ಪ್ರಚಲಿತ

ಜನರ ಹಣ ಕೊಳ್ಳೆ ಹೊಡೆದವರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಶಾಕ್

ಭ್ರಷ್ಟಾಚಾರ ನಡೆಸುವ ರಾಜಕಾರಣಿಗಳ ವಿರುದ್ಧ, ಜನರಿಂದ ಕೊಳ್ಳೆ ಹೊಡೆಯುವ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ.

ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ನಾಯಕ, ರಾಜ್ಯ ಸಭಾ ಸಂಸದ ಧೀರಜ್ ಸಾಹು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ನೂರಾರು ಕೋಟಿ ಮೌಲ್ಯದ ನಗ, ನಗದು ವಶ ಪಡಿಸಿಕೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಸಾರ್ವಜನಿಕರಿಂದ ಯಾವುದೇ ನಾಯಕ ಏನೇ ಲೂಟಿ ಮಾಡಿರಲಿ, ಅದನ್ನು ಸಂಪೂರ್ಣವಾಗಿ ಪೈಸೆಯೂ ಬಾಕಿ ಉಳಿಯದ‌ ಹಾಗೆ ತಿರುಗಿಸಿ‌ನೀಡುವಂತೆ ಮಾಡಬೇಕು. ಇದು ಮೋದಿ ನೀಡುವ ಭರವಸೆ ಎಂದು ಹೇಳಿದ್ದಾರೆ.

ದೇಶವಾಸಿಗಳು ಈಗ ಐಟಿ ಅಧಿಕಾರಿಗಳಿಗೆ ಸಿಕ್ಕ ನೋಟುಗಳನ್ನು ನೋಡಿ ಪ್ರಾಮಾಣಿಕತೆಯನ್ನು ನಿರ್ಧಾರ ಮಾಡಬೇಕು. ಯಾವನೇ ಒಬ್ಬ ನಾಯಕ ಜನರಿಂದ ಲೂಟಿ‌ ಹೊಡೆದಿದ್ದರೆ, ಅದರ ಪ್ರತಿ ಪೈಸೆಯನ್ನೂ ವಾಪಸ್ ನೀಡಬೇಕು. ಇದು ನಾನು ಜನತೆಗೆ ನೀಡುವ ಗ್ಯಾರಂಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕ ಧೀರಜ್ ಸಾಹು ಮನೆ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದು, ಈ‌ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗ ನಗದು‌ ಪತ್ತೆಯಾಗಿರುವುದಾಗಿದೆ. ಇದಲ್ಲದೆ ಒಡಿಶಾ ಮತ್ತು ಜಾರ್ಖಂಡ್‌ನ ಇತರ ಕಾಂಗ್ರೆಸ್‌ ನಾಯಕರ ಮನೆಗಳ ಮೇಲೆಯೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ದಾಳಿಯಲ್ಲಿ ಅಧಿಕಾರಿಗಳಿಗೆ ನೂರು ಕೋಟಿ ರೂ. ಗಳಿಗೂ ಅಧಿಕ ನಗದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಒಟ್ಟಿನಲ್ಲಿ ಜನರಿಂದ ಕೊಳ್ಳೆ ಹೊಡೆದು, ಸಂಪತ್ತನ್ನು ತಿಂದು ತೇಗುತ್ತಿರುವ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಸಮರ ಸಾರುತ್ತಲೇ ಬಂದಿದೆ. ಜನರ ತೆರಿಗೆ ದುಡ್ಡನ್ನು ನುಂಗಿ ನೀರ್ಕುಡಿದು, ತಮ್ಮ ಸಂಪತ್ತು ಹೆಚ್ಚಿಸುವುದಕ್ಕಾಗಿ ವಿನಿಯೋಗ ಮಾಡುತ್ತಿರುವವರ ವಿರುದ್ಧ ಪ್ರಧಾನಿ ಮೋದಿ ಅವರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಜನರ ತೆರಿಗೆ ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಕೆ ಮಾಡುವ ಸಲುವಾಗಿ, ಅದರ ದುರುಪಯೋಗ ತಡೆಯುವುದಕ್ಕೆ ಭ್ರಷ್ಟರ ವಿರುದ್ಧ ಚಾಟಿ ಬೀಸುತ್ತಿರುವ ಪ್ರಧಾನಿ ಮೋದಿ ಸರ್ಕಾರದ ನಡೆ ಪ್ರಶಂಸಾರ್ಹ.

Tags

Related Articles

Close