ಪ್ರಚಲಿತ

2024 ರ ಲೋಕಸಭಾ ಚುನಾವಣೆಯ ಬಗ್ಗೆ ಪ್ರಧಾನಿ ಮೋದಿ ಮಾತು

ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಅಭಿವೃದ್ಧಿಯ ಶಕೆ, ಆರ್ಥಿಕತೆಯ ಓಟ, ಸಮಾಜದ ತಳ ವರ್ಗದ ಜನರನ್ನು ಮೇಲೆತ್ತುವ ಚಿಂತನೆಯಲ್ಲಿ ರೂಪುಗೊಂಡ ಯೋಜನೆಗಳು ಭಾರತದ ಚಿತ್ರಣವನ್ನೇ ವಿಶ್ವದ ಭೂಪಟದಲ್ಲಿ ಬದಲಾಯಿಸಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಳೆದ ಎಪ್ಪತ್ತು ದಶಕಗಳಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ವಿಶ್ವದ ಎದುರು ಕೈ ಕಟ್ಟಿ ನಿಲ್ಲುತ್ತಿದ್ದ ಭಾರತ, ಈಗ ವಿಶ್ವದ ಕಣ್ಣಿಗೆ ನಾಯಕನ ಸ್ಥಾನದಲ್ಲಿ ನಿಲ್ಲುವ ಹಾಗಾಗಿದೆ. ಈ ಎಲ್ಲಾ ಬದಲಾವಣೆಯ ಗಾಳಿ ಬೀಸಿದ್ದು ಕಳೆದ ಹತ್ತು ವರ್ಷಗಳಲ್ಲಿ ಎಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ನಡೆದ ವಿದ್ಯಮಾನವಾಗಿದೆ. ಪ್ರಪಂಚದ ಎದುರು ನಿಶ್ಶಕ್ತ ರಾಷ್ಟ್ರ ಎಂದೇ ಬಿಂಬಿಸಿಕೊಂಡಿದ್ದ ಭಾರತದ ನಿಜವಾದ ಶಕ್ತಿ ಏನು ಎನ್ನುವುದನ್ನು ಜಗತ್ತಿನೆದುರು ಸಶಕ್ತವಾಗಿ ತೋರಿಸಿಕೊಟ್ಟ ಕೀರ್ತಿ ಏನಿದ್ದರೂ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ, ಎನ್.ಡಿ.ಎ. ಸರ್ಕಾರಕ್ಕೆ ಸಲ್ಲಬೇಕು.

ದೇಶದ ಜನರಿಗೆ ಶಿಕ್ಷಣ, ವಚನ, ವಸತಿ, ಕುಡಿಯಲು ಮನೆ ಬಾಗಿಲಿಗೆ ಶುದ್ಧ ನೀರು, ಶೌಟಾಲಯ, ಕೃಷಿಕರಿಗಾಗಿ ಹಲವಾರು ಯೋಜನೆಗಳು, ಬಡವರಿಗಾಗಿ, ಮಹಿಳೆಯರು, ಮಕ್ಕಳು, ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು, ಅದನ್ನು ಫಲಾನುಭವಿಗಳಿಗೆ ಯಾವುದೇ ಅಡ್ಡಿ ಇಲ್ಲದ ಹಾಗೆ ತಲುಪಿಸುವ ಮೂಲಕ ಸದೃಢ ಭಾರತದ ಕಲ್ಪನೆಗೆ ಜೀವ ತುಂಬಿದ ಕೀರ್ತಿ ಏನಿದ್ದರೂ ಪ್ರಧಾನಿ ಮೋದಿ ಮತ್ತು ತಂಡಕ್ಕೆ ಸಲ್ಲಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೀಷ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೇಶದ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದು, 2104 ರ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ಮುಖ್ಯ ವಿಷಯವಾಗಿತ್ತು. 2019 ರ ಲೋಕಸಭಾ ಚುನಾವಣೆಯನ್ನು ಫಲಾನುಭವಿಗಳ ಆಧಾರದಲ್ಲಿ ನಾವು ಎದುರುಗೊಂಡೆವು. ಈ ಲೋಕಸಭಾ ಚುನಾವಣೆಯಲ್ಲಿ ವೀಕ್ಷಿತ್ ಭಾರತ್ ಮುಖ್ಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ವೀಕ್ಷಿತ್ ಭಾರತ್ ಅನ್ನು ದೇಶದ ಆಕಾಂಕ್ಷೆಗಳ ವೇಗದಲ್ಲಿ ತಲುಪುವುದನ್ನು ಖಾತ್ರಿಪಪಡಿಸುವ ಮುಖ್ಯವಾದ ಚುನಾವಣೆ ಇದಾಗಿದೆ. ಈ ವಿಚಾರ ದೇಶದ ಜನರಿಗೆ ತಿಳಿದಿದೆ. ಈ ಬಾರಿಯ ಚುನಾವಣೆಯಲ್ಲಿಯೂ ದೇಶದ ಮತದಾರ ಬಾಂಧವರು ನಮ್ಮ ಜೊತೆ ಬಲವಾಗಿ ನಿಂತಿದ್ದಾರೆ ಎಂದು ಅವರು ನುಡಿದಿದ್ದಾರೆ.

ಈ ಚುನಾವಣೆಯಲ್ಲಿ ಭ್ರಷ್ಟಾಚಾರ ವಿರೋಧಿ ಮತದಾರರು ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ನಮ್ಮ ಜೊತೆಗೆ ಇದ್ದಾರೆ. ಹಾಗೆಯೇ, ಭಾರತವು ಅಭಿವೃದ್ಧಿ ಹೊಂದಬೇಕು ಎಂದು ಬಯಸುವ ಸಮಾಜದ ದೊಡ್ಡ ವರ್ಗವೂ ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುತ್ತಾರೆ. ಜನರು ಬಿಜೆಪಿ‌ಯನ್ನು ದೃಢವಾಗಿ ಬೆಂಬಲಿಸುವ ನಾಗರಿಕರು ನಮ್ಮ ನಡುವೆ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗದ ನಂತರ ಭಾರತ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರವಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಬೆಳವಣಿಗೆ ಹೊಂದುತ್ತಿರುವ ವಿಶ್ವದ ಒಂದು ರಾಷ್ಟ್ರ ಎನ್ನುವ ಹಿರಿಮೆಗೂ ಭಾರತ ಪಾತ್ರವಾಗಿದೆ. ಬ್ಯಾಂಕಿಂಗ್ ಕ್ಷೇತ್ರ, ವಿದೇಶಿ ನೇರ ಹೂಡಿಕೆ ವಲಯ, ಕಾರ್ಪೊರೇಟ್ ವಲಯ, ಆದಾಯ ತೆರಿಗೆ, ಹಣಕಾಸಿನ ನೀತಿ, ಸರ್ಕಾರದ ಸುಧಾರಣೆಗಳು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿವೆ ಎಂದಿದ್ದಾರೆ.

ಹಾಗೆಯೇ ಬಹಳ ಮುಖ್ಯವಾಗಿ ಕಳೆದ ಹತ್ತು ವರ್ಷಗಳಲ್ಲಿ ಭಾರತವು ವಿಶ್ವದ ದುರ್ಬಲ ಐದು ಆರ್ಥಿಕತೆಗಳ ಪಟ್ಟಿಯಿಂದ ಅಗ್ರ ಐದು ಆರ್ಥಿಕತೆಗಳ ಪಟ್ಟಿಗೆ ಸೇರುವಂತಾಗಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ದೇಶವನ್ನು ಹೀನಾಯ ಪರಿಸ್ಥಿತಿಗೆ ತಳ್ಳಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿದ ಮೇಲೆ ಭಾರತದ ಪರಿಸ್ಥಿತಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ. ಸರ್ಕಾರದ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಭಾರತ ವಿಕಸಿಸುತ್ತಿದೆ. ಪ್ರಪಂಚದ ಹಲವು ರಾಷ್ಟ್ರಗಳಿಗೆ ಭಾರತ ಆದರ್ಶಪ್ರಾಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close