ಪ್ರಚಲಿತ

ರಕ್ಷಣೆಗೆಂದು ತೆರಳಿದ ಭಾರತದ ವಿಮಾನವನ್ನು ನಿಷೇಧಿಸಿದ ಪಾಕಿಸ್ತಾನ!

ಪಾಪಿ ಪಾಕಿಸ್ತಾನಕ್ಕೆ ತಿನ್ನುವುದಕ್ಕೆ ಗತಿ ಇಲ್ಲದಿದ್ದರೂ ಕೊಬ್ಬು ಮಾತ್ರ ಕರಗದಿರುವುದು ದುರಂತ. ಅತ್ತ ಟರ್ಕಿಯಲ್ಲಿ ಸಂಭವಿಸಿದ ಭೂಕಂಪಕ್ಕೆ ನೆರವಿನ ಹಸ್ತ ಚಾಚಿರುವ ಭಾರತದ ರಕ್ಷಣಾ ತಂಡಗಳನ್ನು ಹೊತ್ತ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ನಿರಾಕರಿಸುವ ಮೂಲಕ ದುರಹಂಕಾರ ಮೆರೆದಿದೆ. ಆ ಮೂಲಕ ಟರ್ಕಿಯ ಸಂತ್ರಸ್ತರ ಮೇಲೆ ಒಂದು ಚೂರೂ ಕರುಣೆ ಇಲ್ಲದಂತೆ ನಡೆದುಕೊಂಡು ತನ್ನ ನರಿ ಬುದ್ಧಿಯನ್ನು ಮತ್ತೆ ಪ್ರದರ್ಶನ ಮಾಡಿದೆ.

ಭಾರತದಿಂದ ಟರ್ಕಿಗೆ ಎರಡು ವಿಮಾನಗಳನ್ನು ಕಳುಹಿಸಲಾಗಿದೆ. ಒಂದು ವಿಮಾನ ಸೋಮವಾರ ತಡರಾತ್ರಿ ಹೊರಟಿದೆ. ಎರಡನೇ ವಿಮಾನ ಮಂಗಳವಾರ ಹೊರಟಿದ್ದು, ಈ ವಿಮಾನಕ್ಕೆ ಪಾಕ್ ತನ್ನ ವಾಯುನೆಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ಈ ವಿಮಾನಗಳಲ್ಲಿ ಭೂಕಂಪ ಪರಿಹಾರ ಸಾಮಗ್ರಿಗಳು, ರಕ್ಷಣಾ ತಂಡಗಳು, ತರಬೇತಿ ಪಡೆದ ಶ್ವಾನಗಳು, ವೈದಕೀಯ ಸೇವೆ, ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಬೇಕಾದ ಪರಿಕರಗಳು ಇತ್ಯಾದಿಗಳನ್ನು ಸಾಗಿಸಲಾಗುತ್ತಿತ್ತು. ಈ ವಿಮಾನಗಳಿಗೆ ಪಾಕ್ ಯಾವ ಕಾರಣದಿಂದ ತನ್ನ ವಾಯುನೆಲೆಯನ್ನು ನಿಷೇಧಿಸಿತ್ತು ಎಂಬುದನ್ನು ಅಧಿಕಾರಿಗಳು ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

ಭಾರತವು ಸಂತ್ರಸ್ತರಿಗೆ ರಕ್ಷಣಾ ಕಾರ್ಯದಲ್ಲಿ ಟರ್ಕಿಗೆ ಸಹಾಯ ಮಾಡುತ್ತಿದೆ. ಟರ್ಕಿಯ ರಾಯಭಾರ ಕಚೇರಿ ಸಹ ಭಾರತದ ಈ ಮಾನವೀಯ ನೆರವಿಗೆ ಧನ್ಯವಾದಗಳನ್ನು ಸಮರ್ಪಿಸಿದೆ.

ಪಾಕಿಸ್ತಾನ ಮಾತ್ರ ತಾನು ಬಿಕಾರಿಯಾಗಿದ್ದರೂ ಇನ್ನೂ ಬುದ್ಧಿ ಕಲಿಯದೇ ಇರುವುದು ದುರಂತ. ಪಾಕ್ ಎದುರಿಸುತ್ತಿರುವ ಆಹಾರ, ಆರ್ಥಿಕ ಸಮಸ್ಯೆ‌ಗಳಿಗೆ ಭಾರತವೂ ಸೇರಿದಂತೆ ವಿಶ್ವದ ಮುಂದೆ ಬಿಕ್ಷೆ ಬೇಡಿತ್ತು. ಈ ಪರಿಸ್ಥಿತಿಯಿಂದ ಹೊರ ಬರದೇ ಇದ್ದರೂ, ಈಗಲೂ ಬದಲಾಗದೆ, ವಿಶ್ವಕ್ಕೆ ಕಂಟಕವಾಗಿರುವುದು, ಪಾಕಿಸ್ತಾನದ ಅವಸಾನಕ್ಕೂ ಕಾರಣವಾಗಬಹುದು. ತಾನು ಈ ರೀತಿ ವರ್ತಿಸಿದರೆ ವಿಶ್ವದ ಯಾವ ರಾಷ್ಟ್ರಗಳು ತನ್ನ ಸಹಾಯಕ್ಕೆ ಬರಲಾರವು ಎನ್ನುವುದನ್ನೂ ಅರಿಯದ ಪಾಕ್, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿತಪಿಸಲಿದೆ ಎನ್ನುವುದು ಸತ್ಯ.

Tags

Related Articles

Close