ಪ್ರಚಲಿತ

ಗ್ರಾಮ ಸ್ವರಾಜ್ಯದಿಂದ ದೇಶಕ್ಕೆ ಲಭಿಸುವುದು ಪೂರ್ಣ ಸ್ವರಾಜ್ಯ!! ಇಂಧನ ಬೆಲೆ ಏರಿಕೆಗೆ ಬ್ರೇಕ್ ಹಾಕುವ ಸುಳಿವು ನೀಡಿದ ಅಮಿತ್ ಷಾ!!

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಂದಿನಿಂದಲೂ ನಾನಾ ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಲ್ಲದೇ, ಇಂದು ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಕಾರಣೀಭೂತರಾಗಿದ್ದಾರೆ!!! ರಾಷ್ಟ್ರದ ಪಂಚಾಯತ್ ರಾಜ್ ವ್ಯವಸ್ಥೆ ಸದೃಢಗೊಳಿಸುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ ಅಭಿಯಾನವನ್ನು ಕೈಗೊಳ್ಳುವ ಮೂಲಕ ಪಂಚಾಯತ್ ರಾಜ್ ದಿನದ ಅಂಗವಾಗಿ ಬುಡಕಟ್ಟು ಜನರ ಪ್ರಾಬಲ್ಯ ಹೆಚ್ಚಾಗಿರುವ ಮಧ್ಯಪ್ರದೇಶದ ರಾಮನಗರದಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಚಾಲನೆ ನೀಡಿದ್ದರು!! ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಸ್ಥಳೀಯ ಸಂಸ್ಥೆಯನ್ನು ಸ್ವಸಾಮಥ್ರ್ಯದ ಆಧಾರದಲ್ಲಿ ಸುಸ್ಥಿರಗೊಳಿಸುವುದು, ಆರ್ಥಿಕ ಭದ್ರತೆ ಹಾಗೂ ಹೆಚ್ಚಿನ ದಕ್ಷತೆ ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.!!

Image result for modi

ಗ್ರಾಮ ಸ್ವರಾಜ್ ಅಭಿಯಾನದಿಂದಾಗಿ 16,500 ಗ್ರಾಮಗಳ ಜನರಿಗೆ ಲಾಭ!!

ಎಪ್ರಿಲ್ 14 ರಿಂದ ಮೇ 15ರವರೆಗಿನ ಗ್ರಾಮ ಸ್ವರಾಜ್ ಅಭಿಯಾನದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ 7 ಮಹತ್ವದ ಯೋಜನೆಗಳು ದೇಶದ 484 ಜಿಲ್ಲೆಗಳ 16,580 ಗ್ರಾಮಗಳನ್ನು ತಲುಪಿದ್ದು ಇದು ಪ್ರಧಾನಿ ನರೇಂದ್ರ ಮೋದಿಜೀಯವರ ಮಹತ್ತರ ಸಾಧನೆಯೆಂದೇ ಹೇಳಬಹುದು!! ಕೇಂದ್ರ ಸರ್ಕಾರದ ಏಳು ಪ್ರಮುಖ ಜನಪರ ಯೋಜನೆಗಳಿಂದಾಗಿ ದೇಶಾದ್ಯಂತ 16,500 ಗ್ರಾಮಗಳ ಜನರಿಗೆ ಲಾಭವಾಗಿದೆ!!

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಲಕ್ಷಾಂತರ ಬಡ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕ ನೀಡಲಾಗಿದೆ. 2019ರಲ್ಲಿ ಜನಾದೇಶಕ್ಕಾಗಿ ಪ್ರಜೆಗಳ ಮುಂದೆ ಹೋಗುವ ಮುನ್ನ ದೇಶದ ಎಲ್ಲ ಗ್ರಾಮಗಳಿಗೆ ಸರ್ಕಾರದ ಯೋಜನೆಗಳ ಲಾಭವನ್ನು ತಲುಪಿಸಲಾಗುವುದು. ಎಲ್‍ಪಿಜಿ ಸಂಪರ್ಕ, ಜನಧನ ಖಾತೆಗಳು ಮತ್ತು ಸಮಾಜ ಕಲ್ಯಾಣ ಯೋಜನೆಗಳನ್ನು ಆಗಸ್ಟ್ 15ರೊಳಗೆ ದೇಶದ 115 ಅತಿ ಹಿಂದುಳಿದ ಜಿಲ್ಲೆಗಳಿಗೆ ತಲುಪಿಸಲಾಗುವುದು ಎಂದಿದ್ದಾರೆ. ಏಪ್ರಿಲ್ 14ರಿಂದ ಮೇ 15ರವರೆಗೆ ನಡೆದ ಗ್ರಾಮ ಸ್ವರಾಜ್ ಅಭಿಯಾನದಲ್ಲಿ ಮೊದಲ ಬಾರಿಗೆ ಬಡವರು ತಮ್ಮ ಮನೆ ಬಾಗಿಲಿಗೆ ಸರ್ಕಾರ ಬಂದಿದೆ ಎಂದು ಈಗ ಜನತೆಯೇ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ರಾಮ ಸ್ವರಾಜ್ ಅಭಿಯಾನದ ವೇಳೆ ಬಹುತೇಕ ಎಲ್ಲಾ ಗ್ರಾಮಗಳನ್ನು ತಲುಪಲಾಗಿದ್ದು ಇದರಲ್ಲಿ ಶೇಖಡ 50 ರಷ್ಟು ಕುಟುಂಬಗಳು ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾಗಿವೆ!! ವಿದ್ಯುತ್ ಸಂಪರ್ಕ 5,02,434 ಕುಟುಂಬವನ್ನು ತಲುಪಿದ್ದು, 16,682 ಗ್ರಾಮಗಳಿಗೆ 25.03 ಲಕ್ಷ ಎಲ್‍ಇಡಿ ಬಲ್ಬ್‍ಗಳನ್ನು ವಿತರಣೆ ಮಾಡಲಾಗಿದೆ!! ಜನ್‍ಧನ್ ಯೋಜನೆ 25,53,599 ಫಲಾನುಭವಿಗಳನ್ನು ಹೊಂದಿವೆ!! ಪ್ರಧಾನಿಗಳ ಜೀವನ್ ಭೀಮಾಯೋಜನೆ 16,14,388 ಫಲಾನುಭವಿಗಳನ್ನು ಹೊಂದಿದ್ದು ಪ್ರಧಾನಿ ನರೇಂದ್ರ ಮೋದಿಜೀಯವರ ಇಂತಹ ಯೋಜನೆಗಳು ನಿಜವಾಗಿಯೂ ಅಭೂತಪೂರ್ವ ಯಶಸ್ಸನ್ನು ನೀಡಿದೆ ಎಂದೇ ಹೇಳಬಹುದು!!

Image result for amit shah

ಸದ್ಯದಲ್ಲೇ ಇಂಧನ ಏರಿಕೆ ಪರಿಹಾರ ಸಿಗುವ ಸುಳಿವು ನೀಡಿದ ಷಾ!!

ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದೂ ಪ್ರತೀಯೊಂದು ಕ್ಷೇತ್ರದಲ್ಲಿಯೂ ಹೆಚ್ಚಿನ ಗಮನವನ್ನು ಹರಿಸುವ ಮೂಲಕ ಇಂಧನ ಏರಿಕೆಯ ಬಗ್ಗೆಯೂ ಚಿಂತಿಸುತ್ತಿದ್ದಾರೆ!! ಸದ್ಯಕ್ಕೆ ಎಲ್ಲರ ಬಾಯಲ್ಲೂ ಇಂಧನ ದರದ ಮಾತೇ ಕೇಳಿ ಬರುತ್ತಿದೆ!! ಇದೀಗ ಮೋದಿ ಸರಕಾರ ಸರಿಯಾದ ಬೆಲೆಯನ್ನು ನಿಗದಿ ಪಡಿಸುವ ಮೂಲಕ
ಇಂಧನ ದರ ದಾಖಲೆ ಏರಿಕೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 3-4 ದಿನಗಳಲ್ಲಿ ಇದಕ್ಕೆ ಸೂಕ್ತ ಪರಿಹಾರವನ್ನು ಸರ್ಕಾರ ಘೋಷಿಸಲಿದೆ. ತೈಲ ಕಂಪನಿಗಳ ಜೊತೆಗೆ ಸಭೆ ನಡೆಸಲಿದ್ದು ಹೊಸ ಸೂತ್ರದ ಸಿದ್ಧತೆಯಲ್ಲಿದ್ದೇವೆ ಎಂದು ಷಾ ಸುಳಿವು ಕೊಟ್ಟಿದ್ದಾರೆ.!!

ಅಧಿಕಾರ ವಹಿಸಿ 4 ವರ್ಷಗಳೇ ಕಳೆದರೂ ಎಲ್ಲಿ ಹಿಂದುಳಿದ ಪ್ರದೇಶಗಳಿದೆಯೋ ಅಲ್ಲಿ ಸಂಪೂರ್ಣವಾಗಿ ನಿಗಾವಹಿಸಿ ಆ ಕ್ಷೇತ್ರವನ್ನು ಸಂಪೂರ್ಣ ಬದಲಾವಣೆ ಮಾಡುವುದೇ ಪ್ರದಾನಿ ನರೇಂದ್ರ ಮೋದಿಜೀಯವರ ಪ್ರಮುಖ ಕನಸು!! ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪ್ರತೀಯೊಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ದುರುಪಯೋಗ ಮಾಡಿದ್ದೇ ಜಾಸ್ತಿ!! ಇನ್ನು ಮುಂದೆಯೂ ಪ್ರಧಾನಿ ನರೇಂದ್ರ ಮೋದಿಜೀಯವರೇ ಅಧಿಕಾರ ಸ್ವೀಕರಿಸಿಕೊಂಡರೆ ದೇಶ ಖಂಡಿತ ಸುಭೀಕ್ಷವಾಗುತ್ತದೆ!!

source: vijayavani

  • ಪವಿತ್ರ
Tags

Related Articles

Close