ಪ್ರಚಲಿತ

ವಾಟ್ಸ್ಯಾಪ್ ಚಾನೆಲ್‌ನಲ್ಲೂ ಪ್ರಧಾನಿ ಮೋದಿ ಹವಾ

ಭಾರತೀಯರ ಜೊತೆಗೆ ನೇರ ಸಂಪರ್ಕ ಹೊಂದಲು ಪ್ರಧಾನಿ ಮೋದಿ ಅವರು ವಾಟ್ಸ್ಯಾಪ್ ಚಾನೆಲ್‌ಗೆ ಸೇರಿಕೊಂಡಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳು ಸೇರಿದಂತೆ ಎಲ್ಲಾ ರೀತಿಯ ಮಾಹಿತಿಗಳನ್ನು ಜನರಿಗೆ ವಾಟ್ಸ್ಯಾಪ್ ಮೂಲಕ ತ್ವರಿತವಾಗಿ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಈ ಚಾನೆಲ್ ಅನ್ನು ಪ್ರಧಾನಿ ಮೋದಿ ಆರಂಭಿಸಿರುವುದಾಗಿದೆ.

ಪ್ರಧಾನಿ ಮೋದಿ ಅವರ ವಾಟ್ಸ್ಯಾಪ್ ಚಾನೆಲ್ ಕೇವಲ ಒಂದೇ ದಿನದಲ್ಲಿ ಮಹತ್ವದ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ಈ ಚಾನೆಲ್ ಸೇರಿಕೊಂಡ ಒಂದೇ ದಿನದಲ್ಲಿ ಪ್ರಧಾನಿ ಮೋದಿ ಅವರು ಒಂದು ಮಿಲಿಯನ್‌ಗೂ ಹೆಚ್ಚು ಹಿಂಬಾಲಕರನ್ನು (ಫಾಲೋವರ್ಸ್) ಅನ್ನು ಹೊಂದುವ ಮೂಲಕ ದಾಖಲೆ ಮಾಡಿದ್ದಾರೆ. ಆ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ ವ್ಯಕ್ತಿ ಎನ್ನುವ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರ ವಾಟ್ಸ್ಯಾಪ್ ಚಾನೆಲ್ ಬುಧವಾರ ಸಂಜೆಯ ವೇಳೆಗೆ 10,00,000ಕ್ಕೂ ಅಧಿಕ ಹಿಂಬಾಲಕರಿಂದ ಫಾಲೋ ಮಾಡಲ್ಪಟ್ಟಿದೆ. ಈಗಾಗಲೇ ಸಾಮಾಜಿಕ ಜಾಲತಾಣದ ಬಳಕೆಯಲ್ಲಿಯೂ ಮುಂಚೂಣಿಯಲ್ಲಿರುವ ಪ್ರಧಾನಿ ಮೋದಿ, ಟ್ವಿಟರ್ ಮೂಲಕವೂ ಸಾರ್ವಜನಿಕರಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವುದು ಸತ್ಯ.

ಈ ವಾಟ್ಸ್ಯಾಪ್ ಚಾನೆಲ್ ಮೂಲಕ ಪ್ರಧಾನಿಗಳು‌ ಕೇಂದ್ರ ಸರ್ಕಾರದ ಜನಸ್ನೇಹಿ ಯೋಜನೆಗಳು, ಅಗತ್ಯ ಮಾಹಿತಿಗಳು ಜನರಿಗೆ ಸುಲಭವಾಗಿ ತಲುಪಲಿವೆ. ಈ ಚಾನೆಲ್‌ಗೆ ಸೇರಿಕೊಳ್ಳುವ ಮೂಲಕ ಜನರು ಸುಲಭವಾಗಿ ಮತ್ತು ನೇರವಾಗಿ ಪ್ರಧಾನಿ ಮೋದಿ ಅವರಿಂದಲೇ ಕೇಂದ್ರ ಸರ್ಕಾರದ ಯೋಜನೆ, ಇನ್ನಿತರ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

ಪ್ರಸ್ತುತ ದಿನಗಳಲ್ಲಿ ವಾಟ್ಸ್ಯಾಪ್ ಬಳಕೆ ಮಾಡದವರ ಸಂಖ್ಯೆ ವಿರಳಾತಿ ವಿರಳ ಎಂದೆನ್ನಬಹುದು. ವಾಟ್ಸ್ಯಾಪ್ ಎಂಬ ಸಾಮಾಜಿಕ ಜಾಲತಾಣ ಸಾರ್ವಜನಿಕ ವಲಯದಲ್ಲಿ ಹೆಚ್ಚು ಜನಜನಿತವೂ ಹೌದು. ಈ ವಿಚಾರವನ್ನು ಮನಗಂಡ ಪ್ರಧಾನಿ ಮೋದಿ ಅವರು ವಾಟ್ಸ್ಯಾಪ್ ಮೂಲಕವೂ ಜನರಿಗೆ ಹತ್ತಿರವಾಗಲು ಬಯಸಿದ್ದು, ಅದಕ್ಕಾಗಿಯೇ ವಾಟ್ಸ್ಯಾಪ್‌ನ ಹೊಸ ಫೀಚರ್ ಆದ ವಾಟ್ಸ್ಯಾಪ್ ಚಾನೆಲ್ ಅನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ, ಜನರೂ ಸಹ ವಾಟ್ಸ್ಯಾಪ್ ಬಳಕೆಯಲ್ಲಿ ಹೆಚ್ಚು ಉತ್ಸುಕರಾಗಿದ್ದು, ಇದನ್ನು ಮನಗಂಡ ಪ್ರಧಾನಿ ಮೋದಿ ಅವರು ಜನರಿಗೆ ಕೇಂದ್ರದ ಮಾಹಿತಿಗಳನ್ನು ತಕ್ಷಣಕ್ಕೆ ದೊರಕುವಂತೆ ಮಾಡಲು ಈ ಚಾನೆಲ್ ಅನ್ನು ಬಳಸಿಕೊಂಡಿದ್ದಾರೆ ಎನ್ನುವುದು ಸ್ವಾಗತಾರ್ಹ.

ಡಿಜಿಟಲ್ ಯುಗದಲ್ಲಿ ಡಿಜಿಟಲ್ ವ್ಯವಸ್ಥೆಗಳ ಮೂಲಕವೇ ಜನರಿಗೆ ಆಪ್ತವಾಗುತ್ತಿರುವ ಪ್ರಧಾನಿ ಮೋದಿ ಅವರ ನಡೆ ಮಾದರಿಯೂ ಹೌದು. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೂ ಈ ವಾಟ್ಸ್ಯಾಪ್ ಚಾನೆಲ್ ಜನರು ಮತ್ತು ಪ್ರಧಾನಿ ಮೋದಿ ಅವರ ನಡುವಿನ ಸಂಪರ್ಕ ಸೇತು ವಿ ನಂತೆ ಕೆಲಸ ಮಾಡಲಿದೆ‌ ಎನ್ನುವುದು ಸತ್ಯ.

Tags

Related Articles

Close