ಪ್ರಚಲಿತ

ಬಿಜೆಪಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ: ಪ್ರಧಾನಿ ಮೋದಿ

ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಸಾಧಿಸಲು ಕಠಿಣ ಎನಿಸುವ ಭರವಸೆಗಳನ್ನು ಜನರಿಗೆ ನೀಡಿ, ಗೆದ್ದ ಬಳಿಕ ನುಡಿದಂತೆ ‌ನಡೆದು, ನೀಡಿದ ಭರವಸೆಗಳವನ್ನು ಈಡೇರಿಸಿ ಆ ಮೂಲಕವೇ ಜನರಿಗೆ ಅತ್ಯಂತ ಆಪ್ತರಾದ ವ್ಯಕ್ತಿ ಎಂದರೂ ತಪ್ಪಾಗಲಾರದು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ನಿಷೇಧ, ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿದ್ದ ಆರ್ಟಿಕಲ್ 370 ರದ್ಧತಿ ಹೀಗೆ ಅನೇಕ ಕಠಿಣಾತಿಕಠಿಣ ಅಥವಾ ಇವೆಲ್ಲವೂ ಭಾರತದಲ್ಲಿ ನಡೆಯುವುದಕ್ಕೆ ಸಾಧ್ಯವೇ ಇಲ್ಲವೇನೋ ಎಂಬಂತಹ ಹಲವಾರು ಅಸಾಧ್ಯ ಕೆಲಸಗಳನ್ನು ಯಾವುದೇ ಗೊಂದಲಗಳಿಲ್ಲದೆ ಸುಲಭ ಸಾಧ್ಯವಾಗಿಸಿದ ಕೀರ್ತಿ ಪ್ರಧಾನಿ ಮೋದಿ ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರದ್ದು.

ಈಗ ಮತ್ತೊಮ್ಮೆ ಪ್ರಧಾನಿ ಮೋದಿ ಅವರು ಜನತೆಗೆ ಮತ್ತೊಂದು ಭರವಸೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡುವುದಾಗಿ ಅವರು ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ರಚಿಸಲಿದ್ದೇವೆ. ಈ ಅವಧಿಯಲ್ಲಿ ದೇಶ ವಿಶ್ವದ ಮೂರನೇ ಅಗ್ರ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ ಉತ್ತರಾಖಂಡವು ಪ್ರಪಂಚದ ಎಲ್ಲಾ ಹೂಡಿಕೆದಾರರಿಗೆ ತೆರೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡುವಂತೆಯೂ ಅವರು ಹೂಡಿಕೆದಾರರಿಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಹಲವು ಯೋಜನೆಗಳು ಜಾರಿಯಲ್ಲಿದ್ದು, ಪ್ರತಿ ಹಳ್ಳಿಯಲ್ಲಿಯೂ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯ ಸಬಲೀಕರಣದ ಹೊಸ ಬ್ರ್ಯಾಂಡ್ ಆಗಲಿದೆ ಎಂದೂ ಅವರು ಹೇಳಿದ್ದಾರೆ.

Tags

Related Articles

Close