ರಾಜ್ಯ

ಮಸೀದಿಗೆ ಪ್ರವೇಶಿಸಲೆತ್ನಿಸಿದ ಮಹಿಳೆಯರನ್ನು ಅರೆಸ್ಟ್ ಮಾಡಿದ ಪಿಣರಾಯಿ ಸರಕಾರ.! ಇಬ್ಬಗೆ ನೀತಿಗೆ ಮತ್ತೆ ಕೆಂಡವಾಯಿತು ಕೇರಳ.!

ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿಯ ಭಕ್ತರು ಅಯ್ಯಪ್ಪನ ದರ್ಶನಕ್ಕೂ ಮೊದಲು ಅಲ್ಲೇ ಇರುವ ವಾವರನ ಮಸೀದಿಗೂ ತೆರಳಿ ದರ್ಶನ ಮಾಡೋದು ಸಂಪ್ರದಾಯ. ಇದು ಹಿಂದೂ ಮುಸ್ಲಿಂ ಧರ್ಮದ ಭಾವೈಕ್ಯತೆಯ ಸಂಕೇತವೂ ಆಗಿದೆ. ಆದರೆ ದೇವರ ನಾಡು ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಧರ್ಮದ್ರೋಹದ ಕೆಲಸಕ್ಕೆ ದೇವರ ನಾಡು ರೋಸಿ ಹೋಗಿದೆ.

ಇತ್ತೀಚೆಗೆ ಶಬರಿಮಲೆಗೆ ಪ್ರವೇಶ ನೀಡಿದ ಇಬ್ಬರು ಮಹಿಳೆಯರ ಭದ್ರತೆಯನ್ನು ನೋಡಿಕೊಂಡು ಕಳ್ಳ ದಾರಿಯ ಮೂಲಕ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಟ್ಟ ಧರ್ಮದ್ರೋಹಿ ಪಿಣರಾಯಿ ಸರಕಾರ ಇದೀಗ ಮಸೀದಿಗೆ ತೆರಳಿದ ಮಹಿಳೆಯರನ್ನು ಅರೆಸ್ಟ್ ಮಾಡಿದೆ. ಮಸೀದಿಗೆ ತೆರಳಲೆತ್ನಿಸಿದ್ದ ಮಹಿಳೆಯರು ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿ ಎಂಬ ಸಂಘಟನೆಯ ಸದಸ್ಯರಾಗಿದ್ದು ತಮಿಳುನಾಡಿನಲ್ಲಿ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ತಮಿಳುನಾಡು ಮೂಲದ ರೇವತಿ, ಸುಶೀಲಾ ದೇವಿ ಮತ್ತು ಗಾಂಧಿಮತಿ ಎಂಬ ಮೂವರು ಮಹಿಳೆಯರು ಶಬರಿಮಲೆ ಸಮೀಪದ ವಾವರ ಸ್ವಾಮಿಯ ಮಸೀದಿಗೆ ಪ್ರವೇಶಿಸಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಮೊದಲೇ ಮಾಹಿತಿ ತಿಳಿದುಕೊಂಡಿದ್ದ ಕೇರಳ ಪೊಲೀಸರು ಈ ಮೂವರು ಮಹಿಳೆಯರನ್ನು ಮಸೀದಿಗೆ ಹೋಗುವ ದಾರಿಯಲ್ಲಿಯೇ ಅರೆಸ್ಟ್ ಮಾಡಿದ್ದಾರೆ. ಮಾತ್ರವಲ್ಲದೆ ಇವರನ್ನು ಬೆಂಬಲಿಸಿ ಸಹಕರಿಸಿದ ಓರ್ವ ಕಾರು ಚಾಲಕ ಸಹಿತ ಇಬ್ಬರು ಪುರುಷರನ್ನೂ ಬಂಧಿಸಿ ಕೇಸು ದಾಖಲಿಸಲಾಗಿದೆ.

ಇವರ ಮೇಲೆ ಸಾಮಾಜಿಕ ಶಾಂತಿ ಕದಡಲು ಯತ್ನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ವಿಚಾರ ತಿಳಿದೊಡನೆ ಬೂದಿ ಮುಚ್ಚಿದ ಕೆಂಡದಂತಿದ್ದ ಕೇರಳ ಮತ್ತೆ ಆಕ್ರೋಶಭರಿತವಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಅಯ್ಯಪ್ಪ ಭಕ್ತರು ಹರಿಹಾಯುತ್ತಿದ್ದಾರೆ. ಶಬರಿಮಲೆಗೆ ಪ್ರವೇಶಿಸಲು ತನ್ನ ಸರ್ಕಾರವೇ ಬೆಂಬಲಿಸಿ ಸಹಕರಿಸಿದ್ದು ಇದೀಗ ಮಸೀದಿಗೆ ಪ್ರವೇಶಿಸಿದರೆ ಮಾತ್ರ ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಕೇಸು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
Close