ಪ್ರಚಲಿತ

ಕೈಗಾರಿಕಾ ವಲಯದ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಅಗತ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದ ದಲಿತರು, ಆದಿವಾಸಿಗಳು, ಇತರ ಹಿಂದುಳಿದ ವರ್ಗದ ಜನರಿಗೆ ಕೃಷಿ ಭೂಮಿ, ಸ್ವಂತ ಜಮೀನು ಇಲ್ಲ. ಆದ್ದರಿಂದ ಅವರ ಜೀವನೋಪಾಯ ಕೃಷಿ ಕೆಲಸಗಳಿಂದ ನಡೆಯಲು ಕಷ್ಟಸಾಧ್ಯ. ಇಂತಹ ಬಡ ಜನರು ಕೃಷಿ ಯಿಂದ ಪ್ರಗತಿ ಕಾಣಲು ಅಸಾಧ್ಯ ಎನ್ನುವ ಕಾರಣಕ್ಕೆ ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಕೈಗಾರಿಕಾ ಕ್ರಾಂತಿಯ ಅಗತ್ಯತೆಯ ಬಗ್ಗೆ ಮಾತನಾಡಿದ್ದರು ಎಂದು ಪ್ರಧಾನಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಇಂತಹ ಜನರಿಗೆ ಪೂರಕವಾಗುವ ಹಾಗೆ ಕೃಷಿ ಕ್ಷೇತ್ರಕ್ಕಿಂಕ ಹೆಚ್ಚು ಕೈಗಾರಿಕಾ ಕ್ರಾಂತಿ ನಡೆಯುವುದರ ಅಗತ್ಯತೆಯನ್ನು ಅವರು ತಿಳಿಸಿರುವುದಾಗಿದೆ.

ಡಾ. ಅಂಬೇಡ್ಕರ್ ಅವರು ಹೇಳಿದ ಎಲ್ಲಾ ವಿಷಯಗಳನ್ನು ಈ ದೇಶದ ರಾಜಕಾರಣಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈ ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಅಗತ್ಯತೆಯ ಬಗ್ಗೆ ಅಂಬೇಡ್ಕರ್ ಅವರು ಹೇಳಿದ್ದರು. ಸ್ವಂತ ಭೂಮಿ ಹೊಂದಿರದ ಜನರಿಗೆ ಜೀವನೋಪಾಯಕ್ಕೆ ಕೈಗಾರಿಕಾ ವಲಯ ಅತ್ಯಗತ್ಯ. ಅವರು ಕೃಷಿ ವಲಯದಲ್ಲಿ ಹೆಚ್ಚಿನದನ್ನು ಸಾಧಿಸಲು ಅಸಾಧ್ಯ. ಅದಕ್ಕಾಗಿಯೇ ನಮ್ಮ ಅವಲಂಬನೆ ಕೈಗಾರಿಕೆಗಳ ಮೇಲೆ ಹೆಚ್ಚಾಗಬೇಕಿದೆ ಎಂದಿದ್ದಾರೆ.

ಕೃಷಿ ಕ್ಷೇತ್ರದ ಮೇಲಿನ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದಲೂ ಕೈಗಾರಿಕೆಗಳ ಕ್ರಾಂತಿ ಅಗತ್ಯವಾಗಿದೆ. ಒಂದು ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದರೆ ಅದರಲ್ಲಿ ಓರ್ವ ಕೃಷಿ ಮತ್ತು ಇನ್ನೊಬ್ಬ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಾಗ ಕೃಷಿ ವಲಯದ ಹೊರೆ ಕಡಿಮೆ ಮಾಡಲು ಸಾಧ್ಯ ಎಂದೂ ಅವರು ನುಡಿದಿದ್ದಾರೆ.

ಹಾಗೆಯೇ ಕೃಷಿ ಕ್ಷೇತ್ರದ ಸದೃಢತೆಯು ಹೆಚ್ಚಾಗುವುದಕ್ಕೂ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯ ಅಗತ್ಯತೆ ಹೆಚ್ಚಾಗಿದೆ. ಹಾಗೆಯೇ ಕೈಗಾರಿಕಾ ಕ್ಷೇತ್ರದ ಮೌಲ್ಯ ವರ್ತನೆ, ವೈವಿಧ್ಯತೆಯ ಕಡೆಗೂ ಗಮನ ವಹಿಸುವುದು ಮುಖ್ಯ ಎಂದು ಅವರು ನುಡಿದಿದ್ದಾರೆ.

Tags

Related Articles

Close