ಪ್ರಚಲಿತ

ಬೆಂಗಳೂರಿನ ಮೆಟ್ರೋ‌ದಲ್ಲಿ ಸಾಮಾನ್ಯರಂತೆ ಪ್ರಧಾನಿ ಮೋದಿ ಪಯಣ

ಜನರಿಂದ ಚುನಾಯಿತರಾದ ನಾಯಕರು ಜನರ ಸೇವಕರಾಗಿರಬೇಕು. ಸಾಮಾನ್ಯ ಜನರ ಜೊತೆಗೂ ಅವರ ಒಡನಾಟ ಬೇರೆ ನಾಯಕರಿಗೆ ಮಾದರಿಯಾಗಿರಬೇಕು. ಅಂತಹ ಮೇರು ವ್ಯಕ್ತಿತ್ವದ ರಾಜಕೀಯ ನಾಯಕರು ಈ ಕಾಲದಲ್ಲಿಯೂ ಕಾಣ ಸಿಗುವರೇ? ಎಂಬ ಪ್ರಶ್ನೆ ನಿ ಮೇ ಮೊಲ ಗೆ ಮೂಡಿದರೆ ಅದು ಸಹಜ ಬಿಡಿ.

ಆದರೆ ಅಂತಹ ನಾಯಕರೇ ಇಲ್ಲ ಎನ್ನುವ ಎಣಿಕೆ ಇದ್ದರೆ ಅದು ತಪ್ಪು. ಅಂತಹ ಅನರ್ಘ್ಯ ರತ್ನ ಗಳ ಸಾಲಿಗೆ ಸೇರುವ ಓರ್ವ ನಾಯಕ ನಮ್ಮ ದೇಶದಲ್ಲಿದ್ದಾರೆ. ಅವರೇ ತನ್ನನ್ನು ತಾನು ಜನ ಸೇವಕ ಎಂಬುದಾಗಿಯೇ ಹೇಳಿಕೊಳ್ಳುವ ಮತ್ತು ತಮ್ಮ ಕಾರ್ಯಗಳಲ್ಲಿಯೂ ಆ ಮಾತುಗಳನ್ನು ಶಿರಸಾ ಪಾಲಿಸುವ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಮೋದೀಜಿ ಅವರು.

ಅವರು ಇಂದು ಬೆಂಗಳೂರಿನ ಕೆ. ಆರ್. ಪುರಂ – ವೈಟ್‌ಫೀಲ್ಡ್ ವರೆಗಿನ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ನಾಲ್ಕು ಕಿಮಿ ಗಳಷ್ಟು ಮೆಟ್ರೋ‌ದಲ್ಲಿಯೇ ಸಂಚಾರ ನಡೆಸಿದರು. ಸಾಮಾನ್ಯರ ಹಾಗೆಯೇ ಪ್ರಧಾನಿ ಅವರೂ ಮೆಟ್ರೋ ಪ್ರಯಾಣಕ್ಕೆ ಟೋಕನ್ ಪಡೆದು, ಬಳಿಕ ಮೆಟ್ರೋ ಪ್ರಯಾಣವನ್ನು ನಡೆಸಿದರು. ಈ ವೇಳೆ ಅವರು ಮೆಟ್ರೋ ಸಿಬ್ಬಂದಿ, ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಸಂತೋಷಪಟ್ಟರು. ಸಾಮಾನ್ಯ ಜನರ ಹಾಗೆಯೇ ಮೆಟ್ರೋ ಪ್ರಯಾಣ ನಡೆಸಿದ ಪ್ರಧಾನಿ ಮೋದಿ ಅವರು ಜನ ಮೆಚ್ಚುಗೆಗೆ ಸಹ ಪಾತ್ರರಾದರು.

ಈ ನೂತನ ಮೆಟ್ರೋವು ೧೩.೭೧ ಕಿಮೀ ಇದ್ದು ೪,೫೦೦ ಕೋಟಿ ರೂ. ವೆಚ್ಚದಲ್ಲಿ ಇದರ ಕಾಮಗಾರಿ ನಡೆಸಲಾಗಿದೆ. ಇದು ದೇಶದ ಅತಿ ದೂರ ಪ್ರಯಾಣಿಕರನ್ನು ಹೊತ್ತೊಯ್ಯುವ ಎರಡನೇ ಮೆಟ್ರೋ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ.

Tags

Related Articles

Close