ಪ್ರಚಲಿತ

ಆರ್ಟಿಕಲ್ 370 ರದ್ದತಿ ಬಗ್ಗೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ಜಮ್ಮು ಕಾಶ್ಮೀರಕ್ಕೆ ಅನ್ವಯವಾಗಿದ್ದ ಆರ್ಟಿಕಲ್ 370 ಪದ್ದತಿಯ ಹಿಂದಿರುವ ಕಾರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಮಾಡಿದ್ದಾರೆ.

ಅವರು ನಿನ್ನೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಹಾಗೆ ಮೂವತ್ತೆರಡು ಸಾವಿರ ಕೋಟಿ ರೂ. ಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿಪಕ್ಷಗ‌ಳ‌ ಮೇಲೆಯೂ ಕಿಡಿ ಕಾರಿದ್ದಾರೆ.

ಸದ್ಯ ಜಮ್ಮು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಆಡಳಿತ ನಡೆಸುತ್ತಿರುವ ಪ್ರತಿಪಕ್ಷಗಳು ಕೇವಲ ಸ್ವಹಿತಕ್ಕಾಗಿ ಮಾತ್ರವೇ ಕೆಲಸ ಮಾಡುತ್ತಿವೆ. ವಂಶಾಡಳಿತ ರಾಜಕಾರಣವೇ ಅವರ ಉದ್ದೇಶವಾಗಿದೆ. ಜಮ್ಮು ಕಾಶ್ಮೀರದಲ್ಲಿಯೂ ದಶಕಗಳ ಕಾಲ ರಾಜ ವಂಶದ ಆಡಳಿತ ಹೊಡೆತವನ್ನು ಅನುಭವಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.ಅವರಿಗೆ ಕೇವಲ ತಮ್ಮ ಕುಟುಂಬವನ್ನು ಉದ್ದಾರ ಮಾಡುವುದೇ ಮುಖ್ಯ. ಅದರ ಕಾಳಜಿಯನ್ನು ಮಾತ್ರ ಅವರು ವಹಿಸುತ್ತಾರೆ. ರಾಜ್ಯದ ಜನರ ಕಾಳಜಿ ಅವರಿಗೆ ಇಲ್ಲ ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜವಂಶಗಳ ರಾಜಕೀಯದಿಂದ ವಿಮುಕ್ತವಾಗಿ, ಸ್ವಾತಂತ್ರ್ಯ ಪಡೆದಿರುವುದು ನನಗೆ ಸಂತಸವನ್ನು ‌ನೀಡಿದೆ ಎಂದು ಪ್ರಧಾನಿ ಮೋದಿ ಅವರು ಸಂತಸ ಹಂಚಿಕೊಂಡಿದ್ದಾರೆ.

ಕಣಿವೆ ರಾಜ್ಯದ ಅಭಿವೃದ್ಧಿಗೆ ಆರ್ಟಿಕಲ್ 370 ಕುತ್ತಾಗಿತ್ತು. ಇದನ್ನು ಕೇಂದ್ರ ಸರ್ಕಾರ ತೊಡೆದು ಹಾಕಿದೆ. ಇದರಿಂದ ರಾಜ್ಯದ ಜನರಿಗೆ ಹಲವಾರು ಸಮಸ್ಯೆಗಳಿಗೆ ಪರಿಹಾರವೂ ದೊರೆತಿದೆ. ಮಹಿಳೆಯರಿಗೂ ‌ತಾವು ಆ ವರೆಗೆ ಕಾಣದ ಹಕ್ಕುಗಳು ದಕ್ಕಿವೆ. ಜಮ್ಮು ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚಿದ್ದ ದಿನಗಳು ಇದ್ದವು.‌ ಇಂದು ಶಾಲೆಗಳನ್ನು ರಾಜ್ಯದಲ್ಲಿ ಅಲಂಕರಿಸಲಾಗುತ್ತಿದೆ. ರಾಜ್ಯದಲ್ಲೇ ಏಮ್ಸ್‌ ಆಸ್ಪತ್ರೆ ಬಂದಿದೆ. ಇದೆಲ್ಲಾ ಆರ್ಟಿಕಲ್ 370 ರದ್ದತಿಯ ಕಾರಣದಿಂದ ಸಾಧ್ಯವಾಗಿದೆ ಎಂದರು.

ಪ್ರಸ್ತುತ ಕಣಿವೆ ರಾಜ್ಯ ಸಂಪೂರ್ಣ. ಅಭಿವೃದ್ಧಿ ಹೊಂದುತ್ತಿದೆ. ನು ದಿನ ಲೋಕಸಭಾ ಚುನಾವಣೆ ರಲ್ಲಿ ರೂ ಕಣಿವೆ ರಾಜ್ಯದ ಜನರು ತಮ್ಮ ಅಮೂಲ್ಯ ಮತಗಳನ್ನು ನೀಡಿ ಭಾರತೀಯ ಜನತಾ ಪಕ್ಷದ ಗೆಲುವಿಗೆ ಆಶೀರ್ವದಿಸಬೇಕು ಎಂದು ವಿನಂತಿಸಿದರು.

ಈ ಹಿಂದೆ ರಾಜ್ಯದಲ್ಲಿ ಕೇವಲ ಹಿಂಸಾಚರದ‌ ಸುದ್ದಿಗಳೇ ಸದ್ದು ಮಾಡುತ್ತಿದ್ದವು. ಆದರೆ ಈಗ ಕಣಿವೆ ರಾಜ್ಯ ಅಭಿವೃದ್ಧಿಯ ಬಗೆಗಿನ ಸುದ್ದಿ ಮಾಡುವಂತಾಗಿದೆ. ನಾವು ಅಭಿವೃದ್ಧಿ ಹೊಂದಿದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ‌ಕ್ಕಾಗಿ ಪ್ರತಿಜ್ಙೆ ಮಾಡುತ್ತಿದ್ದೇವೆ. ಕಳೆದ ಎಪತ್ತು ವರ್ಷಗಳ ಅಭಿವೃದ್ಧಿ ಕನಸನ್ನು ಮುಂದಿನ ಕೆಲವೇ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ ಮಾಡಿ ತೋರಿಸಲಿದೆ ಎಂದು ತಿಳಿಸಿದರು.

Tags

Related Articles

Close