ಪ್ರಚಲಿತ

ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್!! ನೇಪಾಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ!!

ಸೀತಾದೇವಿ ಜನ್ಮಸ್ಥಳ ನೇಪಾಳದ ಜನಕಪುರದಿಂದ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆ ನಡುವೆ ನೂತನ ಬಸ್ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನಿನ್ನೆ ಜಂಟಿಯಾಗಿ ಚಾಲನೆ ನೀಡಿದ್ದು, ಜನಕಪುರ ಮತ್ತು ಇನ್ನಿತರ ಸ್ಥಳಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ನೀಡುವುದಾಗಿ ಮೋದಿ ಈ ವೇಳೆ ಘೋಷಿಸಿದ್ದಾರೆ!! ಧಾರ್ವಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಮಾಯಣ ಪರಿಭ್ರಮಣೆ (ಸಕ್ರ್ಯೂಟ್) ಯೋಜನೆಗೆ ಜನಕಪುರವನ್ನೂ ಸೇರಿಸಲಾಗಿದ್ದು ನೇಪಾಳ ಇಲ್ಲದಿದ್ದರೆ ಭಾರತದ ನಂಬಿಕೆ, ಇತಿಹಾಸ, ದೇವಾಲಯ, ಶ್ರೀರಾಮ ಎಲ್ಲವೂ ಅಪೂರ್ಣವಾಗುತ್ತದೆ. ಅಯೋಧ್ಯೆ ಮತ್ತು ಜನಕಪುರ ನಡುವಿನ ಐತಿಹಾಸಿಕ ಸಂಬಂಧ ಮುರಿಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ!! ಅದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಸೀತಾದೇವಿ ಮಂದಿರದಲ್ಲಿ ವಿಶೇಷ ಷೋಡಶೋಪಚಾರ ಪೂಜೆ ಸಲ್ಲಿಸಲಾಗಿದೆ!!

ಏನಿದು ರಾಮಾಯಣ ಸಕ್ರ್ಯೂಟ್?

ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸಕ್ರ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸಕ್ರ್ಯೂಟ್‍ನಲ್ಲಿರಲಿದೆ. ಸೀತಾ ಮಾತೆಯ ಮಂದಿರವನ್ನು 1910ರಲ್ಲಿ ನಿರ್ಮಿಸಲಾಗಿದೆ. ಮೂರು ಮಹಡಿಯ ಮಂದಿರವನ್ನು ಕಲ್ಲು ಮತ್ತು ಮಾರ್ಬಲ್ ಗಳಿಂದ ಕಟ್ಟಲಾಗಿದೆ. 50 ಮೀಟರ್ ಎತ್ತರವಿರುವ ಮಂದಿರವು 4860 ಚದುರ ಅಡಿಯಲ್ಲಿ ವ್ಯಾಪಿಸಿದೆ.

ಮೋದೀಜೀ ಪ್ರಧಾನಿಯಾದ ಬಳಿಕ ನೇಪಾಳಕ್ಕೆ ಮೂರು ಬಾರಿ ಭೇಟಿ!!

ಪ್ರಧಾನಿ ಮೋದಿ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ನೇಪಾಳದಲ್ಲಿ ಕೆ.ಪಿ.ಶರ್ವ ಒಲಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ನೀಡುತ್ತಿರುವ ಪ್ರಥಮ ಭೇಟಿಯಾಗಿದೆ. ಭಾರತದ ನೀತಿಯಲ್ಲಿ ನೇಪಾಳಕ್ಕೆ ಮೊದಲ ಆದ್ಯತೆ ಎಂದು ಮೋದಿ ತಿಳಿಸಿದ್ದಾರೆ. ಒಲಿ ಮತ್ತು ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ರಕ್ಷಣೆ, ಕೃಷಿ, ಸಂಪರ್ಕ ವಲಯ ಬಗ್ಗೆ ರ್ಚಚಿಸಿದ್ದಾರೆ. ನೇಪಾಳದ ಸಂಖುವಸಭಾ ಜಿಲ್ಲೆಯಲ್ಲಿ 900 ಮೆಗಾವಾಟ್ ಸಾಮಥ್ರ್ಯದ ಅರುಣ್- 3 ಜಲವಿದ್ಯುತ್ ಯೋಜನೆಗೆ ವಿಡಿಯೋ ಕಾನ್ಪರನ್ಸ್ ಮೂಲಕ ಶಂಕುಸ್ಥಾಪನೆ.

ಭಾರತದ ಸಟ್ಲೆಜ್ ಜಲವಿದ್ಯುತ್ ನಿಗಮ ಇದನ್ನು ನಿರ್ವಹಣೆ ಮಾಡಲಿದೆ. 6 ಸಾವಿರ ಕೋಟಿ ವೆಚ್ಚದ ಈ ಯೋಜನೆ ಇದಾಗಿದೆ. ಬಿಹಾರದ ರಕ್ಸೌಲ್- ಕಾಠ್ಮಂಡು ಮಧ್ಯೆ ರೈಲು ಮಾರ್ಗ ಯೋಜನೆ ಚುರುಕುಗೊಳಿಸಲು ನಿರ್ಧಾರ, ಬಿಹಾರದಿಂದ ಕಾಠ್ಮಂಡುವಿಗೆ ಒಳನಾಡು ಜಲಸಾರಿಗೆ ಕಲ್ಪಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ!!. ಇದರಿಂದ ನೇಪಾಳಕ್ಕೆ ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆಗೆ ನೆರವಾಗಲಿದೆ. ನೇಪಾಳದ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಮೋದಿ ಮಾತುಕತೆ ನಡೆಸಿದ್ದು, ಪ್ರಸಿದ್ಧ ಪಶುಪತಿನಾಥ ದೇಗುಲಕ್ಕೂ ಭೇಟಿ ನೀಡಿದ್ದಾರೆ!! ನೇಪಾಳಕ್ಕೆ ಆಗಮಿಸಿರುವ ಪ್ರಧಾನಿ ಮೋದಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೋದಿ ಸಂಚರಿಸಿರುವ ಜನಕಪುರ, ಕಾಠ್ಮಂಡು ಮತ್ತು ಮುಕ್ತಿನಾಥ ಮಾರ್ಗದಲ್ಲಿ ನೇಪಾಳ ಮತ್ತು ಭಾರತದ ಭದ್ರತಾಪಡೆಗಳ 11 ಸಾವಿರ ಯೋಧರನ್ನು ನಿಯೋಜಿಸಲಾಗಿದೆ.

ಚೀನಾ ಪ್ರಭಾವಕ್ಕೆ ಕಡಿವಾಣ

ನೇಪಾಳದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯ ತಡೆಯುವುದು ಮೋದಿ ನೇಪಾಳ ಭೇಟಿಯ ಉದ್ದೇಶಗಳಲ್ಲಿ ಒಂದು ಎನ್ನಲಾಗಿದೆ. ಭೌಗೋಳಿಕವಾಗಿ ಭಾರತದ ಮಗ್ಗುಲಲ್ಲಿರುವ ನೇಪಾಳ, ಸಾಂಪ್ರದಾಯಿಕವಾಗಿ ಭಾರತವನ್ನೇ ನೆಚ್ಚಿಕೊಂಡ ಹಿಂದು ರಾಷ್ಟ್ರ. ನೇಪಾಳವನ್ನು ತನ್ನತ್ತ ಆಕರ್ಷಿಸಲು ಚೀನಾ ಯತ್ನಿಸುತ್ತಿದೆ. ಕಮ್ಯೂನಿಸ್ಟ್ ಪಕ್ಷದ ಕೆ.ಪಿ.ಶರ್ವ ಒಲಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಯತ್ನವನ್ನು ಚೀನಾ ಚುರುಕುಗೊಳಿಸಿದೆ. ರಾಜತಾಂತ್ರಿಕ, ರೈಲು, ರಸ್ತೆ ಸಂಪರ್ಕ ಹೆಚ್ಚಳ ಮತ್ತು ಆರ್ಥಿಕ ಒಪ್ಪಂದಗಳನ್ನು ಹೆಚ್ಚಿಸಿಕೊಂಡಿದೆ. ಇದು ಭಾರತಕ್ಕೆ ಕಳವಳ ತಂದಿದೆ. ಹೀಗಾಗಿ ಒಲಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಧಾನಿ ಮೋದಿ ನೇಪಾಳಕ್ಕೆ ಭೇಟಿ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ನೇಪಾಳದಲ್ಲಿ ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೂ ಅಲ್ಲಿನ ಪ್ರಧಾನಿ ಮೊದಲು ಭಾರತಕ್ಕೆ ಭೇಟಿ ನೀಡುವುದು ವಾಡಿಕೆ. ಆದರೆ, ಪ್ರಬಲ ಕಮ್ಯೂನಿಸ್ಟ್ ನಾಯಕ ಒಲಿಗೆ ಸೈದ್ಧಾಂತಿಕವಾಗಿ ಚೀನಾದ ಬಗ್ಗೆ ಒಲವಿದೆ. ಅವರು ಮೊದಲ ವಿದೇಶ ಪ್ರವಾಸಕ್ಕೆ ಚೀನಾವನ್ನು ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿದ್ದರು. ನಂತರ ನಿಲುವು ಬದಲಿಸಿ ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದರು.

ಯುಪಿ ಸಿಎಂ ಯೋಗಿ ಆದಿತ್ಯನಾಥರಿಂದ ಸ್ವಾಗತ!!

ಪ್ರಧಾನಿ ನರೇಂದ್ರ ಮೋದಿಯವರು ನೇಪಾಳದಲ್ಲಿ ನಿನ್ನೆ ಚಾಲನೆ ನೀಡಿದ್ದ ಜನಕಪುರ ಅಯೋಧ್ಯ ಬಸ್‍ಅನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇಂದು ಬರಮಾಡಿಕೊಂಡಿದ್ದಾರೆ!! ಇಂದು ಅಯೋಧ್ಯಾಗೆ ಬಂದು ತಲುಪಿದ ಬಸ್‍ಅನ್ನು ಯೋಗಿ ಅದಿತ್ಯನಾಥರು ಸ್ವಾಗತಿಸಿದ್ದಾರೆ!!

प्रधानमंत्री नरेंद्र मोदी के प्रयास से अयोध्या और जनकपुर का रिश्ता मजबूत :योगी आदित्यनाथ

ಭಾರತ- ನೇಪಾಳ ಸ್ನೇಹದ ಬಸ್ ಎಂದೇ ಕರೆಯಲ್ಪಡುವ ಈ ಬಸ್ ಸೀತೆ ಜನ್ಮಸ್ಥಳ ಜನಕಪುರದಿಂದ ರಾಮನ ಜನ್ಮಸ್ಥಳ ಅಯೋಧ್ಯಾಗೆ ಬಂದು ತಲುಪಿದೆ!! ಈ ಬಸ್‍ನಿಂದಾಗಿ ಉಭಯ ದೇಶಗಳ ನಡುವಣ ಪ್ರವಾಸೋಧ್ಯಮ ಸಂಬಂಧ ವೃದ್ಧಿಯಾಗುವ ನಿರೀಕ್ಷೆ ಇದೆ!!

Adityanath

ಪ್ರಧಾನಿ ನರೇಂದ್ರ ಮೋದಿ ಯಾಕೆ ಎಲ್ಲರಿಗೂ ವಿಶೇಷ ಪ್ರತೀಯೊಂದು ಕ್ಷೇತ್ರದಲ್ಲೂ ಉತ್ಸಾಹವನ್ನು ತೋರಿಸುವ ಮೂಲಕ ಹೇಳಿದ ಕೆಲಸವನ್ನು ಮಾಡದೆ ಬಿಡುವವರಲ್ಲ!! ಈ ತಿಂಗಳಲ್ಲಿ ಮೇ ವಾರ್ ಅಂತಾನೇ ಮಾಡುವ ಮೂಲಕ ಇಡೀ ಕರ್ನಾಟಕ ಚುನಾವಣೆಯ ಪ್ರಚಾರದಲ್ಲಿ ಮೋದಿ ಕರ್ನಾಟಕದಲ್ಲಿ ಧೂಳೆಬ್ಬಿಸಿದ್ದರು!! ಹೀಗೆ ಒಂದೊಂದು ನಿಮಿಷವನ್ನು ಹಾಳು ಮಾಡದೆ ಯಾವಾಗ ಅಗತ್ಯವಿದೆಯೋ ಆ ಸಮಯದಲ್ಲಿ ವಿದೇಶಕ್ಕೆ ಪ್ರವಾಸ ಮಾಡಿ ಭಾರತದ ಅಭಿವೃದ್ಧಿ ಕಾರ್ಯವನ್ನು ಯಾವ ರೀತಿ ಮಾಡಬಹುದು ಎಂಬುವುದನ್ನು ಮೋದೀಜೀ ಚಿಂತಿಸುತ್ತಿರುತ್ತಾರೆ!! ಇವರ ಈ ಉತ್ಸಾಹಕ್ಕೆ ಇಡೀ ಶತ್ರು ರಾಷ್ಟ್ರಗಳೇ ಭಾರತದತ್ತ ಮುಖಮಾಡಿ ನಿಲ್ಲುಂವತೆ ಮಾಡಿದ್ದಾರೆ!! ಇದರ ಎಲ್ಲಾ ಕ್ರೆಡಿಟ್ ಮೋದೀಜೀಗೆ ಸಲ್ಲಬೇಕಾಗುತ್ತದೆ!! ಹ್ಯಾಟ್ಸ್‍ಆಫ್ ಮೋದೀಜೀ!!!

ಕೃಪೆ : ವಿಜಯವಾಣಿ

Tags

Related Articles

Close