ಪ್ರಚಲಿತ

ಕರುನಾಡಿನಲ್ಲಿ ನಮೋ ಘರ್ಜನೆ! ವಿಪಕ್ಷಗಳ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ!

ಹೋದಲ್ಲಿ ಬಂದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ದೇಶದ ಮಾನ ಹರಾಜು ಹಾಕುವ ಮತ್ತು ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶಕಾಯೋ ಸೈನಿಕರನ್ನೇ ಅವಮಾನಿಸುವವರನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ ಪ್ರಧಾನಿ ನರೇಂದ್ರ ಮೋದಿ ಇಂದು ಕರ್ನಾಟಕದಲ್ಲಿ ವಿಪಕ್ಷಗಳ ವಿರುದ್ಧ ಅಬ್ಬರಿಸಿದ್ದಾರೆ. ಇಂದು ಕರ್ನಾಟಕಕ್ಕೆ ಆಗಮಿಸಿದ ಮೋದಿ ಚಿತ್ರದುರ್ಗದಲ್ಲಿ ಬಹಿರಂಗ ಸಮಾವೇಶದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ಕಂಡು ವೇದಿಕೆಯಿಂದ ಕೈ ಮುಗಿದು ನಮಸ್ಕರಿಸಿ, ನಾನು ನಿಮ್ಮ ಚೌಕಿದಾರ್ ಎಂದು ಹೇಳುತ್ತಾ ಕನ್ನಡದಲ್ಲೇ ಮಾತು ಆರಂಭಿಸಿದ್ದಾರೆ. ಮೋದಿ ದೇಶದ ಯಾವುದೇ ಮೋಲೆಗೆ ಹೋಗಲಿ ಆದರೆ ಕರ್ನಾಟಕದ ಸಮಾವೇಶ ವಿಶೇಷವಾಗಿ ಗುರುತಿಸಲ್ಪಡುತ್ತದೆ, ಯಾಕೆಂದರೆ ಹಿಂದೂಪರ ಸಂಘಟನೆಗಳ ಪ್ರಾಬಲ್ಯ ಹೆಚ್ಚಿರುವುದು ಕರ್ನಾಟಕದಲ್ಲೇ, ಆದ್ದರಿಂದ ಮೋದಿಯ ಕರ್ನಾಟಕ ಪ್ರವಾಸ ದೇಶಾದ್ಯಂತ ಸುದ್ಧಿ ಮಾಡುತ್ತದೆ. ಇಂದು ಚಿತ್ರದುರ್ಗ ಮತ್ತು ಮೈಸೂರಿಗೆ ಆಗಮಿಸಿದ ಮೋದಿ ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರವನ್ನೇ ಪ್ರಯೋಗಿಸಿದ್ದಾರೆ.!

ಒಬ್ಬ ಮೋದಿಯನ್ನು ಸೋಲಿಸಲು ಇಂದು ಹತ್ತಾರು ಪಕ್ಷಗಳು ಒಂದಾಗಿವೆ, ಇದು ನಿಜಕ್ಕೂ ಉತ್ತಮ‌ ಬೆಳವಣಿಗೆ ಎಂದು ಮಹಾಘಟಬಂಧನದ ವಿರುದ್ಧ ಟೀಕೆ ಮಾಡಿದ ಪ್ರಧಾನಿ ಮೋದಿ, ಕಳೆದ ಐದು ವರ್ಷಗಳಲ್ಲಿ ನಮ್ಮ ಸರಕಾರ ಈ ದೇಶಕ್ಕಾಗಿ ಮತ್ತು ದೇಶದ ಜನರಿಗಾಗಿ ಏನು ಮಾಡಿದೆ ಎಂಬುದು ಮಹಾಘಟಬಂಧನದ ನಾಯಕರು ನಿರ್ಣಯ ಮಾಡಲು ಸಾಧ್ಯವಿಲ್ಲ, ಮತದಾನದ ದಿನ ಈ ದೇಶದ ಜನರೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.ಅದೇ ರೀತಿ ಮೋದಿಯನ್ನು ದ್ವೇಷಿಸುವ ಭರದಲ್ಲಿ ಕೆಲವರು ಈ ದೇಶದ ಸೈನಿಕರನ್ನೇ ಅವಮಾನ ಮಾಡುತ್ತಿದ್ದಾರೆ ಎಂದಿರುವ ಮೋದಿ, ಮೋದಿಗೆ ಅವಮಾನ ಮಾಡಿದರೆ ಅದು ನನಗೆ ಒಬ್ಬನಿಗೆ ಮಾತ್ರ, ಆದರೆ ಸೈನಿಕರಿಗೆ ಅವಮಾನ ಮಾಡಿದರೆ ಇಡೀ ದೇಶದ ಜನರಿಗೆ ಅವಮಾನವಾದಂತೆ ಎಂದು ವಿಪಕ್ಷಗಳ ವಿರುದ್ಧ ಮೋದಿ ಕಿಡಿ ಕಾರಿದ್ದಾರೆ.!

ಪಾಕ್ ಮೇಲೆ ದಾಳಿ ಮಾಡಿದ್ದು ಸರಿಯೋ ತಪ್ಪೋ?

ಈ‌ ಹಿಂದೆ ಭಾರತದ ಮೇಲೆ ದಾಳಿ ನಡೆದರೂ ಕೂಡ ನಮ್ಮ ದೇಶದ ಸರಕಾರ ಸುಮ್ಮನೆ ಕೂರುತ್ತಿತ್ತು, ಆದರೆ ಈಗ ಪಾಕಿಸ್ತಾನದ ಒಳಗೆ ನುಗ್ಗಿ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ, ನಮ್ಮ ಸರಕಾರದ ಇಂತಹ ನಡೆ ಸರಿಯೋ ತಪ್ಪೋ ಎಂದು ನೆರೆದಿದ್ದ ಜನರಲ್ಲಿ ಕೇಳಿದ ಮೋದಿ, ನಮ್ಮ ಸೈನಿಕರು ನಡೆಸಿದ ಪರಾಕ್ರಮಕ್ಕೆ ಇಲ್ಲಿ ಕೆಲವರು ಸಾಕ್ಷಿ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕಾಲುಕೆರೆದು ಜಗಳಕ್ಕೆ ಬರುತ್ತಿದೆ, ಇಂತಹ ಕಠಿಣ ಸನ್ನಿವೇಶದಲ್ಲೂ ನಮ್ಮ ಸರಕಾರ ಪಾಕಿಸ್ತಾನದ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಂಡಿದೆ, ಇದರ ಪರಿಣಾಮವಾಗಿಯೇ ಪಾಕಿಸ್ತಾನವನ್ನು ಜಗತ್ತು ಮೂಲೆಗುಂಪು ಮಾಡಿರುವುದು ಎಂದು ಹೇಳಿದ ಮೋದಿಣ ನಮ್ಮ ದೇಶಕ್ಕೆ ಯಾವ ಸರಕಾರ ಬೇಕು ಎಂಬ ತೀರ್ಮಾನ ನೀವೇ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.!

ಮತದಾನ ಎಂಬುದು ದೇಶದ ಪ್ರತಿಯೊಬ್ಬನ‌ ಕರ್ತವ್ಯ ಎಂದು ಮತ್ತೊಮ್ಮೆ ಹೇಳಿದ‌ ಮೋದಿ, ಸರಿ ತಪ್ಪು ಎರಡೂ ನಮ್ಮ ಕೈಯಲ್ಲೇ ಇದೆ, ಮತದಾನದ ದಿನ ತಪ್ಪದೆ ಮತದಾನ ಮಾಡಿ ಬಲಿಷ್ಠ ಭಾರತ ನಿರ್ಮಿಸುವಲ್ಲಿ ಕೈಜೋಡಿಸಿ ಎಂದು ಕರೆ ನೀಡಿದ ಪ್ರಧಾನಿ ಮೋದಿ, ಬಡವರು, ಮಧ್ಯಮ ವರ್ಗದ ಜನರು, ಡಾಕ್ಟರ್‌ಗಳು, ಇಂಜಿನಿಯರ್‌ಗಳು, ವಿದ್ಯಾರ್ಥಿಗಳು, ವಕೀಲರು ಹೀಗೆ ಪ್ರತಿಯೊಬ್ಬರೂ ಕೂಡ ನಮ್ಮ ಸರಕಾರದ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಅದೇ ರೀತಿ ಮೈಸೂರಿನಲ್ಲೂ ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ನಾನು ನಿಮ್ಮ ಚೌಕಿದಾರ್ ನರೇಂದ್ರ ಮೋದಿ ಎಂದು ಹೇಳುತ್ತಿದ್ದಂತೆ ಸೇರಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಾಜ್ಯ ಸರಕಾರ ಮತ್ತು ವಿಪಕ್ಷಗಳ ವಿರುದ್ಧ ಇಲ್ಲೂ ವಾಗ್ದಾಳಿ ನಡೆಸಿದ ಮೋದಿ, ದೆಹಲಿಯಲ್ಲಿ ಕೂತು ಕರ್ನಾಟಕದ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದಾರೆ ಕೆಲವರು, ಪರ್ಸಂಟೇಜ್ ಲೆಕ್ಕ ಹಾಕಲು ಕರ್ನಾಟಕವನ್ನು ಬಳಸಿಕೊಂಡ ಕೆಲವರಿಂದ ಇಂದು ನಿಮಗೂ ಸಂಕಷ್ಟ ಎದುರಾಗಿರಬಹುದು ಎಂದರು. ನಮ್ಮ ಸರಕಾರ ಯಾವುದೇ ಒಂದು ವರ್ಗದ ಜನರನ್ನು ಅಭಿವೃದ್ಧಿ ಮಾಡುತ್ತಿಲ್ಲ, ಇಡೀ ದೇಶದ ಏಳಿಗೆಗಾಗಿ ನಾವು ಶ್ರಮಿಸುತ್ತಿದ್ದೇವೆ, ಆದರೆ ಮೋದಿಯೊಬ್ಬನನ್ನು ತೊಲಗಿಸಲು ಎಲ್ಲಾ ವಿಪಕ್ಷಗಳು ಒಂದಾಗಿವೆ ಎಂದರು. ಇತ್ತೀಚಿಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಸುಳ್ಳಿನ ಪತ್ರ ಎಂದಿರುವ ಮೋದಿ, ಪ್ರಣಾಳಿಕೆ ಕಂಡು ಇಡೀ ದೇಶವೇ ನಗಾಡುವಂತಾಗಿದೆ ಎಂದರು. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಕೇವಲ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದೆ ವಿನಃ, ಬಡತನ ನಿರ್ಮೂಲನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ನಮ್ಮ ಯೋಜನೆಗಳು ಬಡವರಿಗೆ ಸಿಗುತ್ತಿರುವುದನ್ನು ಕಂಡು ಕಾಂಗ್ರೆಸ್ ಹತಾಶವಾಗಿದೆ ಎಂದು ವ್ಯಂಗ್ಯವಾಡಿದರು. ನಮ್ಮ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ, ಕರ್ನಾಟಕದ ವಿಮಾನ ನಿಲ್ದಾಣಗಳನ್ನು ದ್ವಿಗುಣಗೊಳಿಸುತ್ತೇವೆ ಎಂದು ಮೋದಿ ಭರವಸೆ ನೀಡಿದರು. ನಮ್ಮ ಸರಕಾರದ ಧ್ಯೇಯ ವಾಕ್ಯ ಒಂದೇ, ದೇಶದ ವಿಕಾಸ – ದೇಶದ ವಿಕಾಸ – ದೇಶದ ವಿಕಾಸ ಎಂದು ಮೋದಿ ಮತ್ತೊಮ್ಮೆ ಪುನರುಚ್ಚರಿಸಿದರು. ಅದೇ ರೀತಿ ಮೈತ್ರಿ ಸರಕಾರ ಕೇವಲ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಿದೆ ಮತ್ತು ಇತ್ತ ರೈತರಿಗೆ ಸಾಲ‌ ಮರುಪಾವತಿ ಮಾಡುವಂತೆ ನೋಟೀಸ್ ನೀಡುತ್ತಿದೆ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಸರಕಾರ ಈಗಾಗಲೇ ಘೋಷಿಸಿದಂತೆ ೩ ಕೋಟಿಗೂ ಅಧಿಕ ರೈತರ ಖಾತೆಗೆ ೬೦೦೦ ಜಮಾ ಮಾಡಿದ್ದೇವೆ ಎಂದು ಹೇಳಿಕೊಂಡ ಪ್ರಧಾನಿ ಮೋದಿ, ಕುಟುಂಬ ರಾಜಕಾರಣಕ್ಕೆ ಸರಿಯಾದ ಬುದ್ದಿ ಕಲಿಸಬೇಕಿದೆ ಎಂದು ಹೇಳಿದರು.!

ಕರ್ನಾಟಕದಲ್ಲಿ ಮೋದಿ ಸಭೆಯಿಂದ ವಿಪಕ್ಷಗಳ ನಾಯಕರಲ್ಲಿ ಭಯ ಹುಟ್ಟಿಕೊಂಡಿದೆ ಎಂಬುದು ಅಕ್ಷರಶಃ ಸತ್ಯ. ಯಾಕೆಂದರೆ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಸೇರಿದ ಲಕ್ಷ ಲಕ್ಷ ಜನರ ಕೂಗು ಒಂದೇ ಆಗಿತ್ತು, “ಮೋದಿ ಮೋದಿ ಮೋದಿ”. ಮೋದಿ ವಿಪಕ್ಷಗಳ ವಿರುದ್ಧ ನಡೆಸಿದ ಪ್ರಹಾರ ಕರ್ನಾಟಕದ ರಾಜಕೀಯ ದಿಕ್ಕನ್ನೇ ಬದಲಾಯಿಸುವ ಮುನ್ಸೂಚನೆ ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ. ಅದೇನೇ ಇರಲಿ, ಮೋದಿ ಬಂದ ನಂತರ ಕರ್ನಾಟಕ ಬಿಜೆಪಿಗೆ ಮತ್ತಷ್ಟು ಹುರುಪು ಹೆಚ್ಚಾಗಿದೆ ಎಂಬುದು ಸತ್ಯ.!

-ಅರ್ಜುನ್

Tags

Related Articles

FOR DAILY ALERTS
Close