ಪ್ರಚಲಿತ

ತನ್ನ ದೇಶದ ನಾಗರಿಕರ ಸಮ್ಮಾನಕ್ಕಾಗಿ ಬ್ರಿಟನ್ ಅನ್ನೆ ಎದುರು ಹಾಕಿಕೊಂಡ ಪ್ರಧಾನ ಸೇವಕ!! ವೀಸಾ ಪ್ರಕ್ರಿಯೆಯನ್ನು ಸುಧಾರಿಸುವ ಭಾರತದ ಕೋರಿಕೆಯನ್ನು ಪುರಸ್ಕರಿಸದ ಕಾರಣ ಒಪ್ಪಂದಕ್ಕೆ ಸಹಿ ಹಾಕದ ಮೋದಿ!!

Memorandum of Understanding (MoU) ಎರಡು (ದ್ವಿಪಕ್ಷೀಯ) ಅಥವಾ ಹೆಚ್ಚಿನ (ಬಹುಪಕ್ಷೀಯ) ಪಕ್ಷಗಳ ನಡುವಿನ ಒಪ್ಪಂದದ ಪ್ರಕಾರವಾಗಿದೆ. ಇದು ಪಕ್ಷಗಳ ನಡುವಿನ ಇಚ್ಛೆಯ ಒಮ್ಮುಖವನ್ನು ವ್ಯಕ್ತಪಡಿಸುತ್ತದೆ, ಮತ್ತು ಉದ್ದೇಶಿತ ಸಾಮಾನ್ಯವಾದ ಕ್ರಮವನ್ನು ಸೂಚಿಸುತ್ತದೆ. ಭಾರತ ಮತ್ತು ಬ್ರಿಟನ್ ನಡುವೆ ಇಂಥಹದ್ದೆ ಒಂದು MoU ಗೆ ಮೋದಿಯವರು ಹಸ್ತಾಕ್ಷರ ಹಾಕಬೇಕಾಗಿತ್ತು. ಆದರೆ ಬ್ರಿಟನ್ ತನ್ನ ಕೋರಿಕೆಯನ್ನು ಪುರಸ್ಕರಿಸದ ಕಾರಣ ಮೋದಿಯವರು ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ತಿಳಿದುಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಇತ್ತೀಚಿನ ಬ್ರಿಟಿಸ್ ಐಸ್ಲ್ಸ್ ಭೇಟಿ ಸಂಧರ್ಭದಲ್ಲಿ ಮೋದಿಯವರು ಬ್ರಿಟನ್ ನಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯ ನಾಗರಿಕರನ್ನು ವಾಪಾಸು ಕರೆಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಬ್ರಿಟನ್ ನಲ್ಲಿ ವೀಸಾ ಅವಧಿ ಮುಗಿದ ಮೇಲೆಯೂ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ವಾಪಾಸು ಕರೆಸಿಕೊಳ್ಳುವಂತೆ ಬ್ರಿಟನ್ ಭಾರತಕ್ಕೆ ಕೋರಿತ್ತು. ಅದಕ್ಕೆ ಪ್ರತಿಯಾಗಿ ಭಾರತವು ಬ್ರಿಟನಿನ ವೀಸಾ ಪ್ರಕ್ರಿಯೆಯನ್ನು ಭಾರತೀಯರಿಗೆ ಸುಲಭಗೊಳಿಸಲು ಕೇಳಿಕೊಂಡಿತ್ತು. ಇದಕ್ಕೆ ಒಪ್ಪಿದ್ದ ಬ್ರಿಟನ್ ಈ ನಿಟ್ಟಿನಲ್ಲಿ ಯಾವುದೇ ತೆರನಾದ ಬೆಳವಣಿಗೆಯನ್ನು ಮಾಡಿರಲಿಲ್ಲ. ಇದನ್ನು ಮನಗಂಡ ಮೋದಿ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ತನ್ನ ದೇಶದ ನಾಗರಿಕರ ಆತ್ಮ ಸಮ್ಮಾನಕ್ಕಾಗಿ ಮೋದಿ ಬ್ರಿಟನ್ ಅನ್ನೆ ಎದುರು ಹಾಕಿಕೊಂಡಿದ್ದಾರೆ!!

ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರೆನ್ ರಿಜಿಜು ಮತ್ತು ಬ್ರಿಟನಿನ ವಲಸೆ ಇಲಾಖೆಯ ಸಚಿವ ಕ್ಯಾರೋಲಿನ್ ನೋಕ್ಸ್ ಜನವರಿಯಲ್ಲಿ ಈ ಬಗ್ಗೆ ಮಾತುಕತೆ ನಡೆಸಿದ್ದರು. ಬ್ರಿಟನ್ ನಲ್ಲಿ ಸಂಗಾತಿ ವೀಸಾ ನೀಡಲು ಬ್ರಿಟನ್ ನಿರಾಕರಿಸುತ್ತಿದೆ. ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ವೀಸಾ ನಿರಾಕರಿಸುವ ಪ್ರಕ್ರಿಯೆಯನ್ನು ಬದಲಾಯಿಸುವುದರಿಂದ ವಿದ್ಯಾರ್ಥಿಗಳು ಮತ್ತು ಕಾರ್ಪೋರೆಟ್ ಉದ್ಯೋಗಿಗಳಿಗೆ ಸಂಬಂಧಿಸಿದ ಅಲ್ಪಾವಧಿಯ ವೀಸಾಗಳು ಹೆಚ್ಚು ಶ್ರಮವಿಲ್ಲದೆ ಸಿಗುವಂತಾಗುತ್ತದೆ ಎನ್ನುವುದು ಭಾರತದ ವಾದ. ತನ್ನ ವೀಸಾ ಪ್ರಕ್ರಿಯೆಯನ್ನು ಸಡಿಲಗೊಳಿಸುವುದಾಗಿ ಒಪ್ಪಿಕೊಂಡಿದ್ದ ಬ್ರಿಟನ್ ಇದುವರೆಗೂ ಕಾರ್ಯರೂಪದಲ್ಲಿ ಇದನ್ನು ಇಳಿಸಿಲ್ಲ.

ಎಲ್ಲವೂ ಯೋಜನೆಗಳ ಪ್ರಕಾರ ನಡೆದಿದ್ದರೆ ಭಾರತೀಯರು ಸುಧಾರಿತ ವೀಸಾ ಅನುಭವದ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದಿತ್ತು ಮತ್ತು ಬ್ರಿಟನ್ ಸಹ ತಮ್ಮ ದೇಶದಲ್ಲಿ ಉಳಿಯಲು ಯಾವುದೇ ಕಾನೂನುಬದ್ದ ಹಕ್ಕು ಹೊಂದಿರದ ಅಕ್ರಮ ವಲಸಿಗರಿಂದ ಮುಕ್ತಿ ಪಡೆಯಬಹುದಿತ್ತು. ಇದಲ್ಲದೆ ಬ್ರಿಟನ್ ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಅವರಂಥವರನ್ನು ಭಾರತಕ್ಕೆ ಮರಳಿ ಕಳುಹಿಸಿಕೊಡುವ ವಿಷಯದಲ್ಲೂ ಬ್ರಿಟನ್ ಮೀನ ಮೇಷ ಎಣಿಸುತ್ತಿದೆ. ಬ್ರಿಟನ್ ಪ್ರಧಾನ ಮಂತ್ರಿ ಥೆರೆಸಾ ಮೇ, ಭಾರತದ ಜೈಲುಗಳು ಮಲ್ಯನಿಗೆ ವಾಸಿಸಲು ಯೋಗ್ಯವಾಗಿದೆಯೆ ಎಂದು ಮೋದಿ ಅವರನ್ನು ಪ್ರಶ್ನಿಸಿದಾಗ, ಪ್ರತ್ಯುತ್ತರ ನೀಡಿದ ಮೋದಿ, ಬ್ರಿಟಿಷ್ ವಸಾಹತು ಸರ್ಕಾರವು ಗಾಂಧಿ ಮತ್ತು ನೆಹರುಗಳಂತಹ ನಾಯಕರನ್ನು ಸೆರೆಹಿಡಿದಿದ್ದ ಅವೆ ಜೈಲುಗಳಿವು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ!! ತಾವು ಮಹಾತ್ಮಾಗಾಂಧಿಯಂತವರನ್ನು ಸೆರೆ ಇಟ್ಟಿದ್ದ ಅವೆ ಜೈಲುಗಳಿವು ಎಂಬುದನ್ನು ಬ್ರಿಟಿಷ್ ಸರ್ಕಾರಕ್ಕೆ ಮತ್ತೆ ನೆನಪಿಸಿಕೊಟ್ಟು ಮಾತಿನೇಟು ಬಿಗಿದಿದ್ದಾರೆ ಮೋದಿ.

ಮಲ್ಯ ಮತ್ತು ಮೋದಿ ವಿಷಯಗಳಲ್ಲಿ ಬ್ರಿಟನ್ ತನ್ನ ಕೈವರ್ತನಾ ಪ್ರಕ್ರಿಯೆಯನ್ನು ವೇಗಗೊಳಿಸಬೇಕೆಂದು ಭಾರತ ಬಯಸುತ್ತಿದ್ದರೂ ಬ್ರಿಟನ್ ನೀರಸ ಪ್ರತಿಕ್ರಿಯೆ ತೋರುತ್ತಿದೆ. ತನ್ನ ಕೋರಿಕೆಗಳಿಗೆ ಬೆಲೆ ಕೊಡದೆ ಮೀನ ಮೇಷ ಎಣಿಸುತ್ತಿರುವ ಬ್ರಿಟನ್ ಗೆ ಸರಿಯಾದ ಪಾಠ ಕಲಿಸಿದ್ದಾರೆ ಮೋದಿ. ತನ್ನ ದೇಶದ ವಿಷಯ ಬಂದಾಗ ತಾವು ಯಾರ ಜೊತೆಗೂ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ಪದೆ ಪದೆ ತೋರಿಸುತ್ತಿದ್ದಾರೆ ಪ್ರಧಾನ ಸೇವಕ. ಇಂತಹ ಧೀಮಂತ ವ್ಯಕ್ತಿತ್ವದ ನಾಯಕ ಸಿಕ್ಕಿರುವುದು ನಮ್ಮ ಸೌಭಾಗ್ಯ. ಎಲ್ಲಕ್ಕಿಂತ ಮೊದಲು ದೇಶ ಎನ್ನುವ ಅಪ್ಪಟ ದೇಶ ಪ್ರೇಮಿ ಮೋದಿ ಮತ್ತೆ ಮತ್ತೆ ವಿಜಯಿಯಾಗಿ ಬರಲಿ. ಭಾರತದ ಕೀರ್ತಿ ದಶ ದಿಕ್ಕುಗಳಲ್ಲೂ ಹಬ್ಬಲಿ.

-ಶಾರ್ವರಿ

Tags

Related Articles

Close