್ದರಿಂದ ಬಿಎಸ್‍ಎಫ್‍ನ ಎರಡು ಯೋಧರು ಹುತಾತ್ಮರಾಗಿದ್ದಾರೆ. ಓರ್ವ ಅಧಿಕಾರಿಗೆ ಗಾಯವಾಗಿದೆ.. ಈ ಘಟನೆಯ ಪ್ರತ್ಯುತ್ತರವಾಗಿ ಪ್ರತಿ ದಾಳಿ ನಡೆಸಿರುವ ಭಾರತೀಯ ಸೈನಿಕರು ಪಾಕಿಸ್ತಾನಿ ಔಟ್ ಪೋಸ್ಟ್‍ಗಳನ್ನು ಗುಂಡಿಟ್ಟು ನಾಶ ಮಾಡಿದ್ದಾರೆ!! ಅವರ ಔಟ್‍ಪೋಸ್ಟ್‍ಗಳಿಂದ ಹೊಗೆ ಬರುತ್ತಿರುವ ದೃಶ್ಯ ವಿಡೀಯೋಗಳಲ್ಲಿ ಕೂಡಾ ಸೆರೆಯಾಗಿದೆ. ಸೋಮವಾರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನ್ಯದ ರೇಂಜರ್‍ಗಳ ಮಧ್ಯೆ ನಡೆದ ಪೂರ್ವ ನಿರ್ಧರಿತವಲ್ಲದ ಧ್ವಜ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ್ದು, ಸಭೆಯಲ್ಲಿ ಎರಡು ಪಡೆಗಳು ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ನಿರ್ಧಾರ ಮಾಡಿದೆ.

ನಾಲ್ಕು ದಿನದಿಂದ ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನದ ನಡೆಸುತ್ತಿದ್ದ ಅಪ್ರಚೋದಿತ ದಾಳಿಯಿಂದ ಕುಪಿತಗೊಂಡಿದ್ದ ಭಾರತದ ಗಡಿ ಭದ್ರತಾ ಪಡೆ, ಪ್ರತಿಕಾರವಾಗಿ ಪಾಕಿಸ್ತಾನದ ಠಾಣೆಗಳ ಮೇಲೆ ಮೋರ್ಟರ್ ಶೆಲ್ ಗಳಿಂದ ದಾಳಿ ನಡೆಸಿತ್ತು. ಭಾರತದ ದಾಳಿಗೆ ಕಂಗೆಟ್ಟ ಪಾಕಿಸ್ತಾನದ ರೆಂಜರ್ ಗಳು ಬಿಳಿ ಬಾವುಟ ಪ್ರದರ್ಶಿಸಿ ಕದನ ವಿರಾಮಕ್ಕೆ ಕೋರಿ, ಶಿರಬಾಗಿದ್ದವು. ಪಾಕಿಸ್ತಾನ ಮನವಿಗೆ ಪ್ರತಿಕ್ರಿಯಿಸಿದ ಭಾರತ ` ಅಕ್ಟ್ರಾಯ ಗಡಿ ಹೊರ ಠಾಣೆ ಎದುರು ಸಾಯಂಕಾಲ 5.30ಕ್ಕೆ ಬಿಎಸ್ ಎಫ್ ಪಾಕ್ ರೇಂಜರ್ ಗಳ ಮಧ್ಯೆ ಕಮಾಂಡರ್ ಗಳ ಮಟ್ಟದ ಸಭೆ ನಡೆಯಿತು. ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಬೇಕು ಇಲ್ಲಿದ್ದಿದ್ದರೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬ ಸಂದೇಶವನ್ನು ಭಾರತದ ಅಧಿಕಾರಿಗಳು ನೀಡಿದ್ದಾರೆ.

ನಮ್ಮ ಭಾರತೀಯ ಸೇನೆ ಯಾವ ಶತ್ರು ರಾಷ್ಟ್ರಕ್ಕೂ ಹೆದರುವವರಲ್ಲ!! ಶತ್ರುಗಳು ಬಂದರೆ ಹೆದರಿ ಓಡುವವರಲ್ಲ!! ಶತ್ರುಗಳಿಗೆ ಎದೆಯೊಡ್ಡಿ ನಿಂತು ತನ್ನ ಉಸಿರಿನ ಕೊನೆಯ ಕ್ಷಣದ ವರೆಗೂ ಹೋರಾಟ ನಿಲ್ಲಿಸಲ್ಲ ಎಂಬುವುದು ಪಾಕಿಸ್ತಾನಕ್ಕೆ ತಿಳಿದೊಡನೆ ಹೆದರಿ ಭಾರತದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗಿದೆ!!

  • ಪವಿತ್ರ
Tags

Related Articles

Close