ಪ್ರಚಲಿತ

ನಾನೂ ಸಹ ನಿಮ್ಮಲ್ಲಿ ಒಬ್ಬ: ಪ್ರಧಾನಿ ಮೋದಿ ಹೀಗೆಂದಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ, ವರ್ಚಸ್ಸು ಎಲ್ಲರಿಗೂ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಅವರನ್ನು ಇಷ್ಟ ಪಡದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು.‌ ಕಾರಣ ಅವರ ಎಲ್ಲರನ್ನೂ ಒಳಗೊಳ್ಳುವ ಗುಣ ಮತ್ತು ಅಧಿಕಾರದ ಮದವಿಲ್ಲದ ಡೌನ್ ಟು ಅರ್ಥ್ ಗುಣ.

ಜೊತೆಗೆ ಅವರನ್ನು ಇಷ್ಟ ಪಡುವುದಕ್ಕೆ, ಅವರು ಈ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಕೊಂಡೊಯ್ಯುತ್ತಿರುವ‌ ರೀತಿಯೂ ಕಾರಣ ಎಂದು ಕಣ್ಮುಚ್ಚಿ ಹೇಳಬಹುದು. ತಾವು ಅದೆಷ್ಟೇ ದೊಡ್ಡ ಸ್ಥಾನದಲ್ಲಿ ಇದ್ದರೂ ಎಲ್ಲರನ್ನೂ ಗೌರವದಿಂದ ಕಾಣುವ ಅವರ ಬದುಕಿನ ರೀತಿ ಮಾದರಿ, ಹಲವರಿಗೆ ಜೀವಿಸಿದರೆ ಹೀಗಿರಬೇಕು ಎನ್ನುವುದಕ್ಕೆ ಮಾದರಿ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು.

ಇಂತದ್ದೇ ಮಾದರಿ ನಡೆಯೊಂದನ್ನು ಪ್ರಧಾನಿ ಮೋದಿ ಅವರು ಪ್ರದರ್ಶಿಸಿ, ಜನರಿಂದ ಚುನಾಯಿತರಾದ ಎಲ್ಲಾ ಸಂಸದರಿಗೂ ‌ಇದ್ದರೆ ಹೀಗಿರಬೇಕು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ತಾವು ಪ್ರಧಾನಿಯಾದರೂ ಸಂಸದರು ತಮ್ಮನ್ನು ಮೋದೀಜಿ, ಆದರಣೀಯ ಮೋದೀಜಿ ಎಂದು ಸಂಬೋಧಿಸುವುದರ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿ ಸಂಸದರು ಅವರಿಗೆ ಗೌರವ ಸೂಚಿಸಲು ಜೀ, ಆದರಣೀಯ ಸೇರಿದಂತೆ ಇನ್ನೂ ಹಲವಾರು ಗೌರವ ಸೂಚಕ ಪದಗಳ ಬಳಕೆ ಮಾಡುತ್ತಿದ್ದು, ಇದನ್ನು ಮಾಡದಂತೆ ಪ್ರಧಾನಿ ಮೋದಿ ಅವರು ಸಂಸದರಿಗೆ ಒತ್ತಾಯಿಸಿದ್ದಾರೆ.

ಅವರು ನಿನ್ನೆ ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡಿ, ಹೆಚ್ಚು ಗೌರವ ಸೂಚಕ ಪದಗಳನ್ನು ಬಳಕೆ ಮಾಡಿ ಕರೆಯುವುದರಿಂದ ತಮ್ಮ ಮತ್ತು ದೇಶದ ಸಾಮಾನ್ಯ ಜನರ ನಡುವೆ ಅಂತರ ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಅತಿಯಾದ ಗೌರವ ಸೂಚಕ ಪದಗಳನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.

ಹಾಗೆಯೇ ನಾನೂ ಸಹ ಎಲ್ಲರ ಹಾಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಜೊತೆಗೆ ಈ ದೇಶದ ಜನರು ನನ್ನನ್ನು ತಮ್ಮ ಕುಟುಂಬದ ಸದಸ್ಯ ಎಂಬಂತೆಯೇ ಭಾವಿಸುತ್ತಾರೆ. ಹಾಗಾಗಿ ಸಂಸದರು ಅತಿ ಗೌರವದ ಪದಗಳನ್ನು ಕೈ ಬಿಟ್ಟು, ತಮ್ಮನ್ನೂ ಸಹ ಅವರಂತೆಯೇ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಜೊತೆಗೆ ರಾಜಸ್ಥಾನ, ಚತ್ತೀಸ್‍ಗಢ, ಮಧ್ಯ ಪ್ರದೇಶಗಳಲ್ಲಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವಿಗೆ ಎಲ್ಲರ ಉತ್ಸಾಹದ ಭಾಗವಹಿಸುವಿಕೆಯೇ ಕಾರಣ. ಹಾಗಾಗಿ ಸಂಸದರೆಲ್ಲರೂ ಸಾಮೂಹಿಕ ಭಾವನೆಯ ಜೊತೆಗೆ ಮುನ್ನಡೆಯಬೇಕು ಎಂದು ಹೇಳಿದ್ದಾರೆ. ಇದು ಚುನಾವಣೆ ಗಳಲ್ಲಿನ ಗೆಲುವಿಗೆ ಸಹಕರಿಸುತ್ತದೆ ಎನ್ನುವ ಅಂಶವನ್ನು ಸಹ ಅವರು ಸಂಸದರುಗಳಿಗೆ ‌ಮನದಟ್ಟು ಮಾಡುವ ಕೆಲಸವನ್ನು ಈ ಸಭೆಯಲ್ಲಿ ಮಾಡಿದ್ದಾರೆ.

Tags

Related Articles

Close