ಪ್ರಚಲಿತ

ಬ್ರೇಕಿಂಗ್! ಇಂದಿರಾ ಕ್ಯಾಂಟಿನ್‌ಗೆ ಬೀಗ ಜಡಿಯುತ್ತಾರಾ ಸಿಎಂ ಕುಮಾರಸ್ವಾಮಿ? ಸಿದ್ದರಾಮಯ್ಯನವರ ಆಸೆಗೆ ತಣ್ಣೀರೆರಚಲು ತಯಾರಾದ ಕುಮಾರಣ್ಣ.!

ಅದೇನೋ ಗೊತ್ತಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಿನ್ನಾಭಿಪ್ರಾಯ ಕಡಿಮೆ ಆಗುವ ಹಾಗೆ ಕಾಣುತ್ತಿಲ್ಲ. ಯಾಕೆಂದರೆ ಒಪ್ಪಿಗೆ ಇಲ್ಲದೇ ಇದ್ದರೂ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯನವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ದರು. ಆದರೆ ಚುನಾವಣೆಗಿಂತ ಮೊದಲು ಬದ್ಧ ವೈರಿಗಳಂತೆ ಕಿತ್ತಾಡಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಈಗಲೂ ಅದೇ ರೀತಿ ಹಾವು-ಏಣಿ ಆಟವಾಡುತ್ತಲೇ ಇದ್ದಾರೆ. ಯಾಕೆಂದರೆ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಮೊದಲಲ್ಲಿ ನಾನು ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಹೇಳಿಕೊಂಡು ರಾಜ್ಯದ ಜನರಿಗೆ ಅವಮಾನ ಮಾಡಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರನ್ನು ಎದುರುಹಾಕಿಕೊಳ್ಳುವ ಸಲುವಾಗಿ ನಾನು ಯಾವುದೇ ಮುಲಾಜಿನಲ್ಲಿಲ್ಲ, ನನ್ನ ನಿರ್ಧಾರವೇ ಅಂತಿಮ ಎಂದು ಹೇಳಿಕೊಂಡು ಇಡೀ ಕಾಂಗ್ರೆಸ್‌ಗೆ ಪಾಠ ಕಲಿಯುವಂತೆ ಮಾಡಿದ್ದಾರೆ.!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಿದ ಇಂದಿರಾ ಕ್ಯಾಂಟಿನ್ ಯೋಜನೆ ಭಾರೀ ಸದ್ದು ಮಾಡಿತ್ತು. ಯಾವುದೇ ಪ್ರಯೋಜನವಿಲ್ಲದ ಈ ಯೋಜನೆ ಕೇವಲ ಹೆಸರಿಗಷ್ಟೇ ಬಡವರಿಗೆ ಉಪಯೋಗವಾಗುತ್ತದೆ ಎಂಬಂತಿತ್ತು. ಯಾಕೆಂದರೆ ತಿನ್ನಲು ಯೋಗ್ಯವಲ್ಲದ ಆಹಾರಗಳನ್ನೇ ಈ ಕ್ಯಾಂಟಿನ್‌ನಲ್ಲಿ ನೀಡುತ್ತಿದ್ದರಿಂದ ಸಿದ್ದರಾಮಯ್ಯನವರ ವಿರುದ್ದ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಿದ್ದರಾಮಯ್ಯನವರು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಅವರು ಜಾರಿಗೊಳಿಸಿದ ಯೋಜನೆಗಳೂ ಕೂಡ ಒಂದೊಂದೇ ಹಳ್ಳ ಹಿಡಿಯುತ್ತಿದೆ. ಯಾಕೆಂದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಹಿಂದಿನ ರಾಜ್ಯ ಸರಕಾರದ ಯೋಜನೆಗಳನ್ನು ಮೂಲೆಗುಂಪು ಮಾಡಿ ತಮ್ಮದೇ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.!

ಇಂದಿರಾ ಕ್ಯಾಂಟಿನ್‌ಗೆ ಅನುದಾನ ನೀಡಲು ಸರ್ಕಾರದ ಬಳಿ ಹಣ ಇಲ್ಲ..!

ಇಂತಹ ಒಂದು ಸರಕಾರ ನಮ್ಮ ರಾಜ್ಯವನ್ನು ಆಳ್ವಿಕೆ ನಡೆಸುತ್ತಿದೆ ಎಂಬೂದೇ ನಮ್ಮ ದುರಾದೃಷ್ಟ. ಯಾಕೆಂದರೆ ಸಿದ್ದರಾಮಯ್ಯನವರು ತಮ್ಮ ಆಡಳಿತ ಅವಧಿಯಲ್ಲಿ ಇಡೀ ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿದ್ದರು. ಸರಕಾರದ ಖಜಾನೆಯನ್ನು ಖಾಲಿ ಮಾಡಿ ಅಧಿಕಾರದಿಂದ ಕೆಳಗಿಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಸ್ಯೆಯಿಂದ ಇದೀಗ ಹೊಸ ಸರಕಾರ ಕೈಕಟ್ಟಿ ಕೂರುವಂತೆ ಮಾಡಿದೆ. ಯಾಕೆಂದರೆ ಈಗಾಗಲೇ ಇಂದಿರಾ ಕ್ಯಾಂಟಿನ್ ನಡೆಸುವುದಕ್ಕಾಗಿ ಬಿಬಿಎಂಪಿಯಲ್ಲಿ ಹಣ ಪಡೆದಿರುವ ಸರಕಾರ ಸುಮಾರು ೩೫ ಕೋಟಿ ರೂಪಾಯಿ ಬಾಕಿ ಇಟ್ಟಿದೆ ಎಂಬ ವಿಚಾರ ಬಯಲಾಗಿದೆ. ಇದೇ ಸಿದ್ದರಾಮಯ್ಯನವರು ಜಾರಿಗೊಳಿಸಿದ ಈ ಯೋಜನೆ ಇದೀಗ ಹಳ್ಳ ಹಿಡಿಯಲು ಮುಖ್ಯ ಕಾರಣವಾಗಿದೆ. ಯಾಕೆಂದರೆ ಮೈತ್ರಿ ಸರಕಾರ ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಮುಂದುವರಿಸಬೇಕಾದರೆ ಬಾಕಿ ಇರುವ ೩೫ ಕೋಟಿ ಪಾವತಿ ಮಾಡಲೇಬೇಕು. ಅದಕ್ಕಾಗಿಯೇ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ರಾಜ್ಯ ಸರಕಾರದ ಕಡೆ ನೋಡುತ್ತಿದ್ದು, ಕುಮಾರಸ್ವಾಮಿ ಅವರು ಬಾಕಿ ಪಾವತಿಸುತ್ತಾರೋ ಅಥವಾ ಶಾಶ್ವತವಾಗಿ ಇಂದಿರಾ ಕ್ಯಾಂಟಿನ್‌ಗೆ ಬೀಗ ಜಡಿಯುತ್ತಾರ ಎಂದು ಕಾದು ನೋಡಬೇಕಾಗಿದೆ.!

ಇಂದಿರಾ ಕ್ಯಾಂಟಿನ್ ಮುಂದುವರಿಸಬೇಕಾದರೆ ಬಿಬಿಎಂಪಿಯಲ್ಲಿ ಪಡೆದ ಹಣವನ್ನು ಪಾವತಿಸಬೇಕು, ಇಲ್ಲವೇ ಈ ಯೋಜನೆಯನ್ನು ಕೈಬಿಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಕಾರ, ಬಿಬಿಎಂಪಿ ಬಳಿ ಇಂದಿರಾ ಕ್ಯಾಂಟಿನ್ ಮುಂದುವರಿಸುವಷ್ಟು ಹಣ ಇಲ್ಲ ಮತ್ತು ದೋಸ್ತಿ ಸರಕಾರ ಕೂಡ ಅನುದಾನ ನೀಡುತ್ತಿಲ್ಲ. ಆದ್ದರಿಂದ ಈ ಯೋಜನೆಯನ್ನು ರದ್ದುಗೊಳಿಸುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.!

ಸತ್ಯ ಬಯಲಿಗೆಳೆದ ಬಿಜೆಪಿ ಮುಖಂಡ..!

ಸದ್ಯ ಇಂದಿರಾ ಕ್ಯಾಂಟಿನ್ ಬಗ್ಗೆ ಯಾವುದೇ ಸುದ್ದಿ ಆಗದೇ ಇದ್ದಿದ್ದರಿಂದ ಬಿಜೆಪಿ ಮುಖಂಡ ಪದ್ಮನಾಭರೆಡ್ಡಿ ಎಂಬವರು ನೇರವಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಸತ್ಯಾಂಶ ಬಯಲಾಗಿದೆ. ಪಾಲಿಕೆ ಅಧಿಕಾರಿಗಳು ನೀಡಿದ ಉತ್ತರದಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರ ಮಾಡಿಟ್ಟ ಬಾಕಿ ಹಣದ ಬಗ್ಗೆ ಗೊತ್ತಾಗಿದೆ. ಸದ್ಯ ಯಾವುದೇ ಲಾಭ ಇಲ್ಲದೇ ಇದ್ದರೂ ಕೂಡ ಕ್ಯಾಂಟಿನ್ ನಡೆಸುತ್ತಿರುವ ಗುತ್ತಿಗೆದಾರರು ಇನ್ನು ಮುಂದೆ ಮುಂದುವರಿಸಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು ೩೫ ಕೋಟಿ ಹಣ ಬಾಕಿ ಇರುವುದರಿಂದ ಸರಕಾರವೂ ಇದೀಗ ಮುಂದುವರಿಯಲು ಸಾಧ್ಯವಿಲ್ಲ ಎಂಬಂತಾಗಿದೆ ಪರಿಸ್ಥಿತಿ. ಆದ್ದರಿಂದ ಸಿದ್ದರಾಮಯ್ಯನವರು ತಮ್ಮ ಹೆಸರು ಉಳಿಸಿಕೊಳ್ಳಲು ಸರಕಾರದ ಖಜಾನೆ ಲೂಟಿ ಮಾಡಿದ್ದು ಮಾತ್ರವಲ್ಲದೆ , ರಾಜ್ಯದ ಜನರ ಮೇಲೂ ಸಾಲದ ಹೊರೆ ಇಟ್ಟು ಹೋಗಿದ್ದಾರೆ. ಆದರೆ ಇದೀಗ ಸಿಎಂ ಕುಮಾರಸ್ವಾಮಿ ಅವರು ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರ ಯಾವ ರೀತಿ ಇರುತ್ತದೆ ಎಂಬುದು ಕಾದು ನೋಡಬೇಕಾಗಿದೆಯಷ್ಟೇ..!

–ಅರ್ಜುನ್

Tags

Related Articles

Close