ಪ್ರಚಲಿತ

ಪ್ರಧಾನಿ ಮೋದಿ ಅವರು ಪ್ರೆಸ್ ಮೀಟ್ ಮಾಡಲ್ವಾ?

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿರೋಧ ಪಕ್ಷಗಳು ಮತ್ತು ವಿರೋಧಿಗಳು ಹೇಳೋ ಮಾತು ‘ಪ್ರಧಾನಿ ಮೋದಿ ಅವರು ಪತ್ರಿಕಾಗೋಷ್ಠಿ ಮಾಡಲ್ಲ, ಮಾಧ್ಯಮಗಳನ್ನು ತಮ್ಮ ಕೈಯೊಳಗೆ ಇಟ್ಟುಕೊಂಡಿದ್ದಾರೆ’ ಅನ್ನೋದು‌. ಹಾಗಾದ್ರೆ ಪ್ರಧಾನಿ ಮೋದಿ ಅವರು ಪ್ರೆಸ್ ಮೀಟ್ ಮಾಡಲ್ವಾ?, ಯಾಕೆ?..

ಈ ಎಲ್ಲಾ ಪ್ರಶ್ನೆಗಳಿಗೂ ಪ್ರಧಾನಿ ಮೋದಿ ಅವರೇ ಇಂಡಿಯಾ ಟುಡೇ ಗ್ರೂಪ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಾನು ಎಂದಿಗೂ ಸಂದರ್ಶನಗಳಲ್ಲಿ ಭಾಗಿಯಾಗುವುದಿಲ್ಲ. ಪ್ರೆಸ್ ಮೀಟ್‌ಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿಲ್ಲ. ಆದರೆ, ಮಾಧ್ಯಮಗಳ ಪಾತ್ರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಬೇಕಿವೆ. ಜನಸಾಮಾನ್ಯರನ್ನು ತಲುಪಲು ಇಂದು ನಮ್ಮ ನಡುವೆ ಇರುವ ಸಾಧನ ಕೇವಲ ಮಾಧ್ಯಮ ಮಾತ್ರವೇ ಅಲ್ಲ. ಇಂದು ಸಾರ್ವಜನಿಕರನ್ನು ತಲುಪಲು ನಮ್ಮ ನಡುವೆ ಸಾಕಷ್ಟು ಸಂವಹನ ಪ್ರಕಾರಗಳು ಇವೆ ಎಂದು ಹೇಳಿದ್ದಾರೆ.

ಹಾಗೆಯೇ, ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೀವು ನಡೆಸುತ್ತಿದ್ದಷ್ಟು ಪ್ರೆಸ್ ಮೀಟ್‌ಗಳನ್ನು ನೀವು ಪ್ರಧಾನಿಯಾದ ಬಳಿಕ ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಅವರು ಉತ್ತರ ನೀಡಿದ್ದು, ಮಾಧ್ಯಮಗಳನ್ನು ಈಗ ನಿರ್ಧಿಷ್ಟ ರೀತಿಯಲ್ಲಿ ಮಾತ್ರವೇ ಬಳಕೆ ಮಾಡಲಾಗುತ್ತಿದೆ. ಮಾಧ್ಯಮಗಳು ಹೋಗುತ್ತಿರುವ ಆ ನಿರ್ಧಿಷ್ಟ ಪಥದಲ್ಲಿ ನಾನು ಮುಂದುವರಿಯಲು ಬಯಸುತ್ತಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ.

ನಾನು ವಿಜ್ಞಾನ ಭವನದಲ್ಲಿದ್ದು ರಿಬ್ಬನ್‌ಗಳನ್ನು ಕತ್ತರಿಸಬಹುದು. ಆದರೆ ಅದು ನನ್ನ ಗುರಿ ಅಲ್ಲ. ಪ್ರಧಾನ ಮಂತ್ರಿಯಾಗಿ ನಾನು ಸಾಕಷ್ಟು ಕಷ್ಟ ಪಡಬೇಕು. ಪ್ರತಿ ಬಡ ವನ ಮನೆಗೂ ನಾನು ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಯೋಜನೆಯ ಜೊತೆಗೆ ನಾನು ದೇಶದ ಚಿಕ್ಕ ಹಳ್ಳಿಯೊಂದಕ್ಕೂ ಹೋಗುತ್ತೇನೆ‌. ಆ ಯೋಜನೆಗಳಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಜನರನ್ನು ತಲುಪಲು ನಮ್ಮ ನಡುವೆ ಸದ್ಯ ಸಾಕಷ್ಟು ದಾರಿಗಳಿವೆ. ಹಿಂದೆ ಜನರು ಮಾಧ್ಯಮಗಳಿಗಾಗಿ ಮತ್ತು ಫೋಟೋಗಾಗಿ ಸರ್ಕಾರದ ಏಕಪಕ್ಷೀಯ ದೃಷ್ಟಿಕೋನವನ್ನು ಹೇಳುತ್ತಿದ್ದರು. ಆ‌ ಸಂಸ್ಕೃತಿ ನನಗೆ ಸಮ್ಮತವಲ್ಲ. ನಾನು ದೇಶದ ಸಂಸತ್‌ಗೆ ಉತ್ತರಾದಾಯಿಯಾಗಿದ್ದೇನೆ. ಎಲ್ಲಾ ಪ್ರಶ್ನೆಗಳಿಗೂ ನಾನು ಅಲ್ಲಿಯೇ ಉತ್ತರ ನೀಡುತ್ತೇನೆ ಎಂದು ಅವರು ನುಡಿದಿದ್ದಾರೆ.

ಈ‌‌ ಮೊದಲು ನಾನು ಆಜ್ತಕ್ ಜೊತೆ ಮಾತನಾಡುತ್ತಿದ್ದೆ. ಆದರೆ ಈಗ ಜನತೆ ನಾನು ಯಾವ ನಿರೂಪಕನ ಜೊತೆಗೆ ಸಂದರ್ಶನ ನಡೆಸುತ್ತಿದ್ದೇನೆ ಎನ್ನುವುಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇಂದು ಮಾಧ್ಯಮ ಪ್ರತ್ಯೇಕ ಘಟಕವಾಗಿ ಉಳಿದಿಲ್ಲ. ನಾವು ಸಾರ್ವಜನಿಕರ ಜೊತೆ ಮಾತನಾಡಿದಾಗ ಸಂವಹನ ದ್ವಿಮುಖವಾಗುತ್ತದೆ. ಸಾರ್ವಜನಿಕರು ಸಹ ತಮ್ಮ ಧ್ವನಿಯನ್ನು ಮಾಧ್ಯಮಗಳಲ್ಲಿ ವ್ಯಕ್ತಪಡಿಸಬಹುದು ಎಂದು ಅವರು ತಮ್ ಅಭಿಪ್ರಾಯ ತಿಳಿಸಿದ್ದಾರೆ.

Tags

Related Articles

Close