ಪ್ರಚಲಿತ

ಇನ್ನೆಷ್ಟು ವರ್ಷ ಬೇಕು‌ ಮೋದಿಜೀ! ಅವರಿಗೂ ಮುಕ್ತಿ‌ ಕೊಟ್ಟುಬಿಡಿ!

ಸದ್ಯದ ಮಟ್ಟಿಗೆ ಭಾರತವನ್ನು ಗಮನಿಸಿದಾಗ ಯಾವುದೋ ಒಂದು ಬರೆದಿಟ್ಟ ಕಥೆಯನ್ನು ಸಿನಿಮಾ ಮಾಡಿದಂತೆ ಗೋಚರಿಸುತ್ತಿದೆ. ಸರಿಯಾಗಿ ಗಮನಿಸಿ, 2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿಯವರು ಇಟ್ಟ ಪ್ರತಿಯೊಂದು ಹೆಜ್ಜೆಯೂ ಯಾವೊಬ್ಬನೂ ಊಹೆ ಮಾಡಿರಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಅದನ್ನು ಬೆಂಬಲಿಸಲೇಬೇಕು ಅಥವಾ ವಿರೋಧಿಸಲೇಬೇಕು ಎಂದೇನಿಲ್ಲ. ಅವೆಲ್ಲವೂ ಅವರವರ ವೈಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟಿದ್ದು. ಆದರೆ ಈಗ ಇರುವ ಭಾರತ ಸರಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮಾತ್ರ ಅದ್ಭುತ. ಉತ್ತರ ಕರ್ನಾಟಕ ಭಾಷೆಯಲ್ಲಿ ಹೇಳಬೇಕೆಂದರೆ ಇದೊಂತರಾ ಗಂಡು ಕೆಲಸ, ಅಷ್ಟೇ.

2014ರಿಂದ ಇಲ್ಲಿಯವರೆಗೆ ಅನೇಕ ವಿಚಾರಗಳನ್ನು ಗಮನಿಸಬಹುದು, ಆದರೆ ಸದ್ಯ ಚಾಲ್ತಿಯಲ್ಲಿರುವ ವಿಚಾರವನ್ನೇ ನೋಡೋಣ.
“ಭಾರತ”….
ಒಂದೊಂದು ಪ್ರದೇಶದ ಒಂದೊಂದು ರಸ್ತೆಯ ಹೆಸರನ್ನು ಬದಲಿಸಿದಾಗಲೇ ಉರಿದುಬೀಳುತ್ತಿದ್ದ ವಿಪಕ್ಷಗಳಿಗೆ ಇಂದು ದೊಡ್ಡ ಮಟ್ಟದ ಹೊಡೆತ ಬಿದ್ದಂತಾಗಿದೆ. ಮೋದಿ ಎಂದರೆ ವಿಪಕ್ಷಗಳು ಉರಿದು ಬೀಳೋದು ಇದೇ ಕಾರಣಕ್ಕೆ. ವಿಪಕ್ಷಗಳಿಗೆ ಕೈಕಾಲು ಕಟ್ಟಿದ ಸ್ಥಿತಿ, ವಿರೋಧಿಸಿದಷ್ಟೂ ಇತ್ತ ಕಡೆಯಿಂದ ಇನ್ನೂ‌ ಹೆಚ್ಚು ಕೆಲಸಗಳು ನಡೆಯುತ್ತಿವೆ ಮತ್ತು ನಡೆಯುತ್ತದೆ ಕೂಡ. ಹೀಗಿರುವಾಗ ವಿಪಕ್ಷಗಳ ಪರಿಸ್ಥಿತಿ ಊಹಿಸಲು ಸಾಧ್ಯವಿದೆಯೇ?

I.N.D.I.A ಹೆಸರಿಟ್ಟು 26 ಮೋದಿ ವಿರೋಧಿ ಪಕ್ಷಗಳು ಒಟ್ಟಾದ ಮಾತ್ರಕ್ಕೆ ಭಾರತೀಯರು ಒಟ್ಟಾಗುತ್ತಾರೆ ಎಂಬುದು ವಿಪಕ್ಷಗಳ ಭ್ರಮೆ. ಆದರೆ ಇವೆಲ್ಲದರ ನಡುವೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದು ಮಾತ್ರ ಭಾರತ ಸರಕಾರ. ಇಂಡಿಯಾ ಇಂಡಿಯಾ ಎನ್ನುತ್ತಿರುವಾಗಲೇ ಏಕಾಏಕಿ “ಭಾರತ” ಮಿನುಗತೊಡಗಿದೆ.
ದೇಶದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಈ ಹೆಸರು ಬದಲಾವಣೆಯ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ಕ್ಷಮಿಸಿ, ಹೆಸರು ಬದಲಾಯಿಸುತ್ತಿಲ್ಲ, ಬದಲಾದ ಹೆಸರನ್ನು ಶಾಶ್ವತವಾಗಿ ಸರಿಪಡಿಸುವ ಕೆಲಸಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ,ಅಷ್ಟೇ!
ಅಸಲಿಗೆ ಇಂಡಿಯಾ ಹೆಸರು ಅಚ್ಚೆ ಹಾಕಿದವರು ಬ್ರಿಟೀಷರು. ತಮ್ಮ ನಾಲಗೆ ಹೊರಡುತ್ತಿಲ್ಲ ಎಂಬ ಕಾರಣಕ್ಕೆ ಅವರಿಗೆ ಬೇಕಾದ ರೀತಿಯಲ್ಲಿ ನಮ್ಮ ದೇಶದ ಹೆಸರನ್ನೇ ಬದಲಾಯಿಸಿದರು ಮತ್ತು ನಾವೂ ಕೂಡ ಗುಲಾಮರಿಗೆ ಒಳಗಾಗಿ ಅದನ್ನೇ ಮುಂದುವರಿಸಿದೆವು. ಆದರೆ ಎಷ್ಟು ದಿನ? ಖಂಡಿತವಾಗಿಯೂ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿಯಾಗೇ ಇದೆ.

ಇವೆಲ್ಲವನ್ನೂ ಗಮನಿಸಿದಾಗ ಮತ್ತು ಜಾಗತಿಕವಾಗಿ ಕೆಲವೊಂದು ದೇಶಗಳ ಸ್ಥಿತಿ ಗತಿಗಳನ್ನು ಗಮನಿಸಿದಾಗ ಸದ್ದಿಲ್ಲದೆ ಕೆಲವೇ ವರ್ಷಗಳಲ್ಲಿ ನಮ್ಮಿಂದ ವಿಭಜನೆಯಾದ ರಾಷ್ಟ್ರಗಳು ಕೂಡ ಮತ್ತೆ ಭಾರತದ ಭೂಪಟಕ್ಕೆ ಸೇರುತ್ತದೆ ಎಂಬ ಸಂದೇಹ ದಟ್ಟವಾಗುತ್ತಿದೆ. ಅಖಂಡ ಭಾರತದ ಕಲ್ಪನೆ ನಿಜವಾಗಬಹುದೇ ಎಂಬ ಸಂದೇಹವೂ ದಿನೇ ದಿನೇ ಹೆಚ್ಚುತ್ತಿದೆ. ತಪ್ಪೇನಿಲ್ಲ, ನಮ್ಮದೇ ಭೂಭಾಗವನ್ನು ಮತ್ತೆ ಮರಳಿ ಪಡೆಯುವ ಪ್ರಕ್ರಿಯೆ ಅಷ್ಟೇ. ಈಗಾಗಲೇ ಪಾಕಿಸ್ತಾನ ಬಾಂಗ್ಲಾದೇಶ ಸೇರಿದಂತೆ ನಮ್ಮ ಅಕ್ಕಪಕ್ಕದ ದೇಶಗಳು ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದೆ, ನಾವೇನು ಪ್ರಯತ್ನ ಪಡಬೇಕಿಲ್ಲ, ಸ್ವತಃ ಅವರುಗಳೇ ನಮ್ಮನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ ಎನ್ನುವ ದಿನ ಹೆಚ್ಚು ದೂರ ಇಲ್ಲ ಅನ್ನಿಸುತ್ತದೆ.

ನರೇಂದ್ರ ಮೋದಿ ಅವರ ನಾಯಕತ್ವ ಇನ್ನು ಹತ್ತು ವರ್ಷ ಇದ್ದರೆ ಖಂಡಿತವಾಗಿಯೂ ಈ ಮೇಲಿನ ಸಂದೇಹ ಕೇವಲ ಸಂದೇಹವಾಗಿ‌ ಉಳಿಯದೆ ನಿಜವಾಗಲಿದೆ.

Tags

Related Articles

Close