ಪ್ರಚಲಿತ

‘ನಾನು ನನ್ನ ಮನೆಯ ಬಗ್ಗೆ ಚಿಂತಿಸಿದ್ದರೆ…’ ಎಂದು ಪ್ರಧಾನಿ ಮೋದಿ ಹೇಳಿದ್ದೇಕೆ?

ಭಾರತವು 2047 ರ ಸಮಯಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬಿಜೆಪಿ ಆಡಳಿತದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಅಭಿವೃದ್ಧಿಯ ವೇಗ, ದೊಡ್ಡ ದೊಡ್ಡ ಗುರಿಗಳನ್ನು ತಲುಪಿದ ವೇಗ ಅಭೂತಪೂರ್ವ ಎನ್ನಬಹುದು. ಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆಯೂ ಇಂದು ದೇಶ ಸಾಧಿಸಿರುವ ಪ್ರಗತಿಯು ದೊಡ್ಡ ಸಂಕಲ್ಪದ ಜೊತೆಗೆ ದೇಶವನ್ನು ಒಟ್ಟುಗೂಡಿಸುವ ಕಾರ್ಯ ಮಾಡಿದೆ. ನಮ್ಮ ಕನಸು ಭಾರತ ದೇಶದ ಅಭಿವೃದ್ಧಿ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಸಬಲೀಕರಣದ ದೃಷ್ಟಿಯಿಂದಲೂ ಕೇಂದ್ರ ಸರ್ಕಾರ ಹಲವಾರು ಕೆಲಸಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಮಾಡಿದೆ. ಭಾರತೀಯ ಜನತಾ ಪಕ್ವು ಯುವ ಶಕ್ತಿ, ಮಹಿಳಾ ಶಕ್ತಿ, ಬಡ ಜನರ ಶಕ್ತಿ, ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ನುಡಿದಿದ್ದಾರೆ.

ನಮ್ಮ ಕಾರ್ಯ ವೈಖರಿಯ ಬಗ್ಗೆ ವಿರೋಧ ಪಕ್ಷಗಳಿಗೆ ಮುಮದೇನು ಯೋಜನೆ ಹಾಕಿಕೊಳ್ಳಬಹುದು ಎಂದು ತಿಳಿದಿಲ್ಲ.‌ ಜೊತೆಗೆ ವಿರೋಧ ಪಕ್ಷಗಳು ಜನತೆಗೆ ತಾವು ನೀಡಿದ ಸುಳ್ಳು ಭರವಸೆಗಳ ಬಗೆಗೂ ಅವರಲ್ಲಿ ಸ್ಪಷ್ಟ ಉತ್ತರ ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳಿಗೆ ಭರವಸೆ ನೀಡುವುದಕ್ಕೂ ಧೈರ್ಯವಿಲ್ಲ. ನಮಗೆ ಆ ಭಯ ಇಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತಗಳನ್ನು ಪಡೆದು ಜಯಗಳಿಸಲಿದೆ‌ ಬಿಜೆಪಿ. ‌ಈ ಸಂಗತಿ ವಿದೇಶಗಳ ಗಮನಕ್ಕೂ ಬಂದಿರುವುದಾದಿ ಅವರು ಹೇಳಿದ್ದಾರೆ‌. ಆಯೇಗಾ ತೋ ಮೋದಿ ಹೈ ಎಂದು‌‌ ವಿದೇಶಿಗರು ಸಹ ನಂಬಿದ್ದಾರೆ. ಚುನಾವಣೆ ಇನ್ನಷ್ಟೇ‌‌ ನಡೆಯಬೇಕಿದೆ. ಅದಕ್ಕೂ ಮೊದಲನೇ ವಿದೇಶಗಳಿಗೆ ಭೇಟಿ ನೀಡುವಂತೆ ಕರೆಯುತ್ತಿದ್ದಾರೆ ಎಂದಿದ್ದಾರೆ.

ಭಾರತದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಈ ವಿಶ್ವಾಸ ಪ್ರಪಂಚದ ಹಲವು ರಾಷ್ಟ್ರಗಳಿಗೆ ಇದೆ. ನಾನು ಅಧಿಕಾರಕ್ಕೆ ಬೇಕಾಗಿ ಆಸೆ ಪಡುತ್ತಿಲ್ಲ. ದೇಶದ ಕಾರ್ಯ ನಡೆಸಲು ಅಧಿಕಾರ ಬೇಕಾಗಿದೆ. ನಾನು ನನ್ನ ಮನೆಯ ಬಗ್ಗೆ ಯೋಚಿಸಿದ್ದರೆ ಕೋಟ್ಯಂತರ ಜನರಿಗೆ ಸೂರು ದೊರೆಯುತ್ತಿಲಿರಲ್ಲ ಎಂದು ಅವರು ತಿಳಿಸಿದ್ದಾರೆ.

Tags

Related Articles

Close