ಪ್ರಚಲಿತ

ವಿಶ್ವದೆದುರು ಮತ್ತೆ ಪಾಕಿಸ್ತಾನದ ಮಾನ ಹರಾಜು!! ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರ್ಪಡೆ ಮಾಡಿದ ಫೈನಾನ್ಸಿಯಲ್ ಟಾಸ್ಕ್ ಫೋರ್ಸ್!! ಭಾರತ ಫುಲ್ ಖುಷ್…

ಒಂದಲ್ಲ ಒಂದು ವಿಚಾರದಲ್ಲಿ ನರಿ ಬುದ್ಧಿಯನ್ನು ತೋರಿಸುತ್ತಿರುವ ಪಾಕಿಸ್ತಾನಕ್ಕೆ ಪದೇ ಪದೇ ಅವಮಾನವಾಗುತ್ತನೇ ಇದೆ!! ಪಾಪಿ ಪಾಕಿಸ್ತಾನಕ್ಕೆ ಎಲ್ಲಾ ರಾಷ್ಟ್ರಗಳು ತಕ್ಕ ಬುದ್ಧಿಯನ್ನು ಕಲಿಸಿದರು ಸಹ ಮತ್ತೆ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸುತ್ತನೇ ಇದೆ!! ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾದರೂ ಪಾಕಿಸ್ತಾನ ಮಾತ್ರ ಪದೇ ಪದೇ ಕಾಶ್ಮೀರ ಬಗ್ಗೆ ಕ್ಯಾತೆ ತೆಗೆಯುತ್ತಿರುವುದರಿಂದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ಪಾಠ ಕಲಿಸಿದ ಬೆನ್ನಲ್ಲೇ ಮತ್ತೆ ಪಾಪಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ!! ಉಗ್ರರಿಗೆ ಆಶ್ರಯತಾಣವಾಗಿರುವ ಪಾಕಿಸ್ತಾನ ತನ್ನ ಶತ್ರು ರಾಷ್ಟ್ರಗಳ ವಿರುದ್ಧ ಉಗ್ರರನ್ನು ಕಳುಹಿಸಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಲೇ ಬರುತ್ತಿದೆ!!. ದಿನ ಕಳೆದಂತೆ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಹೆಚ್ಚುತ್ತಿದ್ದು ಇದು ಜಗತ್ತಿಗೆ ಮಾರಕವಾಗಿದೆ!! ಈಗಾಗಲೇ ಉಗ್ರರಿಗೆ ಪೆÇೀಷಣೆ ನೀಡುವ ಹಿನ್ನಲೆಯಲ್ಲಿ ಪಾಕಿಸ್ತಾನವನ್ನು ಫೈನಾನ್ಸಿಯಲ್ ಟಾಸ್ಕ್ ಫೋರ್ಸ್ ಗ್ರೇ ಪಟ್ಟಿಗೆ ಸೇರಿಸುವ ಮೂಲಕ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ!!

ಭಯೋತ್ಪಾದಕರಿಗೆ ದೇಶ ವಿದೇಶಗಳಿಂದ ಹರಿದು ಬರುತ್ತಿರುವ ಹಣಕಾಸಿನ ನೆರವನ್ನು ತಡೆಯಲು ವಿಫಲರಾಗಿರುವ ಪಾಕಿಸ್ತಾನವನ್ನು `ಗ್ರೇ’ ಪಟ್ಟಿಗೆ ಸೇರಿಸಿರುವ ಫೈನಾನ್ಸಿಯಲ್ ಟಾಸ್ಕ್ ಫೋರ್ಸ್ ನಿರ್ಧಾರವನ್ನು ಭಾರತ ಸ್ವಾಗತಿಸಿದ್ದು, ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿಯಲಿ ಎಂದು ಸೂಚನೆ ನೀಡಿದೆ. ಭಯೋತ್ಪಾದಕ ಮೂಲ ಸ್ಥಾನ ಎಂಬ ಬಿರುದ್ಧು ಪಡೆದಿರುವ ಪಾಕಿಸ್ತಾನಕ್ಕೆ ಈ ಮೂಲಕ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಭಾರಿ ಮುಖಂಭಗವಾಗಿದ್ದು, ಭಾರತವೂ ಇದೇ ಸಮಯವನ್ನು ಪಾಕಿಸ್ತಾನದ  ವಿದ್ವಂಸಕ   ಮನಸ್ಥಿತಿಯನ್ನು ಜಾಗತಿಕ ಮಟ್ಟಕ್ಕೆ ತಿಳಿಸಲು ಯತ್ನಿಸುತ್ತಿದೆ.

ಗ್ರೇ ಪಟ್ಟಿಗೆ ಸೇರಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯಗಳ ಕಾರ್ಯದರ್ಶಿ ರವೀಶಕುಮಾರ, ಎಫ್ ಎಟಿಎಫ್ ನಿರ್ಧಾರ ಸ್ವಾಗತಾರ್ಹವಾಗಿದೆ. ಪಾಕಿಸ್ತಾನ ಉಗ್ರ ಪೆÇೀಷಣೆಯನ್ನು ಇನ್ನಾದರೂ ನಿಯಂತ್ರಿಸಬೇಕು. ಬುದ್ಧಿಕಲಿಯದಿದ್ದರೇ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ. ಈ ನಿರ್ಧಾರದಿಂದ ಪಾಕಿಸ್ತಾನ ಬುದ್ಧಿಕಲಿಯಬೇಕು. ಎಫ್ ಎಟಿಎಫ್ ಕಾರ್ಯಯೋಜನೆ ಮೂಲಕವಾದರೂ ಪಾಕಿಸ್ತಾನದಲ್ಲಿ ಉಗ್ರ ಕಾರ್ಯಚಟುವಟಿಕೆಗೆ ನಿಯಂತ್ರಣ ಬೀರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕರ ಪಾಲಿಗೆ ಸ್ವರ್ಗವಾಗಿದೆ ಎಂಬ ಭಾರತದ ಆರೋಪಕ್ಕೆ ಎಫ್ ಎಟಿಎಫ್ ನ ಈ ನಿರ್ಧಾರದಿಂದ ಭಾರತದ ವಾದಕ್ಕೆ ಭಾರಿ ಬಲ ಬಂದತಾಗಿದೆ. ಈ ಮೂಲಕ ಪಾಕಿಸ್ತಾನ ಪೆÇೀಷಿತ ಭಯೋತ್ಪಾದಕರು 2008ರ ಮುಂಬೈ ದಾಳಿ ಸೇರಿ ದೇಶದಲ್ಲಿ ನಡೆಸಿರುವ ದಾಳಿಗಳಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬುದಕ್ಕೆ ಮತ್ತೊಂದು ಪ್ರಬಲ ಸಾಕ್ಷ್ಯ ದೊರೆತಂತಾಗಿದೆ. ಮುಂದಿನ ಒಂದು ವರ್ಷದವರೆಗೆ ಪಾಕಿಸ್ತಾನಕ್ಕೆ ಹರಿದು ಬರುವ ವಿದೇಶಿ ದೇಣಿಗೆಗಳು ಕಡಿತಗೊಳ್ಳಲಿವೆ. ಜತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ವಿಶ್ವಬ್ಯಾಂಕ್‍ನಿಂದಲೂ ಸಾಲ ದೊರೆಯುವುದಿಲ್ಲ. 26 ಅಂಶಗಳ ಉಗ್ರ ನಿಗ್ರಹ ಕಾರ್ಯಯೋಜನೆ ಸಂಪೂರ್ಣ ತಿರಸ್ಕೃತವಾದಲ್ಲಿ, ಪಾಕಿಸ್ತಾನವನ್ನು ಎಫ್‍ಎಟಿಎಫ್ ಬ್ಲಾಕ್ ಲಿಸ್ಟ್‍ಗೆ ಸೇರ್ಪಡೆ ಮಾಡಬಹುದು.!!

ಏನಿದು ಎಫ್ಎಟಿಎಫ್?!

ಉಗ್ರರಿಗೆ ಹಣಕಾಸು ನೆರವಿಗೆ ತಡೆ ಮತ್ತು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಉದ್ದೇಶದಿಂದ ರಚನೆಯಾಗಿರುವ 37 ರಾಷ್ಟ್ರಗಳ ಒಕ್ಕೂಟ ಇದು. 1989ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಉಗ್ರರಿಗೆ ಹಣಕಾಸು ಹರಿವನ್ನು ನಿಯಂತ್ರಿಸಲು ವಿಫಲವಾಗುವ ರಾಷ್ಟ್ರಗಳನ್ನು ಗ್ರೇ ಪಟ್ಟಿಗೆ ಸೇರಿಸಲಾಗುತ್ತದೆ.

ಪಾಕಿಸ್ತಾನ ಭಯೋತ್ಪಾದಕರಿಗೆ ರಾಜಕೀಯ ಆಶ್ರಯ ನೀಡುತ್ತಿದೆ. ಇದರಿಂದ ವಿಶ್ವಮಟ್ಟದಲ್ಲಿ ಪಾಕಿಸ್ತಾನದ ಮಾನ ನಿರಂತರವಾಗಿ ಹರಾಜಾಗುತ್ತಿದೆ. ಅಲ್ಲದೇ ವಿದೇಶಗಳಿಂದ ದೇಣಿಗೆ ಸಂಗ್ರಹಿಸುವಲ್ಲಿ ಭಯೋತ್ಪಾದಕರು ನಿರತರಾಗಿದ್ದರೂ, ಪಾಕಿಸ್ತಾನ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ವಿಶ್ವಸಂಸ್ಥೆ ಸೇರಿ ವಿಶ್ವದ ನಾನಾ ರಾಷ್ಟ್ರಗಳು ಪಾಕಿಸ್ತಾನಕ್ಕೆ ಎಚ್ಚರಿಸಿದರೂ ಬುದ್ಧಿ ಕಲಿತ್ತಿಲ್ಲ. ಇದೀಗ ಎಫ್‍ಎಟಿಎಫ್ ಗೆ ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಿರುವುದು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಮಾನ ಹರಾಜು ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಇತ್ತಿಚೆಗಷ್ಟೇ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂಬುದನ್ನು ಸಾಬೀತು ಮಾಡುವ ಬಲವಾದ ಸಾಕ್ಷ್ಯಾಧಾರಗಳನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಹಿರಂಗಗೊಳಿಸಿತ್ತು!! ಪಾಕಿಸ್ತಾನದ ಮಾಜಿ ಪ್ರಧಾನಿಯೊಬ್ಬರು ಹವಾಲ ಏಜೆಂಟ್ ಮತ್ತು ಕಳಂಕಿತ ಉದ್ಯಮಿ ಜಹೂರ್ ಅಹಮದ್ ಶಾ ವಟಾಲಿಗೆ ಬರೆದಿದ್ದ ಪತ್ರವೊಂದನ್ನು ನ್ಯಾಯಾಲಯಕ್ಕೆ ಎನ್ ಐ ಎ ಹಾಜರುಪಡಿಸಿತ್ತು!! ಮೊಹರು ಆದ ದಾಖಲೆಪತ್ರಗಳಲ್ಲಿ ಈ ಪತ್ರವೂ ಸೇರಿದ್ದು, ಮಾಜಿ ಪ್ರಧಾನಿಯ ಹೆಸರನ್ನು ಬಹಿರಂಗಗೊಳಿಸಲು ಅಧಿಕಾರಿಗಳು ನಿರಾಕರಿಸಿದ್ದರು!!

ಕಳೆದ ವರ್ಷ ವಟಾಲಿ ನಿವಾಸದಲ್ಲಿ ಈ ಪತ್ರ ಪತ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪಿಗಳ ಬಗ್ಗೆ ಕೋರ್ಟ್‍ಗೆ ಎನ್ ಐ ಎ ಚಾರ್ಚ್‍ಶೀಟ್ ಸಲ್ಲಿಸಿದೆ. ಅದಕ್ಕೆ ಪೂರಕವಾಗಿ ಕೆಲವು ಮಹತ್ವದ ದಾಖಲೆ ಪತ್ರಗಳು ಮತ್ತು ದಸ್ತಾವೇಜುಗಳನ್ನು ಸಹ ಹಾಜರುಪಡಿಸಿದೆ. ಈ ದಾಖಲೆಗಳಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಬೇಹುಗಾರಿಕೆ ಸಂಸ್ಥೆ ಐ ಎಸ್ ಐ ಕಾಶ್ಮೀರದ ಹುರಿಯತ್ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿರುವುದನ್ನೂ ದೃಢಪಡಿಸುವ ಪುರಾವೆಗಳೂ ಇವೆ.

Image result for pak terrorist

ಐಎಸ್‍ಐಗೆ ಅತ್ಯಂತ ಆಪ್ತವಾಗಿರುವ ವಟಾಲಿ ಹವಾಲ ಮತ್ತಿತರ ವಾಮ ಮಾರ್ಗಗಳ ಮೂಲಕ ಹಲವು ಕೋಟಿ ರೂ.ಗಳ ಅವ್ಯವಹಾರಗಳನ್ನು ನಡೆಸಿರುವ ಬಗ್ಗೆ ಚಾರ್ಚ್‍ಶೀಟ್‍ನಲ್ಲಿ ವಿವರಗಳನ್ನು ದಾಖಲಿಸಲಾಗಿದೆ. ವಟಾಲಿಗೆ ವೀಸಾ ನೀಡಬೇಕೆಂದು ನವದೆಹಲಿಯಲ್ಲಿನ ಪಾಕಿಸ್ತಾನ ಹೈ ಕಮಿಷನರ್ಗೆ ಅಲ್ ಶಫಿ ಗ್ರೂಪ್ಸ್ ಆಫ್ ಕಂಪನಿಯ ಮಾಲೀಕ ತಾರೀಖ್ ಶಫಿ ಬರೆದಿರುವ ಪತ್ರವೂ ಇದರಲ್ಲಿದೆ ಎನ್ನುವ ವಿಚಾರವನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಈಗಾಗಲೇ ಬಹಿರಂಗಗೊಳಿಸಿದೆ!!

ಇದಕ್ಕೆ ಪುಷ್ಠಿ ನೀಡುವಂತೆ, ಇದೀಗ ಪಾಕಿಸ್ತಾನವನ್ನು ಅಧಿಕೃತವಾಗಿ ಭಯೋತ್ಪಾದನೆಗೆ ಹಣಕಾಸು ಪೂರೈಸುತ್ತಿರುವ ರಾಷ್ಟ್ರಗಳ ಪಟ್ಟಿಗೆ ವಾಚ್ ಡಾಗ್ ಫಿನಾನ್ಯಿಯಲ್ ಟಾಸ್ಕ್ ಫೆÇೀರ್ಸ್(ಎಫ್ ಎ ಟಿ ಎಫ್) ಸೇರ್ಪಡೆಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ವಿಶ್ವದ ಎದುರೇ ಪಾಕಿಸ್ತಾನದ ಮಾನ ಹರಾಜುಮಾಡಿದೆ!!

ಪಾಕಿಸ್ತಾನ ಬರೀ ಭಯೋತ್ಪಾದನೆಗಷ್ಟೇ ಆಶ್ರಯ ನೀಡುತ್ತಿಲ್ಲ. ಬದಲಾಗಿ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಹೇಯ ಸಂಗತಿ!! ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ಎಲ್ಲಾ ರಾಷ್ಟ್ರಗಳೂ ಸರಿಯಾಗಿಯೇ ಪಾಠ ಕಲಿಸುತ್ತಿದೆ!!

  • ಪವಿತ್ರ
Tags

Related Articles

Close