ಪ್ರಚಲಿತ

ಪಂಡಿತ್ ನೆಹರೂ ಕೋಮುವಾದಿಯೇ? ಕಾಂಗ್ರೆಸ್ ನವರೇ ಉತ್ತರಿಸಿ! ತಮ್ಮ ಭಾಷಣದಲ್ಲೇ ವಿಪಕ್ಷಗಳ ಮೇಲೆ ಮಾತಿನ ಚಾಟಿ ಬೀಸಿದ ಪ್ರಧಾನಿ!

ಪೌರತ್ವ ತಿದ್ದುಪಡಿ ಕಾಯಿದೆಯ ಸಲುವಾಗಿ ದೇಶದಲ್ಲಿ ಕೆಲ ದುರುಳ ರಾಜಕಾರಣಿಗಳ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ನಡೆದ ನಾಟಕೀಯ ಗಲಭೆ- ಗದ್ದಲಗಳನ್ನು ಇಡೀ ದೇಶವೇ ಕಂಡಿದೆ. ಈ ಕಾಯಿದೆಯಿಂದ ಯಾವೊಬ್ಬ ಭಾರತೀಯನಿಗೂ ಯಾವುದೇ ತೊಂದರೆಯಿಲ್ಲ ಎಂಬುವುದು ಸ್ಪಷ್ಟವಿದ್ದರು ಅದನ್ನು ಒಪ್ಪುವ ಮನಸ್ಥಿತಿ ಕೆಲವರಿಗಿಲ್ಲ. ಅದರ ಸಲುವಾಗಿ ದೇಶದೆಲ್ಲೆಡೆ ವಿಷಬೀಜ ಬಿತ್ತಿದ್ದೇ ಹೆಚ್ಚು, ಅದರಲ್ಲೂ ಕೆಲವರಂತೂ ಮೋದಿಜೀ ಸರ್ಕಾರದ ಹೆಸರು ಕೆಡಿಸಲು ಇದುವೇ ಒಳ್ಳೆಯ ಸಮಯವೆಂದು ಇಲ್ಲಸಲ್ಲದ ಸುಳ್ಳು ಸುದ್ಧಿಗಳನ್ನೂ ಹರಡಿದರು.

ಆದರೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಲೋಕಸಭೆಯಲ್ಲಿ ಇವುಗಳಿಗೆಲ್ಲ ತಕ್ಕ ಉತ್ತರ ನೀಡಿದ್ದಾರೆ. ಹೌದು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವ ನೀಡುವುದು ಜವಹರಲಾಲ್ ನೆಹರುರವರ ಉದ್ದೇಶವಾಗಿತ್ತು ಎಂದು ಈ ಹಿಂದೊಮ್ಮೆ ಸ್ಪಷ್ಟಪಡಿಸಿದ್ದ ಮೋದಿಜೀ, ಅದೇ ವಿಷಯದ ಬಗ್ಗೆ ಮಾತಾನಾಡುತ್ತ ಮೋದಿ ಲೋಕಸಭೆಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವ ನೀಡುವುದು ಜವಹರಲಾಲ್ ನೆಹರೂ ಉದ್ದೇಶವಾಗಿತ್ತು. ಹಾಗಾದರೆ ಅವರೂ ಕೋಮುವಾದಿಯೇ ಎಂದು ಜನರ ಮನಸ್ಸಲ್ಲಿ ವಿಷಬೀಜ ಬಿತ್ತಿದ ಕಾಂಗ್ರೆಸ್‌ಗೆ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳಿಗೆ ಧನ್ಯವಾದ ತಿಳಿಸುವ ಭಾಷಣ ಮಾಡಿದ ಸಂದರ್ಭದಲ್ಲಿ ದೇಶದ ಮೊದಲ ಪ್ರಧಾನಿ ನೆಹರೂ ಅವರು ಅಸ್ಸಾಂ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬೋರ್ಡೋಲೋಯಿ ಅವರಿಗೆ ಪತ್ರ ಬರೆದು, ಹಿಂದೂ ಹಾಗೂ ಮುಸ್ಲಿಂ ವಲಸಿಗರ ನಡುವೆ ವ್ಯತ್ಯಾಸವಿದೆ. ಅದನ್ನು ಗುರುತಿಸುವ ಅಗತ್ಯವಿದೆ ಎಂದು ತಿಳಿಸಿದ್ದರೆಂದು ಪ್ರಸ್ತಾಪಿಸಿದ ಮೋದಿಜೀ ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನ( ಈಗಿನ ಬಾಂಗ್ಲಾದೇಶ) ದ ಅಲ್ಪಸಂಖ್ಯಾತ ವಲಸಿಗರಿಗೆ ಭಾರತದ ಪೌರತ್ವ ನೀಡುವುದು ನೆಹರೂ ಇಚ್ಛೆಯಾಗಿತ್ತು. ಹಾಗಿದ್ದಲ್ಲಿ ನೆಹರೂ ಕೋಮುವಾದಿ ಆಗಿದ್ದರೆ? ಅಂದರೆ ಅವರ ಇಚ್ಛೆ ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡಬೇಕು ಎಂಬುವುದು ಅವರ ಒತ್ತಾಸೆಯಾಗಿತ್ತೇ..? ಎಂದು ಕಾಂಗ್ರೆಸಿಗರನ್ನು ಮೋದಿಜೀ ಪ್ರಶ್ನೆ ಮಾಡಿದಾಗ ಕಾಂಗ್ರೆಸ್ ನವರೆಲ್ಲಾ ಕಕ್ಕಾಬಿಕ್ಕಿಯಾದದ್ದು ಮಾತ್ರ ಕಟುಸತ್ಯ.

ಹೀಗೆ ಮಾತನಾಡುತ್ತಾ ಮೋದಿಜೀ, ನೆಹರೂ ಕೂಡ ಒಬ್ಬ ಉತ್ತಮ ಚಿಂತಕರಾಗಿದ್ದರು ಹೌದು ಆದರೆ ೧೯೫೦ ರಲ್ಲಿ ನಡೆದ ನೆಹರೂ- ಲಿಯಾಖತ್ ಒಪ್ಪಂದದಲ್ಲಿ ಅವರೇಕೆ ಎಲ್ಲ ಧರ್ಮದ ಅಲ್ಪಸಂಖ್ಯಾತರನ್ನೂ ಉಲ್ಲೇಖಿಸಲಿಲ್ಲ..? ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಕಾಂಗ್ರೆಸಿಗರು ಇದಕ್ಕೆ ಹೇಗೆ ಸ್ಪಷ್ಟನೆ ನೀಡುತ್ತಾರೆ..? ಎಂದು ಪ್ರಶ್ನಿಸಿದ ಮೋದಿಜೀ ಕಾಂಗ್ರೆಸ್ ಬುದ್ಧಿಜೀವಿಗಳ ಮೇಲೆ ಸಖತ್ ಬ್ಯಾಟಿಂಗ್ ಮಾಡಿ ಅವರನ್ನೇ ಅವರೊಮ್ಮೆ ಮುಟ್ಟಿಕೊಂಡು ನೋಡಿಕೊಳ್ಳವಂತೆ ಮಾಡಿದ್ದು ಮಾತ್ರ ಸತ್ಯ.

ತನಗೆ ವಯಸ್ಸಾದರೂ ಇನ್ನೂ ಅಪಕ್ವ ಬಾಲಿಶ ಹೇಳಿಕೆಗಳನ್ನು ನೀಡುವ ಕಾಂಗ್ರೆಸ್‌ನ ಚಿರಯುವ ಯುವರಾಜ ರಾಹುಲ್ ಗಾಂಧಿಯ ಅವಿವೇಕತನದ ಮಾತಿಗೆ ಪ್ರಧಾನಿ ಮೋದಿ ಕೊಟ್ಟ ಉತ್ತರ ಮಾತ್ರ ಅದ್ಭುತ..! ರಾಹುಲ್ ಗಾಂಧಿಯ ಬೆತ್ತದ ಏಟು ಹೇಳಿಕೆಯನ್ನು ಆತನ ಹೆಸರು ಹೇಳದೇ ಪ್ರಸ್ತಾಪಿಸಿದ ಮೋದಿಜೀ , ಕಾಂಗ್ರೆಸ್ ನಾಯಕರೊಬ್ಬರು ಆರು ತಿಂಗಳಲ್ಲಿ ನಾವು ಮೋದಿ ಅವರಿಗೆ ಬೆತ್ತದಿಂದ ಬಾರಿಸುತ್ತೇವೆ ಹೇಳಿದ್ದಾರೆ. ನನಗೆ ಹೊಡೆಯಲು ಅವರಿಗೆ ಇನ್ನೂ ಆರು ತಿಂಗಳು ಬೇಕು. ಈ ಅವಧಿಯಲ್ಲಿ ನಾನು ಇನ್ನೂ ಹೆಚ್ಚು ಸೂರ್ಯ ನಮಸ್ಕಾರ ಮಾಡಿ ನನ್ನ ಬೆನ್ನನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದು ತಮ್ಮ ಸಂಯಮದ ಮಾತು ಹಾಗೂ ಹಾಸ್ಯದಿಂದಲೇ ರಾಹುಲ್ ಗಾಂಧಿಯನ್ನು ಇರಿದರು.

ನಮೋ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದು ಹೀಗೆ, ಸಂಧಭಕ್ಕೆ ತಕ್ಕ ಯೋಗ್ಯ ಮಾತುಗಳು, ವರ್ತನೆ, ತನ್ನ ದೇಶದ ಮೇಲೆ ಅಗಾಧ ಪ್ರೀತಿ ಹಾಗೂ ತನ್ನ ದೇಶದ ಇತಿಹಾಸದ ಬಗ್ಗೆ ಮಾಹಿತಿ!
ದೇಶವೂ, ವಿಶ್ವವೂ ಅವರನ್ನು ಕೊಂಡಾಡುವುದು ಇದೆ ಕಾರಣಗಳಿಗೆ!

Tags

Related Articles

FOR DAILY ALERTS
Close