ಪ್ರಚಲಿತ

ಮೋದಿ ವಿರೋಧಿಗಳ ಬಾಯಿ ಮುಚ್ಚಿಸಿದ ಪೇಜಾವರ ಶ್ರೀ..! ಭಾರತಕ್ಕೆ ಮೋದಿಯೇ ನಾಯಕ ಎಂದ ಸಂತ..!

ನರೇಂದ್ರ ಮೋದಿ ಜಗತ್ತು ಕಂಡ ಒಬ್ಬ ಧೀಮಂತ ನಾಯಕ. ಇಡೀ ದೇಶದಲ್ಲೇ ಒಂದು ರೀತಿಯ ಸಂಚಲನ ಮೂಡಿಸಿದ್ದ ಪ್ರಧಾನಿ ಮೋದಿ , ವಿದೇಶದಲ್ಲೂ ಮಿಂಚಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮೋದೀಜೀಗೆ ವಿರೋಧವಾಗಿ ನಿಲ್ಲುವ ಒಂದು ಗುಂಪು ಸಿಕ್ಕರೂ ಕೂಡ , ಅವರನ್ನು ಪ್ರೀತಿಸುವ ಕೋಟಿ ಕೋಟಿ ಜನ ಕಾಣಸಿಗುತ್ತಾರೆ. ನರೇಂದ್ರ ಮೋದಿಯವರ ವಿರುದ್ಧ ಎಲ್ಲಾ ವಿರೋಧಿ ಬಣಗಳು ಒಟ್ಟಾದರೂ ನರೇಂದ್ರ ಮೋದಿಯವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ಮೋದಿಯವರ ಜನಪ್ರಿಯತೆ ಕಂಡು ಉರಿದುಕೊಳ್ಳುತ್ತಿರುವ ವಿರೋಧಿಗಳು ಇಡೀ ದಿನ ಏನಾದರೊಂದು ವಿಚಾರಕ್ಕೆ ಪ್ರಧಾನಿ ಮೋದಿಯನ್ನು ಮಧ್ಯ ಎಳೆದು ಬಾಯಿಗೆ ಬಂದಂತೆ ಮಾತನಾಡುತ್ತಿರುತ್ತಾರೆ. ಆದರೆ ಇದೀಗ ನಡೆದ ಘಟನೆಯಿಂದ ಎಲ್ಲಾ ಮೋದಿ ವಿರೋಧಿಗಳು ಬಾಯಿ ಮುಚ್ಚಿ ಕೂರುವಂತಾಗಿದೆ..!

ಮೋದಿ ಒಬ್ಬ ಅದ್ಭುತ ರಾಜಕಾರಣಿ..!

ಪೇಜಾವರ ಶ್ರೀಗಳು ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪ್ರಧಾನಿ ಮೋದಿಯವರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು ಎಂದು ಮೋದಿ ವಿರೋಧಿಗಳು ಬೊಬ್ಬೆ ಹೊಡೆಯುತ್ತಿದ್ದರು. ಪೇಜಾವರ ಶ್ರೀಗಳಿಗೆ ಹಿಂದೂಗಳು ಮಾತ್ರವಲ್ಲದೆ ಮುಸ್ಲೀಮರು ಕೂಡ ಬೆಂಬಲಿಗರಿದ್ದಾರೆ, ಅದೂ ಅಲ್ಲದೇ ಕಳೆದ ವರ್ಷ ರಂಜಾನ್ ತಿಂಗಳಲ್ಲಿ ಮುಸ್ಲೀಮರಿಗೆ ಇಫ್ತಾರ್ ಕೂಟ ಏರ್ಪಡಿಸಿ ಭಾರೀ ಚರ್ಚೆಗೆ ಕಾರಣರಾಗಿದ್ದರು. ಆದರೂ ಯಾರ ವಿರೋಧವನ್ನೂ ಲೆಕ್ಕಿಸದ ಶ್ರೀಗಳು ಈ ಬಾರಿಯೂ ಇಫ್ತಾರ್ ಕೂಟ ನಡೆಸುವ ಬಗ್ಗೆ ಹೇಳಿಕೊಂಡಿದ್ದರು, ಆದರೆ ಇದಕ್ಕೆ ಸ್ವತಃ ಮುಸ್ಲೀಮರೇ ಒಪ್ಪದೇ ಇದ್ದಿದ್ದರಿಂದ ಶ್ರೀಗಳು ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇದೇ ವೇಳೆ ಮಾತನಾಡಿದ ಪೇಜಾವರ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಇದನ್ನೇ ಕಾರಣವಾಗಿಟ್ಟುಕೊಂಡ ಮೋದಿ ವಿರೋಧಿಗಳು ಪೇಜಾವರ ಶ್ರೀಗಳು ಮೋದಿ ವಿರೋಧಿ ಎಂಬಂತೆ ಬಿಂಬಿಸತೊಡಗಿದ್ದರು. ಆದರೆ ಇದೀಗ ಸ್ವತಃ ಶ್ರೀಗಳೇ ಸ್ಪಷ್ಟನೆ ನೀಡಿದ್ದು, ನಾನು ಮೋದಿ ವಿರೋಧಿಯಲ್ಲ, ನರೇಂದ್ರ ಮೋದಿ ಅವರು ಒಬ್ಬ ಅದ್ಭುತ ನಾಯಕ, ಅವರ ಆಡಳಿತದಲ್ಲಿ ಭಾರತ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಹಾಡಿ ಹೊಗಳಿದ್ದಾರೆ.!

Image result for modi

ವಿರೋಧಿಗಳನ್ನು ಝಾಡಿಸಿದ ಪೇಜಾವರ ಶ್ರೀಗಳು..!

ಮೈಸೂರಿನಲ್ಲಿ ಮಾತನಾಡಿದ ಶ್ರೀಗಳು, ನಾನು ಹೇಳಿರುವ ಹೇಳಿಕೆಯನ್ನು ವಿರೋಧಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ನರೇಂದ್ರ ಮೋದಿಯ ವಿರೋಧಿಯಲ್ಲ, ಅವರ ಬಗ್ಗೆ ನನಗೂ ಹೆಮ್ಮೆ ಇದೆ. ಆದರೆ ಕಳೆದ ನಾಲ್ಕು ವರ್ಷದಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರಗತಿ ನಡೆದಿಲ್ಲ, ಆದರೂ ಪರವಾಗಿಲ್ಲ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶವಿದೆ. ಅಷ್ಟರಲ್ಲಿ ಮೋದಿ ಮತ್ತಷ್ಟು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿಕೊಂಡರು. ಸ್ವಚ್ಛ ಭಾರತ, ಗಂಗಾ ನದಿಯ ಸ್ವಚ್ಛತೆ ಸೇರಿದಂತೆ ಹಲವಾರು ಯೋಜನೆಗಳು ಇನ್ನೂ ಉತ್ತಮ ರೀತಿಯಲ್ಲಿ ಸಾಗುವಂತಾಗಲಿ, ಆಗಲೇ ನಮ್ಮ ದೇಶ ವಿಶ್ವಗುರುವಾಗಲಿದೆ ಎಂದು ನರೇಂದ್ರ ಮೋದಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು..!

Image result for pejavara shree

 

ಈ ಮೂಲಕ ಇಲ್ಲ ಸಲ್ಲದ ಆರೋಪ ಮಾಡುವ ಮೋದಿ ವಿರೋಧಿಗಳನ್ನು ತನ್ನ ಮಾತಿನಿಂದಲೇ ತೆಪ್ಪಗಾಗಿಸಿದ ಶ್ರೀಗಳು , ನರೇಂದ್ರ ಮೋದಿಯಂತಹ ನಾಯಕ ನಿಜವಾಗಿಯೂ ಭಾರತಕ್ಕೆ ಅವಶ್ಯಕತೆ ಇತ್ತು ಎಂದು ಹೇಳಿದ್ದಾರೆ. ಆದ್ದರಿಂದ ಒಬ್ಬರ ಹೇಳಿಕೆಯನ್ನು ತಿರುಚಿ ಸಂತೋಷಪಡುವ ವಿಕೃತ ಮನಸ್ಸಿನ ಜನರಿಗೆ ಹಿಂದೂ ಸಂತ ಸರಿಯಾಗಿ ಝಾಡಿಸಿದ್ದಾರೆ..!

–ಸಾರ್ಥಕ್

Tags

Related Articles

Close