ಪ್ರಚಲಿತ

ದೇಶಕ್ಕೆ ಯಾರು ಬೇಕೋ ಅವರನ್ನು ಜನರೇ ಆರಿಸಿಕೊಳ್ಳಲಿ! ನಾನು ಈ ದೇಶದ ಚೌಕಿದಾರನಷ್ಟೇ! ಲೋಕ ಸಮರಕ್ಕೆ ರಣಕಹಳೆ ಮೊಳಗಿಸಿದ ನಮೋ!

ಲೋಕಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳ ಆರ್ಭಟವೂ ಜೋರಾಗಿದ್ದು ಇಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದ ಮೂಲಕ ಚುನಾವಣಾ ಪ್ರಚಾರಕ್ಕೆ ಭರ್ಜರಿ ಎಂಟ್ರಿ ನೀಡಿದ್ದಾರೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಚುನಾವಣಾ ಪ್ರಚಾರ ಆರಂಭವಾಗಿದ್ದು ಇಂದು ಮೊದಲ ಬಹಿರಂಗ ಸಮಾವೇಶದ ಮೂಲಕ ಮೋದಿ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ವಿಪಕ್ಷಗಳ ನಿಲುವು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಮೋದಿ ದೇಶಕ್ಕೆ ಏನು ಬೇಕೋ ಅದನ್ನು ಈ ದೇಶದ ಜನರೇ ಆಯ್ಕೆ ಮಾಡಿಕೊಳ್ಳುತ್ತಾರೆ, ನಾನು ಈ ದೇಶದ ಚೌಕಿದಾರ ಎಂದು ಈಗಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಮತ್ತೊಮ್ಮೆ ಮಹಾಘಟಬಂಧನವನ್ನು ಟೀಕಿಸಿದರು.!

ದೇಶದ ಸಂಪತ್ತನ್ನು ಯಾವೊಬ್ಬನಿಗೂ ಲೂಟಿ ಮಾಡಲು ಬಿಡುವುದಿಲ್ಲ, ನಾನು ಚೌಕಿದಾರ ಆಗಿರುವುದರಿಂದ ನಿಮ್ಮನ್ನೆಲ್ಲ ಸುರಕ್ಷಿತವಾಗಿ ಕಾಪಾಡುತ್ತೇನೆ ಎಂದು ಮೋದಿ ಭರವಸೆ ನೀಡಿದರು. ವಿಪಕ್ಷಗಳು ಅಧಿಕಾರದ ಆಸೆಯಿಂದ ಮೋದಿಯನ್ನು ಸೋಲಿಸಲು ಹೊರಟಿದ್ದಾರೆ, ಆದರೆ ನಮ್ಮ ಸರಕಾರದ ಜನಪರ ಯೋಜನೆಗಳನ್ನು ಹೇಳಿಕೊಂಡೇ ನಾವು ಮತ ನೀಡುವಂತೆ ಜನರ ಬಳಿ ತೆರಳುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ ಮಹಾಘಟಬಂಧನ ನಿರ್ಮಾಣವಾಗಿದೆ, ಇದರಲ್ಲಿರುವ ನಾಯಕರು ಎಂತವರು ಎಂಬುದು ನಿಮಗೆ ಗೊತ್ತೇ ಇದೆ ಎಂದಿರುವ ಮೋದಿ, ನಮ್ಮ ದೇಶಕ್ಕೆ ಚೌಕಿದಾರ ಬೇಕೋ ಅಥವಾ ಚೋರರು ಬೇಕೋ ನೀವೇ ಆರಿಸಿಕೊಳ್ಳಿ ಎಂದು ಹೇಳಿದ್ದಾರೆ.!

ಬ್ರಿಟೀಷರ ವಿರುದ್ಧ ದಂಗೆ ಪ್ರಾರಂಭವಾದ ಸ್ಥಳದಲ್ಲೇ ಮೋದಿ ಪ್ರಚಾರ!

ಉತ್ತರ ಪ್ರದೇಶದ ಮೀರತ್‌ನಲ್ಲಿ ಅಂದು ಬ್ರಿಟೀಷರ ವಿರುದ್ಧ ದಂಗೆ ಪ್ರಾರಂಭವಾಗಿತ್ತು, ಇಂದು ಅದೇ ಜಾಗದಲ್ಲಿ ನಿಂತು ನಾನು ಮಾತನಾಡುತ್ತಿದ್ದೇನೆ, ನೀವೇ ಯೋಚಿಸಿ ಮುಂದಿನ ಚಿತ್ರಣ ಏನು ಎಂಬುದನ್ನು ಎಂದು ಹೇಳಿಕೊಂಡ ಪ್ರಧಾನಿ ಮೋದಿ, ಚೌದರಿ ಚರಣಸಿಂಗ್ ಅವರಿಗೆ ನಮನ ಸಲ್ಲಿಸಿದರು. ಈ ದೇಶ ಇದೇ ಮೊದಲ ಬಾರಿಗೆ ಒಂದು ಸದೃಢ ಸರಕಾರವನ್ನು ನೋಡುತ್ತಿದೆ, ನಾವು ಆಶ್ವಾಸನೆ ನೀಡಿ ಜನರ ಬಳಿ ಮತ ಕೇಳುವುದಿಲ್ಲ, ನಮ್ಮ ಸರಕಾರ ಕಳೆದ ೫ ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳೇ ನಮಗೆ ಶ್ರೀರಕ್ಷೆ ಎಂದಿದ್ದಾರೆ ಮೋದಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರವನ್ನೇ ಜಪಿಸುವ ನಾವು ದೇಶದಲ್ಲಿ ಮೇಲ್ವರ್ಗದ ಬಡವರಿಗೂ ಮೀಸಲಾತಿ ನೀಡಿ ಅವರನ್ನೂ ಸಶಕ್ತರನ್ನಾಗಿ ಮಾಡುತ್ತಿದ್ದೇವೆ, ಇಂತಹ ಯೋಜನೆ ಈ‌ ಹಿಂದಿನ ಯಾವುದೇ ಯೋಜನೆಯನ್ನು ಜಾರಿಗೊಳಿಸಲಿಲ್ಲ ಎಂದು ಹೇಳಿದ್ದಾರೆ.

ಭಾರತ ಇಂದು ಸುರಕ್ಷಿತವಾಗಿದೆ, ನಮ್ಮ ಸೈನಿಕರಿಗೆ ಉಪಟಳ ನೀಡುವ ಶತ್ರು ರಾಷ್ಟ್ರದ ಸ್ಥಿತಿ ಇಂದು ಏನಾಗಿದೆ ಎಂಬುದು ನಿಮಗೂ ಗೊತ್ತಿದೆ, ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದ ಪ್ರಧಾನಿ ಮೋದಿ, ಯಾವುದೇ ಪೊಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡಲಿಲ್ಲ ಎಂದಿದ್ದಾರೆ.!

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಕೇಸರಿ ಪಡೆಗೆ ಮೋದಿಯವರ ಮಾತು ತುಂಬಾ ಉಪಕಾರಿಯಾಗಲಿದೆ.‌ ಆದ್ದರಿಂದ ಇಂದು ಮೊದಲ ಚುನಾವಣಾ ಪ್ರಚಾರ ಆರಂಭಿಸಿದ ಮೋದಿ ದೇಶಾದ್ಯಂತ ಇನ್ನೂ ಅನೇಕ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.!

-ಅರ್ಜುನ್

Tags

Related Articles

FOR DAILY ALERTS
Close