ಪ್ರಧಾನಿ ಮೋದಿ ಅವರು ಜನ ಸ್ನೇಹಿ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ನಿಸ್ಸೀಮರು. ಜನರ ಅಭ್ಯುದಯಕ್ಕಾಗಿ ಅವರು ಅದೆಷ್ಟೋ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದೀಗ ಜನರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಮತ್ತೊಂದು ನಿರ್ಣಯವನ್ನು ಕೈಗೊಂಡಿದ್ದಾರೆ.
ಜನರಿಗೆ ಮತ್ತಷ್ಟು ಆಪ್ತವಾಗುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ವಾಟ್ಸ್ಯಾಪ್ ಚಾನೆಲ್ ಸೇರಿಕೊಂಡಿದ್ದಾರೆ. ಈಗ ವಾಟ್ಸ್ಯಾಪ್‌ನಲ್ಲಿ ನರೇಂದ್ರ ಮೋದಿ ಗ್ರೂಪ್ ಚಾನೆಲ್ ಆರಂಭಗೊಂಡಿದೆ. ಜನರ ಜೊತೆಗೆ ಉತ್ತಮ ಸಂವಹನ ನಡೆಸುವ ಉದ್ದೇಶ, ಯೋಜನೆ, ಸರ್ಕಾರದ ಘೋಷಣೆಗಳ ಮಾಹಿತಿಯನ್ನು ನೇರವಾಗಿ ಜನರಿಗೆ ರವಾನಿಸುವ ನಿಟ್ಟಿನಲ್ಲಿ ಇದು ಪ್ರಯೋಜನಕಾರಿಯಾಗಲಿದೆ.
ಇತ್ತೀಚೆಗೆ ವಾಟ್ಸ್ಯಾಪ್ ಗ್ರೂಪ್ ಚಾನೆಲ್ ಫೀಚರ್ ಆರಂಭ ಮಾಡಿತ್ತು. ಪ್ರಧಾನಿ ಮೋದಿ ಅವರೂ ಸಹ ಈಗ ಇದರಲ್ಲಿ ಸೇರಿಕೊಂಡಿದ್ದಾರೆ. ನಾನು ವಾಟ್ಸ್ಯಾಪ್ ಕಮ್ಯೂನಿಟಿ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಇನ್ನು ನಾವೆಲ್ಲರೂ ಸಂಪರ್ಕದಲ್ಲಿರೋಣ. ನಾನಿಲ್ಲಿ ಹೊಸ ಸಂಸತ್ ಭವನದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ತಮ್ಮ ಮೊದಲ ಸಂದೇಶದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಾಟ್ಸ್ಯಾಪ್ ಕಮ್ಯೂನಿಟಿ ಚಾನೆಲ್ ಗ್ರೂಪ್ ಸೇರಿಕೊಳ್ಳಲು ಸಾರ್ವಜನಿಕರಿಗೂ ಸಾಧ್ಯವಿದೆ. ಇದಕ್ಕಾಗಿ ಒಂದು ಲಿಂಕ್ ನೀಡಲಾಗಿದ್ದು, ಅದನ್ನು ಬಳಸಿ ಈ ಚಾನೆಲ್‌ಗೆ ಸೇರಿಕೊಳ್ಳಬಹುದಾಗಿದೆ.
https://whatsapp.com/channel/0029Va8IaebCMY0C8oOkQT1F
ಈ ಮೇಲಿನ ಲಿಂಕ್ ಮೂಲಕ ಸಾರ್ವಜನಿಕರಿಗೆ ಪ್ರಧಾನಿಗಳ ವಾಟ್ಸ್ಯಾಪ್ ಗ್ರೂಪ್ ಸೇರಿಕೊಳ್ಳಲು ಅವಕಾಶವಿದೆ. ಪ್ರಧಾನಿ ಮೋದಿ ಅವರ ಈ ಕ್ರಮ ಸಾರ್ವಜನಿಕರಲ್ಲಿಯೂ ಸಂತಸ ಮೂಡಿಸಿದೆ.ಗ್ರೂಪ್ ಸದಸ್ಯರ ಮಾಹಿತಿಯೂ ಗೌಪ್ಯವಾಗಿರಲಿದೆ.